- Home
- Entertainment
- Cine World
- ವಿಜಯ್ ಸೇತುಪತಿ ಚಿತ್ರಕ್ಕೆ ಕನ್ನಡದ ಹುಡುಗಿ ನಾಯಕಿ; ಫೋಟೋ ಹಂಚಿಕೊಂಡ ರುಕ್ಮಿಣಿ ವಸಂತ್
ವಿಜಯ್ ಸೇತುಪತಿ ಚಿತ್ರಕ್ಕೆ ಕನ್ನಡದ ಹುಡುಗಿ ನಾಯಕಿ; ಫೋಟೋ ಹಂಚಿಕೊಂಡ ರುಕ್ಮಿಣಿ ವಸಂತ್
ತಮಿಳು ಸಿನಿಮಾ ಸಹಿ ಮಾಡಿದ ರುಕ್ಮಿಣಿ ವಸಂತ್. ಸಾಮಾಜಿಕ ಜಾಲತಾಣದಲ್ಲಿ ಫೋಟೋ ಅಪ್ಲೋಡ್ ಮಾಡಿದ ನಟಿ.

ಕನ್ನಡದ ನಟಿ ರುಕ್ಮಿಣಿ ವಸಂತ್ ಅವರು ತಮಿಳು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ನಟ ವಿಜಯ್ ಸೇತುಪತಿ ಅವರ ಚಿತ್ರಕ್ಕೆ ನಾಯಕಿಯಾಗುವ ಮೂಲಕ ಕಾಲಿವುಡ್‌ಗೆ ಎಂಟ್ರಿ ಆಗಿದ್ದಾರೆ.
ಚಿತ್ರಕ್ಕೆ ಮಲೇಷ್ಯಾದಲ್ಲಿ ಶನಿವಾರ (ಮೇ.20) ಮುಹೂರ್ತ ಆಗಿದೆ. 40 ದಿನಗಳ ಕಾಲ ಮಲೇಷ್ಯಾದಲ್ಲೇ ಚಿತ್ರೀಕರಣ ಕೂಡ ನಡೆಯಲಿದೆ. ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ.
ಅರುಮುಗಕುಮಾರ್ ಚಿತ್ರದ ನಿರ್ದೇಶಕರು. ನಟಿ ರುಕ್ಮಿಣಿ ವಸಂತ್ ಅವರು ಕನ್ನಡದಲ್ಲಿ ರಕ್ಷಿತ್ ಶೆಟ್ಟಿಅವರ ಜತೆಗೆ ‘ಸಪ್ತ ಸಾಗರದಾಚೆ ಎಲ್ಲೋ’, ಶ್ರೀಮುರಳಿ ಜತೆಗೆ ‘ಬಘೀರ’ ಹಾಗೂ ಗಣೇಶ್ ಜತೆಗೆ ‘ಬಾನ ದಾರಿಯಲ್ಲಿ’ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.
ತಮಿಳು ಚಿತ್ರಕ್ಕೆ ಹೋಗುವ ಮೂಲಕ ದಕ್ಷಿಣ ಭಾರತದ ಚಿತ್ರದ ನಟಿಯಾಗಿ ಗುರುತಿಸಿಕೊಳ್ಳುವುದಕ್ಕೆ ಆರಂಭಿಸಿದ್ದಾರೆ. ರುಕ್ಮಿಣಿ ನೋಡಲು ಬಲು ಸುಂದರವಾಗಿದ್ದಾರೆ.
10 ವರ್ಷಗಳ ಕಾಲ ರಂಗಭೂಮಿಯಲ್ಲಿ ಮಿಂಚಿದ ನಟಿ ರುಕ್ಮಿಣಿ ವಸಂತ್.ಲಂಡನ್‌ನ ರಾಯಲ್ ಅಕಾಡಮಿ ಆಫ್ ಡ್ರಾಮಾಟಿಕ್ ಆರ್ಟ್ಸ್‌ನ ಪದವೀಧರೆ.
ರುಕ್ಮಿಣಿ ಅವರ ತಂದೆ ವಸಂತ್ ಕರ್ನಲ್. ತಾಯಿ ಪ್ರಸಿದ್ಧ ಭರತನಾಟ್ಯ ಕಲಾವಿದೆ. ಅನೇಕ ಕನ್ನಡ ಹಾಗೂ ಇಂಗ್ಲೀಷ್ ನಾಟಕಗಳಲ್ಲಿ ಅಭಿನಯಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.