MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • Round Up 2021: ಸೈಫ್‌- ರಾಜ್‌ ಕುಂದ್ರಾ ವಿವಾದಕ್ಕೆ ಸಿಲುಕಿದ ಸೆಲೆಬ್ರೆಟಿಗಳು!

Round Up 2021: ಸೈಫ್‌- ರಾಜ್‌ ಕುಂದ್ರಾ ವಿವಾದಕ್ಕೆ ಸಿಲುಕಿದ ಸೆಲೆಬ್ರೆಟಿಗಳು!

2022 ರ ಆಗಮನಕ್ಕಾಗಿ ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ. ಅಂದಹಾಗೆ, 2021 ರಲ್ಲಿ ಸೆಲೆಬ್ರೆಟಿಗಳು ಸಾಕಷ್ಟು ವಿವಾದಗಳಿಗೆ ಗುರಿಯಾದರು. ಈ ವರ್ಷ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ವಿವಾದಕ್ಕೆ ಸಿಲುಕಿದ್ದಾರೆ.  2021 ರ ಆರಂಭದಿಂದ ಕೊನೆಯವರೆಗೂ, ಅನೇಕ ಸೆಲೆಬ್ರಿಟಿಗಳು ವಿವಾದಗಳಿಂದ ನ್ಯೂಸ್‌ನಲ್ಲಿದ್ದರು. ಸೈಫ್ ಅಲಿ ಖಾನ್‌ನಿಂದ ಹಿಡಿದು ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾವರೆಗೆ ಅನೇಕ ಸೆಲೆಬ್ರಿಟಿಗಳು ಈ ವರ್ಷ ವಿವಾದಕ್ಕೊಳಗಾಗಿದ್ದರು. ಈ ವರ್ಷ ಯಾವ ಸೆಲೆಬ್ರಿಟಿಗಳು ವಿವಾದಕ್ಕೆ ಸಿಲುಕಿದ್ದರು ಎಂಬ ವಿವರ ಇಲ್ಲಿದೆ.

2 Min read
Author : Suvarna News
| Updated : Dec 19 2021, 07:18 PM IST
Share this Photo Gallery
  • FB
  • TW
  • Linkdin
  • Whatsapp
110

ಆರ್ಯನ್ ಖಾನ್, ತಾಪ್ಸಿ ಪನ್ನು, ಜಾಕ್ವೆಲಿನ್ ಫರ್ನಾಂಡೀಸ್, ನೋರಾ ಫತೇಹಿ, ಕಂಗನಾ ರನೌತ್, ಮನೋಜ್ ಬಾಜ್‌ಪೇಯಿ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಈ ವರ್ಷ ವಿವಾದಗಳಿಗೆ ಸಿಲುಕಿದ್ದಾರೆ. ಕೆಲವರು ತಮ್ಮ ಹೇಳಿಕೆಗಳ ಕಾರಣದಿಂದ ಚರ್ಚರಯಾದರೆ ಇನ್ನೂ ಕೆಲವರು ತಮ್ಮ ಸಿನಿಮಾಗಳಿಗೆ ಸಂಬಂಧಿಸಿದಂತೆ ವಿವಾದಗಳಲ್ಲಿ ಸಿಲುಕಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
210

ಶಿಲ್ಪಾ ಶೆಟ್ಟಿ (Shilpa Shetty) ಪತಿ ರಾಜ್ ಕುಂದ್ರಾ (Raj Kundra) ಅವರನ್ನು ಮುಂಬೈ ಪೊಲೀಸರು ಅಶ್ಲೀಲ ಚಲನಚಿತ್ರಗಳನ್ನು ನಿರ್ಮಿಸಿ ಅಪ್ಲಿಕೇಶನ್‌ಗಳಲ್ಲಿ ಅಪ್‌ಲೋಡ್ ಮಾಡಿದ್ದಕ್ಕಾಗಿ ಬಂಧಿಸಿದ್ದರು. ಮುಂಬೈ ಕ್ರೈಂ ಬ್ರಾಂಚ್ ಕೆಲಕಾಲ ತನಿಖೆ ನಡೆಸುತ್ತಿತ್ತು. ರಾಜ್ ಕುಂದ್ರಾ ಪ್ರಮುಖ ಸಂಚುಕೋರ ಎಂದು ಹೇಳಲಾಗಿದೆ. ಆದರೆ, ನಂತರ ಕುಂದ್ರಾಗೆ ಜಾಮೀನು ನೀಡಲಾಗಿತ್ತು.

310

ಕಂಗನಾ ರಣಾವತ್ (Kangana Ranaut) ತನ್ನ ಬೋಲ್ಡ್‌  ಶೈಲಿಗೆ ಹೆಸರುವಾಸಿಯಾಗಿದ್ದಾರೆ. ಕಂಗನಾ ಭಾರತದ ಸ್ವಾತಂತ್ರ್ಯದ ಬಗ್ಗೆ ಕಾಮೆಂಟ್ ಮಾಡಿರುವುದು ಅವರ  ಈ ವರ್ಷದ ದೊಡ್ಡ ವಿವಾದವಾಗಿದೆ. 1947ರಲ್ಲಿ ಭಿಕ್ಷೆ ಬೇಡುವ ಮೂಲಕ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು, 2014ರಲ್ಲಿ ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದೆ ಎಂದು ಹೇಳಿದ್ದರು ಇದರಿಂದಾಗಿ ಅವರು ಸಾಕಷ್ಟು ಟ್ರೋಲ್‌ಗೆ ಒಳಗಾಗಿದ್ದರು.

410

ಶಾರುಖ್ ಖಾನ್ (Shahrukh Khan)  ಪುತ್ರ ಆರ್ಯನ್ ಖಾನ್‌ನನ್ನು  (Aryan Khan) ಮುಂಬೈ ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ  ಬಂಧಿಸಲಾಗಿತ್ತು. ಎನ್‌ಸಿಬಿ ಅವರ ವಿರುದ್ಧ ಅನೇಕ ಗಂಭೀರ ಆರೋಪಗಳನ್ನು ಮಾಡಿತ್ತು, ಇದರಿಂದಾಗಿ ಅವರು ಕೆಲವು ದಿನಗಳ ಕಾಲ ಜೈಲಿನಲ್ಲಿ ಇರಬೇಕಾಯಿತು. ಆದರೆ, ನಂತರ ಬೇಲ್‌ ಮೇಲೆ  ನಂತರ ಅವರನ್ನು ಜೈಲಿನಿಂದ ಹೊರತರಲು ಸಾಧ್ಯವಾಯಿತು.

510

ತಾಂಡವ್ (Tandav)  ಎಂಬ ವೆಬ್ ಸೀರೀಸ್ ನಲ್ಲಿ ಸೈಫ್ ಅಲಿ ಖಾನ್(Saif Ali Khan) ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ವಾಸ್ತವವಾಗಿ, ಸೈಫ್ ಅವರ ಈ ವೆಬ್ ಸರಣಿಯಲ್ಲಿ ಜನರ ಧಾರ್ಮಿಕ ಭಾವನೆಗಳನ್ನು ನೋಯಿಸುವ ಕೆಲವು ದೃಶ್ಯಗಳಿವೆ. ವೆಬ್ ಸರಣಿಯ ನಿರ್ಮಾಪಕರ ವಿರುದ್ಧವೂ ದೂರು ದಾಖಲಾಗಿದೆ. ಈ ವಿವಾದವು ಸಾಕಷ್ಟು ಹೆಚ್ಚಾಯಿತು, ಇದರಿಂದಾಗಿ ನಿರ್ಮಾಪಕರು ಕೆಲವು ದೃಶ್ಯಗಳನ್ನು ತೆಗೆಯಬೇಕಾಯಿತು.

610

ಜಾಕ್ವೆಲಿನ್ ಫರ್ನಾಂಡೀಸ್ (Jacqueline Fernandez) ಅವರು 200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಆರೋಪ ಹೊತ್ತಿರುವ ಸುಕೇಶ್ ಚಂದ್ರಶೇಖರ್ ಅವರೊಂದಿಗಿನ ನಿಕಟ ಸಂಬಂಧದಿಂದಾಗಿ ತೊಂದರೆಯಲ್ಲಿ ಸಿಲುಕಿದ್ದಾರೆ.   ಇತ್ತೀಚೆಗೆ ಆಕೆಯ ಕೆಲವು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು, ಅದರಲ್ಲಿ ಅವರು ಸುಕೇಶ್ ಅವರನ್ನು ಚುಂಬಿಸುತ್ತಿರುವುದು ಕಂಡುಬಂದಿದೆ. ಇತ್ತೀಚೆಗೆ ಅವರನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು.  ವಿಚಾರಣೆ ನಡೆಸಿದ ನಂತರ ಬಿಡುಗಡೆ ಮಾಡಲಾಗಿದೆ.


 

710

ಬಬಿತಾ ಜಿ ಅಂದರೆ ತಾರಕ್ ಮೆಹ್ತಾ ಕಾ ಊಲ್ತಾ ಚಶ್ಮಾ (Taarak Mehta Ka Ooltah Chashmah) ಜನಪ್ರಿಯ ಹಿಂದಿ ಧಾರವಾಹಿಯ ಮುನ್ಮುನ್ ದತ್ತಾ (Munmun Dutta)ಕೂಡ ವಿವಾದದಲ್ಲಿ ಸಿಲುಕಿದ್ದರು. ಅವರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದರಲ್ಲಿ ಜಾತಿನಿಂದನೆಯ ಪದಗಳನ್ನು ಹೇಳುತ್ತಿರುವುದು ಕಂಡುಬಂದಿದೆ. ಇದರಿಂದಾಗಿ ಅವರನ್ನು ತೀವ್ರವಾಗಿ ಟ್ರೋಲ್ ಮಾಡಲಾಯಿತು. ಅಷ್ಟೇ ಅಲ್ಲ, ಬಂಧನಕ್ಕೂ ಜನರು ಒತ್ತಾಯಿಸಿದ್ದರು. ಬಳಿಕ ವಿಡಿಯೋವನ್ನು ಶೇರ್ ಮಾಡುವ ಮೂಲಕ ಜನರಲ್ಲಿ ಕ್ಷಮೆ ಯಾಚಿಸಿದ್ದಾರೆ.

810

ಟಿವಿ ಶೋ ಇಂಡಿಯನ್ ಐಡಲ್  (Indian Idol) ಕೂಡ ಈ ವರ್ಷ ಮುಖ್ಯಾಂಶಗಳಲ್ಲಿತ್ತು. ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ಕಿಶೋಲ್ ಕುಮಾರ್(Amit Kumar) ಪುತ್ರ ಅಮಿತ್ ಕುಮಾರ್ (Amit Kumar) ತಮ್ಮ ಹೇಳಿಕೆಯಿಂದ ವಿವಾದಕ್ಕೆ ಸಿಲುಕಿದ್ದರು. ಶೋ ಮೇಕರ್‌ಗಳು ಸ್ಪರ್ಧಿಗಳನ್ನು ಹೊಗಳುವಂತೆ ತಮ್ಮ ಬಳಿ ಕೇಳಿಕೊಂಡಿದ್ದಾರೆ ಎಂದು ಅಮಿತ್  ಹೇಳಿದ್ದರು. ಈ ವಿವಾದದ ನಂತರ, ಸಾಮಾಜಿಕ ಜಾಲತಾಣಗಳಲ್ಲಿ ಕಾರ್ಯಕ್ರಮದ ಬಗ್ಗೆ ಸಾಕಷ್ಟು ಗಲಾಟೆಗಳು ನಡೆದವು. 

910

ಮನೋಜ್ ಬಾಜಪೇಯಿ (Manoj Bajpayee)  ಅವರ ಅತ್ಯಂತ ಪ್ರಸಿದ್ಧ ವೆಬ್ ಸರಣಿ ಫ್ಯಾಮಿಲಿ ಮ್ಯಾನ್‌ನ(The Family Man) ಎರಡನೇ ಸೀಸನ್ ವಿವಾದದಲ್ಲಿದೆ. ಇದರಲ್ಲಿ ಭಾರತದ ದಕ್ಷಿಣ ಪ್ರಾಂತ್ಯಗಳ ಜನರನ್ನು ಭಯೋತ್ಪಾದಕರಂತೆ ತೋರಿಸಲಾಗಿದ್ದು, ಇದರಿಂದ ಜನರ ಭಾವನೆಗಳಿಗೆ ಧಕ್ಕೆಯಾಗಿದೆ.

1010

ಈ ವರ್ಷ ಯುವಿಕಾ ಚೌಧರಿ  (Yuvika Chaudhary)  ಕೂಡ ಸುದ್ದಿಯಲ್ಲಿದ್ದರು. ಆಕೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅದರಲ್ಲಿ ಆಕೆ ಜಾತಿವಾದಿ ಪದವನ್ನು ಬಳಸುತ್ತಿರುವುದು ಕಂಡುಬಂದಿದೆ. ಟ್ರೋಲ್‌ಗೆ ಒಳಗಾದ ಕಾರಣ, ಅವರು ಜನರಲ್ಲಿ ಕ್ಷಮೆಯಾಚಿಸುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News
ಬಾಲಿವುಡ್
ಕಂಗನಾ ರಣಾವತ್
ಸೈಫ್ ಅಲಿ ಖಾನ್
ಶಿಲ್ಪಾ ಶೆಟ್ಟಿ
ಆರ್ಯನ್ ಖಾನ್
 
5th T20 • NZ vs IND 2026
NZNZ
Sun, 1 Nov, 2026
INDIND
12:30 pm
Match yet to begin.
Schedule ›
4th T20 • NZ vs IND 2026
Result
NZNZ
259/7
INDIND
172/9
NZ beat IND by 87 runs
Schedule ›
3rd TEST • SA vs AUS
Result
SASA
329 & 387
AUSAUS
429 & 111
SA won by 176 runs
Schedule ›
3rd T20 • NZ vs IND 2026
Result
NZNZ
198/3
INDIND
199/4
IND won by 6 wickets
Schedule ›
2nd T20 • NZ vs IND 2026
Result
NZNZ
180/5
INDIND
181/6
IND won by 4 wkts
Schedule ›
1st T20 • NZ vs IND 2026
Result
NZNZ
225/4
INDIND
230/6
IND beat NZ by 4 wickets
Schedule ›
Latest Videos
Recommended Stories
Recommended image1
ವಯಸ್ಸು ಹೆಚ್ಚಾದರೂ ಕಡಿಮೆಯಾಗದ ಅಂದ: ಬ್ಲ್ಯಾಕ್ ಡ್ರೆಸ್‌ನಲ್ಲಿ ನಟಿ ನಯನತಾರಾ ಕಮಾಲ್
Recommended image2
ಹಣಕ್ಕಾಗಿ ಮಾಡುವುದಿಲ್ಲ, ಆದ್ರೆ ಥೆರಪಿ ಪಡೆಯಲು ಆರಂಭಿಸಿದೆ: 'ನಟ ಸಾರ್ವಭೌಮ' ನಟಿ ಭಾವುಕ!
Recommended image3
ಇಬ್ಬರು ಮಕ್ಕಳ ತಾಯಿಯಾಗಿ ನಟಿಸಿದ ಕೆಜಿಎಫ್ ನಟಿ: ಹೊಸ ಪಾತ್ರದ ಬಗ್ಗೆ ಶ್ರೀನಿಧಿ ಶೆಟ್ಟಿ ಹೇಳಿದ್ದೇನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved