Kangana Ranaut Fact Check: ಬಿಎಸ್ಎಫ್ ಯೋಧರೊಂದಿಗೆ ವಿಜಯ್ ದಿವಸ್ ಆಚರಿಸಿದ್ರಾ ಬಾಲಿವುಡ್ ಬೆಡಗಿ?
ಬಾರ್ಡರ್ ಸೆಕ್ಯುರಿಟಿ ಫೋರ್ಸ್ (BSF) ಯೋಧರೊಂದಿಗೆ ಕಂಗನಾ ರಣಾವತ್ ಇರುವ ನಾಲ್ಕು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಬಾಲಿವುಡ್ ತಾರೆ ವಿಜಯ್ ದಿವಸ್ ಅನ್ನು ಬಿಎಸ್‌ಎಫ್‌ನೊಂದಿಗೆ ಆಚರಿಸಿದ್ದಾರೆ ಎಂದು ಈ ಫೋಟೋಗಳಲ್ಲಿ ತಿಳಿಸಲಾಗಿದೆ. ಆದರೆ Fact Check ನಲ್ಲಿ ಕಂಗನಾ ಈ ವರ್ಷ ವಿಜಯ ದಿವಸ್‌ನಲ್ಲಿ ಭಾಗವಹಿಸಿಲ್ಲ ಎಂಬುದು ಸಾಬೀತಾಗಿದೆ.
Fact Check: 1971 ರಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಯುದ್ಧದ ಗೆಲುವಿನ 50ನೇ ವರ್ಷಾಚರಣೆಯನ್ನು ಭಾರತದ ಸೇನಾ ಪಡೆ ಹಾಗೂ ಬಾಂಗ್ಲಾದೇಶ (India & Bangaldesh) ಎರಡೂ ಕೂಡ ಆಚರಿಸುತ್ತಿವೆ. ಈ ಸಂದರ್ಭದಲ್ಲಿ, ಬಾಲಿವುಡ್ ತಾರೆ ಬಿಎಸ್‌ಎಫ್‌ನೊಂದಿಗೆ (BSF) ವಿಜಯ್ ದಿವಸ್ ಆಚರಿಸಿದ್ದಾರೆ ಎಂಬ ಹೇಳಿಕೆಯೊಂದಿಗೆ ನಟಿ ಕಂಗನಾ ರಣಾವತ್ (Kangana Ranaut) ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಯೋಧರೊಂದಿಗೆ ಇರುವ ನಾಲ್ಕು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಸಾಕಷ್ಟು ಜನರು ಕಂಗನಾ ದೇಶಪ್ರೇಮದ ಕುರಿತು ಬರೆದಿದ್ದಾರೆ.
"#ಕಂಗನಾ ರಣಾವತ್ ಬಿಎಸ್‌ಎಫ್ ಜವಾನರೊಂದಿಗೆ #ವಿಜಯದಿವಸ್ ಆಚರಿಸಿದ್ದಾರೆ ಹಾಗೂ #1971ಯುದ್ಧದ ವಿಜಯವನ್ನು ಆಚರಿಸಿದ್ದಾರೆ #BSFWithBangladesh1971 #SwarnimVijayVarsh" ಎಂದು ಟ್ವೀಟರ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಇದೇ ರೀತಿ ಕಂಟೆಂಟ್ ಇರುವ ಪೋಸ್ಟ್‌ಗಳನ್ನು ಹಲವು ಬಾರಿ ರಿಪೋಸ್ಟ್ ಮಾಡಲಾಗಿದೆ.
ಫ್ಯಾಕ್ಟ್ ಚೆಕ್:
ಸಾಮಾಜಿಕ ಮಾಧ್ಯಮಗಳಲ್ಲಿ(Social Media) ಹರಿದಾಡುತ್ತಿರುವ ಬಿಎಸ್‌ಎಫ್ ಯೋಧರ ಜತೆಗಿನ ಕಂಗನಾ ರಣಾವತ್ ಫೋಟೋಗಳ ನೈಜತೆ ಪರಿಶೀಲಿಸಿದಾಗ ಈ ಫೋಟೋಗಳು ಹಳೆಯದ್ದು ಎಂದು ಸಾಬೀತಾಗಿದೆ. ಗೂಗಲ್‌ನಲ್ಲಿ ರಿವರ್ಸ್ ಇಮೇಜ್ (Reverse Image) ಹುಡುಕಾಟದ ಸಹಾಯದಿಂದ, ಫೆಬ್ರವರಿ 2017 ರಲ್ಲಿ ಅನೇಕ ಮಾಧ್ಯಮಗಳು ಅದೇ ಚಿತ್ರಗಳನ್ನು ಬಳಸಿರುವುದು ತಿಳಿದುಬಂದಿದೆ.
ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಇವು ಫೆಬ್ರವರಿ 7, 2017 ರಂದು ಜಮ್ಮುವಿನ BSF ಫ್ರಂಟಿಯರ್ ಹೆಡ್‌ಕ್ವಾರ್ಟರ್‌ಗೆ ಕಂಗನಾ ಭೇಟಿ ನೀಡಿದ ಚಿತ್ರಗಳಾಗಿವೆ.
ತಮ್ಮ ಚಲನಚಿತ್ರ 'ರಂಗೂನ್' ಪ್ರಚಾರಕ್ಕಾಗಿ ಕಂಗನಾ ಅಲ್ಲಿಗೆ ಹೋಗಿದ್ದರು. ಫೆಬ್ರವರಿ 7 ರಂದು, ಬಿಎಸ್‌ಎಫ್‌ನ ಅಧಿಕೃತ ಟ್ವಿಟರ್ ಹ್ಯಾಂಡಲ್ ಸಹ ವೈರಲ್ ಚಿತ್ರಗಳಲ್ಲಿ ಕಂಡುಬರುವ ಅದೇ ಉಡುಪಿನೊಂದಿಗೆ ಕಂಗನಾಳ ಚಿತ್ರವನ್ನು ಟ್ವೀಟ್ ಮಾಡಿತ್ತು.
“#ಕಂಗನಾ ರಣಾವತ್ #BSF ಜಮ್ಮುವಿಗೆ ಭೇಟಿ ನೀಡಿ ಹುತಾತ್ಮರ ಸ್ಮಾರಕದಲ್ಲಿ ಶ್ರದ್ಧಾಂಜಲಿ ಸಲ್ಲಿಸಿದರು. ಗಡಿನಾಡು ಮತ್ತು ಅವರ ಹೆಮ್ಮೆಯ ಕುಟುಂಬಗಳು ಮಾಡಿದ ಅತ್ಯುನ್ನತ ತ್ಯಾಗವನ್ನು ನೆನಪಿಸಿಕೊಂಡರು" ಎಂದು ಚಿತ್ರದ ಶೀರ್ಷಿಕೆಯಲ್ಲಿ ಬರೆಯಲಾಗಿತ್ತು.
ಆದರೆ 50 ನೇ ವಿಜಯ್ ದಿವಸ್‌ನ ಭಾಗವಾಗಿ ಕಂಗನಾ ಜವಾನರನ್ನು ಭೇಟಿ ಮಾಡಿದ ಬಗ್ಗೆ ಯಾವುದೇ ವರದಿಯನ್ನು ದೊರೆತಿಲ್ಲ. ಡಿಸೆಂಬರ್ 6 ರಂದು, ತನ್ನ 2017 ರ ಬಿಎಸ್ಎಫ್ ಜಮ್ಮು ಭೇಟಿಯ ಚಿತ್ರಗಳಲ್ಲಿ ಒಂದನ್ನು ಹಂಚಿಕೊಂಡ ನಟಿ, ಸೈನಿಕರಿಗೆ ವಂದನೆ ಸಲ್ಲಿಸುವ ಸ್ಟೋರಿಯನ್ನು ತನ್ನ ಅಧಿಕೃತ Instagram ಪುಟದಲ್ಲಿ ಹಾಕಿದ್ದರು.
“16 ಡಿಸೆಂಬರ್ 2021 - 1971 ರಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ವಿಜಯದ ಸುವರ್ಣ ಮಹೋತ್ಸವವನ್ನು ಸೂಚಿಸುತ್ತದೆ.1971 ರ ವಿಮೋಚನಾ ಯುದ್ಧದಲ್ಲಿ # ಭಾರತೀಯ ಸಶಸ್ತ್ರ ಪಡೆಗಳ ಧೈರ್ಯ, ಶೌರ್ಯ ಮತ್ತು ತ್ಯಾಗಕ್ಕೆ ನಮನಗಳು. #VijayDiwas #Swarnim Vijay Varsh #amritmahotsav" ಎಂದು ನಟಿ ಬರೆದಿದ್ದಾರೆ.
Source: India Today