- Home
- Entertainment
- Cine World
- ಬ್ರೇಕಪ್ ಬೆನ್ನಲ್ಲೇ ಹ್ಯಾಂಡ್‌ಸಮ್ ಹುಡ್ಗ ರೋಹನ್ ಜೊತೆ ಹೊಸ ಲವ್ ಸ್ಟೋರಿ ಶುರುಮಾಡಿಕೊಂಡ ಪೂಜಾ ಹೆಗ್ಡೆ!
ಬ್ರೇಕಪ್ ಬೆನ್ನಲ್ಲೇ ಹ್ಯಾಂಡ್‌ಸಮ್ ಹುಡ್ಗ ರೋಹನ್ ಜೊತೆ ಹೊಸ ಲವ್ ಸ್ಟೋರಿ ಶುರುಮಾಡಿಕೊಂಡ ಪೂಜಾ ಹೆಗ್ಡೆ!
ಅಷ್ಟಕ್ಕೂ ಯಾರು ಗುರು ಈ ರೋಹನ್ ಮೆಹ್ರಾ? ನಮ್ಮ ಕರಾವಳಿ ಬೆಡಗಿಯ ಮನಸ್ಸು ಕದ್ದ ಈ ಕಳ್ಳ ಯಾರು ಅಂತ ಇಂಟರ್‌ನೆಟ್‌ನಲ್ಲಿ ಹುಡುಕಿದ್ರೆ ಸಿಗುವ ಇಂಟರೆಸ್ಟಿಂಗ್ ವಿಚಾರ ಏನಂದ್ರೆ, ಈತ ಬೇರೆ ಯಾರೂ ಅಲ್ಲ, ಬಾಲಿವುಡ್‌ನ ಲೆಜೆಂಡರಿ ನಟ, ದಿವಂಗತ ವಿನೋದ್ ಮೆಹ್ರಾ ಅವರ ಸುಪುತ್ರ!

ಕರಾವಳಿ ಬೆಡಗಿ ಪೂಜಾ ಹೆಗ್ಡೆ ಜೊತೆ ಕುಚ್‌ಕುಚ್ ಶುರುಮಾಡಿದ್ರಾ ಬಾಲಿವುಡ್‌ನ ಈ ಹ್ಯಾಂಡ್‌ಸಮ್ ಹಂಕ್!
ಬಾಲಿವುಡ್ ಗಲ್ಲಿಗಳಲ್ಲಿ ಈಗ ಎಲ್ಲಿ ನೋಡಿದರೂ ಒಂದೇ ಗುಸುಗುಸು! ಸೌತ್ ಟು ನಾರ್ತ್ ಸಖತ್ ಸೌಂಡ್ ಮಾಡ್ತಿರೋ ನಮ್ಮ ಬುಟ್ಟ ಬೊಮ್ಮಾ, ಕರಾವಳಿಯ ಸುಂದರಿ ಪೂಜಾ ಹೆಗ್ಡೆ ಈಗ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಾರಂತೆ! ಹೌದು, ಪೂಜಾ ಹೆಗ್ಡೆ ಈಗ ಬಾಲಿವುಡ್‌ನ ಹ್ಯಾಂಡ್‌ಸಮ್ ನಟ ರೋಹನ್ ಮೆಹ್ರಾ ಜೊತೆ ಡೇಟಿಂಗ್ ಮಾಡ್ತಿದ್ದಾರೆ ಅನ್ನೋ ಬಿಸಿ ಬಿಸಿ ಸುದ್ದಿ ಬಿಟೌನ್ ಅಂಗಳದಲ್ಲಿ ಹರಿದಾಡುತ್ತಿದೆ.
ಇವರಿಬ್ಬರೂ ಅಧಿಕೃತವಾಗಿ "ನಾವು ಜಸ್ಟ್ ಫ್ರೆಂಡ್ಸ್" ಅಂತ ಹೇಳಿಕೊಳ್ಳುತ್ತಿದ್ದರೂ, ಸೋಶಿಯಲ್ ಮೀಡಿಯಾದಲ್ಲಿ ಇವರು ಒಬ್ಬರಿಗೊಬ್ಬರು ಮಾಡಿಕೊಳ್ಳುತ್ತಿರುವ ಹಾರ್ಟ್ ಎಕ್ಸ್‌ಚೇಂಜ್ ನೋಡಿದ್ರೆ, "ಇಲ್ಲೇನೋ ನಡೀತಿದೆ ಗುರು" ಅಂತ ಯಾರಿಗಾದ್ರೂ ಡೌಟ್ ಬರೋದು ಗ್ಯಾರಂಟಿ.
ಅಷ್ಟಕ್ಕೂ ಯಾರು ಗುರು ಈ ರೋಹನ್ ಮೆಹ್ರಾ? ನಮ್ಮ ಕರಾವಳಿ ಬೆಡಗಿಯ ಮನಸ್ಸು ಕದ್ದ ಈ ಕಳ್ಳ ಯಾರು ಅಂತ ಇಂಟರ್‌ನೆಟ್‌ನಲ್ಲಿ ಹುಡುಕಿದ್ರೆ ಸಿಗುವ ಇಂಟರೆಸ್ಟಿಂಗ್ ವಿಚಾರ ಏನಂದ್ರೆ, ಈತ ಬೇರೆ ಯಾರೂ ಅಲ್ಲ, ಬಾಲಿವುಡ್‌ನ ಲೆಜೆಂಡರಿ ನಟ, ದಿವಂಗತ ವಿನೋದ್ ಮೆಹ್ರಾ ಅವರ ಸುಪುತ್ರ!
ಪಾಪ, ರೋಹನ್ ಚಿಕ್ಕವನಿದ್ದಾಗಲೇ ತಂದೆ ವಿನೋದ್ ಮೆಹ್ರಾ ಇಹಲೋಕ ತ್ಯಜಿಸಿದ್ದರು. ಆಮೇಲೆ ತಾಯಿ ಕಿರಣ್ ಜೊತೆ ಕೀನ್ಯಾದ ಮೊಂಬಾಸಾಗೆ ಹಾರಿ, ಅಲ್ಲಿಯೇ ಅಜ್ಜ-ಅಜ್ಜಿ ಪ್ರೀತಿಯಲ್ಲಿ ಬೆಳೆದು, ಯುಕೆಯಲ್ಲಿ ವ್ಯಾಸಂಗ ಮುಗಿಸಿ, ಕೊನೆಗೆ ನಟನೆಯ ಹುಚ್ಚು ಹಿಡಿದು ಮತ್ತೆ ಮುಂಬೈಗೆ ಬಂದು ಲ್ಯಾಂಡ್ ಆದರು. ಸಿನಿಮಾ ರಕ್ತದಲ್ಲೇ ಇರೋದ್ರಿಂದ, ಸುಮ್ನೆ ಕೂರೋಕೆ ಆಗುತ್ತಾ? ಮೊದಲು ಸಂಜಯ್ ಲೀಲಾ ಬನ್ಸಾಲಿ ಅವರ 'ಬಾಜಿರಾವ್ ಮಸ್ತಾನಿ' ಸೆಟ್‌ನಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಪಡಿಪಾಟಲು ಪಟ್ಟರು.
ಆಮೇಲೆ 2018ರಲ್ಲಿ ಸೈಫ್ ಅಲಿ ಖಾನ್ ಜೊತೆ 'ಬಜಾರ್' ಸಿನಿಮಾದಲ್ಲಿ ಹೀರೋ ಆಗಿ ಎಂಟ್ರಿ ಕೊಟ್ಟು, ಮೊದಲ ಯತ್ನದಲ್ಲೇ ಫಿಲ್ಮ್‌ಫೇರ್ 'ಅತ್ಯುತ್ತಮ ಚೊಚ್ಚಲ ನಟ' ಪ್ರಶಸ್ತಿಯನ್ನೂ ಎತ್ತಿ ಹಿಡಿದರು! ಬರೀ ರೊಮ್ಯಾಂಟಿಕ್ ಪಾತ್ರಗಳಷ್ಟೇ ಅಲ್ಲ, '420 IPC', 'ಕಾಲಾ' (Kaala) ದಂತಹ ವೆಬ್ ಸಿರೀಸ್‌ಗಳಲ್ಲಿ ನಟಿಸಿ, ಕಂಟೆಂಟ್ ಓರಿಯೆಂಟೆಡ್ ನಟ ಅಂತಲೂ ಸೈ ಅನ್ನಿಸಿಕೊಂಡ ಟ್ಯಾಲೆಂಟೆಡ್ ಹುಡುಗ ಈ ರೋಹನ್. ಅಂದಹಾಗೆ ಇವರ ಅಕ್ಕ ಸೋನಿಯಾ ಮೆಹ್ರಾ ಕೂಡ ನಟಿಯೇ.
ಈಗ ಅಸಲಿ ಗಾಸಿಪ್ ಕಹಾನಿಗೆ ಬರೋಣ! ಪೂಜಾ ಹೆಗ್ಡೆ ಲೈಫ್‌ಗೆ ಎಂಟ್ರಿ ಕೊಡೋಕು ಮುಂಚೆ ರೋಹನ್ ಲೈಫ್‌ನಲ್ಲಿ ಬೇರೊಬ್ಬಳು ಸುಂದರಿ ಇದ್ದಳು. ಅವಳೇ ಬಾಲಿವುಡ್ ಬ್ಯೂಟಿ ತಾರಾ ಸುತಾರಿಯಾ! ತಾರಾ ಚಿತ್ರರಂಗಕ್ಕೆ ಬರೋಕು ಮುಂಚೆ ಇವರಿಬ್ಬರೂ ಸಖತ್ ಡೀಪ್ ಲವ್‌ನಲ್ಲಿದ್ದರು. ಎಲ್ಲೆಡೆ ಕೈ ಕೈ ಹಿಡಿದು ಓಡಾಡಿಕೊಂಡಿದ್ದರು. ಆದರೆ, ಏನಾಯ್ತೋ ಏನೋ, ಇಬ್ಬರ ದಾರಿ ಬೇರೆಯಾಯ್ತು, ಬ್ರೇಕಪ್ ಕೂಡ ಆಯ್ತು.
ಹಳೆಯ ಲವ್ ಸ್ಟೋರಿಗೆ ಎಂಡ್ ಕಾರ್ಡ್ ಹಾಕಿದ್ದ ರೋಹನ್‌ಗೆ, ಈಗ ಪೂಜಾ ಹೆಗ್ಡೆ ಸಾಥ್ ಸಿಕ್ಕಿದೆ. ಪಾರ್ಟಿ, ಔಟಿಂಗ್, ಬರ್ತ್‌ಡೇ ವಿಶ್‌ಗಳು ಅಂತ ಈ ಹೊಸ ಜೋಡಿ ಸಖತ್ ಎಂಜಾಯ್ ಮಾಡ್ತಿದೆ. ಇಬ್ಬರೂ ಪದೇ ಪದೇ ಒಟ್ಟಿಗೆ ಕ್ಯಾಮೆರಾ ಕಣ್ಣಿಗೆ ಸೆರೆಸಿಗುತ್ತಿರುವುದು ಡೇಟಿಂಗ್ ವದಂತಿಗೆ ತುಪ್ಪ ಸುರಿದಂತಾಗಿದೆ.
ಒಟ್ಟಿನಲ್ಲಿ, ಬ್ರೇಕಪ್ ನೋವಿನಲ್ಲಿದ್ದ ರೋಹನ್‌ಗೆ ಪೂಜಾ ಹೆಗ್ಡೆ ಮೂಲಕ ಹೊಸ ಲೈಫ್ ಸಿಕ್ಕಂತಿದೆ. ಅಭಿಮಾನಿಗಳ ತಲೆಯಲ್ಲಿ ಈಗ ಒಂದೇ ಪ್ರಶ್ನೆ- ಈ ಡೇಟಿಂಗ್ ಕಹಾನಿ ಮದುವೆ ಮಂಟಪದವರೆಗೆ ಹೋಗಿ ಸಪ್ತಪದಿ ತುಳಿಯುತ್ತಾ? ಅಥವಾ ಇದೂ ಬರೀ ವದಂತಿಯಾಗಿಯೇ ಉಳಿಯುತ್ತಾ? ಕಾದು ನೋಡೋಣ! ಬಾಲಿವುಡ್‌ನ ಈ ಹೊಸ 'ಲವ್‌ಬರ್ಡ್ಸ್' ಕಹಾನಿ ಮುಂದೆ ಯಾವ ತಿರುವು ಪಡೆಯುತ್ತೆ ಅನ್ನೋದೇ ಈಗ ಸದ್ಯದ ಸಸ್ಪೆನ್ಸ್!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

