ಮಗನನ್ನು ಗೇಲಿ ಮಾಡಿದ ಸೋನಂ ಕಪೂರ್ ಮತ್ತು ದೀಪಿಕಾರ ಮೇಲೆ ಕಿಡಿ ಕಾರಿದ್ದ ರಿಷಿ ಕಪೂರ್
ಕರಣ್ ಜೋಹರ್ (Karan Johar) ಅವರ ಬಹು ನಿರೀಕ್ಷಿತ ಚಾಟ್ ಶೋ ಕಾಫಿ ವಿತ್ ಕರಣ್‌ನ ಏಳನೇ ಸೀಸನ್ (Koffee With Karan Season 7) ಪ್ರಾರಂಭವಾಗುತ್ತಿದೆ. ಜುಲೈ 7 ರಿಂದ ಪ್ರಾರಂಭವಾಗುವ ಈ ಶೋನಲ್ಲಿ ಅನೇಕ ಸೆಲೆಬ್ರಿಟಿಗಳು ಮತ್ತೊಮ್ಮೆ ಭಾಗವಹಿಸಲಿದ್ದಾರೆ. ಪ್ರದರ್ಶನವನ್ನು ಡಿಸ್ನಿ ಹಾಟ್ ಸ್ಟಾರ್‌ನಲ್ಲಿ ಪ್ರಸಾರ ಮಾಡಲಾಗುತ್ತದೆ. ವರದಿಗಳ ಪ್ರಕಾರ ಕಾರ್ಯಕ್ರಮದ ಮೊದಲ ಅತಿಥಿಗಳು ರಣವೀರ್ ಸಿಂಗ್ ( Ranveer Singh) ಮತ್ತು ಆಲಿಯಾ ಭಟ್ (Alia Bahtt) . ಕರಣ್ ಅವರ ಚಿತ್ರ ರಾಕಿ ಔರ್ ರಾಣಿ ಕಿ ಪ್ರೇಮ್‌ಕಹಾನಿಯಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಈ ನಡುವೆ. ಕರಣ್ ಅವರ ಹಳೆಯ ಕಾರ್ಯಕ್ರಮಕ್ಕೆ ಸಂಬಂಧಿಸಿದ ಕೆಲವು ಕಥೆಗಳು ವೈರಲ್ ಆಗುತ್ತಿವೆ. ದೀಪಿಕಾ ಪಡುಕೋಣೆ (Deepika Padukone) ಮತ್ತು ಸೋನಂ ಕಪೂರ್ (Sonam Kapoor) ಬಗ್ಗೆ ಒಂದು ವಿಷಯ ವೈರಲ್ ಆಗುತ್ತಿದೆ. ಈ ಕಾರ್ಯಕ್ರಮದ ವೇಳೆ ಇಬ್ಬರೂ ರಣಬೀರ್ ಕಪೂರ್ ಬಗ್ಗೆ ಹೇಳಿದ್ದ ಮಾತಿಗೆ ರಿಷಿ ಕಪೂರ್ ಕೋಪಗೊಂಡಿದ್ದರು. ಅಷ್ಟಕ್ಕೂ ರಣಬೀರ್ ಕಪೂರ್ ಬಗ್ಗೆ ಇಬ್ಬರೂ ಹೇಳಿದ್ದೇನು?
ಸೋನಂ ಕಪೂರ್ ಮತ್ತು ದೀಪಿಕಾ ಪಡುಕೋಣೆ 2010 ರಲ್ಲಿ ಕರಣ್ ಜೋಹರ್ ಅವರ ಕಾರ್ಯಕ್ರಮ ಕಾಫಿ ವಿಥ್ ಕರಣ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಕರಣ್ ಇಬ್ಬರಿಗೂ ಹಲವು ಪ್ರಶ್ನೆಗಳನ್ನು ಕೇಳಿದ್ದರು. ಈ ಪೈಕಿ ಒಂದು ಪ್ರಶ್ನೆಯನ್ನು ರಣಬೀರ್ ಕಪೂರ್ ಬಗ್ಗೆ ಕೇಳಲಾಗಿತ್ತು.
ನೀವು ರಣಬೀರ್ ಕಪೂರ್ ಅವರಿಗೆ ಯಾವ ರೀತಿಯ ಉಡುಗೊರೆಯನ್ನು ನೀಡಲು ಬಯಸುತ್ತೀರಿ ಎಂದು ಕರಣ್ ಜೋಹರ್ ಅವರು ದೀಪಿಕಾ ಪಡುಕೋಣೆ ಅವರನ್ನು ಕೇಳಿದ್ದರು.ನಾನು ಅವರಿಗೆ ಕಾಂಡೋಮ್‌ಗಳ ಪ್ಯಾಕೆಟ್ ಅನ್ನು ಉಡುಗೊರೆಯಾಗಿ ನೀಡಲು ಬಯಸುತ್ತೇನೆ ಏಕೆಂದರೆ ಅವರು ಅದನ್ನು ಹೆಚ್ಚು ಬಳಸುತ್ತಾರೆ ಎಂದು ದೀಪಿಕಾ ಉತ್ತರಿಸಿದ್ದರು.
ಅದೇ ಸಮಯದಲ್ಲಿ, ಶೋನಲ್ಲಿ ರಣಬೀರ್ ಕಪೂರ್ ಬಗ್ಗೆ ಸೋನಮ್ ಕಪೂರ್ ಅವರನ್ನು ಕೇಳಿದಾಗ, ಅವರು ಸ್ನೇಹಿತನಾಗಿ ಒಳ್ಳೆಯ ವ್ಯಕ್ತಿ ಆದರೆ ಬಾಯ್ ಫ್ರೆಂಡ್ ಆಗಿ ಕೂಡ ಚೆನ್ನಾಗಿರುತ್ತಾರೆ ಎಂದು ಹೇಳುವುದು ಕಷ್ಟ ಎಂದು ಹೇಳಿದ್ದರು.
ದೀಪಿಕಾ-ಸೋನಂ ತಮ್ಮ ಮಗನ ಬಗ್ಗೆ ನಿಡಿದ ಹೇಳಿಕೆಗಳ ಬಗ್ಗೆ ತಿಳಿದಾಗ ರಿಷಿ ಕಪೂರ್ ಕೋಪಗೊಂಡಿದ್ದರು. ಈ ಇಬ್ಬರ ಮಾತು ಅವರ ಕ್ಲಾಸ್ ತೋರಿಸುತ್ತದೆ. ಇಂತಹ ಕೆಲಸಗಳನ್ನು ಮಾಡುವ ಬದಲು ಇಬ್ಬರೂ ತಮ್ಮ ವೃತ್ತಿಯತ್ತ ಗಮನ ಹರಿಸಬೇಕು. ತಮ್ಮ ತಂದೆಯ ಇಮೇಜ್ ಮತ್ತು ಸಾಧನೆಗಳ ಕಾರಣದಿಂದ ಅವರಿಬ್ಬರನ್ನೂ ಕಾರ್ಯಕ್ರಮಕ್ಕೆ ಕರೆಯಲಾಗಿದೆ ಏಕೆಂದರೆ ಅವರಿಬ್ಬರೂ ಇನ್ನೂ ಈ ರೀತಿ ಏನನ್ನೂ ಮಾಡಿಲ್ಲ ಎಂದು ರಿಷಿ ಕಪೂರ್ ಹೇಳಿದ್ದರು.
ರಣಬೀರ್ ಕಪೂರ್ ಸಾವರಿಯಾ ಚಿತ್ರದ ಮೂಲಕ ಸೋನಮ್ ಕಪೂರ್ ಅವರೊಂದಿಗೆ ಪಾದಾರ್ಪಣೆ ಮಾಡಿದರು. ಈ ಸಮಯದಲ್ಲಿ ಅವರ ನಿಕಟತೆಯ ಸುದ್ದಿಯೂ ಬಂದಿತು. ಇದಾದ ನಂತರ ರಣಬೀರ್ ದೀಪಿಕಾ ಪಡುಕೋಣೆ ಜೊತೆ ಡೇಟಿಂಗ್ ಆರಂಭಿಸಿ ಆಕೆಗೂ ಮೋಸ ಮಾಡಿದ್ದಾರೆ. ಆದರೆ ಈಗ ನಟ ಆಲಿಯಾರ ಜೊತೆ ಮದುವೆಯಾಗಿದ್ದಾರೆ.
ಪ್ರಸ್ತುತ ಸೋನಮ್ ಕಪೂರ್ ತನ್ನ ಪ್ರೆಗ್ನೆಂಸಿ ಅವಧಿಯನ್ನು ಆನಂದಿಸುತ್ತಿದ್ದಾರೆ. ಅದೇ ಸಮಯದಲ್ಲಿ, ದೀಪಿಕಾ ಪಡುಕೋಣೆ ಮುಂಬರುವ ದಿನಗಳಲ್ಲಿ ಪಠಾಣ್ ಮತ್ತು ಫಿಶರ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದೇ ಸಮಯದಲ್ಲಿ, ರಣಬೀರ್ ಕಪೂರ್ ಬ್ರಹ್ಮಾಸ್ತ್ರ ಮತ್ತು ಶಂಶೇರಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.