ಬಾಲಿವುಡ್’ನ ಈ ಸ್ಟಾರ್ ನಟರಿಗಿಂತ ಅವರ ಹೆಂಡ್ತಿಯರೇ ಶ್ರೀಮಂತರು!
ಬಾಲಿವುಡ್ ನಟ -ನಟಿಯರು ತುಂಬಾನೆ ರಿಚ್ ಅನ್ನೋದು ಗೊತ್ತೇ ಇದೆ. ಅದರಲ್ಲೂ ಈ ಸ್ಟಾರ್ ನಟಿಯರು ತಮ್ಮ ಗಂಡನಿಂತಲೂ ದುಪ್ಪಟ್ಟು ಶ್ರೀಮಂತರು.

ಬಾಲಿವುಡ್ ನ ಈ ನಟಿಯರು ಎಷ್ಟು ಶ್ರೀಮಂತರು ಅಂದ್ರೆ ಅವರ ಪತಿಯಂದಿರೂ ಕೂಡ ಅವರ ಮುಂದೆ ಏನೂ ಇಲ್ಲ. ಇಲ್ಲಿದೆ ನೋಡಿ ಬಾಲಿವುಡ್ (bollywood) ನ ಆಗರ್ಭ ಶ್ರೀಮಂತ ನಟಿಯರ ಲಿಸ್ಟ್, ಇವರ ನೆಟ್ ವರ್ತ್ ಅವರ ಗಂಡನ ನೆಟ್ ವರ್ತ್ ಗಿಂತ ದುಪ್ಪಟ್ಟು ಆಗಿದೆ.
ಕತ್ರೀನಾ ಕೈಫ್ : ವಿಕ್ಕಿ ಕೌಶಲ್ ಗಿಂತ ಕತ್ರೀನಾ ಕೈಫ್(katrina Kaif) 6 ಪಟ್ಟು ಹೆಚ್ಚು ಶ್ರೀಮಂತರಂತೆ. ವಿಕ್ಕಿ (Vicjy Kaushal) ನೆಟ್ ವರ್ತ್ 41 ಕೋಟಿಯಾಗಿದ್ರೆ, ಕತ್ರೀನಾ ಕೈಫ್ ನೆಟ್ ವರ್ತ್ 224 ಕೋಟಿ ಆಸ್ತಿಯ ಒಡತಿ.
ಪ್ರೀತಿ ಝಿಂಟಾ : ಬಾಲಿವುಡ್ ನ ಡಿಂಪಲ್ ಬ್ಯೂಟಿ ಪ್ರೀತಿ ಝಿಂಟಾ (Priety Zinta) ಕೂಡ ತುಂಬಾನೆ ರಿಚ್. ಪ್ರೀತಿ ಝಿಂಟಾ ಪತಿ ಜೀನ್ ಗುಡೆನೋ ಆಸ್ತಿ 25 ಕೋಟಿ, ಆದರೆ ಪ್ರೀತಿ ಝಿಂಟಾ ಆಸ್ತಿ 250 ಕೋಟಿ.
ದೀಪಿಕಾ ಪಡುಕೋಣೆ : ಬಾಲಿವುಡ್ ಲೇಡಿ ಸೂಪರ್ ಸ್ಟಾರ್ ದೀಪಿಕಾ ಪಡುಕೋಣೆ (Deepika Padukone) ಇಬ್ಬರ ಆಸ್ತಿಯಲ್ಲಿ ಬರೋಬ್ಬರಿ 255 ಕೋಟಿ ಡಿಫರೆನ್ಸ್ ಇದೆ. ರಣ್ ವೀರ್ ಸಿಂಗ್ ಆಸ್ತಿ 245 ಕೋಟಿ ಆಗಿದ್ರೆ, ದೀಪಿಕಾ ಪಡುಕೋಣೆ ಆಸ್ತಿ 500 ಕೋಟಿ.
ಆಲಿಯಾ ಭಟ್ : ಇದನ್ನ ಕೇಳಿ ನಿಮಗೆ ವಿಚಿತ್ರ ಅನಿಸಬಹುದು, ಆದ್ರೂ ಇದು ನಿಜಾ. ರಣ್ಬೀರ್ ಕಪೂರ್ ಆಸ್ತಿ 345 ಕೋಟಿಯಾಗಿದ್ದು, ಆಲಿಯಾ ಭಟ್ ಆಸ್ತಿ 550 ಕೋಟಿಯಾಗಿದೆ.
ಐಶ್ವರ್ಯ ರೈ : ರಿಚ್ ಸ್ಟಾರ್ ನಟಿಯರಲ್ಲಿ ಮೊದಲ ಸ್ಥಾನದಲ್ಲಿರೋದು ಐಶ್ವರ್ಯ ರೈ. (Aishwarya Rai) ಈಕೆ ಬಾಲಿವುಡ್ ನ ಅತ್ಯಂತ ಶ್ರೀಮಂತ ನಟಿ. ಇವರ ಆಸ್ತಿ ಬರೋಬ್ಬರಿ 800 ಕೋಟಿಯಾಗಿದೆ. ಆದರೆ ಅಭಿಷೇಕ್ ಬಚ್ಚನ್ ಆಸ್ತಿ ಮೌಲ್ಯ 280 ಕೋಟಿಯಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.