ಕನ್ನಡಿಗರಿಂದ ಟ್ರೋಲ್ ಆದ ಬೆನ್ನಲ್ಲೇ ಮೂಗಿನ ಮೇಲೆ ಹೂವಿಟ್ಟ ರಶ್ಮಿಕಾ ಮಂದಣ್ಣ
ಮೇಲಿಂದ ಮೇಲೆ ಯಶಸ್ಸಿನಲ್ಲಿರುವ ರಶ್ಮಿಕಾ ಮಂದಣ್ಣ ಮುಂಬರುವ ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ನಡುವೆ ರಶ್ಮಿಕಾ ಮಂದಣ್ಣ ಮೂಗಿನ ಮೇಲೆ ಹೂವಿಟ್ಟು ಪೋಸ್ ಕೊಟ್ಟಿದ್ದಾರೆ. ಅಷ್ಟಕ್ಕೂ ರಶ್ಮಿಕಾ ಮಂದಣ್ಣ ಈ ರೀತಿ ಪೋಸ್ ಕೊಟ್ಟಿದ್ದೇಕೆ?

ರಶ್ಮಿಕಾ ಮಂದಣ್ಣ ಸದ್ಯ ಭಾರತದ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿ ಮಾತ್ರವಲ್ಲ, ಯಶಸ್ಸಿ ನಟಿಯಾಗಿದ್ದಾರೆ. ಸತತ ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡಿರುವ ರಶ್ಮಿಕಾ ಮಂದಣ್ಣ ಇದೀಗ ಸಲ್ಮಾನ್ ಖಾನ್ ಜೊತೆಗೆ ಸಿಕಂದರ್ ಚಿತ್ರದಲ್ಲಿ ಬ್ಯೂಸಿಯಾಗಿದ್ದಾರೆ. ಇದರ ಜೊತೆಗೆ ಒಂದಷ್ಟು ಬೇರೆ ಚಿತ್ರಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಛಾವ ಚಿತ್ರದ ಯಶಸ್ಸಿನ ಅಲೆಯಲ್ಲಿರುವ ರಶ್ಮಿಕಾ ಮಂದಣ್ಣ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ರಶ್ಮಿಕಾ ಮಂದಣ್ಣ ಸುಂದರ ಹೂವನ್ನ ಮೂಗಿನ ಮೇಲಿಟ್ಟು ಫೋಸ್ ಕೊಟ್ಟಿದ್ದಾರೆ. ಮೂಗುತಿ ರೀತಿಯಲ್ಲಿ ಹೂವನ್ನಿಟ್ಟು ರಶ್ಮಿಕಾ ಮಂದಣ್ಣ ಪೋಸ್ ಕೊಟ್ಟಿದ್ದಾರೆ. ರಶ್ಮಿಕಾ ಸೌಂದರ್ಯದ ಜೊತೆಗೆ ಸಂಭ್ರಮದಲ್ಲಿರುವ ಈ ಫೋಟೋವನ್ನು ಖುದು ನಟಿ ಹಂಚಿಕೊಂಡಿದ್ದರೆ. ಇದರ ಜೊತೆಗೆ ಒಂದಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ನೀವು ಸಂತೋಷ, ಸಂಭ್ರಮದಲ್ಲಿರುವಾಗ ಎಂದು ಬರೆದುಕೊಂಡಿದ್ದಾರೆ. ರಶ್ಮಿಕಾ ಮಂದಣ್ಮ ಯಶಸ್ಸಿನ ಅಲೆಯಲ್ಲಿರುವ ಈ ಫೋಟೋ ತಮ್ಮ ಬಿಡುವಿನ ವೇಳೆ ಸಂಭ್ರಮ ಸೂಚಿಸುತ್ತಿದೆ. ರಶ್ಮಿಕಾ ಮಂದಣ್ಣ ನಟಿಸಿದ ಆ್ಯನಿಮಲ್, ಪುಷ್ಪಾ 2 ಬಳಿಕ ಛಾವಾ ಮೂರು ಚಿತ್ರಗಳು ಬಾರಿ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಇದೀಗ ಶೂಟಿಂಗ್ ನಡುವೆ ಬಿಡುವು ಮಾಡಿಕೊಂಡರುವ ನಟಿ ಪೋಟೋಗೆ ಫೋಸ್ ಕೊಟ್ಟಿದ್ದಾರೆ.
ಹಳದಿ ಸೆಲ್ವಾರ್‌ನಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ಒಂದಷ್ಟು ಫೋಟೋಗಳನ್ನು ಹಂಚಿಕೊಂಡಿರುವ ರಶ್ಮಿಕಾ ಮಂದಣ್ಣಗೆ ಅಭಿಮಾನಿಗಳು ಭರ್ಜರಿ ಕಮೆಂಟ್ ಮಾಡಿದ್ದಾರೆ. ಕ್ಯೂಟ್, ಬ್ಯೂಟಿಫೂಲ್ ಸೇರಿದಂತೆ ಪ್ರಶಂಸೆ ಕಮೆಂಟ್ ಜೊತೆಗೆ ರಶ್ಮಿಕಾ ಸೌಂದರ್ಯಕ್ಕೆ ಮಾರು ಹೋಗಿದ್ದಾರೆ.
ರಶ್ಮಿಕಾ ಮಂದಣ್ಣ ಹಾಗೂ ಸಲ್ಮಾನ್ ಖಾನ್ ಅಭಿನಯದ ಸಿಕಂದರ್ ಸಿನಿಮಾ ಈದ್ ಹಬ್ಬಕ್ಕೆ ಬಿಡುಗಡೆಯಾಗಲಿದೆ. ಈ ಚಿತ್ರದ ಟೀಸರ್‌ನ್ನು ರಶ್ಮಿಕಾ ಮಂದಣ್ಣ ಇತ್ತೀಚಗೆ ಹಂಚಿಕೊಂಡಿದ್ದರು. ಇದೀಗ ಬಾಲಿವುಡ್ ಮಂದಿ ಮತ್ತೊಂದು ಸೂಪರ್ ಹಿಟ್ ಸಿನಿಮಾ ನಿರೀಕ್ಷಿಸುತ್ತಿದ್ದಾರೆ. ಇತ್ತ ಸತತ ಗೆಲುವಿನಲ್ಲಿರುವ ರಶ್ಮಿಕಾ ಮಂದಣ್ಣ ಕೂಡ 4ನೇ ಬ್ಲಾಕ್‌ಬಸ್ಟರ್ ಚಿತ್ರದ ಸಂಭ್ರಮ ಆಚರಿಸಲು ಕಾತುರಗೊಂಡಿದ್ದಾರೆ.