ಬಾಲಿವುಡ್ ಬಾಕ್ಸ್ ಅಫೀಸ್‌ನಲ್ಲಿ ದೀಪಿಕಾ ಹಿಂದಿಕ್ಕಿ ದಾಖಲೆ ಬರೆದ ರಶ್ಮಿಕಾ ಮಂದಣ್ಣ
ಬಾಲಿವುಡ್‌ನಲ್ಲಿ ರಶ್ಮಿಕಾ ಮಂದಣ್ಣ ಹೊಸ ದಾಖಲೆ ಬರೆದಿದ್ದಾರೆ. ದೀಪಿಕಾ ಪಡುಕೋಣೆ ಹೆಸರಲ್ಲಿದ್ದ ದಾಖಲೆ ಅಳಿಸಿ ಬಾಕ್ಸ್ಆಫೀಸ್‌ನಲ್ಲಿ ಧೂಳೆಬ್ಬಿಸಿದ್ದಾರೆ. ಸದ್ಯ ರಶ್ಮಿಕಾ ಮಂದಣ್ಣ ಬರೆದ ದಾಖಲೆ ಏನು?

ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೆ ದೀಪಿಕಾ ಪಡುಕೋಣೆ ಚಿತ್ರರಂಗಕ್ಕೆ ಬಂದು ಹೊಸ ದಾಖಲೆ ಬರೆದಿದ್ದಾರೆ. ವೃತ್ತಿಜೀವನದಲ್ಲಿ ಚಿಕ್ಕ ಮತ್ತು ದೊಡ್ಡ ಪಾತ್ರಗಳನ್ನು ನಿರ್ವಹಿಸಿ ಇಂದು ಬಾಲಿವುಡ್‌ನ ನಂಬರ್ ಒನ್ ನಾಯಕಿಯಾಗಿ ಮೆರೆದಿದ್ದಾರೆ. ಅವರು ಆಯ್ಕೆ ಮಾಡುವ ಪಾತ್ರಗಳು ಆ ಸ್ಥಾನಕ್ಕೆ ಅವರನ್ನು ಏರಿಸಿವೆ. ದೀಪಿಕಾ ಪಡುಕೋಣೆ ಅವರ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿವೆ. ಅನೇಕ ನಟಿಯರಿಗೆ ಸಾಧ್ಯವಾಗದ ದಾಖಲೆಗಳನ್ನು ದೀಪಿಕಾ ಮಾಡಿದ್ದಾರೆ.ಇದೀಗ ದೀಪಿಕಾ ಪಡುಕೋಣೆ ದಾಖಲೆಯನ್ನು ನಟಿ ರಶ್ಮಿಕಾ ಮಂದಣ್ಣ ಮುರಿದಿದ್ದಾರೆ.
ಕರ್ನಾಟಕದ ರಶ್ಮಿಕಾ ಮಂದಣ್ಣ ಇದೀಗ ಬಾಲಿವುಡ್ ಬಾಕ್ಸ್ ಅಫೀಸ್‌ನ ಹೊಸ ರಾಣಿಯಾಗಿದ್ದಾರೆ. ರಶ್ಮಿಕಾ ಮಂದಣ್ಣ ಬಾಲಿವುಡ್ ಬಾಕ್ಸ್‌ಅಫೀಸ್‌ನಲ್ಲಿ ಅತಿ ಹೆಚ್ಚು 500 ಕೋಟಿ ಚಿತ್ರಗಳನ್ನು ಹೊಂದಿರುವ ಏಕೈಕ ಭಾರತೀಯ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸತತ 500 ಕೋಟಿ ರೂಪಾಯಿಗೂ ಹೆಚ್ಚಿನ ಕಲೆಕ್ಷನ್ ಕೊಟ್ಟ ನಾಯಕಿ ಅನ್ನೋ ಹೆಗ್ಗಳಿಕೆಗೆ ರಶ್ಮಿಕಾ ಮಂದಣ್ಣ ಪಾತ್ರರಾಗಿದ್ದಾರೆ.
ಕೋವಿಡ್ ನಂತರ ದೀಪಿಕಾ ಅವರ ಐದು 100 ಕೋಟಿ ಸಿನಿಮಾಗಳು ಬಂದಿವೆ. ಆದರೆ 500 ಕೋಟಿ ಸಿನಿಮಾಗಳು ಕೇವಲ ಎರಡೇ. ಪಠಾಣ್ (543.22), ಜವಾನ್ (640.42) . ಕಲ್ಕಿಯ ಹಿಂದಿ ಆವೃತ್ತಿ 292.96 ಕೋಟಿ ಗಳಿಸಿದೆ. ದೀಪಿಕಾ ಪಡುಕೋಣೆ ಅಭಿನಯಿಸಿದ 5 ಚಿತ್ರದಲ್ಲಿ 2 ಚತ್ರ 500 ಕೋಟಿ ರೂಪಾಯಿ ಇನ್ನುಳಿದ 3 ಚಿತ್ರ 100 ಕೋಟಿ ರೂಪಾಯಿಗೆ ಹೆಚ್ಚಿನ ದಾಖಲೆ ಬರೆದಿದೆ.
ಆದರೆ ರಶ್ಮಿಕಾ ಮಂದಣ್ಣ ಬಾಲಿವುಡ್‌ಗೆ ಮೂರು 500 ಕೋಟಿ ಸಿನಿಮಾಗಳನ್ನು ನೀಡಿದ್ದಾರೆ. ಅನಿಮಲ್ (554), ಪುಷ್ಪ 2 (1265.97) ಎರಡು ಚಿತ್ರಗಳು. ಇನ್ನೊಂದು ಛಾವಾ. ಈ ಚಿತ್ರ 447.26 ಕೋಟಿ ಗಳಿಸಿದೆ ಎಂದು ವರದಿಯಾಗಿದೆ. ಈ ವಾರವೇ ಈ ಚಿತ್ರ 500 ಕೋಟಿ ಕ್ಲಬ್‌ಗೆ ಸೇರಲಿದೆ.
ಸಲ್ಮಾನ್ ಖಾನ್ ಅಭಿನಯದ ಸಿಕಂದರ್ ಚಿತ್ರದಲ್ಲಿ ರಶ್ಮಿಕಾ ನಾಯಾಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರ ಈದ್ ಹಬ್ಬಕ್ಕೆ ಬಿಡುಗಡೆಯಾಗುತ್ತಿದೆ. ಈ ಚಿತ್ರವೂ 500 ಕೋಟಿ ಕ್ಲಬ್ ಸೇರುವ ಸಾಧ್ಯತೆ ಇದೆ. ವಿಶೇಷ ಅಂದರೆ ಬಾಲಿವುಡ್‌ನಲ್ಲಿ ಹೊಸ ದಾಖಲೆ ಬರೆದ ದೀಪಿಕಾ ಪಡುಕೋಣೆ, ಇದೀಗ ದಾಖಲೆ ಮುರಿದ ರಶ್ಮಿಕಾ ಮಂದಣ್ಣ ಇಬ್ಬರೂ ಕರ್ನಾಟಕದವರು ಅನ್ನೋದು ವಿಶೇಷ.