ಓಮನ್‌ನಲ್ಲಿ ರಶ್ಮಿಕಾ ಮಂದಣ್ಣ ಹುಟ್ಟುಹಬ್ಬ ಆಚರಣೆ, ಯಾರ ಜೊತೆಗೆ?
ರಶ್ಮಿಕಾ ಮಂದಣ್ಣ ತಮ್ಮ 29ನೇ ಹಟ್ಟು ಹಬ್ಬವನ್ನು ಓಮನ್‌ನಲ್ಲಿ ಆಚರಿಸಿದ್ದಾರೆ. ಕಡಲ ತಟದಲ್ಲಿರುವ ರೆಸಾರ್ಟ್‌ನಲ್ಲಿ ರಶ್ಮಿಕಾ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಯಾರ ಜೊತೆಗೆ ರಶ್ಮಿಕಾ ಓಮನ್‌ನಲ್ಲಿ ಹಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ?

ಸತತ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದ ರಶ್ಮಿಕಾ ಮಂದಣ್ಣ ಇದೀಗ ತಮ್ಮ ಹುಟ್ಟುಹಬಬಕ್ಕೆ ಬ್ರೇಕ್ ತೆಗೆದುಕೊಂಡಿದ್ದಾರೆ. ಪುಷ್ಪಾ2, ಛಾವ, ಸಿಕಂದರ್. ಹೀಗೆ ಸತತ ಮೂರೂ ಸಿನಿಮಾ ಬಳಿಕ ಇದೀಗ ರಶ್ಮಿಕಾ ಮಂದಣ್ಣ ಓಮನ್‌ನಲ್ಲಿ ವೇಕೇಶನ್ ಮೂಡ್‌ನಲ್ಲಿದ್ದಾರ. ವಿಶೇಷ ಅಂದರೆ ಇಂದು ರಶ್ಮಿಕಾ ಮಂದಣ್ಣ ತಮ್ಮ 29ನೇ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ.
ಓಮನ್‌ನ ಅಲ್ ಬಲೀದ್ ರೆಸಾರ್ಟ್ ಸಲಾಹ್‌ನಲ್ಲಿ ರಶ್ಮಿಕಾ ಮಂದಣ್ಣ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ಸೋಶಿಯಲ್ ಮೀಡಿಯಾದಲ್ಲ ಈ ಕುರಿತು ಅಪ್‌ಡೇಟ್ ನೀಡಿದ್ದಾರೆ. ಮೂರು ಫೋಟೋಗಳನ್ನು ರಶ್ಮಿಕಾ ಮಂದಣ್ಣ ಪೋಸ್ಟ್ ಮಾಡಿದ್ದಾರೆ. ರಶ್ಮಿಕಾಗೆ ಅಭಿಮಾನಿಗಳು ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಇನ್ನು ನಟ ನಟಿಯರು ರಶ್ಮಿಕಾ ಮಂದಣ್ಣಗೆ ಶುಭ ಕೋರಿದ್ದಾರೆ.
ರಶ್ಮಿಕಾ ಯಾರ ಜೊತೆಗೆ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ ಅನ್ನೋ ಕುತೂಹಲ ಇದೀಗ ಮನೆ ಮಾಡಿದೆ.ಹಲವರು ಯಾರು ಈ ಫೋಟೋ ಕ್ಲಿಕ್ ಮಾಡಿದ್ದು ಅನ್ನೋ ಪ್ರಶ್ನೆಯನ್ನು ಹಲವರು ಕೇಳಿದ್ದಾರೆ. ಏಪ್ರಿಲ್ 4 ರಂದು ಈ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಇಂದು ಅಂದರೆ ಎಪ್ರಿಲ್ 5 ರಂದು 29ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹುಟ್ಟು ಹಬ್ಬ ಹಾಗೂ ಸತತ ಸಿನಿಮಾಗಳಿಂದ ಬ್ರೇಕ್ ಪಡೆಯಲು ರಶ್ಮಿಕಾ ಮಂದಣ್ಣ ಓಮನ್‌ಗೆ ಹಾರಿದ್ದಾರೆ.
ಬ್ಲಾಕ್ ಟ್ಯಾಂಕ್ ಟಾಪ್ ಹಾಗೂ ಜೀನ್ಸ್ ಧರಿಸಿರುವ ರಶ್ಮಿಕಾ ಮಂದಣ್ಣ ಮತ್ತಷ್ಟು ಆಕರ್ಷಕವಾಗಿದ್ದಾರೆ. ಗೋಲ್ಡನ್ ಇಯರಿಂಗ್ಸ್ ಜೊತೆಗೆ ಸ್ಮಾರ್ಟ್‌ವಾಚ್ ಕೂಡ ಧರಿಸಿದ್ದಾರೆ. ಬಳಿ ಬಣ್ಣದ ಹ್ಯಾಟ್ ಕೂಡ ರಶ್ಮಿಕಾ ಮಂದಣ್ಣ ಬಳಸಿದ್ದಾರೆ. ಕೆಲ ಫೋಟೋದಲ್ಲಿ ಹ್ಯಾಟ್ ತೆಗೆದು ಕ್ಲಿಕ್ಕಿಸಿಕೊಂಡಿದ್ದಾರೆ. ಈ ವೇಳೆ ತಲೆಯಲ್ಲಿ ಗಾಗಲ್ಸ್ ಇಟ್ಟುಕೊಂಡಿದ್ದಾರೆ. ಕಡಲ ಕಿನಾರೆಯ ಸುಂದರ ನೋಟದ ಬ್ಯಾಕ್‌ಡ್ರೌಪ್, ಇತ್ತ ರಶ್ಮಿಕಾ ಆಹಾರ ಖಾದ್ಯಗಳ ಸವಿಯುತ್ತಾ ಫೋಟೋ ಕ್ಲಿಕ್ಕಿಸಿದ್ದಾರೆ.
ಇತ್ತೀಚೆಗೆ ರಶ್ಮಿಕಾ ಮಂದಣ್ಣ ಸೋಶಿಯಲ್ ಮೀಡಿಯಾ ಮೂಲಕ, ನನ್ನ ಹುಟ್ಟುಹಬ್ಬದ ತಿಂಗಳು ಅನ್ನೋದು ಉತ್ಸಾಹ ಹೆಚ್ಚಿಸಿದೆ. ಸಾಮಾನ್ಯವಾಗಿ ಒಂದೊಂದು ವರ್ಷ ಸೇರುತ್ತಾ ಹೋದಂತೆ ಹುಟ್ಟು ಹಬ್ಬ ಆಚರಿಸುವ ಆಸಕ್ತಿ ಕಡಿಮೆಯಾಗುತ್ತದೆ. ಆದರೆ ನನ್ನ ವಿಚಾರದಲ್ಲಿ ಹಾಗಲ್ಲ.ಹುಟ್ಟು ಹಬ್ಬ ಆಚರಿಸಲು ನಾನು ತೀರಾ ಉತ್ಸಕನಾಗಿದ್ದೇನೆ ಎಂದಿದ್ದರು.
ಭಾರತೀಯ ಸಿನಿಮಾದಲ್ಲಿ ಸತತ ಸೂಪರ್ ಹಿಟ್ ಹಾಗೂ ಬ್ಲಾಕ್‌ಬಸ್ಟರ್ ಸಿನಿಮಾ ಕೊಟ್ಟ ರಶ್ಮಿಕಾ ಮಂದಣ್ಣ ಮುಂದಿನ ಸಿನಿಮಾ ಕುಬೇರಾ ಶೂಟಿಂಗ್ ಹಂತದಲ್ಲಿದೆ. ಇದರೊಂದಿಗೆ ಇತರ ಕೆಲ ಸಿನಿಮಾಗಳಲ್ಲೂ ರಶ್ಮಿಕಾ ಮಂದಣ್ಣ ಕೈಜೋಡಿಸಿದ್ದಾರೆ. ಇದೇ ವೇಳೆ ರಶ್ಮಿಕಾ ಮಂದಣ್ಣ ಡೇಟಿಂಗ್, ರಿಲೇಶನ್‌ಶಿಪ್ ಕೂಡ ಭಾರಿ ಚರ್ಚೆಯಾಗುತ್ತಿದೆ. ಆದರೆ ಕುರಿತು ರಶ್ಮಿಕಾ ಮಂದಣ್ಣ ಅಧಿಕೃತವಾಗಿ ಯಾವುದೇ ಹೇಳಿಕೆ ಅಥವೂ ಸೂಚನೆ ನೀಡಿಲ್ಲ.