MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಪತ್ನಿಯರಿಗಾಗಿ ಕರ್ವಾ ಚೌತ್‌ ಉಪವಾಸ ಮಾಡೋ ಬಾಲಿವುಡ್‌ ಸೆಲೆಬ್ರೆಟೀಸ್!

ಪತ್ನಿಯರಿಗಾಗಿ ಕರ್ವಾ ಚೌತ್‌ ಉಪವಾಸ ಮಾಡೋ ಬಾಲಿವುಡ್‌ ಸೆಲೆಬ್ರೆಟೀಸ್!

ಕರ್ವಾ ಚೌತ್ (Karwa chauth) ಭಾರತದ ಅತ್ಯಂತ ಜನಪ್ರಿಯ ಹಬ್ಬಗಳಲ್ಲಿ ಒಂದು. ಈ ನಿರ್ದಿಷ್ಟ ದಿನದಂದು, ವಿವಾಹಿತ ಮಹಿಳೆಯರು ತಮ್ಮ ಪತಿಗಾಗಿ ನಿರ್ಜಲ ಉಪವಾಸವನ್ನು ಆಚರಿಸುತ್ತಾರೆ ಮತ್ತು ಅವರು ತಮ್ಮ ಗಂಡಂದಿರ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಾರೆ. ಆದರೆ ಬಾಲಿವುಡ್‌ನ ಹೊಸ-ಪೀಳಿಗೆಯ ಗಂಡಂದಿರು ಈ ಪದ್ಥತಿಯನ್ನು ಮುರಿದ್ದಾರೆ. ಕರ್ವಾ ಚೌತ್‌ ದಿನದಂದು ಪತ್ನಿಯರಿಗಾಗಿ ತಾವು ಉಪವಾಸ ಮಾಡುವ ಆಚರಣೆಯನ್ನು ಶುರು ಮಾಡಿದ್ದಾರೆ. ರಣವೀರ್ ಸಿಂಗ್‌ನಿಂದ ಹಿಡಿದು ಅಭಿಷೇಕ್ ಬಚ್ಚನ್‌ವರೆಗೆ ಅನೇಕ ಬಾಲಿವುಡ್‌ ಸೆಲೆಬ್ರಿಟಿ ಗಂಡಂದಿರು ಕರ್ವಾ ಚೌತ್‌ನಂದು ತಮ್ಮ ಹೆಂಡತಿಗಾಗಿ ಉಪವಾಸ ಮಾಡುತ್ತಾರೆ.ಇಲ್ಲಿದೆ ನೋಡಿ ವಿವರ. 

1 Min read
Author : Suvarna News | Asianet News
Published : Oct 26 2021, 05:12 PM IST
Share this Photo Gallery
  • FB
  • TW
  • Linkdin
  • Whatsapp
14

 ಅಭಿಷೇಕ್ ಬಚ್ಚನ್ (Abishek Bachchan):
ಏಪ್ರಿಲ್ 20, 2007 ರಂದು ಮುಂಬೈನಲ್ಲಿ ಅಭಿಷೇಕ್  ಬಚ್ಚನ್‌ ಮತ್ತು ಐಶ್ವರ್ಯಾ ರೈ  ವಿವಾಹ ಬಂಧನಕ್ಕೆ ಒಳಗಾಗದರು. ಐಶ್ವರ್ಯಾ ಪ್ರತಿ ವರ್ಷ ತಮ್ಮ ಪತಿಗಾಗಿ ಕರ್ವಾ ಚೌತ್‌ ಉಪವಾಸವನ್ನು ಆಚರಿಸುತ್ತಾರೆ. ಜೊತೆಗೆ ಅಭಿಷೇಕ್ ಕೂಡ ಐಶ್ವರ್ಯಾಗಾಗಿ ಉಪವಾಸ ಮಾಡುತ್ತಾರೆ. ಈ ವಿಷಯವನ್ನು ಸಂದರ್ಶನವೊಂದರಲ್ಲಿ ಅಭಿಷೇಕ್‌ ಅವರ ಲುಡೋ ಸಿನಿಮಾದ  ಸಹ-ನಟ ಇನಾಯತ್ ವರ್ಮಾ ಒಮ್ಮೆ ಬಹಿರಂಗಪಡಿಸಿದ್ದರು.

24

ರಣವೀರ್‌ ಸಿಂಗ್ (Ranveer Singh):
ದಿ ಬಿಗ್ ಪಿಕ್ಚರ್ ಎಂಬ ಕ್ವಿಜ್‌ ಶೋನಲ್ಲಿ ನಟ ರಣವೀರ್‌ ಸಿಂಗ್‌ ಪತ್ನಿ ದೀಪಿಕಾಗಾಗಿ ಉಪವಾಸವನ್ನು ಆಚರಿಸುತ್ತಾರೆ ಎಂದು ಬಹಿರಂಗಪಡಿಸಿದ್ದರು. ಅಷ್ಟೇ ಅಲ್ಲ ರಣವೀರ್ ಅವರ ಪ್ರೀತಿಯ ಸಂಕೇತವಾಗಿ ಮತ್ತು ತಮ್ಮ ಪತ್ನಿಯ ಮೇಲಿನ ಪ್ರೀತಿಯನ್ನು ತೋರಿಸಲು ತಮ್ಮ ಕೈಗಳಿಗೆ ಮೆಹೆಂದಿಯನ್ನು ಸಹ ಹಾಕಿಕೊಂಡಿದ್ದಾರೆ.

34

ಆಯುಷ್ಮಾನ್ ಖುರಾನಾ (Ayushman Khurana) :
2018ರಲ್ಲಿ  ಪತ್ನಿಗೆ ಸ್ತನ ಕ್ಯಾನ್ಸರ್ (Breask Cancer) ಇರುವುದು ಪತ್ತೆಯಾದಾಗ ವಿಕ್ಕಿ ಡೋನರ್ (Vicky Donor) ನಟ ಆಯುಷ್ಮಾನ್‌ ಖುರಾನಾ ತನ್ನ ಪತ್ನಿ ತಾಹಿರಾಗಾಗಿ ಕರ್ವಾ ಚೌತ್ ವ್ರತವನ್ನು ಆಚರಿಸಿ, ಸುದ್ದಿಯಾಗಿದ್ದರು. ಅವರು ತಮ್ಮ ಹೆಂಡತಿ ಬೇಗ ಗುಣವಾಗಲು ಉಪವಾಸ ಆಚರಿಸಿದ್ದರು ಮತ್ತು ಅಂಗೈ ಮೇಲೆ ಅವರ ಹೆಸರಿನ ಮೊದಲ ಅಕ್ಷರಗಳ ಮೆಹೆಂದಿ ಸಹ ಹಾಕಿಸಿಕೊಂಡಿದ್ದರು.

44

ರಾಜ್ ಕುಂದ್ರಾ (Raj Kundra):
ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್‌ ಕುಂದ್ರಾ ಸಹ ಹನ್ನೊಂದು ವರ್ಷಗಳಿಂದ ಪತ್ನಿಗಾಗಿ ಉಪವಾಸ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಶಿಲ್ಪಾ ಶೆಟ್ಟಿ  ಮತ್ತು ಬ್ಯುಸಿನೆಸ್‌ಮ್ಯಾನ್‌ ರಾಜ್‌ಕುಂದ್ರಾ ಜೋಡಿಯು ನವೆಂಬರ್ 22, 2009 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News

Latest Videos
Recommended Stories
Recommended image1
Viral Pics: ವಿಜಯ್‌ ದೇವರಕೊಂಡ ತಾಳಿ ಕಟ್ಟುವ ವೇಳೆ ಭಾವುಕಳಾಗಿ ಕಣ್ಣೀರಿಟ್ಟ ರಶ್ಮಿಕಾ ಮಂದಣ್ಣ!
Recommended image2
ಮುಂಬೈನಲ್ಲಿ ಮಂಗಳೂರು ಬೆಡಗಿ ಶಿಲ್ಪಾ ಶೆಟ್ಟಿ ಮೊದಲ ಬೀಚ್ ಕ್ಲಬ್ ಶುರು; ದೇವಲೋಕವೋ ಪ್ರೇಮಲೋಕವೋ ಎಂಬಂತಿದೆ!
Recommended image3
ಸಂಭ್ರಮದಿಂದ ಪತಿ ಪರಿಚಯಿಸುತ್ತಲೇ ಒಂದೇ ಪೋಸ್ಟ್‌ನಲ್ಲಿ ಟೀಕೆಗೂ ಉತ್ರರಿಸಿದ್ರಾ ರಶ್ಮಿಕಾ ಮಂದಣ್ಣ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved