MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • ದೀಪಿಕಾ ಜೊತೆ ಮಕ್ಕಳಾಗ್ಬೇಕು: ನನ್ನ ಲೈಫ್ ಸೆಟ್ ಎಂದ ರಣವೀರ್

ದೀಪಿಕಾ ಜೊತೆ ಮಕ್ಕಳಾಗ್ಬೇಕು: ನನ್ನ ಲೈಫ್ ಸೆಟ್ ಎಂದ ರಣವೀರ್

ದೀಪಿಕಾ ಪಡುಕೋಣೆ ಜೊತೆ ಮಕ್ಕಳಾಗಬೇಕು ಎಂದ ರಣವೀರ್ ಮಕ್ಕಳಾದ್ರೆ ನನ್ನ ಲೈಫ್ ಸೆಟ್ ಎಂದ ಬಾಲಿವುಡ್ ನಟ

1 Min read
Suvarna News
Published : Oct 17 2021, 11:21 AM IST| Updated : Oct 17 2021, 11:29 AM IST
Share this Photo Gallery
  • FB
  • TW
  • Linkdin
  • Whatsapp
18

ಬಾಲಿವುಡ್ ನಟ ರಣವೀರ್ ಸಿಂಗ್ ಅವರು ದಿ ಬಿಗ್ ಪಿಕ್ಚರ್ ಎಂಬ ಕ್ವಿಜ್ ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಲಿದ್ದಾರೆ. ಈ ಶೋ ಅಕ್ಟೋಬರ್ 16 ರಂದು ಕಲರ್ಸ್ ಟಿವಿಯಲ್ಲಿ ಪ್ರಥಮ ಪ್ರದರ್ಶನಗೊಳ್ಳಲಿದೆ.

28

ವೀಕ್ಷಕರ ಸಾಮಾನ್ಯ ಜ್ಞಾನವನ್ನು ಸುಧಾರಿಸುವುದರ ಜೊತೆಗೆ, ಅದ್ಭುತವಾದ ಕ್ಷಣಗಳಿಂದ ತುಂಬಿದ ಮನರಂಜನೆಯ ಭರವಸೆಯನ್ನೂ ನೀಡುತ್ತದೆ ಈ ಶೋ.

38

ಕಾರ್ಯಕ್ರಮದಲ್ಲಿ ರಣವೀರ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಕೆಲವು ಸಂಕೀರ್ಣ ವಿವರಗಳನ್ನು ಹಂಚಿಕೊಳ್ಳುವ ನಿರೀಕ್ಷೆಯಿದೆ. 36 ವರ್ಷದ ಅವರು ತಮ್ಮ ಪತ್ನಿ, ನಟಿ ದೀಪಿಕಾ ಪಡುಕೋಣೆ ಜೊತೆ ಕುಟುಂಬವನ್ನು ಆರಂಭಿಸುವ ಯೋಚನೆಯನ್ನು ಇಲ್ಲಿ ತೆರೆದಿಟ್ಟಿದ್ದಾರೆ.

48

ಅವರು ಕೆಲವು ಹೆಸರುಗಳನ್ನು ಸಹ ಶಾರ್ಟ್‌ಲಿಸ್ಟ್ ಮಾಡಿದ್ದಾರೆ ಎಂದು ನಟ ಬಹಿರಂಗಪಡಿಸಿದ್ದಾರೆ. ಉತ್ತರಪ್ರದೇಶದ ಗೋರಖ್ ಪುರದಿಂದ ಸ್ಪರ್ಧಿಸಿದ ಅಭಯ್ ಸಿಂಗ್ ಜೊತೆ ಚಾಟ್ ಮಾಡುವಾಗ ರಣವೀರ್ ಈ ಹೇಳಿಕೆ ನೀಡಿದ್ದಾರೆ.

58

ನಿಮಗೆ ತಿಳಿದಿರುವಂತೆ ನಾನು ಮದುವೆಯಾಗಿದ್ದೇನೆ. ಮುಂದಿನ ಎರಡು ಅಥವಾ ಮೂರು ವರ್ಷಗಳಲ್ಲಿ ಮಕ್ಕಳನ್ನು ಹೊಂದಬಹುದು. ಬ್ರದರ್ ನಿಮ್ಮ ಅತ್ತಿಗೆ ದೀಪಿಕಾ ತುಂಬಾ ಮುದ್ದಾದ ಮಗುವಾಗಿದ್ದರು.

68

ನಾನು ಪ್ರತಿದಿನ ಅವಳು ಮಗುವಾಗಿದ್ದಾಗಿನ ಫೋಟೋಗಳನ್ನು ನೋಡುತ್ತೇನೆ. ಅವಳಿಗೆ 'ಈ ರೀತಿಯ ಒಂದು ಮಗುವನ್ನು ನನಗೆ ಕೊಡು, ನನ್ನ ಜೀವನವು ಸೆಟ್ ಆಗುತ್ತದೆ ಎಂದು ಹೇಳುತ್ತೇನೆ ಎಂದಿದ್ದಾರೆ

78

ದೀಪಿಕಾಳನ್ನು ತನ್ನ ಭಾವನಾತ್ಮಕ ಬೆಂಬಲ ಎಂದ ರಣವೀರ್ ಸಿಂಗ್, ಪತ್ನಿ ತನಗೆ ಶೋಗಾಗಿ ಕೆಲವು ಸಲಹೆ ಕೂಡಾ ಕೊಟ್ಟಿದ್ದಾರೆ ಎಂದಿದ್ದಾರೆ. ಬಿಗ್ ಪಿಕ್ಚರ್ ಶೂಟಿಂಗ್ ಮೊದಲು ತಾನು ನರ್ವಸ್ ಆಗಿದ್ದೆ. ಆಗ ದೀಪಿಕಾ ನನಗೆ ಹೂಗಳನ್ನು ಹಾಗೂ ಅವರ ಅಕ್ಷರದಲ್ಲಿಯೇ ಬರೆದ ಒಂದು ನೋಟ್ ಕಳುಹಿಸಿದ್ದಾರೆ ಎಂದಿದ್ದಾರೆ ರಣವೀರ್ ಸಿಂಗ್ 

88

ಬಿಗ್ ಪಿಕ್ಚರ್ ಎರಡು ವಾರಕ್ಕೊಮ್ಮೆ ನಡೆಯುವ ಕಾರ್ಯಕ್ರಮವಾಗಿದ್ದು, ಕಲರ್ಸ್ ಟಿವಿಯಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ. ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ರಣವೀರ್ ಕಿರುತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ ಎಂದು ಊಹಿಸಲಾಗಿತ್ತು. ಆದರೆ ನಟ ಟಿವಿಯಲ್ಲಿ ಕಾಣಿಸಿಕೊಳ್ಳುವ ನಿರ್ಧಾರವು ಸ್ವತಂತ್ರವಾಗಿದೆ. ಚಿತ್ರಮಂದಿರಗಳು ಮುಚ್ಚಿರುವುದಕ್ಕೆ ಹಾಗೂ ಕಿರುತೆರೆಗೆ ಬರುವುದಕ್ಕೆ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ

About the Author

SN
Suvarna News

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved