ರಣವೀರ್ ಸಿಂಗ್ ಟ್ರೋಲ್; ನಟನನ್ನು ಉರ್ಫಿ ಜಾವೇದ್ ಹೋಲಿಸಿದ ಜನ!
ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ (Ranveer Singh)ತಮ್ಮ ಅದ್ಭುತ ನಟನೆಗೆ ಹೆಸರುವಾಸಿಯಾಗಿದ್ದಾರೆ. ಇದರೊಂದಿಗೆ, ಅವರು ತಮ್ಮ ವಿಚಿತ್ರ ಫ್ಯಾಷನ್ ಕಾರಣದಿಂದ ಯಾವಾಗಲೂ ಚರ್ಚೆಯಲ್ಲಿರುತ್ತಾರೆ. ರಣವೀರ್ ಪ್ರ ಕೆಲವೊಮ್ಮೆ ಗೋಲ್ಡನ್ ಡ್ರೆಸ್, ಕೆಲವೊಮ್ಮೆ ನೀಲಿ ಬಣ್ಣದ ಬ್ರೈಟ್ ಡ್ರೆಸ್ ಮತ್ತು ಅದರ ಮೇಲೆ ಆಭರಣಗಳು, ಅಥವಾ ಮತ್ತೆನಾದರೂ ವಿಚಿತ್ರವಾಗಿ ಧರಿಸಿ ಅವರು ಟ್ರೋಲರ್‌ಗಳ ಕೆಂಗಣ್ಣಿಗೆ ಗುರಿಯಾಗುತ್ತಾರೆ. ಆದರೂ ಕೆಲವರಿಗೆ ಅವರ ಕೂಲ್ ಸ್ಟೈಲ್ ತುಂಬಾ ಇಷ್ಟ.
ಮಾರ್ಚ್ 9 ರಂದು ನಟ ರಣವೀರ್ ಸಿಂಗ್ ಪಾಪರಾಜಿಗಳ ಮುಂದೆ ವಿಚಿತ್ರ ಆವತಾರದಲ್ಲಿ ಬಂದುಅಚ್ಚರಿ ಮೂಡಿಸಿದ್ದಾರೆ. ಅವರು ಪ್ರತಿ ದಿನ ಉಡುಪಿಗೆ ವಿಭಿನ್ನ ಸ್ಪರ್ಶ ನೀಡುತ್ತಾರೆ. ಇಷ್ಟೇ ಅಲ್ಲ ಅವರ ಒಂದೊಂದು ಡ್ರೆಸ್ ಬೆಲೆಯೂ ಲಕ್ಷಗಟ್ಟಲೆ.
ರಣವೀರ್ ಸಿಂಗ್ ಗುಚ್ಚಿ ಪ್ರೇಮಿ. ಮಂಗಳವಾರ, ಅವರು ಗುಲಾಬಿ ಬಣ್ಣದ GUCCI ಸೆಟ್ ಅನ್ನು ಆರಿಸಿಕೊಂಡರು. ಸಿಲ್ಕ್ ಶಾರ್ಟ್ಸ್ ಮತ್ತು ರೇಷ್ಮೆ ಶರ್ಟ್‌ನೊಂದಿಗೆ ಅವರು ವಿಭಿನ್ನ ಶೈಲಿಯಲ್ಲಿ ಕಾಣಿಸಿಕೊಂಡರು.
ರಣವೀರ್ ಸಿಂಗ್ ತೊಟ್ಟಿದ್ದ ಉಡುಪಿನ ಬೆಲೆ ಸಾಮಾನ್ಯರ ಕಲ್ಪನೆಗೂ ಮೀರಿದ್ದು. ಸಿಂಪಲ್ ಆಗಿ ಕಾಣುವ ಈ ಡ್ರೆಸ್ ಬೆಲೆ 2 ಲಕ್ಷ. ಇದರೊಂದಿಗೆ ಅವರು ದುಬಾರಿ ಸ್ನೀಕರ್ಸ್ ಧರಿಸಿದ್ದರು. ಕೆಲವರಿಗೆ ರಣವೀರ್ ಸ್ಟೈಲ್ ಇಷ್ಟವಾಗಿತ್ತು.
ರಣವೀರ್ ಸಿಂಗ್ ಅವರ ಈ ಲುಕ್ ಅನ್ನು ಕೆಲವರು ಟ್ರೋಲ್ ಮಾಡಲು ಆರಂಭಿಸಿದ್ದರು. ಒಬ್ಬ ಬಳಕೆದಾರ, 'ಇವು ನಮ್ಮ ಕಿಚನ್ ಡ್ರೆಸ್ ' ಎಂದು ಬರೆದಿದ್ದಾರೆ.
ಅದೇ ಸಮಯದಲ್ಲಿ, 'ಒಂದು ಹುಡುಗರಲ್ಲಿ ಈ ರಣವೀರ್ ಮತ್ತು ಇನ್ನೊಬ್ಬರು ಹುಡುಗಿಯರಲ್ಲಿ ಉರ್ಫಿ ಜಾವೇದ್.. ಇಬ್ಬರ ಫ್ಯಾಶನ್ ಸೆನ್ಸ್ ದೇವರಿಗೆ ಗೊತ್ತು' ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.
ಇನ್ನೊಬ್ಬ ಸೋಶಿಯಲ್ ಮೀಡಿಯಾ ಯೂಸರ್ ರಣವೀರ್ ಸಿಂಗ್ ಅವರನ್ನು ಕಾರ್ಟೂನ್ ಎಂದು ಕರೆದಿದ್ದಾರೆ. ತಮ್ಮ ವಿಚಿತ್ರ ಫ್ಯಾಷನ್ ಸೆನ್ಸ್ ಕಾರಣದಿಂದ ನಟ ಟ್ರೋಲ್‌ಗೆ ಗುರಿಯಾಗುತ್ತಿರುವುದು ಇದೇ ಮೊದಲೇನು ಅಲ್ಲ.
ಅವರ ಕೆಲಸದ ಮುಂಭಾಗದಲ್ಲಿ, ಅವರು ಈ ವರ್ಷ ಬ್ಯಾಕ್-ಟು-ಬ್ಯಾಕ್ ಅನೇಕ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸರ್ಕಸ್, ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ, ಅನ್ನಿಯನ್ ರಿಮೇಕ್ ನಂತಹ ಅನೇಕ ದೊಡ್ಡ ಬಜೆಟ್ ಚಿತ್ರಗಳು ಬಿಡುಗಡೆ ಆಗಲಿವೆ.