‘ಧುರಂಧರ್’ ವಿಶ್ವಮಟ್ಟದಲ್ಲಿ ಹೊಸ ಇತಿಹಾಸ: 285 ಕೋಟಿಗೆ ನೆಟ್‌ಫ್ಲಿಕ್ಸ್ ಒಟಿಟಿ ಡೀಲ್
‘ಕಾಂತಾರ 1’ ಹಿಂದಿಕ್ಕಿ 2025ರ ಅತೀ ಹೆಚ್ಚು ಗಳಿಕೆಯ ಸಿನಿಮಾ ಎಂಬ ದಾಖಲೆ ಬರೆದಿದೆ. 21ನೇ ದಿನ ಭಾರತದಲ್ಲಿ ಧುರಂಧರ್ 668.80 ಕೋಟಿ ಗಳಿಕೆ ಮಾಡಿದರೆ ವಿಶ್ವಾದ್ಯಂತದ ಗಳಿಕೆ 1006.7 ಕೋಟಿ ರು. ಆಗಿದೆ.

ಸಾವಿರ ಕೋಟಿ ಗಳಿಕೆ
1000 ಕೋಟಿ ಕ್ಲಬ್ ಸೇರುವ ಮೂಲಕ 2025ನೇ ಸಾಲಿನ ಅತ್ಯಧಿಕ ಗಳಿಕೆಯ ಚಿತ್ರವಾಗಿ ರಣವೀರ್ ಸಿಂಗ್ ನಟನೆಯ ‘ಧುರಂಧರ್’ ಹೊರಹೊಮ್ಮಿದೆ. ಬಿಡುಗಡೆಯಾದ ಕೇವಲ 21 ದಿನಗಳಲ್ಲಿ ಆದಿತ್ಯ ಧರ್ ನಿರ್ದೇಶನದ ಈ ಸಿನಿಮಾ ಸಾವಿರ ಕೋಟಿ ಗಳಿಕೆಯ ಗಡಿ ದಾಟಿದೆ.
ಭಾರತದಲ್ಲಿ 668.80 ಕೋಟಿ ಗಳಿಕೆ
‘ಕಾಂತಾರ 1’ ಹಿಂದಿಕ್ಕಿ 2025ರ ಅತೀ ಹೆಚ್ಚು ಗಳಿಕೆಯ ಸಿನಿಮಾ ಎಂಬ ದಾಖಲೆ ಬರೆದಿದೆ. 21ನೇ ದಿನ ಭಾರತದಲ್ಲಿ 668.80 ಕೋಟಿ ಗಳಿಕೆ ಮಾಡಿದರೆ ವಿಶ್ವಾದ್ಯಂತದ ಗಳಿಕೆ 1006.7 ಕೋಟಿ ರು. ಆಗಿದೆ.
‘ಎ’ ರೇಟೆಡ್ ಭಾರತೀಯ ಸಿನಿಮಾ
ಈ ಮೂಲಕ ವಿಶ್ವ ಮಟ್ಟದಲ್ಲಿ ಅತ್ಯಧಿಕ ಗಳಿಕೆ ಮಾಡಿದ ‘ಎ’ ರೇಟೆಡ್ ಭಾರತೀಯ ಸಿನಿಮಾ ಎಂಬ ದಾಖಲೆಯೂ ‘ಧುರಂಧರ್’ ಖಾತೆಗೆ ಸೇರಿದೆ. ಈ ಲಿಸ್ಟ್‌ನಲ್ಲಿ ಹಿಂದೆ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಅನಿಮಲ್’ ಚಿತ್ರ ಮೊದಲ ಸ್ಥಾನದಲ್ಲಿತ್ತು.
285 ಕೋಟಿಗೆ ನೆಟ್‌ಫ್ಲಿಕ್ಸ್ ಒಟಿಟಿ ಡೀಲ್
‘ಧುರಂಧರ್’ ಸಿನಿಮಾದ ಓಟಿಟಿ ಹಕ್ಕನ್ನು 285 ಕೋಟಿ ರು.ನೀಡಿ ನೆಟ್‌ಫ್ಲಿಕ್ಸ್ ಪಡೆದುಕೊಂಡಿದೆ. ಈ ಖುಷಿಯಲ್ಲೇ ಚಿತ್ರತಂಡ ಸಿನಿಮಾದ ಮುಂದಿನ ಭಾಗದ ಆಗಮನವನ್ನೂ ಘೋಷಿಸಿದೆ.
ಧುರಂಧರ್ 2’ ಬಿಡುಗಡೆ ದಿನಾಂಕ ಘೋಷಣೆ
2026ರ ಮಾರ್ಚ್ 19ರಂದು, ಯಶ್ ನಟನೆಯ ಬಹು ನಿರೀಕ್ಷಿತ ಸಿನಿಮಾ ‘ಟಾಕ್ಸಿಕ್’ ಬಿಡುಗಡೆಯಂದೇ ಈ ‘ಧುರಂಧರ್ 2’ ಸಿನಿಮಾ ಹಿಂದಿ, ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

