ರಣಬೀರ್ - ದಗ್ಗುಬಾಟಿ: The Batman ಪಾತ್ರ ನಿರ್ವಹಿಸಬಲ್ಲ ಭಾರತೀಯ ನಟರು
ರಾಬರ್ಟ್ ಪ್ಯಾಟಿನ್ಸನ್ (Robert Pattinson) ಅಭಿನಯದ ದಿ ಬ್ಯಾಟ್‌ಮ್ಯಾನ್ (The Batman) ಶುಕ್ರವಾರ, ಮಾರ್ಚ್ 4 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದೆ. ಹಾಲಿವುಡ್ ಹಂಕ್ (Hollywood Hunk) ರಾಬರ್ಟ್ ಪ್ಯಾಟಿನ್ಸನ್ ಬ್ಯಾಟ್‌ಮ್ಯಾನ್ ಆಗಿ ಅವರ ನಟನೆಗಾಗಿ ಸಖತ್ ಪ್ರಶಂಸೆಗಳನ್ನು ಪಡೆಯುತ್ತಿದ್ದಾರೆ. ಇದೇ ಸಮಯದಲ್ಲಿ ಯಾವ ಭಾರತೀಯ ನಟರು ಬ್ಯಾಟ್‌ಮ್ಯಾನ್ ರೋಲ್‌ಗೆ ಸೂಟ್ ಆಗಬಹುದು ನೋಡಿ.
ಬ್ಯಾಟ್‌ಮ್ಯಾನ್ (Batman) ಬಗ್ಗೆ ಯೋಚಿಸಿದಾಗ ಆ ಪಾತ್ರಕ್ಕೆ ಮನಸ್ಸಿಗೆ ಬರುವ ಮೊದಲ ವ್ಯಕ್ತಿ ಕ್ರಿಶ್ಚಿಯನ್ ಬೇಲ್ (Christian Bale) ಅವರು ಬಿಲಿಯನೇರ್ ಬ್ರೂಸ್ ವೇಯ್ನ್ ಪಾತ್ರವನ್ನು ನಿರ್ವಹಿಸಿದರು. ಸಾಮಾಜಿಕ ಜೀವನದಿಂದ ದೂರವಿದ್ದರೂ ಗೊಥಮ್ ಸಿಟಿಯನ್ನು ಉಳಿಸಲು ಪ್ರತಿ ಬಾರಿಯೂ, ಬ್ರೂಸ್ ತನ್ನ ಸೂಪರ್ ಹೀರೋ ಸೂಟ್ ಅನ್ನು ಧರಿಸುತ್ತಾರೆ ಮತ್ತು ಖಳನಾಯಕರ ವಿರುದ್ಧ ಹೋರಾಡುತ್ತಾರೆ.
ಆದರೆ, ವಾರ್ನರ್ ಬ್ರದರ್ಸ್ ಅವರ 'ದಿ ಬ್ಯಾಟ್‌ಮ್ಯಾನ್' ನಲ್ಲಿ ರಾಬರ್ಟ್ ಪ್ಯಾಟಿನ್ಸನ್ ಬ್ಯಾಟ್‌ಮ್ಯಾನ್ ಆಗಿ ಕಾಣಿಸಿಕೊಂಡಿದ್ದಾರೆ. ಬ್ಯಾಟ್‌ಮ್ಯಾನ್ ಫ್ರಾಂಚೈಸ್‌ನ ಇತ್ತೀಚಿನ ಸಿನಿಮಾ ಶುಕ್ರವಾರ ಭಾರತದಲ್ಲಿ ಬಿಡುಗಡೆಯಾಗಿದೆ.
ಯಾವ ಭಾರತೀಯ ನಟರು (Indian Actors) ಬ್ಯಾಟ್‌ಮ್ಯಾನ್ ರೋಲ್‌ಗೆ ಸೂಟ್ ಆಗಬಹುದು. ರಣಬೀರ್ ಕಪೂರ್ ಇಂದ ರಾಣಾ ದಗ್ಗುಬಾಟಿವರೆಗೆ ಕೆಲವು ಭಾರತೀಯ ನಟರು ಬೆಸ್ಟ್ ಬ್ಯಾಟ್‌ಮ್ಯಾನ್ ಆಗಬಹುದು ಎಂದು ಸಿನಿ ಪ್ರೇಮಿಗಳು ಲೆಕ್ಕ ಹಾಕುತ್ತಿದ್ದಾರೆ.
ಭಾರತೀಯ ಬ್ಯಾಟ್‌ಮ್ಯಾನ್‌ಗಾಗಿ ರಣಬೀರ್ ಕಪೂರ್‌ಗಿಂತ ಬೆಸ್ಟ್ ಮ್ಯಾಚ್ ಇಲ್ಲ. ಬಾಲಿವುಡ್‌ನ ಹ್ಯಾಂಡ್‌ಸಮ್ ಹಂಕ್ ರಣಬೀರ್ ಕಪೂರ್ ಅವರನ್ನು ಬ್ಯಾಟ್‌ಮ್ಯಾನ್ ಪಾತ್ರದಲ್ಲಿ ನೋಡಲು ಅವರ ಮಹಿಳಾ ಅಭಿಮಾನಿಗಳು ಮುಗ್ಗಿ ಬೀಳಬಹುದು
ಆದಿತ್ಯ ರಾಯ್ ಕಪೂರ್ (Adithya Roy Kapoor) ಬ್ಯಾಟ್‌ಮ್ಯಾನ್ ರೇಸ್‌ನಲ್ಲಿ ಮುಂಚೂಣಿಯಲ್ಲಿರುವ ಇನ್ನೊಬ್ಬ ನಟ. ಗೊಥಮ್ ಸಿಟಿಯನ್ನು ಅಪರಾಧಿಗಳು ಮತ್ತು ಖಳನಾಯಕರಿಂದ ರಕ್ಷಿಸುವವನು ಬ್ಯಾಟ್‌ಮ್ಯಾನ್ ಆಗಿರುವುದರಿಂದ, ಬ್ರೂಸ್ ವೇನ್ ಪಾತ್ರವನ್ನು ವಹಿಸಲು ಆದಿತ್ಯನು ಉತ್ತಮ ಹೊಂದಾಣಿಕೆಯಾಗಬಹುದು.
ರಾಣಾ ದಗುಬ್ಬಾಟಿ ಅವರು ಬ್ಯಾಟ್‌ಮ್ಯಾನ್‌ನ ಪಾತ್ರಕ್ಕೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತಾರೆ ಎಂದು ನಾವು ಭಾವಿಸುವ ಇನ್ನೊಬ್ಬ ನಟ. ಅವನ ರಫ್ ಲುಕ್ (Rugged Look), ಪರ್ಫೇಕ್ಟ್ ಬಾಡಿ (Perfect Body), ಎತ್ತರ ಮತ್ತು ಅವರ ಬಗ್ಗೆ ಎಲ್ಲವೂ ತುಂಬಾ ಬ್ಯಾಟ್‌ಮ್ಯಾನಿಷ್ ಆಗಿದೆ.
ಸೌತ್ ಸಿನಿಮಾ ಹ್ಯಾಂಡ್‌ಸಮ್ ನಟರಲ್ಲಿ ದುಲ್ಕರ್ ಸಲ್ಮಾನ್ ಪ್ರಮುಖರು. ದುಲ್ಕರ್ ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದಾರೆ. ಅವರು ಖಚಿತವಾಗಿ ಬ್ಯಾಟ್‌ಮ್ಯಾನ್ ಪಾತ್ರವನ್ನು ಸಹ ಸುಲಭವಾಗಿ ನಿಭಾಯಿಸ ಬಹುದು.
ಫರ್ಹಾನ್ ಅಖ್ತರ್ (Farhan Akthar) ಕೂಡ ಸುಲಭವಾಗಿ ಬ್ಯಾಟ್‌ಮ್ಯಾನ್ ಆಗಬಹುದು. ಅವರ ಫೀಟ್ ಬಾಡಿ ಹಾಗೂ ಲುಕ್ ಜೊತೆ ಇನ್ನೊಂದು ಅಡಿಷನಲ್ ಕ್ವಾಲಿಟಿ ಅಂದರೆ ಅವರ ಧ್ವನಿ (Voice). ಫರ್ಹಾನ್ ಅವರ ಧ್ವನಿಯು ಬ್ರೂಸ್ ವೇಯ್ನ್‌ಗೆ ಮತ್ತು ಬ್ಯಾಟ್‌ಮ್ಯಾನ್‌ಗೆ ಪರಿಪೂರ್ಣವಾಗಬಹುದು
ವಿದ್ಯುತ್ ಜಮ್ವಾಲ್ ಅವರನ್ನು ಭಾರತದಲ್ಲಿ ಬೆಸ್ಟ್ ಆಕ್ಷನ್ ಹೀರೋಗಳಲ್ಲಿ (Action Heroes) ಒಬ್ಬರು ಎಂದು ಪರಿಗಣಿಸಲಾಗುತ್ತದೆ. ವಿದ್ಯುತ್ಅವರ ವ್ಯಕ್ತಿತ್ವದಿಂದ ಅವರ ಲುಕ್ ಮತ್ತು ಮೈಕಟ್ಟು, ಎಲ್ಲವೂ ಅವರನ್ನು ಭಾರತೀಯ ಬ್ಯಾಟ್‌ಮ್ಯಾನ್ ಆಗುವ ಸ್ಪರ್ಧೆಯಲ್ಲಿ ಪ್ರಮುಖರನ್ನಾಗಿ ಮಾಡುತ್ತದೆ.
ಟೈಗರ್ ಶ್ರಾಫ್ (Tiger Shroff) ಅವರ ಆಕರ್ಷಕ ಲುಕ್ (Attractive Look) ಮತ್ತು ಅವರ ಯ್ಯುನಿಕ್ ಆಕ್ಷನ್ ಆಂಡ್ ಸ್ಟಂಟ್ಸ್ ಅವರನ್ನಯ ಭಾರತೀಯ ಬ್ಯಾಟ್‌ಮ್ಯಾನ್‌ನ ಆಯ್ಕೆಗಳಲ್ಲಿ ಒಬ್ಬರನ್ನಾಗಿ ಮಾಡುತ್ತದೆ. ಅವರ ಫಿಸಿಕ್, ಫ್ಲೆಕ್ಸಿಬಲಿಟಿ ಮತ್ತು ಅವರು ಸ್ವಂತವಾಗಿ ನಿರ್ವಹಿಸುವ ಸಾಹಸಗಳನ್ನು ಮರೆಯುವಂತಿಲ್ಲ.
ಈ ರೇಸ್‌ಲ್ಲಿ ಜಾನ್ ಅಬ್ರಹಾಂ ಅವರನ್ನು ಕೂಡ ಪರಿಗಣಿಸಬಹುದಾಗಿದೆ. ಈ ನಟ ಸಹ ಭಾರತದ ಬ್ಯಾಟ್‌ಮ್ಯಾನ್ ಆಗಬಹುದು. ಹ್ಯಾಂಡ್ಸ್‌ಮ್ ಲುಕ್ ಹೊರುತು ಪಡಿಸಿ ಜಾನ್‌ನ ಫಿಟ್‌ನೆಸ್ ಮತ್ತು ಮೈಕಟ್ಟು ಸಹ ಬ್ಯಾಟ್‌ಮ್ಯಾನ್‌ನಲ್ಲಿ ನೋಡುತ್ತೇವೆ.
ಪ್ರತೀಕ್ ಬಬ್ಬರ್ ಈ ಪಟ್ಟಿಯಲ್ಲಿರಲು ಕಾರಣ ಅವರ ಧ್ವನಿ. ಬ್ಯಾಟ್‌ಮ್ಯಾನ್ ಹೊಂದಿರುವಂತಹ ಸ್ವರವನ್ನು ಅವರು ಹೊಂದಿದ್ದಾರೆ. ಹೀಗಾಗಿ, ಪ್ರತೀಕ್ ಬಬ್ಬರ್ ಅವರು ಬಹುಶಃ ಭಾರತೀಯ ಬ್ಯಾಟ್‌ಮ್ಯಾನ್ ಆಗಿ ಪಾತ್ರ ಮಾಡಬಹುದಾಗಿದೆ.