ಆಲಿಯಾ ರಣಬೀರ್ ಮದುವೆ ವರ್ಷದ ಕೊನೆಯಲ್ಲಿ, ಶೀಘ್ರದಲ್ಲೇ ಡೇಟ್ ಬಹಿರಂಗ!
ರಣಬೀರ್ ಕಪೂರ್ (Ranbir Kapoor) ಮತ್ತು ಆಲಿಯಾ ಭಟ್ (Alia Bhatt) ಅವರ ಮದುವೆಯ ಕಾರಣಕ್ಕಾಗಿ ಬಹಳ ದಿನಗಳಿಂದ ಸುದ್ದಿಯಲ್ಲಿದ್ದಾರೆ. ರಣಬೀರ್-ಆಲಿಯಾ 2020ರಲ್ಲಿ ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಕೊರೋನಾ ಮತ್ತು ನಂತರ ರಿಷಿ ಕಪೂರ್ ಸಾವಿನಿಂದ ಮದುವೆಯನ್ನು ಮುಂದೂಡಲಾಯಿತು. ಆದರೆ, ಈಗ ಮತ್ತೊಮ್ಮೆ ರಣಬೀರ್ ಮತ್ತು ಆಲಿಯಾ ಈ ವರ್ಷದ ಕೊನೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿ ಬರುತ್ತಿದೆ. ಇಬ್ಬರೂ ತಮ್ಮ ಶೂಟಿಂಗ್ ದಿನಾಂಕವನ್ನು ಮುಂದೂಡಿದ್ದಾರೆ. ಆದರಿಂದ ರಣಬೀರ್ ಕಪೂರ್ ಆಲಿಯಾ ಭಟ್ 2021ರ ಅಂತ್ಯದ ವೇಳೆಗೆ ಮದುವೆಯಾಗಬಹುದು, ದಿನಾಂಕಗಳನ್ನು ಶೀಘ್ರದಲ್ಲೇ ಘೋಷಿಸಬಹುದು ಎಂದು ಮಾಧ್ಯಮ ವರದಿಗಳ ಪ್ರಕಾರ, ಆಲಿಯಾ ಮತ್ತು ರಣಬೀರ್ ಕಪೂರ್ ಡಿಸೆಂಬರ್ 2021ರಲ್ಲಿ ಸಪ್ತಪದಿ ತುಳಿಯಬಹುದು. ಇಬ್ಬರೂ ತಮ್ಮ ಕೆಲಸದ ಬದ್ಧತೆಯನ್ನು ಸರಿಯಾಗಿ ಹೊಂದಿಸಿಕೊಂಡಿದ್ದಾರೆ, ಎಂದು ಹೇಳಲಾಗುತ್ತಿದೆ.
ರಣಬೀರ್ ತಮ್ಮ 'ಅನಿಮಲ್' ಚಿತ್ರದ ಶೂಟಿಂಗ್ ದಿನಾಂಕವನ್ನು ಜನವರಿ 2022 ರವರೆಗೆ ಎಕ್ಸ್‌ಟೆಂಡ್ ಮಾಡಿದ್ದಾರೆ
ಅದೇ ಸಮಯದಲ್ಲಿ, ಆಲಿಯಾ ಭಟ್ ಕೂಡ ತಮ್ಮ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಿದ್ದಾರೆ. ಈಗ ಅವರು ತಮ್ಮ ಮುಂಬರುವ ಚಿತ್ರ 'ಗಂಗೂಬಾಯಿ ಕಥಿಯಾವಾಡಿ' ಪ್ರಚಾರವನ್ನು ಮಾತ್ರ ಮಾಡುತ್ತಾರೆ. ಮುಂದಿನ ವರ್ಷ ಜನವರಿ 2022 ರಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಯೋಜಿಸಲಾಗಿದೆ.
ಇತ್ತೀಚೆಗಷ್ಟೇ ಆಲಿಯಾ-ರಣಬೀರ್ ಜೋಧಪುರ (Jodhpur) ಭೇಟಿ ನೀಡಿದ್ದರು. ಈ ಜೋಡಿ ತಮ್ಮ ಮದುವೆಗಾಗಿ ಸ್ಥಳ ಹುಡುಕಲು ಜೋಧಪುರದಲ್ಲಿದ್ದಾರೆ, ಎಂಬ ಸುದ್ದಿ ಹರಿದಾಡಿತ್ತು. ರಣಬೀರ್-ಆಲಿಯಾ ಜೋಧ್‌ಪುರದಲ್ಲಿಯೇ ಸಪ್ತಪದಿ ತುಳಿಯಲಿದ್ದಾರೆ ಎಂದು ನಂಬಲಾಗಿದೆ. ರಣಬೀರ್ ಅವರ ತಾಯಿ ನೀತು ಕಪೂರ್ (Neethu Kapoor) ಕೂಡ ಆಲಿಯಾ ಆದಷ್ಟು ಬೇಗ ತಮ್ಮ ಸೊಸೆಯಾಗಬೇಕೆಂದು ಬಯಸುತ್ತಿದ್ದಾರಂತೆ.
ಆಲಿಯಾ-ರಣಬೀರ್ ಇಬ್ಬರೂ ನವೆಂಬರ್‌ನಿಂದ ಜನವರಿ ಮೊದಲ ಕೆಲವು ದಿನಗಳವರೆಗೆ ತಮ್ಮನ್ನು ತಾವು ಫ್ರೀ ಆಗಿ ಇರಿಸಿಕೊಂಡಿದ್ದಾರೆ. ಇಬ್ಬರೂ ತಮ್ಮ ಮದುವೆಯ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಿದ್ದಾರೆ ಎನ್ನುತ್ತಿವೆ ವರದಿಗಳು. ಇದರ ನಡುವೆ ರಣಬೀರ್ 'ಅನಿಮಲ್' ಸಿನಿಮಾದ ಚಿತ್ರೀಕರಣವನ್ನು 2022 ರವರೆಗೆ ವಿಸ್ತರಿಸಿದ್ದಾರೆ. ಈಗ ಮಾರ್ಚ್ 2022 ರಲ್ಲಿ ಬಿಡುಗಡೆಯಾಗಲಿರುವ 'ಶಂಶೇರಾ' ಸಿನಿಮಾದ ಪ್ರಚಾರದ ಕೆಲಸ ಮಾತ್ರ ಬಾಕಿ ಇದೆ
ರಣಬೀರ್-ಆಲಿಯಾ ಮದುವೆಯ ಸುದ್ದಿಯ ನಡುವೆ, ಆಲಿಯಾ ಅವರ ತಾಯಿ ಸೋನಿ ರಜ್ದನ್ ಇತ್ತೀಚಿನ ಸಂದರ್ಶನದಲ್ಲಿ ಮದುವೆ ಯಾವಾಗ ನಡೆಯಲಿದೆ ಎಂದು ನನಗೆ ತಿಳಿದಿಲ್ಲ ಮತ್ತು ಈ ಸುದ್ದಿಗಾಗಿ ಸ್ವತಃ ತಾವೇ ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ. ಸೆಪ್ಟೆಂಬರ್‌ನಲ್ಲಿ, ಆಲಿಯಾ ತನ್ನ ಭಾವಿ ಅತ್ತೆ ನೀತು ಕಪೂರ್ ಜೊತೆಗೆ ಹೊಸ ಮನೆಯ ರಿಪೇರಿ ಕೆಲಸವನ್ನು ನೋಡಲು ಹೋಗಿದ್ದರು.
ಮೇ 2018 ರಲ್ಲಿ ಸೋನಮ್ ಕಪೂರ್ ಅವರ ಮದುವೆಗೆ ಇಬ್ಬರೂ ಜೊತೆಯಾಗಿ ಬಂದಾಗ ಆಲಿಯಾ-ರಣಬೀರ್ ಸಂಬಂಧದ ವಿಷಯ ಬೆಳಿಕಿಗೆ ಬಂದಿತು. ಇಲ್ಲಿಂದ ಇಬ್ಬರ ಅಫೇರ್ ಸುದ್ದಿಗೂ ಮುದ್ರೆ ಬಿದ್ದಿತ್ತು. ಅದೇ ಸಮಯದಲ್ಲಿ, ಸಂಬಂಧದ ಸುದ್ದಿಯ ಕೆಲವು ತಿಂಗಳ ನಂತರ, ರಣಬೀರ್ ಕಪೂರ್ ಕೂಡ ಈಗ ಮದುವೆಗೆ ಸಿದ್ಧವಾಗಿದ್ದೇನೆ ಎಂದು ಒಪ್ಪಿಕೊಂಡರು. ಅವರ ತಂದೆ ರಿಷಿ ಕಪೂರ್ ಅವರು ಮಗ ಮದುವೆ ನೋಡಬೇಕೆಂದು ಬಯಸಿದ್ದ. ಆದರೆ ದುರಾದೃಷ್ಟವಶಾತ್ ಇದು ಸಾಧ್ಯವಾಗಲಿಲ್ಲ.
ಜುಲೈ 2021 ರಲ್ಲಿ ಅಲಿಯಾ ಭಟ್ ತನ್ನ ಅತ್ತೆ ನೀತು ಕಪೂರ್ ಅವರ ಹುಟ್ಟುಹಬ್ಬಕ್ಕೆ ಹಾಜರಾಗಿದ್ದರು. ಮತ್ತೊಂದೆಡೆ, ರಣಬೀರ್ ಕಪೂರ್ ಸಹೋದರಿ ರಿದ್ಧಿಮಾ ಸಂದರ್ಶನವೊಂದರಲ್ಲಿ ತಮ್ಮ ಸೊಸೆಯನ್ನು ಮುದ್ದು ಮಾಡಿ, ತಾಯಿ ಹಾಳು ಮಾಡುತ್ತಾಳೆ ಎಂದು ಹೇಳಿದ್ದರು. ಅಷ್ಟೇ ಅಲ್ಲ, ತನ್ನ ತಾಯಿ ನೀತು ಕಪೂರ್ ಬೆಸ್ಟ್ ಅತ್ತೆ ಎಂದು ಸಾಬೀತುಪಡಿಸುತ್ತಾರೆ ಎಂದು ರಿದ್ಧಿಮಾ ಹೇಳಿದ್ದಾರೆ.
'ನನ್ನ ತಾಯಿ ನೀತು, ತನ್ನ ಸೊಸೆಯನ್ನು ರಾಣಿಯಂತೆ ನೋಡಿಕೊಳ್ಳುತ್ತಾರೆ. ಅವರು ಒಬ್ಬ ಬೆಸ್ಟ್ ಅತ್ತೆಯಾಗುತ್ತಾರೆ. ತನ್ನ ಸೊಸೆಗೆ ಎಲ್ಲವನ್ನೂ ಕೊಡುತ್ತಾರೆ ಮತ್ತು ಅವಳಿಂದ ಏನನ್ನೂ ನಿರೀಕ್ಷಿಸುವುದಿಲ್ಲ. ನನ್ನ ತಾಯಿ ತಮ್ಮ ಅತಿಯಾಗಿ ಪ್ರೀತಿಸಿಯೇ ಹಾಳು ಮಾಡುತ್ತಾರೆ. ಏಕೆಂದರೆ ಅವಳನ್ನು ತುಂಬಾ ಪ್ರೀತಿಸುತ್ತಾರೆ ಮತ್ತು ಪೂರ್ಣ ಗೌರವವನ್ನು ನೀಡುತ್ತಾರೆ' ಎಂದು ಸಂದರ್ಶನದಲ್ಲಿ, ರಿದ್ಧಿಮಾ ಹೇಳಿದ್ದರು
ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಶೀಘ್ರದಲ್ಲೇ ಅಯಾನ್ ಮುಖರ್ಜಿ ಅವರ 'ಬ್ರಹ್ಮಾಸ್ತ್ರ'ದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್, ನಾಗಾರ್ಜುನ ಅಕ್ಕಿನೇನಿ ಮತ್ತು ಡಿಂಪಲ್ ಕಪಾಡಿಯಾ ಕೂಡ ಕೆಲಸ ಮಾಡುತ್ತಿದ್ದಾರೆ.