ಗಂಗೂಬಾಯಿ ಕಾಥಿಯಾವಾಡಿಗೆ ಆಲಿಯಾ National Award ಗೆಲ್ಲುತ್ತಾಳೆ -ರಣಬೀರ್!
ರಣಬೀರ್ ಕಪೂರ್ (Ranbir Kapoor) ತನ್ನ ಗರ್ಲ್‌ಫ್ರೆಂಡ್ ಆಲಿಯಾ ಭಟ್ (ALia Bhat) ಅವರ ಪ್ರತಿಭೆಯನ್ನು ಹಾಡಿ ಹೊಗಳಿದ್ದಾರೆ. ಅಲಿಯಾರ ಮುಂಬರುವ ಸಿನಿಮಾ ಗಂಗೂಬಾಯಿ ಕಾಠಿಯಾವಾಡಿಗಾಗಿ (Gangubai Kathiawadi) ನಟಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆಯಬಹುದು ಎಂದು ಅವರು ಭಾವಿಸಿದ್ದಾರೆ.
ಗಂಗೂಬಾಯಿ ಕಾಥಿಯಾವಾಡಿಯ ಟ್ರೇಲರ್ (Trailer) ಹೊರ ಬಂದಾಗಿನಿಂದ, ವೀಕ್ಷಕರು ಮತ್ತು ವಿಮರ್ಶಕರ ಮನಸ್ಸನ್ನು ಗೆದ್ದಿದೆ. ಈ ಸಿನಿಮಾದಲ್ಲಿನ ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡಿರುವ ಆಲಿಯಾರ ಅಭಿನಯದ ಬಗ್ಗೆ ಎಲ್ಲ ಕಡೆಯಿಂದ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ.
ಮುಂಬೈನ ಮಾಫಿಯಾ ರಾಣಿ (Mumbai Mafia Queen) ಗಂಗೂಬಾಯಿಯ ಪಾತ್ರದಲ್ಲಿ ಆಲಿಯಾ ಭಟ್ ಮತ್ತೊಮ್ಮೆ ಅದ್ಬುತ ಅಭಿನಯ ನೀಡಿದ್ದಾರೆ. ಆಕೆಯ ಲುಕ್ (Look), ಲಿಂಗೋ ಮತ್ತು ಬಾಡಿ ಲಾಂಗ್ವೇಜ್ (Body Language) ಈಗಾಗಲೇ ಪ್ರೇಕ್ಷಕರಲ್ಲಿ ಒಂದು ಬಜ್ ಸೃಷ್ಟಿಸಿದೆ ಮತ್ತು ಸಿನಿಮಾ ಬಿಡುಗಡೆಗಾಗಿ ಎದುರು ನೋಡುತ್ತಿದ್ದಾರೆ.
ಸಂಜಯ್ ಲೀಲಾ ಬನ್ಸಾಲಿ (Sanjay Leela Bansali) ನಿರ್ದೇಶನದ ಈ ಸಿನಿಮಾ ವೇಶ್ಯಾಗೃಹದ (Brothel) ಕೆಲಸಗಾರರು, ಗಂಗೂಬಾಯಿಯ ಜೀವನ ಮತ್ತು ಅವಳು ಬಾಂಬೆಯ ಮಾಫಿಯಾ ರಾಣಿಯಾಗಿ ಹೇಗೆ ಬೆಳೆದಳು ಎಂಬ ಕಥೆಯನ್ನು ವಿವರಿಸುತ್ತದೆ. ರಣಬೀರ್ ಕಪೂರ್ ಆಲಿಯಾ ಭಟ್ ಅವರ ಸಿನಿಮಾದ ಕೆಲವು ಭಾಗಗಳನ್ನು ವೀಕ್ಷಿಸಿದ್ದಾರೆ ಮತ್ತು ಆಲಿಯಾರ ಪ್ರತಿಭೆಯ ಬಗ್ಗೆ ಅವರು ವಿಸ್ಮಯಗೊಂಡಿದ್ದಾರೆ.
ಆಲಿಯಾ ಭಟ್ ಈ ಚಿತ್ರಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಗೆಲ್ಲುತ್ತಾರೆ ಎಂದು ರಣಬೀರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.. ಏಕೆಂದರೆ ಅದರಲ್ಲಿ ಆಲಿಯಾ ಅವರು ಮನಮೋಹಕವಾಗಿದ್ದಾರೆ. ಇದು ನಿಸ್ಸಂದೇಹವಾಗಿ ಎಲ್ಲಾ ಅಭಿಮಾನಿಗಳಿಗೆಉತ್ಸಾಹವನ್ನು ಹೆಚ್ಚಿಸಿದೆ.
SLB film ಜನವರಿ 6, 2022 ರಂದು ಸಿನಿಮಾವನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ಈ ಚಿತ್ರದಲ್ಲಿ ಅಜಯ್ ದೇವಗನ್ ಕೂಡ ಒಂದು ಪಾತ್ರದಲ್ಲಿ ನಟಿಸಿದ್ದಾರೆ. ಆಲಿಯಾ ಭಟ್ ಮತ್ತು ಅಜಯ್ ದೇವಗನ್ RRR ನಲ್ಲಿ ಕೂಡ ಕಾಣಿಸಿಕೊಳ್ಳಲಿದ್ದು ಸಿನಿಮಾವು ಅದೇ ದಿನ ಬಿಡುಗಡೆಯಾಗಲಿದೆ.
ಗಂಗೂಬಾಯಿ ಹೊರತಾಗಿ, ನಟಿಯ ಆಕೌಂಟ್‌ನಲ್ಲಿ ಬಿಡುಗಡೆಯಾಗ ಬೇಕಾಗಿರುವ ಅನೇಕ ದೊಡ್ಡ-ಬಜೆಟ್ ಚಿತ್ರಗಳನ್ನು ಹೊಂದಿದ್ದಾರೆ. ಆಲಿಯಾ ಭಟ್ ಅವರು ಬ್ರಹ್ಮಾಸ್ತ್ರದಲ್ಲಿ ರಣಬೀರ್ ಕಪೂರ್ ಜೊತೆ ನಟಿಸಿದ್ದು ಬಿಡುಗಡೆಗೆ ಸಜ್ಜಾಗುತ್ತಿದೆ.
ಗಂಗೂಬಾಯಿಯ ಯಾವುದೇ ಹುಡುಗಿಯನ್ನು ಆಕೆಯ ಒಪ್ಪಿಗೆಗೆ ವಿರುದ್ಧವಾಗಿ ವೇಶ್ಯಾಗೃಹದಲ್ಲಿ ಇಟ್ಟುಕೊಂಡಿರಲಿಲ್ಲ. ಕಾಮತಿಪುರದಲ್ಲಿ ಲೈಂಗಿಕ ಕೆಲಸಗಾರರ ಒಳಿತಿಗಾಗಿ ಕೆಲಸ ಮಾಡಲು ಆಕೆ ತನ್ನ ಜೀವನದ ಬಹುಭಾಗವನ್ನು ಅರ್ಪಿಸಿದಳು ಮತ್ತು ತನ್ನ ಧ್ವನಿಯನ್ನು ಅವರ ಜೀವನ ಸುಧಾರಿಸಲು ಬಳಸಿದಳು.
ಆಲಿಯಾ ತನ್ನ ನಿರ್ಮಾಣ ಸಂಸ್ಥೆಯಾದ ಎಟರ್ನಲ್ ಸನ್ಶೈನ್ ಅಡಿಯಲ್ಲಿ ತನ್ನ ಸಿನಿಮಾ ಡಾರ್ಲಿಂಗ್ಸ್ ಅನ್ನು ಪ್ರಸ್ತುತಪಡಿಸಲಿದ್ದಾರೆ. ಇದನ್ನು ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಸಹಯೋಗದಲ್ಲಿ ಮಾಡಲಾಗಿದೆ. ಇದರಲ್ಲಿ
ಶೆಫಾಲಿ ಶಾ ಮತ್ತು ವಿಜಯ್ ವರ್ಮಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.