ರಿಯಾಲಿಟಿ ಶೋನಲ್ಲಿ ಲವ್ ಸ್ಟೋರಿ ಹಂಚಿಕೊಂಡ ನಟಿ ಖುಷ್ಬು..ಯಾಕೆ ಈ ಮಾತು ಹೇಳಿಲ್ಲ ಎಂದು ಪ್ರಶ್ನೆ ಮಾಡಿದ ನೆಟ್ಟಿಗರು...
ಬಹುಭಾಷಾ ನಟ ಖುಷ್ಬು (Kushboo) ಮತ್ತು ನಿರ್ದೇಶಕ ಸಿ. ಸುಂದರ್ ಕಾಲಿವುಡ್‌ನ ಎವರ್‌ಗ್ರೀನ್ ಕಪಲ್. ವೈವಾಹಿಕ ಜೀವನಕ್ಕೆ ಕಾಲಿಟ್ಟು 28 ವರ್ಷ ಕಳೆದಿದೆ ಈಗ ತಮ್ಮ ಹ್ಯಾಪಿ ಮ್ಯಾರೇಜ್ ಲೈಫ್‌ನ ಸೀಕ್ರೆಟ್ ರಿವೀಲ್ ಮಾಡಿದ್ದಾರೆ. ಅಲ್ಲದೆ ಇಬ್ಬರೂ ಇಂದು ದಿನವೂ ಐ ಲವ್ ಯು ಎಂದು ಹೇಳಿಲ್ಲ ಎಂದು ಕಿರುತೆರೆ ಜಬರ್ದಸ್ತ್ ರಿಯಾಲಿಟಿ (Jabardasth reality show) ಶೋನಲ್ಲಿ ಇಂಟ್ರೆಸ್ಟಿಂಗ್ ವಿಚಾರ ರಿವೀಲ್.
1995ರಲ್ಲಿ ಮುರೈ ಮಾವನ್ ಸಿನಿಮಾದಲ್ಲಿ ಖುಷ್ಬು ನಟಿಸಿದ್ದಾರೆ, ಈ ಚಿತ್ರಕ್ಕೆ ಸಿ ಸುಂದರ್ ಆಕ್ಷನ್ ಕಟ್ ಹೇಳಿದ್ದಾರೆ. ಈ ಸಮಯದಲ್ಲಿ ಇಬ್ಬರಿಗೂ ಲವ್ ಆಗಿದೆ. ಆದರೆ ಅಂದಿನಿಂದ ಇಬ್ಬರೂ ಐ ಲವ್ ಯೂ (I love You) ಎಂದು ಹೇಳಿಲ್ಲವಂತೆ. ಈ ವೀಕೆಂಡ್ ಪ್ರಸಾರವಾಗುತ್ತಿರುವ ಎಪಿಸೋಡ್‌ನಲ್ಲಿ ತಮ್ಮ ಲವ್ ಸ್ಟೋರಿ ಹೇಳುತ್ತಾ ನಾಚಿ ನೀರಾಗಿದ್ದಾರೆ. ಐ ಲವ್ ಯು ಹೇಳಿಲ್ಲ ಅಂದಿದಕ್ಕೆ ಸೆಟ್‌ನಲ್ಲಿರುವ ಪ್ರತಿಯೊಬ್ಬರು ಒತ್ತಾಯ ಮಾಡಿ ಪತಿಗೆ ಪೋನ್ ಮಾಡಿಸಿದ್ದಾರೆ. ಫೋನ್ ತೆಗೆದು ಕಾಲ್ ಮಾಡಲು ಮುಂದಾಗುತ್ತಾರೆ ಆಗ ಪತಿ ಹೆಸರನ್ನು ಸ್ವೀಟ್ ಹಾರ್ಟ್ (Sweetheart) ಎಂದು ಸೇವ್ ಮಾಡಿರುವುದಾಗಿ ತಿಳಿಸುತ್ತಾರೆ. ಕರೆ ಮಾಡಿ ಲವ್ ಯು ಹೇಳುತ್ತಾರಾ ಇಲ್ವಾ ಕಾದು ನೋಡಬೇಕಿದೆ.

ಸುಖ ದಾಂಪತ್ಯ ಸೀಕ್ರೆಟ್:
'ನಾವಿಬ್ಬರೂ ತುಂಬಾನೇ ಡಿಫರೆಂಟ್ ವ್ಯಕ್ತಿತ್ವದವರು. ನಾವಿಬ್ಬರೂ ಒಂದೇ ಗುಣದವರಾಗಿದ್ದರೆ ಖಂಡಿತಾ ಇದು disaster ಆಗಿರುತ್ತಿತ್ತು. ಒಬ್ಬರ ಮೈನಸ್‌ಗೆ ಮತ್ತೊಬ್ಬರು ಕೈ ಜೋಡಿಸಿ ಪ್ಲಸ್ ಮಾಡುತ್ತಾರೆ. ಜೀವನದಲ್ಲಿ ಯಾರೂ ಪರ್ಫೆಕ್ಟ್ ಆಲ್ಲ ನಾವು ಕೂಡ ಪರ್ಫೆಕ್ಟ್ ಆಲ್ಲ. ಒಬ್ಬರನ್ನೊಬ್ಬರು ಒಪ್ಪಿಕೊಂಡಿರುವೆವು ಹಾಗೇ ನೀನು ಇದು ಬದಲಾವಣೆ ಮಾಡಿಕೊಳ್ಳಬೇಕು ಹಾಗೆ ಬದಲಾಗಬೇಕು ಅಂತ ಹೇಳುವುದಿಲ್ಲ. ಪ್ರೀತಿಯಲ್ಲಿ ಬೆಸ್ಟ್ ವಿಚಾರ ಏನೆಂದರೆ ಒಬ್ಬರನ್ನೊಬ್ಬರು ಒಪ್ಪಿಕೊಳ್ಳವುದು, ನಮಗೆ ತಿಳಿಯದ ಹಾಗೆ ಕೆಲವೊಂದು ಬದಲಾವಣೆಗಳು ಆಗುತ್ತದೆ ಅದೆಲ್ಲವೂ ಪ್ರೀತಿಯಿಂದ ಎಂದು ಒಪ್ಪಿಕೊಳ್ಳಬೇಕು' ಎಂದು ಪಿಂಕ್‌ವಿಲ್ಲಾ ಸಂದರ್ಶನದಲ್ಲಿ ಮಾತನಾಡಿದ್ದಾರೆ.
'ಯಾರ ಮದುವೆ ಯಾವ ಮದುವೆನೂ ಪರ್ಫೆಕ್ಟ್ ಇಲ್ಲ. ನಾವು ಕೂಡ ಜೀವನದಲ್ಲಿ ಸಾಕಷ್ಟು ಏರು ಇಳಿತಗಳನ್ನು ನೋಡಿದ್ದೀವಿ. ಕೆಲವೊಂದು ಸಲ ನಾವು ಜೋರು ಜಗಳ ಮಾಡುತ್ತೀವಿ ಇದರಿಂದ ಒಂದು ವಾರ ಮಾತು ಬಿಟ್ಟಿರುತ್ತೀವಿ. ಮದುವೆ ಜೀವನದಲ್ಲಿ ತುಂಬಾ ಮುಖ್ಯವಾದ ವಿಚಾರ ಏನೆಂದರೆ ನನ್ನ ಮತ್ತು ನನ್ನ ಪತಿ ನಡುವೆ ಜಗಳ ಇದ್ದರೆ ನಾವು ಅದನ್ನು ಅವರ ತಂದೆಗೆ ತಿಳಿಸುವುದಿಲ್ಲ ನಾನು ಕೂಡ ತಿಳಿಸುವುದಿಲ್ಲ. ನಮ್ಮಲೇ ಇಟ್ಟಿಕೊಳ್ಳುತ್ತೀವಿ ಅದೇ ಜೀವನ' ಎಂದಿದ್ದಾರೆ.
ರವಿಚಂದ್ರನ್ ಬರ್ತಡೇ ಸಂಭ್ರಮದಲ್ಲಿ 'ರಣಧೀರ' ಸುಂದರಿ; 'ನನ್ನ ತಾಯಿ ಜೀವಂತವಾಗಿರಲು ನೀವೆ ಕಾರಣ; ಎಂದ ಖುಷ್ಬೂ
ಮದುವೆಗಾಗಿ ಮತಾಂತರ:
ವಿಕ್ಟರಿ ವೆಂಕಟೇಶ್ ಅವರ 1986 ರ ಚಿತ್ರ 'ಕಲಿಯುಗ ಪಾಂಡವುಲು' ಮೂಲಕ ದಕ್ಷಿಣ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಖುಷ್ಬು ಸುಂದರ್ ಮುಂಬಯಿಯಯಲ್ಲಿ ಮುಸ್ಲಿಂ ಕುಟುಂಬದಲ್ಲಿ ಜನಿಸಿದರು. ಇವರ ಮೂಲ ಹೆಸರು ನಖತ್ ಖಾನ್. ನಂತರ ಹಿಂದೂ ಧರ್ಮೀಯ ಸುಂದರ್ ಅವರನ್ನು ಮದುವೆಯಾಗುವ ಮುನ್ನ ಅವರು ಹಿಂದೂ ಸಂಪ್ರದಾಯಗಳನ್ನು ಅನುಸರಿಸಿದರು. ತಮ್ಮ ಗಂಡನ ಹೆಸರನ್ನು ತಮ್ಮ ಹೆಸರಿನೊಂದಿಗೆ ಸೇರಿಸಿಕೊಂಡರು. ದಂಪತಿಗಳು ತಮ್ಮ ಮಕ್ಕಳಿಗೆ ಆವಂತಿಕಾ ಮತ್ತು ಆನಂದಿತಾ ಎಂದು ಹೆಸರಿಸಿದ್ದಾರೆ. ಸದ್ಯ ಖುಷ್‌ಬೂ ತಮಿಳುನಾಡಿನ ಭಾರತೀಯ ಜನತಾ ಪಾರ್ಟಿಯಲ್ಲಿ ಕ್ರಿಯಾಶೀಲವಾಗಿ ಇದ್ದಾರೆ. ಇವರಿಗಾಗಿ ಒಂದು ದೇವಾಲಯವನ್ನೂ ಕಟ್ಟಲಾಗಿದೆ.
