ಬಾಲಿವುಡ್ ಹಾಟ್ ಹುಡುಗಿ ಜೊತೆಗೂ ಸಂಬಂಧ: ರಾಣಾ ಲವ್ ಲೈಫ್ ಇದು
ಟಾಲಿವುಡ್ ನಟ ರಾಣಾ ದಗ್ಗುಬಾಟಿ ಹೆಸರು ಸಾಕು ಫ್ಯಾನ್ ಹೃದಯ ಬಡಿತ ಹೆಚ್ಚಿಸಲು. ಹ್ಯಾಂಡ್ಸಮ್, ಟ್ಯಾಲೆಂಟೆಡ್ ನಟನ ತನ್ನ ಖಾತೆಯಲ್ಲಿ ಅನೇಕ ಹಿಟ್ ಸಿನಿಮಾಗಳನ್ನು ಹೊಂದಿದ್ದಾರೆ. ಪ್ರಸ್ತುತ ಮಿಹೀಕಾ ಬಜಾಜ್ ಅವರನ್ನು ಮದುವೆಯಾಗಿದ್ದಾರೆ ರಾಣಾ. ಆದರೆ ಮೊದಲು ಅನೇಕ ನಟಿಯೊಂದಿಗೆ ಇವರ ಹೆಸರು ಕೇಳಿಬಂದಿತ್ತು.

ರಾಹ ದಗ್ಗುಬಾಟಿ ಅವರು ಮಿಹೀಕಾ ಬಜಾಜ್ ಅವರನ್ನು ಮದುವೆಯಾಗುವ ಮೊದಲು ಈ ನಟಿಯರೊಂದಿಗೆ ಸಂಬಂಧ ಹೊಂದಿದ್ದರು ಎಂದು ವರದಿಯಾಗಿತ್ತು.

ಬಿಪಾಶಾ ಬಸು: 2011 ರ ಚಲನಚಿತ್ರ ದಮ್ ಮಾರೊ ದಮ್ ಸಿನಿಅಮದ ಟೆ ಅಮೋ ಎಂಬ ಸೂಪರ್ ಹಾಟ್ ಹಾಡು ನೆನಪಿದೆಯಾ? ರಾಣಾ ದಗ್ಗುಬಾಟಿ ಮತ್ತು ಬಿಪಾಶಾ ಬಸು ಬೀಚ್ ರೋಮ್ಯಾನ್ಸಿಂಗ್ ಸಾಂಗ್ ಸಾಕಷ್ಟು ವೈರಲ್ ಆಗಿತ್ತು. ನಂತರ, ಸಿನಿಮಾ ಶೂಟಿಂಗ್ ಸಮಯದಲ್ಲಿ ಇಬ್ಬರೂ ಸಂಬಂಧದಲ್ಲಿದ್ದರು ಎಂಬ ಸುದ್ದಿ ಹೊರಬಿದ್ದಿತು. ಈ ಲಿಂಕಪ್ ವದಂತಿಗಳಿಂದ ಬೇಸರಗೊಂಡಿದ್ದಾರೆ ಎಂದು ಇಬ್ಬರು ಒಮ್ಮೆ ಹೇಳಿದ್ದರೂ ಮತ್ತು ರಾಣಾ ಬೇರೊಬ್ಬರ ಜೊತೆ ಆಫೇರ್ ಹೊಂದಿದ್ದರು ಎಂದು ತಿಳಿದುಬಂದಿದೆ.
ರಕುಲ್ ಪ್ರೀತ್ ಸಿಂಗ್: ರಕುಲ್ ಮತ್ತು ರಾಣಾ ಕಳೆದ ಕೆಲವು ವರ್ಷಗಳಿಂದ ನೆರೆಹೊರೆಯವರಾಗಿದ್ದಾರೆ. ರಾಣಾ ಅವರೊಂದಿಗೆ ಸಂಪರ್ಕ ಹೊಂದಲು ಇದು ಒಂದು ಕಾರಣವಾಗಿರಬಹುದು. ಆದರೆ ರಕುಲ್ ನಾವು ಕೇವಲ ಉತ್ತಮ ಸ್ನೇಹಿತರು ಎಂದು ವದಂತಿಗಳನ್ನು ತಳ್ಳಿಹಾಕಿದ್ದರು.
ಸಮೀರಾ ರೆಡ್ಡಿ: 2012 ರಲ್ಲಿ ಸಮೀರಾ ರೆಡ್ಡಿ ಜೊತೆ ಹೆಸರು ಕೇಳಿಬಂದಿತ್ತು. ರಾಣಾ ಇರುವ ಕಾರಣಕ್ಕಾಗಿ ತ್ರ ತೆಲುಗು ಚಿತ್ರವೊಂದರ ಒಂದು ಹಾಡನ್ನು ಮಾಡಲು ಅವರು ಒಪ್ಪಿಕೊಂಡಿದ್ದಾರೆ ಎಂದು ವರದಿಗಳು ಹೇಳುತ್ತವೆ. 'ನಾವು ಶೇರ್ ಮಾಡಿಕೊಳ್ಳುವುದು ಬರ್ತ್ಡೇ ಮಾತ್ರ' ಎಂದು ಹೇಳಿ ವದಂತಿಗಳನ್ನು ಸಮೀರಾ ನಿರಾಕರಿಸಿದ್ದರು.
ತ್ರಿಶಾ ಕೃಷ್ಣನ್: ರಾಣಾ ಜೊತೆ ತ್ರಿಶಾ ಕೃಷ್ಣನ್ ಸಂಬಂಧ ಸಾಕಷ್ಟು ಸದ್ದು ಮಾಡಿತ್ತು. ಇಬ್ಬರು ಸಿರೀಯಸ್ ರಿಲೆಷನ್ಶಿಪ್ನಲ್ಲಿದ್ದರು ಮತ್ತು ಹುಚ್ಚರಂತೆ ಪರಸ್ಪರ ಪ್ರೀತಿಸುತ್ತಿದ್ದರು ಎಂದು ಹೇಳಲಾಗಿದೆ. ಆದರೆ ನಂತರ ಬೇರೆಯಾದರು.
ಪ್ರಸ್ತುತ ರಾಣಾ ಮಿಹೀಕಾ ಬಜಾಜ್ ಅವರನ್ನು ಮದುವೆಯಾಗಿದ್ದಾರೆ.
ಇವರ ಗ್ರ್ಯಾಂಡ್ ಫೇರಿ ಟೇಲ್ ವೆಡ್ಡಿಂಗ್ ಫೋಟೋಗಳು ಇಂಟರ್ನೆಟ್ನಲ್ಲಿ ಬಿರುಗಾಳಿ ಎಬ್ಬಿಸಿದ್ದವು.