ಅಲ್ ಜಝೀರಾ ಮಾಧ್ಯಮ ಸಂಸ್ಥೆಗೆ ಬೀಗ, ಇಸ್ರೇಲ್ ಸಂಸತ್ತಿನಲ್ಲಿ ಸರ್ವಾನುಮತ ನಿರ್ಧಾರ!
ರಾಷ್ಟ್ರೀಯ ಭದ್ರತೆಗೆ ಧಕ್ಕೆ, ಸುಳ್ಳು ಸುದ್ದಿಗಳ ಮೂಲಕ ಪ್ರಚೋದನೆ ನೀಡಿದ ಆರೋಪದಡಿ ಅಲ್ ಜಝೀರಾ ಮಾಧ್ಯಮ ಸಂಸ್ಥೆಗೆ ಇಸ್ರೇಲ್ ಬೀಗ ಜಡಿದಿದೆ. ನೆತಾನ್ಯಾಹು ಕ್ಯಾಬಿನೆಟ್‌ನಲ್ಲಿ ಸರ್ವಾನುಮತದಿಂದ ಈ ನಿರ್ಧಾರಕ್ಕೆ ಅಂಗೀಕಾರ ದೊರೆತಿದೆ. ಮರುಕ್ಷಣದಲ್ಲೇ ಅಲ್ ಜಜೀರಾ ಕಚೇರಿಗೆ ಬೀಗ ಹಾಕಲಾಗಿದೆ.
ಇಸ್ರೇಲ್(ಮೇ.05) ಇಸ್ರೇಲ್ ಹಾಗೂ ಪ್ಯಾಲೆಸ್ತಿನ್ ನಡುವಿನ ಯುದ್ಧದ ತೀವ್ರತೆ ಕಡಿಮೆಯಾಗಿದ್ದರೂ, ಆತಂಕ ಕಡಿಮೆಯಾಗಿಲ್ಲ. ಹಮಾಸ್ ಉಗ್ರರು ನಡೆಸಿದ ಭೀಕರ ದಾಳಿಗೆ ಪ್ರತಿಯಾಗಿ ಇಸ್ರೇಲ್ ಉಗ್ರರ ಸಂಪೂರ್ಣ ನಾಶಕ್ಕೆ ಕರೆಕೊಟ್ಟಿದೆ. ಇದರ ಭಾಗವಾಗಿ ಗಾಜಾ ಮೇಲೆ ನಿರಂತರ ದಾಳಿ ನಡೆಸುತ್ತಿದೆ. ಇತ್ತ ಖತಾರ್ ಮೂಲದ ಅಲ್ ಜಝೀರಾ ಮಾಧ್ಯಮ ಇಸ್ರೇಲ್ ವಿರುದ್ಧ ಸುದ್ದಿ ಬಿತ್ತರಿಸಿದ್ದು ಮಾತ್ರವಲ್ಲ, ಏರ್‌ಸ್ಟ್ರೈಕ್ ಕುರಿತ ನಕಲಿ ಚಿತ್ರಗಳು, ದೃಶ್ಯಗಳು ಹಾಗೂ ತುಂಬಿ ತುಳುಕುತ್ತಿರುವ ಆಸ್ಪತ್ರೆ ಎಂದು ನಕಲಿ ವಿಡಿಯೋಗಳನ್ನು ಬಳಸಿ ಸುದ್ದಿ ಪ್ರಸಾರ ಮಾಡಿತ್ತು. ಈ ಕುರಿತು ಹಲವು ನೋಟಿಸ್ ಹಾಗೂ ಆಕ್ಷೇಪ ವ್ಯಕ್ತಪಡಿಸಿದ್ದ ಇಸ್ರೇಲ್ ಇದೀಗ ಸಂಪುಟದಲ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುತ್ತಿರುವ ಹಾಗೂ ನಕಲಿ, ಪ್ರಚೋದನಕಾರಿ ಸುದ್ದಿಗಳ ಮೂಲಕ ದೇಶದ ಶಾಂತಿ ಸೌಹಾರ್ಧತೆಗೆ ಭಂಗ ತರುತ್ತಿರುವ ಅಲ್ ಜಝೀರಾ ಮಾಧ್ಯಮಕ್ಕೆ ಬೀಗ್ ಜಡಿದಿದೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕ್ಯಾಬಿನೆಟ್ ಸಭೆಯಲ್ಲಿ ಈ ಕುರಿತು ವಿಷಯ ಪ್ರಸ್ತಾಪಿಸಿ ಮತ ಅಂಗೀಕಾರಕ್ಕೆ ಹಾಕಿದ್ದಾರೆ. ಕ್ಯಾಬಿನೆಟ್ ಅನುಮೋದನೆ ಬಳಿಕ ಇಸ್ರೇಲ್ ಸಂಸತ್ತಿನಲ್ಲಿ ಸರ್ವಾನುಮತದಿಂದ ಅಂಗೀಕಾರ ದೊರಕಿದೆ. ತಕ್ಷಣದಿಂದಲೇ ಜಾರಿಗೆ ಬರವುಂತೆ ಅಲ್ ಜಝೀರಾ ಮಾಧ್ಯಮ ಕಚೇರಿಗೆ ಬೀಗ ಹಾಕಿದೆ.
Viral Video: ಬಾಹ್ಯಾಕಾಶಕ್ಕೆ ಮುಟ್ಟಿದ್ದ ಇರಾನ್ ಮಿಸೈಲ್, ಅಲ್ಲಿಯೇ ಹೊಡೆದುರುಳಿಸಿದ ಇಸ್ರೇಲ್!
ಅಲ್ ಜಝೀರಾ ಮಾಧ್ಯಮಕ್ಕೆ ನೋಟಿಸ್ ನೀಡಿರುವ ಸಂವಹನ ಸಚಿವ ಶ್ಲೋಹೋ ಕರ್ಹಿ, ಇಸ್ರೇಲ್ ಸರ್ಕಾರ ಅಲ್ ಜಝೀರಾ ಮಾಧ್ಯಮ ಸಂಸ್ಥೆಯ ಪ್ರಸರಣದ ಪರಿಕರಣಗಳನ್ನು ವಶಪಡಿಸಿಕೊಳ್ಳಲಾಗುತ್ತದೆ. ರೂಟಿಂಗ್, ಎಡಿಟಿಂಗ್ ವಸ್ತುಗಳು, ಲ್ಯಾಪ್‌ಟಾಪ್, ಕ್ಯಾಮೆರಾ ಸೇರಿದಂತೆ ಹಲವು ಪ್ರಸಾರಕ್ಕೆ ಕುರಿತ ವಸ್ತುಗಳನ್ನು ಇಸ್ರೇಲ್ ಸರ್ಕಾರ ವಶಪಡಿಸಿಕೊಳ್ಳಲಿದೆ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಿದೆ.
ಅಲ್ ಜಝೀರಾ ದೇಶದ ಭದ್ರತೆಗೆ ಸವಾಲೆಸೆದಿದೆ. ಈ ದೇಶಕ್ಕೆ ಗೌರವ ನೀಡದ, ಈ ದೇಶದ ಜನರ ಭಾವನೆಗಳಿಗೆ ಗೌರವ ನೀಡದ ಹಾಗೂ ರಾಷ್ಟ್ರೀ ಭದ್ರತೆಗೆ ಧಕ್ಕೆಯಾಗುವ ಮಾಹಿತಿಗಳನ್ನು, ಸುಳ್ಳು ಗ್ರಾಫಿಕ್ಸ್ ಸೃಷ್ಟಿಸಿ ಪ್ರಸಾರ ಮಾಡಿರುವುದು ಅತೀ ದೊಡ್ಡ ತಪ್ಪು. ಈ ದೇಶ ಯಾವತ್ತೂ ಈ ರೀತಿಯ ಷಡ್ಯಂತ್ರವನ್ನು ಸಹಿಸವುದಿಲ್ಲ ಎಂದು ಶ್ಲೋಹೋ ಕರ್ಹಿ ಎಚ್ಚರಿಸಿದ್ದಾರೆ.
ರಾಜತಾಂತ್ರಿಕ ಗೆಲುವು, ಇರಾನ್ ವಶಪಡಿಸಿದ ಹಡಗಿನಲ್ಲಿರುವ ಎಲ್ಲಾ ಭಾರತೀಯರ ಬಿಡುಗಡೆ ಒಪ್ಪಿಗೆ!
ಇಸ್ರೇಲ್ ಸರ್ಕಾರ ಹಮಾಸ್ ಜೊತೆ ಕೆಲಸ ಮಾಡುತ್ತಿದೆ ಎಂದು ಸುದ್ದಿ ಪ್ರಸಾರ ಮಾಡಿತ್ತು. ಈ ಕುರಿತು ಖತಾರ್‌ನಲ್ಲಿರುವ ಅಲ್ ಜಝೀರಾ ಪ್ರಧಾನ ಕಚೇರಿ ಹಾಗೂ ಇಸ್ರೇಲ್ ಕಚೇರಿಗೆ ಈಗಲೇ ನೋಟಿಸ್ ನೀಡಿತ್ತು. ಆದರೆ ಎರಡೂ ಕಚೇರಿಗಳಿಂದ ಉತ್ತರ ಬಂದಿರಲಿಲ್ಲ.