ಚಿತ್ರದುರ್ಗ: ಬಿಸಲಿನ ತಾಪಕ್ಕೆ ಎಂಕೆ ಹಟ್ಟಿ ಕೆರೆಯಲ್ಲಿ ಮೀನುಗಳ ಮಾರಣಹೋಮ!
ಬಿಸಿಲಿನ ತಾಪಮಾನ ಹೆಚ್ಚಳ ಹಾಗು ಕಲುಷಿತ ನೀರಿನಿಂದಾಗಿ ಮೀನುಗಳ ಮಾರಣ ಹೋಮ ನಡೆದಿರುವ ಘಟನೆ ಚಿತ್ರದುರ್ಗದ ಮುರುಘಾಮಠದ ಬಳಿಯ ಮಠದಹಟ್ಟಿ ಕೆರೆಯಲ್ಲಿ ನಡೆದಿದೆ. ಮೀನುಗಳ ಸಾವಿನಿಂದಾಗಿ ಇಡೀ ನಗರವೇ ದುರ್ನಾಥ ಬೀರುತ್ತಿದೆ. ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ.
ಹೊಸ ನೀರು ಬಂದಾಗ ಮೀನುಗಳು ಸಾಯೋದು ಸಹಜ. ಆದ್ರೆ ಕಳೆದ ಮೂರು ದಿನಗಳಿಂದ ಚಿತ್ರದುರ್ಗದಲ್ಲಿ ಬಿಸಿಲಿನ ತಾಪಮಾನ 40 ಡಿಗ್ರಿ ದಾಟಿದೆ. ಕೆರೆಯಲ್ಲಿನ ನೀರು ಆವಿಯಾಗಿ ಕಡಿಮೆಯಾಗ್ತಿದೆ. ಅಲ್ಲದೇ, ಚಿತ್ರದುರ್ಗದ ಮುರುಘಾ ಮಠದ ಮುಂಭಾಗದಲ್ಲಿರುವ ಮಠದಹಟ್ಟಿ ಕೆರೆಗೆ ಪಕ್ಕದ ಬಡಾವಣೆಯ ಯೂಜಿಡಿ ನೀರು ಹಾಗು ಚರಂಡಿನೀರು ನಿರಂತರವಾಗಿ ಹರಿಯುತಿದ್ದು, ನೀರು ಮಲಿನಗೊಂಡಿದೆ. ಹೀಗಾಗಿ ಕೆರೆಯಲ್ಲಿನ ಸಾವಿರಾರು ಮೀನುಗಳು ಸಾವನ್ನಪ್ಪಿದ್ದು, ಕೆರೆಯ ಪಕ್ಕದಲ್ಲೇ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ದಾರಿಹೋಕರು, ಸ್ಥಳಿಯರು ಮತ್ತು ಪ್ರವಾಸಿಗರು ದುರ್ನಾತದಿಂದ ಬಾರಿ ಟಾರ್ಚರ್ ಎದುರಿಸುವಂತಾಗಿದೆ.
ಕಳೆದ ಎರಡು ದಿನಗಳಿಂದ ಮೂಗು ಮುಚ್ಚಿಕೊಂಡು ಕೆರೆಯ ಬಳಿ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಹಾಗೆಯೇ ಹಲವು ದಿನಗಳಿಂದ ಈ ಕೆರೆಯಲ್ಲಿನ ನೀರು ಸಂಗ್ರಹವಾಗಿ ನಿಂತಿದ್ದು,ಹಸಿರು ಬಣ್ಣಕ್ಕೆ ತಿರುಗಿದೆ. ಇದರಿಂದಾಗಿ ಮೀನುಗಾರಿಕೆ ನಡೆಸುವ ಮೀನುಗಾರರಿಗೂ ನಷ್ಟವಾಗಿದೆ. ಈ ಬಗ್ಗೆ ಮಠದ ಕುರುಬರಹಟ್ಟಿಯ ಗ್ರಾಮ ಪಂಚಾಯ್ತಿ ಅಧಿಕಾರಿಗಳು, ನಗರಸಭೆ ಹಾಗು ಸಣ್ಣ ನೀರಾವರಿ ಇಲಾಖೆಅಧಿಕಾರಿಗಳ ಗಮನಕ್ಕೆ ತಂದರು ಪ್ರಯೋಜನವಾಗಿಲ್ಲ ಎಂದು ಸ್ಥಳಿಯರು ಕಿಡಿಕಾರಿದ್ದಾರೆ.
ಇನ್ನು ಈ ಮೀನುಗಳ ಸಾವಿನಿಂದಾಗಿಸ್ಥಳಿಯರು ಆತಂಕಗೊಂಡಿದ್ದಾರೆ.ಅಲ್ದೇ ಸತತ ಎರಡು ದಿನಗಳಿಂದ ಮೀನುಗಳು ಸಾವನ್ನಪ್ತಿದ್ದು, ದುರ್ನಾಥ ಇಡೀ ನಗರವನ್ನು ಆವರಿಸಿದೆ.ಆದ್ರೆ ತಡವಾಗಿಯಾದರು ಎಚ್ಚೆತ್ತ ಅಧಿಕಾರಿಗಳು ಅಧಿಕಾರಿಗಳು ಕೆರೆಯಲ್ಲಿನ ಸತ್ತ ಮೀನುಗಳನ್ನು ಅಲ್ಲಿಯೆ ಮಣ್ಣಲ್ಲಿ ಮುಚ್ಚುತ್ತಿರುವ ಪರಿಣಾಮ, ನಗರದಲ್ಲೀಗ ಸಾಂಕ್ರಮಿಕ ರೋಗದ ಭೀತಿ ಶುರುವಾಗಿದೆ.
ಒಟ್ಟಾರೆ ಬಿಸಿಲ ತಾಪಮಾನ ಹೆಚ್ಚಳ ಮತ್ತು ಕಲುಷಿತ ನೀರಿನಿಂದಾಗಿ ಮಠದ ಕೆರೆಯಲ್ಲಿ ಮೀನುಗಳು ಸಾವನ್ನಪ್ಪಿವೆ.ಹೀಗಾಗಿ ಕೆರೆಯ ಪಕ್ಕದಲ್ಲೇ ಹಾದು ಹೋಗಿರುವ ಹೆದ್ದಾರಿಯಲ್ಲಿ ಸಂಚರಿಸುವ ಜನರು ಈ ದುರ್ನಾಥ ಸೇವಿಸುವಂತಾಗಿದೆ. ಇನ್ನಾದ್ರು ಸಂಬಂಧಪಟ್ಟ ಅಧಿಕಾರಿಗಳುಈ ಕೆರೆ ಶುದ್ಧಿಕರಣಕ್ಕೆ ಮುಂದಾಗಬೇಕಿದೆ. ಮೀನುಗಳ ಸಾವಿಗೆ ಬ್ರೇಕ್ ಹಾಕಬೇಕಿದೆ
- ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್