ಶ್ರೀದೇವಿ ನಿರಾಕರಿಸಿದ ಶಿವಗಾಮಿ ಪಾತ್ರದಲ್ಲಿ ಇತಿಹಾಸ ಸೃಷ್ಟಿಸಿದ ರಮ್ಯಾ ಕೃಷ್ಣನ್
ಎಸ್‌ಎಸ್ ರಾಜಮೌಳಿ ಅವರ ಬಾಹುಬಲಿ ಚಿತ್ರದ ಭಾಗ-1 ಮತ್ತು ಭಾಗ-2 ಎಲ್ಲರ ಹೃದಯ ಗೆದ್ದಿದೆ. ಈ ಚಿತ್ರದಲ್ಲಿ ಪ್ರತಿಯೊಂದು ಪಾತ್ರಕ್ಕೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಮತ್ತು ಪ್ರತಿಯೊಬ್ಬರೂ ತಮ್ಮ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದರಲ್ಲಿ ಶಿವಗಾಮಿ ಪಾತ್ರದಲ್ಲಿ ನಟಿಸಿರುವ ರಮ್ಯಾ ಕೃಷ್ಣನ್ (Ramya Krishnan) ಕೂಡ ಒಬ್ಬರು. ರಮ್ಯಾ ಅವರ ನಟನೆ ಮತ್ತು ಪಾತ್ರ ಎರಡೂ ಎಲ್ಲರಿಗೂ ಇಷ್ಟವಾಯಿತು, ಇಂದು ಅಂದರೆ ಸೆಪ್ಟೆಂಬರ್ 15 ರಮ್ಯಾ ಅವರ ಹುಟ್ಟುಹಬ್ಬ. ಅವರ ಜನ್ಮದಿನದಂದು ಅವರ ಕುರಿತಾದ ಪ್ರಮುಖ ಮಾಹಿತಿಗಳು ಇಲ್ಲಿವೆ
ರಮ್ಯಾ ಕೃಷ್ಣನ್ ಅವರು 15 ಸೆಪ್ಟೆಂಬರ್ 1970 ರಂದು ಚೆನ್ನೈನಲ್ಲಿ ಜನಿಸಿದರು. ರಮ್ಯಾ ಕೃಷ್ಣನ್ ತಮ್ಮ 14 ನೇ ವಯಸ್ಸಿನಲ್ಲಿ ತಮಿಳು ಚಿತ್ರ ವೆಲೈ ಮನಸು ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.
ರಮ್ಯಾ ದಕ್ಷಿಣದ ಹಿಂದಿ ಚಿತ್ರಗಳಲ್ಲಿ ಹೆಚ್ಚು ಕೆಲಸ ಮಾಡಿದ್ದಾರೆ. ದಕ್ಷಿಣದಲ್ಲಿ ಸದ್ದು ಮಾಡಿದ ನಂತರ ಬಾಲಿವುಡ್‌ಗೆ ಕಾಲಿಟ್ಟರು. ರಮ್ಯಾಗೆ ಬಾಹುಬಲಿ ಚಿತ್ರ ವಿಭಿನ್ನ ಐಡೆಂಟಿಟಿ ನೀಡುವಲ್ಲಿ ಯಶಸ್ವಿಯಾಗಿತ್ತು.
ರಮ್ಯಾಗಿಂತ ಮೊದಲು ಶ್ರೀ ದೇವಿಗೆ ಈ ಪಾತ್ರವನ್ನು ಆಫರ್ ಮಾಡಲಾಗಿತ್ತು ಎಂಬ ವಿಷಯ ಕೆಲವೇ ಜನರಿಗೆ ತಿಳಿದಿದೆ. ಈ ಚಿತ್ರಕ್ಕೆ ಶ್ರೀದೇವಿ ಭಾರೀ ದೊಡ್ಡ ಮೊತ್ತದ ಶುಲ್ಕ ಕೇಳಿದ ಕಾರಣದಿಂದ, ಅವನ್ನು ಚಿತ್ರ ನಿರ್ಮಾಪಕರು ನಿರಾಕರಿಸಿದ್ದಾರೆ.
ಶ್ರೀದೇವಿ ಚಿತ್ರಕ್ಕಾಗಿ 6 ಕೋಟಿ ರೂಪಾಯಿಗಳನ್ನು ಕೇಳಿದ್ದರು. ಬಾಹುಬಲಿ ಚಿತ್ರದ ಬಜೆಟ್ ಈಗಾಗಲೇ ತುಂಬಾ ಹೆಚ್ಚಿತ್ತು, ಅದನ್ನು ಮತ್ತಷ್ಟು ಹೆಚ್ಚಿಸದಿರಲು ನಿರ್ಧರಿಸಿದರು.
ಈ ಕಾರಣದಿಂದಾಗಿ ನಿರ್ದೇಶಕರು ರಮ್ಯಾ ಕೃಷ್ಣನ್ ಅವರಿಗೆ ಸಹಿ ಹಾಕಿದರು. ಈ ಚಿತ್ರವು ರಮ್ಯಾ ಅವರ ವೃತ್ತಿಜೀವನಕ್ಕೆ ಒಂದು ಮೈಲಿಗಲ್ಲು (Milestone) ಎಂದು ಸಾಬೀತಾಯಿತು.
ರಮ್ಯಾ ತಮ್ಮ ಬಾಲಿವುಡ್ ವೃತ್ತಿಜೀವನವನ್ನು ಯಶ್ ಚೋಪ್ರಾ ಅವರ ಪರಂಪರಾ ಚಿತ್ರದ ಮೂಲಕ ಪ್ರಾರಂಭಿಸಿದರು. ಇದರ ನಂತರ ಅವರು ಖಲ್ನಾಯಕ್, ಚಾಹತ್, ಬನಾರಸಿ ಬಾಬು ಮತ್ತು ಬಡೇ ಮಿಯಾನ್ ಚೋಟೆ ಮಿಯಾನ್ ನಂತಹ ಅನೇಕ ಬಾಲಿವುಡ್ ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು.
ವರದಿಗಳ ಪ್ರಕಾರ, ರಮ್ಯಾ ಇದುವರೆಗೆ 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಇಷ್ಟೇ ಅಲ್ಲ ನಟಿ ರಮ್ಯಾ ಕೃಷ್ಣ ಅವರು ದಕ್ಷಿಣದ ಟಿವಿ ಚಾನೆಲ್‌ಗಳ ಪ್ರಸಿದ್ಧ ಮುಖವೂ ಹೌದು.