- Home
- Entertainment
- Cine World
- Ramayana Star Cast Fees: ರಣ್‌ಬೀರ್ ಅತ್ಯಂತ ದುಬಾರಿ, ಯಶ್, ಸಾಯಿ ಪಲ್ಲವಿ ಸಂಭಾವನೆ ಏನು ಕಡಿಮೆ ಇಲ್ಲ!
Ramayana Star Cast Fees: ರಣ್‌ಬೀರ್ ಅತ್ಯಂತ ದುಬಾರಿ, ಯಶ್, ಸಾಯಿ ಪಲ್ಲವಿ ಸಂಭಾವನೆ ಏನು ಕಡಿಮೆ ಇಲ್ಲ!
ರಾಮಾಯಣ ಚಿತ್ರದ ತಾರಾಗಣದ ಸಂಭಾವನೆಯ ಬಗ್ಗೆ ಒಂದು ವರದಿ ವೈರಲ್ ಆಗಿದೆ. ರಣ್‌ಬೀರ್ ಕಪೂರ್, ಯಶ್, ಸಾಯಿ ಪಲ್ಲವಿ ಸೇರಿದಂತೆ ಪ್ರಮುಖ ಪಾತ್ರಧಾರಿಗಳ ಸಂಭಾವನೆ ಎಷ್ಟು ಎಂಬುದನ್ನು ತಿಳಿಯಿರಿ.

ರಾಮಾಯಾಣ
ಯಶ್ ನಟಿಸಿ ನಿರ್ಮಾಣ ಮಾಡುತ್ತಿರುವ ರಾಮಾಯಾಣ ಚಿತ್ರದ ಟೀಸರ್ ಭಾರತೀಯ ಸಿನಿಮಾ ಅಂಗಳದಲ್ಲಿ ಸಂಚಲನವನ್ನೇ ಸೃಷ್ಟಿಸಿದೆ. ನಿತೇಶ್ ತಿವಾರಿ ನಿರ್ದೇಶನ ಮಾಡುತ್ತಿರುವ ರಾಮಾಯಾಣ ಸಿನಿಮಾ ಹಲವು ಸ್ಟಾರ್ ಕಲಾವಿದರನ್ನು ಒಳಗೊಂಡಿದೆ.
ಕಲಾವಿದರ ಸಂಭಾವನೆ
ರಾಮನಾಗಿ ರಣ್‌ಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ಮತ್ತು ರಾವಣನಾಗಿ ಯಶ್ ನಟಿಸುತ್ತಿದ್ದಾರೆ. ಈ ಮೂವರ ಜೊತೆ ವಿವಿಧ ಪಾತ್ರಗಳಲ್ಲಿ ರವಿ ದುಬೆ, ಸನ್ನಿ ಡಿಯೋಲ್, ಲಾರಾ ದತ್ತಾ, ಕುನಾಲ್ ಕಪೂರ್, ಅರುಣ್ ಗೋವಿಲ್ ಸೇರಿದಂತೆ ಹಲವು ಕಲಾವಿದರು ನಟಿಸುತ್ತಿದ್ದಾರೆ. ರಾಮಾಯಾಣ ಸಿನಿಮಾದ ಕೆಲ ಪ್ರಮುಖ ಪಾತ್ರಧಾರಿ ಸಂಭಾವನೆ ಎಷ್ಟು ಎಂಬುದರ ಮಾಹಿತಿಯ ಕುರಿತ ವರದಿಯೊಂದು ವೈರಲ್ ಆಗಿದೆ.
ರಣ್‌ಬೀರ್ ಕಪೂರ್
ರಾಮಾಯಣ ಚಿತ್ರದ ಕಥಾ ನಾಯಕ ರಾಮನಾಗಿ ಬಾಲಿವುಡ್ ಚಾಕ್ಲೆಟ್ ಹೀರೋ ರಣ್‌ಬೀರ್ ಕಪೂರ್ ನಟಿಸುತ್ತಿದ್ದಾರೆ. ರಾಮನ ಪಾತ್ರಕ್ಕಾಗಿ ಎರಡೂ ಭಾಗಕ್ಕೆ ಸೇರಿ ಒಟ್ಟು 150 ಕೋಟಿ ರೂ. ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಒಂದು ಭಾಗಕ್ಕೆ 75 ಕೋಟಿ ರೂ. ಆಗಲಿದೆ.
ಯಶ್
ಲಂಕಾಧಿಪತಿಯಾಗಿ ರಾಕಿಂಗ್ ಸ್ಟಾರ್ ಯಶ್ ನಟಿಸುತ್ತಿದ್ದಾರೆ. ಎರಡು ಭಾಗದ ಸಿನಿಮಾಗೆ ಸೇರಿ ಯಶ್ 100 ಕೋಟಿ ರೂ. ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ. ತಲಾ 50 ಕೋಟಿ ರೂ. ಸಂಭಾವನೆಯನ್ನು ಯಶ್ ಚಾರ್ಜ್ ಮಾಡಿದ್ದಾರಂತೆ.
ಸನ್ನಿ ಡಿಯೋಲ್
ಪವನ ಪುತ್ರ ಆಂಜನೇಯನ ಪಾತ್ರದಲ್ಲಿ ಸನ್ನಿ ಡಿಯೋಲ್ ನಟಿಸುತ್ತಿದ್ದಾರೆ. ಸನ್ನಿ ಡಿಯೋಲ್ ಸಿನಿಮಾದಲ್ಲಿ ನಟಿಸಲು 20 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಸಾಯಿ ಪಲ್ಲವಿ
ದಕ್ಷಿಣ ಭಾರತದ ಸ್ಟಾರ್ ನಟಿಯಾಗಿರುವ ಸಾಯಿ ಪಲ್ಲವಿ ರಾಮಾಯಾಣ ಸಿನಿಮಾದಲ್ಲಿ ಜನಕನ ಮಗಳು ಜಾನಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಪ್ರತಿ ಭಾಗಕ್ಕೆ 6 ಕೋಟಿ ರು. ಪಡೆಯಲಿದ್ದಾರೆ. ಈ ಚಿತ್ರಕ್ಕಾಗಿ ಒಟ್ಟು 12 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.
ರವಿ ದುಬೆ
ಬಾಲಿವುಡ್‌ನ ಆಕರ್ಷಕ ವ್ಯಕ್ತಿ ಅಂತ ಕರೆಸಿಕೊಳ್ಳುವ ರವಿ ದುಬೆ ಐತಿಹಾಸಿಕ ಕಥಾನಕವುಳ್ಳ ಸಿನಿಮಾದಲ್ಲಿ ರಾಮನ ಸೋದರ ಲಕ್ಷ್ಮಣನಾಗಿ ಕಾಣಿಸಿಕೊಳ್ಳಲಿದ್ದಾರೆ. ರವಿ ದುವೆ ಸಂಭಾವನೆ 2 ರಿಂದ 4 ಕೋಟಿ ರೂ.ಆಗಿರಬಹುದು ಎಂದು ಹೇಳಲಾಗುತ್ತಿದೆ.
ಇತರೆ ಕಲಾವಿದರ ಸಂಭಾವನೆ
ಶೂರ್ಪನಖಿಯಾಗಿ ರಕುಲ್ ಪ್ರೀತ್ ಸಿಂಗ್ ನಟಿಸುತ್ತಿದ್ದು, ಇದಕ್ಕಾಗಿ 1-2 ಕೋಟಿ ರು. ಸಂಭಾವನೆ ಪಡೆಯುತ್ತಿದ್ದಾರೆ. ಇಂದ್ರನಾಗಿ ಕುನಾಲ್ ಕಪೂರ್, ದಶರಥನಾಗಿ ಅರುಣ್ ಗೋವಿಲ್, ಕೌಸಲ್ಯಳಾಗಿ ಇಂದಿರಾ ಕೃಷ್ಣನ್, ಕೈಕೇಯಿಯಾಗಿ ಲಾರಾ ದತ್ತ, ಮಂತ್ರನಾಗಿ ಶೀಬಾ ಚಡ್ಡಾ, ಜಟಾಯು ಪಾತ್ರದಲ್ಲಿ ಅಮಿತಾಬ್ ಬಚ್ಚನ್ ನಟಿಸುತ್ತಿದ್ದಾರೆ. ಆದ್ರೆ ಈ ಕಲಾವಿದರ ಸಂಭಾವನೆ ಮಾಹಿತಿ ಲಭ್ಯವಾಗಿಲ್ಲ.
ಚಿತ್ರದ ಬಜೆಟ್
ರಾಮಾಯಾಣ ಚಿತ್ರ ಎರಡು ಭಾಗಗಳಲ್ಲಿ ತೆರೆ ಕಾಣಲಿದೆ. ಮೊದಲ ಭಾಗ 2026ರ ದೀಪಾವಳಿ ಮತ್ತು ಇನ್ನೊಂದು ಭಾಗ 2027ರ ದೀಪಾವಳಿಗೆ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಅಧಿಕೃತ ಹೇಳಿಕೆಯನ್ನು ನೀಡಿದೆ. ಮೊದಲ ಭಾಗಕ್ಕೆ 800 ರಿಂದ 900 ಕೋಟಿ ರೂ. ಬಜೆಟ್ ಹೊಂದಿದೆ. ಇನ್ನು 2ನೇ ಭಾಗಕ್ಕೆ 700 ಕೋಟಿ ಬಜೆಟ್ ಮೀಸಲಿಡಲಾಗಿದೆ ಎಂದು ವರದಿಯಾಗಿದೆ. ಇನ್ನು ಕಲಾವಿದರ ಸಂಭಾವನೆ ಎಷ್ಟು ಎಂದು ನೋಡೋಣ ಬನ್ನಿ.