ಅದಿಪುರುಷ್ ಸಿನಿಮಾ 'ಹಾಲಿವುಡ್‌ನ ಕಾರ್ಟೂನ್' ಎಂದ ರಾಮಾಯಾಣದ ರಾಮ ಖ್ಯಾತಿಯ ಅರುಣ್ ಗೋವಿಲ್!
ಪ್ರಭಾಸ್ ಅಭಿನಯದ ಆದಿಪುರುಷ ಚಿತ್ರಕ್ಕೆ ಎಲ್ಲೆಡೆಯಿಂದ ಕಟು ಟೀಕೆಗಳು ವ್ಯಕ್ತವಾಗುತ್ತಿವೆ. ರಮಾನಂದ್ ಸಾಗರ್ ಅವರ ರಾಮಾಯಣದಲ್ಲಿ ಭಗವಾನ್ ರಾಮನ ಪಾತ್ರವನ್ನು ನಿರ್ವಹಿಸಿದ ಅರುಣ್ ಗೋವಿಲ್, ನಿರ್ಮಾಪಕರನ್ನು ಕಟುವಾಗಿ ಟೀಕಿಸಿದ್ದು, ಚಲನಚಿತ್ರವನ್ನು 'ಹಾಲಿವುಡ್‌ನ ಕಾರ್ಟೂನ್' ಎಂದು ಕಿಡಿಕಾರಿದ್ದಾರೆ.
ಆದಿಪುರುಷ ಸಿನಿಮಾ ಜೂನ್ 16 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಹಿಟ್ ಟಿವಿ ಶೋ ರಾಮಾಯಣದಲ್ಲಿ ರಾಮನ ಪಾತ್ರವನ್ನು ನಿರ್ವಹಿಸಿದ್ದ ಕಿರುತೆರೆಯ ನಟ ಅರುಣ್ ಗೋವಿಲ್ ಆದಿಪುರುಷ ನಿರ್ಮಾಪಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಮಾನಂದ್ ಸಾಗರ್ ಅವರ ರಾಮಾಯಣದಲ್ಲಿ ಭಗವಾನ್ ರಾಮನ ಪಾತ್ರವನ್ನು ನಿರ್ವಹಿಸಿದ ಅರುಣ್ ಗೋವಿಲ್ ಅವರು ಆದಿಪುರುಷ ಸಿನಿಮಾದ ಮೇಲೆ ಕಿಡಿಕಾರಿದ್ದಾರೆ.
ಅವರು ಅದಿಪುರುಷ ಸಿನಿಮಾವನ್ನು 'ಹಾಲಿವುಡ್‌ನ ಕಾರ್ಟೂನ್' ಎಂದು ಕರೆದರು ಮತ್ತು ಮಹಾಕಾವ್ಯವನ್ನು ಆಧುನೀಕರಿಸುವ ಅಗತ್ಯವನ್ನು ಪ್ರಶ್ನಿಸಿದರು. ಅದಿಪುರುಷ ವಾಲ್ಮೀಕಿಯ ರಾಮಾಯಣವನ್ನು ಆಧರಿಸಿದೆ.
ಎಬಿಪಿಯೊಂದಿಗೆ ಮಾತನಾಡಿದ ಅರುಣ್ ಗೋವಿಲ್, ಚಲನಚಿತ್ರವನ್ನು ನೋಡಿಲ್ಲ ಎಂದು ಬಹಿರಂಗಪಡಿಸಿದರು ಮತ್ತು ಮಹಾಕಾವ್ಯವನ್ನು ಆಧುನೀಕರಿಸುವ ಅಗತ್ಯವನ್ನು ಪ್ರಶ್ನಿಸಿದರು.
'ಇಷ್ಟು ವರ್ಷಗಳಿಂದ ನಾವೆಲ್ಲರೂ ತಿಳಿದಿರುವ ಮತ್ತು ಪ್ರೀತಿಸುವ ಚಿತ್ರಣದಲ್ಲಿ ಏನು ತಪ್ಪಾಗಿದೆ? ವಿಷಯಗಳನ್ನು ಬದಲಾಯಿಸುವ ಅಗತ್ಯವೇನು? ಬಹುಶಃ ಚಿತ್ರ ತಂಡ ಭಗವಾನ್ ರಾಮ ಮತ್ತು ಸೀತೆಯ ಮೇಲೆ ಸರಿಯಾದ ನಂಬಿಕೆಯನ್ನು ಹೊಂದಿಲ್ಲ ಮತ್ತು ಅದಕ್ಕಾಗಿಯೇ ಅವರು ಈ ಬದಲಾವಣೆ ಮಾಡಿದರು' ಎಂದು ಅವರು ಹೇಳಿದರು.
2022ರಲ್ಲಿ ಬಿಡುಗಡೆಯಾದ ಟೀಸರ್ ನಂತರ ಅವರು ಆದಿಪುರುಷ್ ತಯಾರಕರಿಗೆ ತಮ್ಮ ಇನ್‌ಪುಟ್‌ಗಳನ್ನು ನೀಡಿದ್ದಾರೆ ಎಂದು ಅರುಣ್ ಅವರು ಸೇರಿಸಿದ್ದಾರೆ. ಟೀಸರ್ ಸಹ ಭಾರೀ ಟ್ರೋಲಿಂಗ್ ಮತ್ತು ವಿವಾದಕ್ಕೆ ಕಾರಣವಾಗಿತ್ತು.
ಓಂ ರಾವುತ್ ಬರೆದು ನಿರ್ದೇಶಿಸಿದ ಆದಿಪುರುಷd, ಇದುವರೆಗೆ ತಯಾರಾದ ಅತ್ಯಂತ ದುಬಾರಿ ಭಾರತೀಯ ಚಲನಚಿತ್ರಗಳಲ್ಲೊಂದು. ಈ ಚಿತ್ರವನ್ನು 500 ಕೋಟಿ ರೂಪಾಯಿಗಳ ಬೃಹತ್ ಬಜೆಟ್‌ನಲ್ಲಿ ನಿರ್ಮಿಸಲಾಗಿದೆ.
ಪ್ರಭಾಸ್, ಸೈಫ್ ಅಲಿ ಖಾನ್ ಮತ್ತು ಕೃತಿ ಸನೋನ್ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸನ್ನಿ ಸಿಂಗ್, ದೇವದತ್ತ ನಾಗೆ, ವತ್ಸಲ್ ಶೇತ್ ಮತ್ತು ಇತರರು ಪೋಷಕ ಪಾತ್ರದ ಭಾಗವಾಗಿದ್ದಾರೆ.
ಛಾಯಾಗ್ರಾಹಕ ಕಾರ್ತಿಕ್ ಪಳನಿ, ಸಂಪಾದಕರಾದ ಅಪೂರ್ವ ಮೋತಿವಾಲೆ ಸಹಾಯ್ ಮತ್ತು ಆಶಿಶ್ ಮ್ಹಾತ್ರೆ ತಾಂತ್ರಿಕ ಸಿಬ್ಬಂದಿಯನ್ನು ರಚಿಸಿದ್ದಾರೆ. ಚಿತ್ರವನ್ನು ಟಿ-ಸೀರೀಸ್ ಫಿಲ್ಮ್ಸ್ ಮತ್ತು ರೆಟ್ರೋಫಿಲ್ಸ್ ಜಂಟಿಯಾಗಿ ನಿರ್ಮಿಸಿದ್ದಾರೆ.