4 ವರ್ಷಗಳಿಂದ ಕೆಲಸ ಹಾಗೂ ಸಂಪಾದನೆಯಿಲ್ಲದೆ ಭಯದಲ್ಲಿದ್ದರಂತೆ R Madhavan
'ರೆಹನಾ ಹೈ ತೇರೆ ದಿಲ್ ಮೇ', '3 ಈಡಿಯಟ್ಸ್' ಮತ್ತು 'ತನು ವೆಡ್ಸ್ ಮನು ರಿಟರ್ನ್ಸ್' ನಂತಹ ಸೂಪರ್‌ಹಿಟ್ ಚಿತ್ರಗಳ ನಟ ಆರ್. ಮಾಧವನ್ (R Madhavan) ಕಳೆದ ನಾಲ್ಕು ವರ್ಷಗಳಿಂದ ಅವರು ಯಾವುದೇ ಆದಾಯವನ್ನು ಗಳಿಸಿಲ್ಲವಂತೆ. ಒಟಿಟಿಯಲ್ಲಿ ಸಿಕ್ಕ ಒಂದೇ ಒಂದು ಅವಕಾಶ ಅವರನ್ನು ಮತ್ತೆ ಬದುಕಿಸಿತ್ತು ಎಂದಿದ್ದಾರೆ. ವಾಸ್ತವವಾಗಿ, ಆರ್. ಮಾಧವನ್ ಅವರ ಮುಂಬರುವ ಚಿತ್ರ ರಾಕೆಟ್ರಿ: ದಿ ನಂಬಿ ಎಫೆಕ್ಟ್‌ನ (Rocketry: The Nambi Effect) ಪ್ರಥಮ ಪ್ರದರ್ಶನಕ್ಕಾಗಿ 75 ನೇ ಕ್ಯಾನೆಸ್ (Cannes 2022) ಚಲನಚಿತ್ರೋತ್ಸವಕ್ಕೆ ಆಗಮಿಸಿದ್ದರು. ಈ ಕುರಿತು ಸಂದರ್ಶನವೊಂದರಲ್ಲಿ ಅವರು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ನಾನು 4 ವರ್ಷಗಳಿಂದ ಯಾವುದೇ ಹಣವನ್ನು ಸಂಪಾದಿಸಿಲ್ಲ ಮತ್ತು ಅದರ ಬಗ್ಗೆ ಎಂದು ನಿರಂತರ ಭಯವಿದೆ ಎಂದು ಇತ್ತೀಚಿನ ಸಂದರ್ಶನವೊಂದರಲ್ಲಿ 51 ವರ್ಷದ ನಟ ಆರ್ ಮಾಧವನ್ ಬಹಿರಂಗ ಪಡಿಸಿದ್ದಾರೆ
ಕೋವಿಡ್‌ಗಿಂತ ಎರಡು ವರ್ಷಗಳ ಹಿಂದೆಯೂ ಯಾವುದೇ ಸಂಪಾದನೆ ಇರಲಿಲ್ಲ ಎಂದಿದ್ದಾರೆ ನಟ. ಫಿಲ್ಮ್ ಕಂಪ್ಯಾನಿಯನ್ ಜೊತೆಗಿನ ಸಂಭಾಷಣೆಯಲ್ಲಿ ಈ ಬಗ್ಗೆ ಮಾಧವನ್ ನನಗೆ ಇನ್ನೂ ಭಯವಾಗುತ್ತಿದೆ ಎಂದು ಹೇಳಿದರು.
'ನನಗೆ ಒಬ್ಬ ಮಗನಿದ್ದಾನೆ. ಅದು ಕೋವಿಡ್ ಸಮಯ ಆಗಿತ್ತು. ನಾನು ಕೋವಿಡ್ ಸಮಯದಲ್ಲಿ ಯಾವುದೇ ಹಣವನ್ನು ಗಳಿಸಲಿಲ್ಲ. ಕೋವಿಡ್‌ಗೆ ಎರಡು ವರ್ಷಗಳ ಮೊದಲೂ ಸಹ ನಾನು ಬೇರೆ ಏನು ಕೆಲಸ ಮಾಡಲಿಲ್ಲ. ಏಕೆಂದರೆ ಆಗ ನಾನು ನಾನು ಈ ಚಲನಚಿತ್ರವನ್ನು (ರಾಕೆಟ್ರಿ) ಮಾಡುತ್ತಿದ್ದುದರಿಂದ ನಾನು ಏನನ್ನೂ ಗಳಿಸಲಿಲ್ಲ. ಆ ಸಮಯದಲ್ಲಿ ನನ್ನ ಬದುಕಿಸಿದ್ದು OTT (ನೆಟ್‌ಫ್ಲಿಕ್ಸ್‌ನ ವೆಬ್‌ಸರಣಿ 'ಡಿಕಪ್ಲ್ಡ್') . ಆದರೆ ಅದನ್ನು ಬಿಟ್ಟರೆ ನಾನು ಯಾವುದೇ ಚಿತ್ರ ಮಾಡಲಿಲ್ಲ. ನನ್ನ ಕೊನೆಯ ಚಿತ್ರ 'ವಿಕ್ರಮ್ ವೇದ', ಆದ್ದರಿಂದ ಭಯವಿದೆ, ನಿರಂತರ ಭಯವಿದೆ' ಎಂದು ಅವರು ಹೇಳುತ್ತಾರೆ.
ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಚಿತ್ರ ಪ್ರದರ್ಶನಗೊಂಡಾಗ ಅಲ್ಲಿದ್ದ ಪ್ರೇಕ್ಷಕರು ಆರ್. ಮಾಧವನ್ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಆರ್. ಭಾರತದಲ್ಲಿ ಸುಂದರ್ ಪಿಚೈ ಅವರಿಂದ ಹಿಡಿದು ಆರ್ಯಭಟ್ಟರವರೆಗಿನ ಅನೇಕ ಅಸಾಧಾರಣ ಕಥೆಗಳು ಪ್ರಪಂಚದಾದ್ಯಂತ ಯುವಕರನ್ನು ಪ್ರೇರೇಪಿಸಬಲ್ಲವು ಎಂದು ಮಾಧವನ್ ಸ್ಕ್ರೀನಿಂಗ್ ಸಮಯದಲ್ಲಿ ಹೇಳಿದರು.
ಆರ್ ಮಾಧವನ್ ಅವರ 'ರಾಕೆಟ್ರಿ: ದಿ ನಂಬಿ ಎಫೆಕ್ಟ್' ಗೂಢಚರ್ಯೆ ಹಗರಣದಲ್ಲಿ ಬಂಧಿತರಾಗಿದ್ದ ಇಸ್ರೋ ಮಾಜಿ ವಿಜ್ಞಾನಿ ಮತ್ತು ಏರೋಸ್ಪೇಸ್ ಇಂಜಿನಿಯರ್ ನಂಬಿ ನಾರಾಯಣ್ ಅವರ ಜೀವನಚರಿತ್ರೆಯಾಗಿದೆ. ಅವರ ಮೇಲೆ ಬೇಹುಗಾರಿಕೆಯ ಸುಳ್ಳು ಆರೋಪ ಹೊರಿಸಲಾಯಿತು.
ಆರ್. ಮಾಧವನ್ ಅವರು ಈ ಚಿತ್ರದ ಕಥೆ, ಚಿತ್ರಕಥೆ, ನಿರ್ದೇಶನ, ನಿರ್ಮಾಣದ ಜೊತೆಗೆ ಪ್ರಮುಖ ಪಾತ್ರವನ್ನೂ ಮಾಡಿದ್ದಾರೆ. ನಿರ್ದೇಶಕರಾಗಿ ಮಾಧವನ್ ಅವರಿಗೆ ಇದು ಮೊದಲ ಸಿನಿಮಾ. ಜುಲೈ 1, 2022 ರಂದು ಬಿಡುಗಡೆಯಾಗಲಿರುವ ಈ ಚಿತ್ರದಲ್ಲಿ ಫಿಲ್ಲಿಸ್ ಲೋಗನ್, ವಿನ್ಸೆಂಟ್ ರಿಯೊಟ್ಟಾ, ರಾನ್ ಡೊನಾಚಿ, ಸಿಮ್ರಾನ್, ರಜಿತ್ ಕಪೂರ್, ರವಿ ರಾಘವೇಂದ್ರ, ಮಿಶಾ ಘೋಷಾಲ್, ಗುಲ್ಶನ್ ಗ್ರೋವರ್, ಕಾರ್ತಿಕ್ ಕುಮಾರ್ ಮತ್ತು ದಿನೇಶ್ ಪ್ರಭಾಕರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಮಾಧವನ್ ಈ ಚಿತ್ರವನ್ನು ಹಿಂದಿ ಜೊತೆಗೆ ತಮಿಳು ಮತ್ತು ಇಂಗ್ಲಿಷ್‌ನಲ್ಲಿ ಚಿತ್ರೀಕರಿಸಿದ್ದಾರೆ. ಈ ಮೂರು ಭಾಷೆಗಳಲ್ಲದೆ, ತೆಲುಗು, ಕನ್ನಡ ಮತ್ತು ಮಲಯಾಳಂನಲ್ಲಿಯೂ ಸೇರಿದಂತೆ 6 ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಶಾರುಖ್ ಖಾನ್ ಮತ್ತು ಸೂರ್ಯ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.