MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • ಬಾಲಿವುಡ್‌ನ ಈ ಜನಪ್ರಿಯ ನಟ, ಜಸ್ಟ್‌ 50 ರೂ. ಕದ್ದು ಮನೆಬಿಟ್ಟು ಓಡಿ ಬಂದಿದ್ರು!

ಬಾಲಿವುಡ್‌ನ ಈ ಜನಪ್ರಿಯ ನಟ, ಜಸ್ಟ್‌ 50 ರೂ. ಕದ್ದು ಮನೆಬಿಟ್ಟು ಓಡಿ ಬಂದಿದ್ರು!

ಬಾಲಿವುಡ್‌ನಲ್ಲಿ ಹೆಸರು ಮಾಡಿದ ಈ ನಟ ತಮ್ಮ ಅಭಿನಯದಿಂದಲೇ ಎಲ್ಲರ ಗಮನ ಸೆಳೆದಿದ್ದರು. ತಮ್ಮ ಅತ್ಯುತ್ತಮ ಸಿನಿಮಾಗಳಿಂದಾಗಿ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ್ದರು. ಆದ್ರೆ ಈ ನಟ ಜಸ್ಟ್‌ 50 ರೂ. ಕದ್ದು ತಮ್ಮ ಮನೆಯಿಂದ ಓಡಿಬಂದಿದ್ದರು. 

2 Min read
Vinutha Perla
Published : Oct 08 2023, 10:45 AM IST
Share this Photo Gallery
  • FB
  • TW
  • Linkdin
  • Whatsapp
17
Sanjay Mishra

Sanjay Mishra

ಬಾಲಿವುಡ್‌ನಲ್ಲಿ ಹೆಸರು ಮಾಡಿದ ಈ ನಟ ತಮ್ಮ ಅಭಿನಯದಿಂದಲೇ ಎಲ್ಲರ ಗಮನ ಸೆಳೆದಿದ್ದರು. ತಮ್ಮ ಅತ್ಯುತ್ತಮ ಸಿನಿಮಾಗಳಿಂದಾಗಿ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ್ದರು. ಆದರೆ ಆಕ್ಟಿಂಗ್ ಆರಂಭಿಸುವ ಮೊದಲು ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಿದ್ದರು. ಆದರೆ ಅವರು ಸಿನಿರಂಗಕ್ಕೆ ಬರೋ ಮೊದಲು ತಮ್ಮ ಮನೆಯಿಂದ ಓಡಿಬಂದಿದ್ದರು. 

27

30ರ ದಶಕದ ಆರಂಭದಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸಿದ ನಟ ಗೋಲ್‌ಮಾಲ್‌, ಧಮಾಲ್, ಕಡ್ವಿ ಹವಾ, ಮಸಾನ್, ಕಾಮ್ಯಾಬ್ ಮತ್ತು ವಧ್ ಮುಂತಾದ ಹಿಟ್ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಈ ನಟನನ್ನು ಸ್ಕ್ರೀನ್‌ ಮೇಲೆ ನೋಡಿದಾಗಲ್ಲೆಲ್ಲಾ ಪ್ರೇಕ್ಷಕರು ಸಖತ್ ಖುಷಿಪಡುತ್ತಿದ್ದರು. ಆ ನಟ ಬೇರೆ ಯಾರೂ ಅಲ್ಲ. ಸಂಜಯ್ ಮಿಶ್ರಾ.

37

ಸಂಜಯ್ ಅವರ ತಂದೆ ಪತ್ರಿಕಾ ಮಾಹಿತಿ ಬ್ಯೂರೋದಲ್ಲಿ ಉನ್ನತ ಸ್ಥಾನವನ್ನು ಹೊಂದಿದ್ದರು. ಶಿಕ್ಷಣವನ್ನು ಹೆಚ್ಚು ಗೌರವಿಸುತ್ತಿದ್ದರು. ಆದರೆ, ಸಂಜಯ್ ಮಿಶ್ರಾಗೆ ಶಿಕ್ಷಣದ ಬಗ್ಗೆ ಎಂದಿಗೂ ಆಸಕ್ತಿ ಇರಲ್ಲಿಲ್ಲ. ಕೆಲವು ಸಂದರ್ಶನಗಳಲ್ಲಿ, ಅವರು ಆಗಾಗ ಭಾರತೀಯ ಶಿಕ್ಷಣ ವ್ಯವಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಸಂಜಯ್ ಅನೇಕ ಬಾರಿ ಶಾಲೆಗೆ ಬಂಕ್ ಮಾಡಿದ್ದರು. ಆ ದಿನವನ್ನು ದಿನಗೂಲಿ ಕೆಲಸ ಮಾಡಲು ಬಳಸುತ್ತಿದ್ದರು.

47

'ನಾನು ಶಾಲೆಗೆಂದು ಮನೆಯಿಂದ ಹೊರಡುತ್ತಿದ್ದೆ, ಆದರೆ ಬದಲಿಗೆ,  ಟಾಲ್ಕಟೋರಾ ಗಾರ್ಡನ್‌ಗೆ ಹೋಗುತ್ತಿದ್ದೆ. ಅಲ್ಲಿ ಮನೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದೆ. ನಂತರ ಗುತ್ತಿಗೆದಾರನಾದ ಒಬ್ಬ ವ್ಯಕ್ತಿಯನ್ನು ಭೇಟಿಯಾದೆ. ಪ್ರತಿದಿನ ಬೆಳಿಗ್ಗೆ 9 ರಿಂದ ಸಂಜೆ 4:30ರ ನಡುವೆ ಕೆಲಸ ಮಾಡುತ್ತಿದ್ದೆ. ಆದರೆ ಒಂದು ದಿನ ಹೀಗೆ ಕೆಲಸ ಮಾಡುತ್ತಿದ್ದಾಗಲೇ ತಂದೆಗೆ ಸಿಕ್ಕಿಬಿದ್ದೆ' ಎಂದು ಸಂಜಯ್ ಮಿಶ್ರಾ ಹೇಳಿದ್ದಾರೆ.

57

ಆ ಘಟನೆಯ ನಂತರ ಸಂಜಯ್ ತನ್ನ ತಾಯಿಯ ಪರ್ಸ್‌ನಿಂದ 50 ರೂಪಾಯಿ ತೆಗೆದುಕೊಂಡು ಮನೆಯಿಂದ ಹೊರಟು ಹೋಗಿದ್ದರು.ಕೆಲವು ಸಮಯಗಳ ಕಾಲ ಡಾಬಾದಲ್ಲಿಯೂ ಕೆಲಸ ಮಾಡಿದ್ದರು.

67

198ರಲ್ಲಿ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಿಂದ ಪದವಿ ಪಡೆದ ನಂತರ, ಸಂಜಯ್ ತನ್ನ 33 ನೇ ವಯಸ್ಸಿನಲ್ಲಿ ಓ ಡಾರ್ಲಿಂಗ್! ಯೆ ಹೈ ಇಂಡಿಯಾ (1995) ಸಿನಿಮಾದಲ್ಲಿ ಕೆಲಸ ಮಾಡಿದರು.. 

77

ವರದಿಯ ಪ್ರಕಾರ, ಗೋಲ್‌ಮಾಲ್‌-ಫನ್ ಅನ್ಲಿಮಿಟೆಡ್ (2006) ನಲ್ಲಿ ನಟಿಸಿದ ನಂತರ, ಸಂಜಯ್ 150 ರೂ . ಸಂಬಳಕ್ಕೆ ಧಾಬಾದಲ್ಲಿ ಕೆಲಸ ಮಾಡಿದ್ದರು.. ನಿರ್ದೇಶಕ ರೋಹಿತ್ ಶೆಟ್ಟಿ ಅವರನ್ನು ಮತ್ತೆ ಚಲನಚಿತ್ರಗಳಿಗೆ ಕರೆತಂದರು.

About the Author

VP
Vinutha Perla
ಬಾಲಿವುಡ್
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved