- Home
- Entertainment
- Cine World
- Pooja Hegde Upcoming Movies: 2022ರಲ್ಲಿ ಫುಲ್ ಬ್ಯುಸಿ ಪೂಜಾ ಹೆಗ್ಡೆ, 5 ಸಿನಿಮಾ ರಿಲೀಸ್
Pooja Hegde Upcoming Movies: 2022ರಲ್ಲಿ ಫುಲ್ ಬ್ಯುಸಿ ಪೂಜಾ ಹೆಗ್ಡೆ, 5 ಸಿನಿಮಾ ರಿಲೀಸ್
ಪೂಜಾ ಹೆಗ್ಡೆ ಮೊಹೆಂಜದಾರೋ ಸಿನಿಮಾ ಹಿಟ್ ಆದ ಮೇಲೆ ಫುಲ್ ಬ್ಯುಸಿಯಾಗಿದ್ದಾರೆ. ಸೌತ್ & ನಾರ್ತ್‌ನಲ್ಲಿ ಒಳ್ಳೊಳ್ಳೆ ಆಫರ್‌ಗಳನ್ನು ಪಡೆಯುತ್ತಿದ್ದಾರೆ. ಈ ವರ್ಷವಂತೂ ನಟಿ ಪೂರ್ತಿ ಬ್ಯುಸಿಯಾಗಿರಲಿದ್ದಾರೆ.

ಬಾಲಿವುಡ್, ಕಾಲಿವುಡ್, ಟಾಲಿವುಡ್‌ನಲ್ಲಿ ತೊಡಗಿರುವ ನಟಿ ಪೂಜಾ ಹೆಗ್ಡೆ(Pooja Hegde) ಅವರು 2022 ರಲ್ಲಿ ಬಿಡುವಿಲ್ಲದ ಬ್ಯುಸಿ ನಟಿಯಾಗಿದ್ದಾರೆ. ಐದು ಚಿತ್ರಗಳನ್ನು ಹೊಂದಿದ್ದು ಬಿಡುಗಡೆಗೆ ಸಿದ್ಧರಾಗಿದ್ದಾರೆ.
ಈ ವರ್ಷ ಅವರ ಮುಂಬರುವ ಚಿತ್ರಗಳಲ್ಲಿ ವಿಜಯ್ ಥಲಪತಿ ಅವರ 'ಮೃಗ', ರಣವೀರ್ ಸಿಂಗ್ ಜೊತೆಗಿನ 'ಸರ್ಕಸ್', ಚಿರಂಜೀವಿ ಮತ್ತು ರಾಮ್ ಚರಣ್ ಜೊತೆಗಿನ 'ಆಚಾರ್ಯ', ಪ್ರಭಾಸ್ ಜೊತೆ 'ರಾಧೆ ಶ್ಯಾಮ್' ಮತ್ತು ಮಹೇಶ್ ಬಾಬು ಜೊತೆ ಇನ್ನೂ ಹೆಸರಿಡದ ಚಿತ್ರ ಸೇರಿವೆ.
ಸವಾಲುಗಳ ಹೊರತಾಗಿಯೂ, ಕಳೆದ ವರ್ಷ ನನಗೆ ತುಂಬಾ ನೀಡುತ್ತಿದೆ. ಸ್ಫೂರ್ತಿದಾಯಕವಾಗಿದೆ. ಚಿತ್ರಮಂದಿರಗಳಲ್ಲಿ ‘ಮೋಸ್ಟ್ ಎಲಿಜಿಬಲ್ ಬ್ಯಾಚುಲರ್’ಗೆ ಸಿಕ್ಕ ಪ್ರೀತಿ ಅಪಾರ. ಇದು ನನಗೆ ಹೊಸಬಳಂತೆ ಅನಿಸಿತು ಎಂದಿದ್ದಾರೆ.
2022 ರಂತೆ, ನಾನು ಅದ್ಭುತ ಮನಸ್ಸುಗಳೊಂದಿಗೆ ಜಾಮ್ ಮಾಡಲು ಮತ್ತು ಪ್ರೇಕ್ಷಕರಿಗೆ ನೆನಪಿಡುವ ಯೋಗ್ಯವಾದ ಸಿನಿಮಾವನ್ನು ನೀಡಲು ನಿರ್ಧರಿಸಿದ್ದೇನೆ. ಪ್ರೇಕ್ಷಕರು, ತಯಾರಕರು ಇಷ್ಟಪಡುವ ಸಿನಿಮಾ ಮಾಡಲು ಇಷ್ಟಪಡುತ್ತೇನೆ.
ಪ್ರಭಾಸ್(Prabhas) ಜೊತೆಗಿನ ರಾಧೆ ಶ್ಯಾಮ್ ಭಾರೀ ಹೈಪ್ ಕ್ರಿಯೇಟ್ ಮಾಡಿದ್ದು ಈ ಸಿನಿಮಾಗಾಗಿ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ.
Pooja Hegde
ಈ ಬಾರಿ ದಳಪತಿ ವಿಜಯ್ ಜೊತೆ ಮೊದಲ ಬಾರಿ ಕಾಣಿಸಿಕೊಳ್ಳುತ್ತಿರುವುದು 2022ರಲ್ಲಿ ಪೂಜಾ ಹೆಚ್ಚುಗಾರಿಕೆ. ಇದು ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದು
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.