4 ವರ್ಷಗಳಿಂದ ಕೈಯಲ್ಲೇನೂ ಚಿತ್ರ ಇಲ್ಲ, ಆದರೂ ವಿಶ್ವದ ಶ್ರೀಮಂತ ನಟರಲ್ಲಿ ಶಾರುಖ್ ಖಾನ್
ಸೂಪರ್ ಸ್ಟಾರ್ ಶಾರುಖ್ ಖಾನ್ (Shah Rukh Khan) ಕಳೆದ 4 ವರ್ಷಗಳಿಂದ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡರು, ಆದರೆ ನಾಯಕ ನಟರಾಗಿ, ಅವರ ಯಾವುದೇ ಚಿತ್ರಗಳುಇರಲಿಲ್ಲ. ಇದರ ಹೊರತಾಗಿಯೂ, ಶಾರುಖ್ ಖಾನ್ ವಿಶ್ವದ 8 ಶ್ರೀಮಂತ ನಟರಲ್ಲಿ ಸ್ಥಾನವನ್ನು ಹೊಂದಿದ ಭಾರತದ ಏಕೈಕ ನಟ. ಅವರು ಶಾರುಖ್ ಖಾನ್ ನಷ್ಟು ಆಸ್ತಿ ಭಾರತದ ಯಾವ ನಟರಿಗೂ ಇಲ್ಲ. ವರ್ಲ್ಡ್ ಆಫ್ ಸ್ಟ್ಯಾಟಿಸ್ಟಿಕ್ಸ್ ಹೆಸರಿನ ಟ್ವಿಟರ್ ಹ್ಯಾಂಡಲ್‌ನಿಂದ ಈ ಅಂಕಿ ಅಂಶವನ್ನು ಬಿಡುಗಡೆ ಮಾಡಲಾಗಿದೆ, ಇದು ಹೆಚ್ಚು ವೈರಲ್ ಆಗುತ್ತಿದೆ. ಹಾಗಾದರೆ ಟಾಪ್ 8 ಪಟ್ಟಿಯಲ್ಲಿರುವ ಪ್ರಪಂಚದ ಶ್ರೀಮಂತ ನಟರು ಯಾರಾರು?
ಟ್ವೀಟ್ ಪ್ರಕಾರ, ಶಾರುಖ್ ಖಾನ್ ಸುಮಾರು 770 ಮಿಲಿಯನ್ ಡಾಲರ್ ಅಂದರೆ ಸುಮಾರು 6294 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ ಮತ್ತು ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಟಾಪ್ 8 ಶ್ರೀಮಂತ ನಟರ ಪಟ್ಟಿಯಲ್ಲಿ ಮೊದಲ ಹೆಸರು ಅಮೆರಿಕನ್ ನಟ ಮತ್ತು ಸ್ಟ್ಯಾಂಡ್‌ಅಪ್ ಹಾಸ್ಯನಟ ಜೆರ್ರಿ ಸೀನ್‌ಫೆಲ್ಡ್ ಅವರದು. 68 ವರ್ಷದ ನಟ ಸುಮಾರು 1 ಬಿಲಿಯನ್ ಡಾಲರ್ ಅಂದರೆ ಸುಮಾರು 8174 ಕೋಟಿ ಆಸ್ತಿ ಹೊಂದಿದ್ದಾರೆ.
53 ವರ್ಷದ ಅಮೇರಿಕನ್ ನಟ ಟೈಲರ್ ಪ್ಯಾರಿ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಸುಮಾರು 1 ಬಿಲಿಯನ್ ಡಾಲರ್ ಅಂದರೆ ಸುಮಾರು 8174 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಮಾಲೀಕರು ಇವರು .
ದಿ ರಾಕ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಅಮೇರಿಕನ್ ನಟ ಡ್ವೇನ್ ಜಾನ್ಸನ್ ವಿಶ್ವದ ಮೂರನೇ ಶ್ರೀಮಂತ ನಟ. 50 ವರ್ಷ ವಯಸ್ಸಿನ ಡ್ವೇನ್ ಸುಮಾರು $ 800 ಮಿಲಿಯನ್ ಆಸ್ತಿಯನ್ನು ಹೊಂದಿದ್ದಾರೆ ಅಂದರೆ ಭಾರತೀಯ ರೂಪಾಯಿಯಲ್ಲಿ ಸುಮಾರು 6539 ಕೋಟಿಗಳಿಗಿಂತ ಹೆಚ್ಚು.
ಪಟ್ಟಿಯಲ್ಲಿ ಐದನೇ ಸ್ಥಾನವನ್ನು 60 ವರ್ಷ ವಯಸ್ಸಿನ ಅಮೇರಿಕನ್ ನಟ ಟಾಮ್ ಕ್ರೂಸ್ ಹೊಂದಿದ್ದಾರೆ. ಅವರು $ 620 ಮಿಲಿಯನ್ ಅಥವಾ ಭಾರತೀಯ ರೂಪಾಯಿಗಳಲ್ಲಿ 5068 ಕೋಟಿ ರೂ.ಗಿಂತ ಹೆಚ್ಚು ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.
ಹಾಂಗ್ ಕಾಂಗ್ ಮೂಲದ ನಟ ಜಾಕಿ ಚಾನ್ ಈ ಪಟ್ಟಿಯಲ್ಲಿ ಆರನೇ ಸ್ಥಾನ ಪಡೆದಿದ್ದಾರೆ. 68 ವರ್ಷ ವಯಸ್ಸಿನ ಚಾನ್ ಸುಮಾರು $ 520 ಮಿಲಿಯನ್ ಆಸ್ತಿಯನ್ನು ಅಂದರೆ ಸುಮಾರು 4250 ಕೋಟಿ ರೂ ಆಸ್ತಿಯ ಓನರ್ ಇವರು.
ಅಮೇರಿಕನ್ ನಟ 61 ವರ್ಷದ ಜಾರ್ಜ್ ಕ್ಲೂನಿ ಈ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದು, ಇವರ ಒಟ್ಟು ಆಸ್ತಿ 500 ಮಿಲಿಯನ್ ಡಾಲರ್ ಅಥವಾ 4087 ಕೋಟಿ ರೂ.
ಅಮೆರಿಕದ ನಟ ರಾಬರ್ಟ್ ಡಿ ನಿರೋ 8ನೇ ಸ್ಥಾನದಲ್ಲಿದ್ದಾರೆ. 79 ವರ್ಷದ ರಾಬರ್ಟ್ 500 ಮಿಲಿಯನ್ ಡಾಲರ್ ಅಥವಾ 4087 ಕೋಟಿ ರೂ.ಗಿಂತ ಹೆಚ್ಚಿನ ಆಸ್ತಿ ಹೊಂದಿದ್ದಾರೆ.