ಪರಿಣೀತಿ ಚೋಪ್ರಾ-ರಾಘವ್ ಚಡ್ಡಾ ನಿಶ್ಚಿತಾರ್ಥ: ಭಾವಿ ಪತಿ ಜೊತೆ ನಟಿಯ ರೊಮ್ಯಾಟಿಂಕ್ ಫೋಟೋ
ಪರಿಣೀತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡರು. ಭಾವಿ ಪತಿ ಜೊತೆ ನಟಿಯ ರೊಮ್ಯಾಟಿಂಕ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ.
ಬಾಲಿವುಡ್ ನಟಿ ಪರಿಣೀತಿ ಚೋಪ್ರಾ ಮತ್ತು ಆಪ್ ನಾಯಕ ರಾಘವ್ ಚಡ್ಡಾ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅದ್ದೂರಿಯಾಗಿ ನಡೆದ ಸಮಾರಂಭದಲ್ಲಿ ಇಬ್ಬರೂ ಉಂಗುರ ಬದಲಾಯಿಸಿಕೊಂಡರು.
ಪರಿಣೀತಿ ಮತ್ತು ರಾಘವ್ ಚಡ್ಡ ಮದುವೆ ವಿಚಾರ ಕಳೆದ ಕೆಲವು ದಿನಗಳಿಂದ ಸಿಕ್ಕಾಪಟ್ಟೆ ಚರ್ಚೆಯಾಗಿತ್ತು. ಇಬ್ಬರೂ ಒಟ್ಟಿಗೆ ಡಿನ್ನರ್, ಟ್ರಿಪ್ ಅಂತ ಒಟ್ಟಿಗೆ ಓಡಾಡುವ ಮೂಲಕ ಡೇಟಿಂಗ್ ವಿಚಾರ ಬಹಿರಂಗ ಪಡಿಸಿದ್ದರು. ಆದರೆ ಇಬ್ಬರೂ ಎಲ್ಲಿಯೂ ಅಧಿಕೃತವಾಗಿ ಬಹಿರಂಗ ಪಡಿಸಿರಲಿಲ್ಲ. ಕೊನೆಗೂ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಅಧಿಕೃತಗೊಳಿಸಿದ್ದಾರೆ.
ಮೇ 13ರಂದು ದೆಹಲಿಯಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಪರಿಣೀತಿ ಮತ್ತು ರಾಘವ್ ಇಬ್ಬರೂ ಎಂಜೇಜ್ ಆದರು. ಸಮಾರಂಭಕ್ಕೆ ಚೋಪ್ರಾ ಕುಟುಂಬ, ಆಪ್ತರು ಹಾಗೂ ಆಪ್ ನಾಯಕರು, ದೆಹಲಿ ಸಿಎಂ ಕೇಜ್ರಿವಾಲ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಪರಿಣೀತಿ ಚೋಪ್ರಾ ಸಹೋದರಿ ಪ್ರಿಯಾಂಕಾ ಚೋಪ್ರಾ ಕೂಡ ದೂರದ ಅಮೆರಿಕಾದಿಂದ ಭಾರತಕ್ಕೆ ಆಗಮಿಸಿದ್ದರು.
ನಟಿ ಪರಿಣೀತಿ ಚೋಪ್ರಾ ಮುತ್ತಿನಿಂದ ಡಿಸೈನ್ ಮಾಡಿದ್ದ ರೋಸ್ ಪಿಂಕ್ ಕುರ್ತ ಧರಿಸಿದ್ದರು. ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ ಡಿಸೈನ್ ಮಾಡಿದ್ದ ಡ್ರಿಸ್ ಇದಾಗಿತ್ತು. ರಾಘವ್ ಚಡ್ಡಾ ಕೂಡ ರೋಸ್ ಪಿಂಕ್ ಕುರ್ತದಲ್ಲಿ ಮಿಂಚಿದರು.
ಪರಿಣೀತಿ ಮತ್ತು ರಾಘವ್ ಚಡ್ಡ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇಬ್ಬರೂ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಕ್ಯಾಮರಾಗೆ ಮಸ್ತ್ ಪೋಸ್ ನೀಡಿರುವ ಇಬ್ಬರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಾಘವ್ ಮತ್ತು ಪರಿಣೀತಿ ಫೋಟೋಗಳಿಗೆ ಅಭಿಮಾನಿಗಳಿಂದ ಮತ್ತು ಆಪ್ತರಿಂದ ಮೆಚ್ಚಿಗೆ ಹರಿದುಬರುತ್ತಿದೆ. ಹಸ ಜೋಡಿಗೆ ಶುಭಾಶಯ ತಿಳಿಸುತ್ತಿದ್ದಾರೆ. ಹಾರ್ಟ್ ಇಮೋಜಿ ಇರಿಸಿ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ.
ಸಹೋದರಿಯ ನಿಶ್ಚಿತಾರ್ಥ ಸಮಾರಂಭಕ್ಕೆ ಅಮೆರಿಕಾದಿಂದ ಪ್ರಿಯಾಂಕಾ ಚೋಪ್ರಾ ಕೂಡ ಆಗಮಿಸಿದ್ರು. ನಿಯಾನ್ ಗ್ರೀನ್ ಡ್ರೆಸ್‌ನಲ್ಲಿ ಪ್ರಿಯಾಂಕಾ ಕಂಗೊಳಿಸಿದ್ದರು. ಪ್ರಿಯಾಂಕಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಸಹೋದರಿಯ ಫೋಟೋ ಶೇರ್ ಮಾಡಿ ಮದುವೆಗಾಗಿ ಕಾಯುತ್ತಿದ್ದೀನಿ ಎಂದು ಪ್ರಿಯಾಂಕಾ ಹೇಳಿದ್ದಾರೆ.
ಸದ್ಯ ನಿಶ್ಚಿತಾರ್ಥ ಮಾಡಿಕೊಂಡಿರುವ ಪರಿಣೀತಿ ಮತ್ತು ರಾಘವ್ ಮದುವೆ ಯಾವಾಗ ಎನ್ನುವ ಬಗ್ಗೆ ಇನ್ನೂ ಬಹಿರಂಗ ಪಡಿಸಿಲ್ಲ. ಇಬ್ಬರೂ ಆಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ ಹಸೆಮಣೆ ಏರುವ ಸಾಧ್ಯತೆ ಇದೆ.