ಪಾಪಾ ಮಿಸ್ಸಿಂಗ್ ಯು, ಸನ್ನಿ ಡಿಯೋಲ್ ಪೋಸ್ಟ್‌ನಿಂದ ಅಭಿಮಾನಿಗಳಲ್ಲಿ ಹೆಚ್ಚಿದ ಆತಂಕ!
ಸನ್ನಿ ಡಿಯೋಲ್ ಪೋಸ್ಟ್ ಒಂದು ಇದೀಗ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ತಂದೆ, ಹಿರಿಯ ನಟ ಧಮೇಂದ್ರ ಫೋಟೋ ಪೋಸ್ಟ್ ಮಾಡಿರುವ ಸನ್ನಿ ಡಿಯೋಲ್, ಪಾಪಾ ಮಿಸ್ಸಿಂಗ್ ಯು ಎಂದು ಬರೆದುಕೊಂಡಿದ್ದಾರೆ.
ಬಾಲಿವುಡ್ ಹಿರಿಯ ನಟ, ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಧಮೇಂದ್ರ ಆರೋಗ್ಯ ಕುರಿತು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. ಆತಂಕ ಹೊರಹಾಕುತ್ತಿದ್ದಾರೆ. ಇದಕ್ಕೆ ಕಾರಣ ಪುತ್ರ, ಬಾಲಿವುಡ್ ನಟ ಸನ್ನಿ ಡಿಯೋಲ್ ಮಾಡಿದ ಪೋಸ್ಟ್. ಸೋಶಿಯಲ್ ಮೀಡಿಯಾದಲ್ಲಿ ಸನ್ನಿ ಡಿಯೋಲ್ ಧರ್ಮೇಂದ್ರ ಫೋಟೋಗಳನ್ನು ಪೋಸ್ಟ್ ಮಾಡಿ ಪಾಪಾ ಮಿಸ್ಸಿಂಗ್ ಯು ಎಂದು ಬರೆದುಕೊಂಡಿದ್ದಾರೆ.
ಸನ್ನಿ ಡಿಯೋಲ್ ಇಂದು ಇನ್‌ಸ್ಟಾಗ್ರಾಂನಲ್ಲಿ ತಂದೆ ಧರ್ಮೇಂದ್ರ ಅವರ 2 ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಬಳಿಕ ಮಿಸ್ಸಿಂಗ್ ಯು ಎಂದು ಬರೆದುಕೊಂಡಿದ್ದಾರೆ. ಇದರ ಸಹೋದರ ಬಾಬಿ ಡಿಯೋಲ್ ಹಾಗೂ ಸಹೋದರಿ ಇಶಾ ಡಿಯೋಲ್ ಹಾರ್ಟ್ ಇಮೋಜಿಗಳೊಂದಿಗೆ ಪ್ರತಿಕ್ರಿಯಿಸಿದ್ದಾರೆ.
ಸನ್ನಿ ಡಿಯೋಲ್ ಈ ಪೋಸ್ಟ್ ಹಾಕಿದ ಬೆನ್ನಲ್ಲೇ ಅಭಿಮಾನಿಗಳು ಆತಂಕಗೊಂಡಿದ್ದಾರೆ ಈ ಫೋಸ್ಟ್‌ಗೆ ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. ಎಲ್ಲವೂ ಒಕೆ ಎಂದು ಭಾವಿಸುತ್ತೇನೆ. ಧರ್ಮೇಂದ್ರ ಅವರ ಆರೋಗ್ಯ ಹೇಗಿದೆ? ಧರ್ಮೆಂದ್ರ ಹಾಗೂ ಅವರ ಕುಟುಂಬ ಆರೋಗ್ಯವಾಗಿದೆ ಎಂದು ಭಾವಿಸುತ್ತಿದ್ದೇವೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ. ಇದೇ ವೇಳೆ ಒನ್ ಆ್ಯಂಡ್ ಒನ್ಲಿ ಧರ್ಮೇಂದ್ರ ಎಂದು ಹಲವರು ಕಮೆಂಟ್ ಮಾಡಿದ್ದಾರೆ.
ಸದ್ಯ ಸನ್ನಿ ಡಿಯೋಲ್ ಹೈದರಾಬಾದ್‌ನಲ್ಲಿ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿದ್ದಾರೆ. ಜಾಟ್ ಚಿತ್ರದ ಶೂಟಿಂಗ್‌ನಲ್ಲಿರುವ ಸನ್ನಿ ಡಿಯೋಲ್ ಈ ಪೋಸ್ಟ್ ಮಾಡಿದ್ದಾರೆ. ಮನೆ ಹಾಗೂ ಕುಟುಂಬದಿಂದ ದೂರ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿರುವ ಕಾರಣ ಈ ಪೋಸ್ಟ್ ಹಾಕಿರಬಹುದು ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ.
6 ದಶಕಗಳ ಕಾಲ ಬಾಲಿವುಡ್‌ನಲ್ಲಿ ಮಿಂಚಿದ ಧರ್ಮೇಂದ್ರ 200ಕ್ಕೂ ಹೆಚ್ಚು ಚಿತ್ರದಲ್ಲಿ ಅಭಿನಯಿಸಿದ್ದಾರೆ. 2012ರಲ್ಲಿ ಪದ್ಮಭೂಷಣ ಪ್ರಶಸ್ತಿಗೂ ಪಾತ್ರರಾಗಿದ್ದಾರೆ. ಶೋಲೆ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರ ನೀಡಿದ ಧರ್ಮೇಂದ್ರ, ಬಿಜೆಪಿಯಿಂದ ಲೋಕಸಭೆಗೆ ಸ್ಪರ್ಧಿಸಿ ಸಂಸದರಾಗಿಯೂ ಸೇವೆ ಸಲ್ಲಿಸಿದ್ದಾರೆ. 2004ರಿಂದ 2009ರ ವರೆಗೆ ಧರ್ಮೇಂದ್ರ ರಾಜಸ್ಥಾನದ ಬಿಕಾನೆರ್ ಸಂಸದರಾಗಿ ಕಾರ್ಯನಿರ್ವಹಿಸಿದ್ದಾರೆ.
ಇತ್ತ ಸನ್ನಿ ಡಿಯೋಲ್ ಗದ್ದರ್ 2 ಯಶಸ್ಸಿನ ಬಳಿಕ ಸರಣಿ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಶೀಘ್ರದಲ್ಲೇ ಬಾರ್ಡರ್ 2 ಚಿತ್ರ ಕೂಡ ಸೆಟ್ಟೇರುತ್ತಿದೆ. ಸದ್ಯ ಜಾಟ್ ಚಿತ್ರದಲ್ಲಿ ಬ್ಯೂಸಿಯಾಗಿದ್ದಾರೆ.