ಬಾಲಿವುಡ್‌ನಲ್ಲಿ ಶಾರುಖ್ ಖಾನ್, ಸೆಕ್ಸ್ ಮಾತ್ರ ಸೇಲ್ ಆಗೋದು: ನೇಹಾ ಧೂಪಿಯಾ
ಬಾಲಿವುಡ್ ನಟಿ ನೇಹಾ ಧೂಪಿಯಾ (Neha Dhupia) ಸಿನಿಮಾಗಳಿಗಿಂತ ತಮ್ಮ ಬೋಲ್ಡ್‌ನೆಸ್‌ಗೆ ಫೇಮಸ್. ನೇಹಾ ಅವರು ತಮ್ಮ ಲುಕ್ ಜೊತೆ ವಿವಾದಗಳಿಗೂ ಜನಪ್ರಿಯ. ನೇಹಾ ಅವರ ವೃತ್ತಿ ಜೀವನದಲ್ಲಿ (Career) ಅವರ ವಿವಾದಾತ್ಮಕ ಹೇಳಿಕೆಗಳಿಂದಾಗಿ (Controversial Statements), ಸಾಕಷ್ಟು ಮುಖ್ಯಾಂಶಗಳನ್ನು ಮಾಡಿದ್ದಾರೆ. ನಟಿಗೆ ಸಂಬಂಧಿಸಿದ ಕೆಲವು ವಿವಾದಗಳಿವು.
Neha Dhupia
27 ಆಗಸ್ಟ್ 1980 ರಂದು ಭಾರತೀಯ ನೌಕಾಪಡೆಯ ಅಧಿಕಾರಿಯ ಮಗಳಾಗಿ ಜನಿಸಿದ ನೇಹಾ ಧೂಪಿಯಾ 2002 ರಲ್ಲಿ ಫೆಮಿನಾ ಮಿಸ್ ಇಂಡಿಯಾ ಪ್ರಶಸ್ತಿಯನ್ನು ಗೆದ್ದರು.
ರೋಡೀಸ್ ಶೋನಲ್ಲಿ ಯುವಕನೊಬ್ಬ ತನ್ನ ಗೆಳತಿ ಆಕೆ ಏಕ ಕಾಲದಲ್ಲಿ ಐವರು ಹುಡುಗರೊಂದಿಗೆ ಸಂಬಂಧ ಹೊಂದಿದ್ದಾಳೆ ಎಂದು ಆಕೆಗೆ ಕಪಾಳಮೋಕ್ಷ ಮಾಡಿದ್ದರು. ಈ ವೇಳೆ ಕಾರ್ಯಕ್ರಮದ ತೀರ್ಪುಗಾರ ನೇಹಾ ಧೂಪಿಯಾ ಯುವಕನ ಮೇಲೆ ಕೋಪಗೊಂಡರು,
ಅದು ಅವಳ ಆಯ್ಕೆ. ಯಾವುದೇ ವ್ಯಕ್ತಿ ಈ ಬಗ್ಗೆ ಕೈ ಎತ್ತುವಂತಿಲ್ಲ ಎಂದು ಹೇಳಿದ್ದರು. ಈ ಸಂದರ್ಭದಲ್ಲಿ ನೇಹಾ ಧೂಪಿಯಾ ಕೆಟ್ಟದಾಗಿ ಟ್ರೋಲ್ ಆಗಿದ್ದರು.
ಆ ಸಮಯದಲ್ಲಿ ನೇಹಾ ಅವರು ಹುಡುಗಿಗೆ ಕಪಾಳಮೋಕ್ಷ ಮಾಡುವ ಹಕ್ಕು ಇಲ್ಲ ಮತ್ತು ಅವಳು ಐದು ಹುಡುಗರೊಂದಿಗೆ ಡೇಟಿಂಗ್ ಮಾಡುತ್ತಿದ್ದರೆ. ಅದು ಅವಳ ಆಯ್ಕೆ ಎಂದು ಹೇಳಿದ್ದರು.
ಬಾಲಿವುಡ್ ನಟಿ ನೇಹಾ ಧೂಪಿಯಾ ಅವರ #NoFilterNeha ಗೆ ಸಂಬಂಧಿಸಿದ ಮತ್ತೊಂದು ವಿವಾದವಿದೆ, ಅನೇಕ ಸೆಲೆಬ್ರಿಟಿಗಳು ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬರುತ್ತಿರುವುದು ಕಂಡುಬಂದಿದೆ.
ನಟಿ ಶಾರುಖ್ ಖಾನ್ ಅವರನ್ನು ತನ್ನ ಕಾರ್ಯಕ್ರಮ #NoFilterNehaಕ್ಕೆ ಅತಿಥಿಯಾಗಿ ಕರೆತರಲು ಬಯಸಿದ್ದರು. ಆ ಸಮಯದಲ್ಲಿ ನೇಹಾ ನೀಡಿದ ಹೇಳಿಕೆ ಸಖತ್ ವಿವಾದಕ್ಕೆ ಕಾರಣವಾಗಿದೆ.
ಅವರು ತಮ್ಮ ಶೋನಲ್ಲಿ ಚಿತ್ರರಂಗದಲ್ಲಿ ಕೇವಲ ಎರಡು ವಸ್ತುಗಳು ಮಾತ್ರ ಮಾರಾಟವಾಗುತ್ತಿವೆ, ಒಂದು ಲೈಂಗಿಕತೆ ಇನ್ನೊಂದು ಶಾರುಖ್ ಖಾನ್ ಎಂದು ಹೇಳಿದ್ದರು. ಅವರ ಹೇಳಿಕೆಗೆ ವಿವಾದ ಸೃಷ್ಟಿಯಾಗಿತ್ತು.