ಎರಡನೇ ಮಗುವಿನ ನಿರೀಕ್ಷೆಯಲ್ಲಿ ಬಾಲಿವುಡ್ ನಟಿ ನೇಹಾ ಧೂಪಿಯಾ ಮತ್ತು ಅಂಗದ್ ಬೇಡಿ. ಫೋಟೋ ಶೂಟ್ ವೈರಲ್.

ಬಾಲಿವುಡ್ ಅಂಗಳದ ಬೋಲ್ಡ್ ನಟಿ, ನಿರೂಪಕಿ ಹಾಗೂ ಸೂಪರ್ ಮಾಮ್ ಎಂದೇ ಖ್ಯಾತಿ ಪಡೆದಿರುವ ನೇಹಾ ಧೂಪಿಯಾ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ವಿಚಾರವನ್ನು ಅನೌನ್ಸ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಫ್ಯಾಮಿಲಿ ಫೋಟೋ ಶೂಟ್ ವೈರಲ್ ಆಗುತ್ತಿದೆ. 

Add Asianetnews Kannada as a Preferred SourcegooglePreferred

'ಈ ಫೋಟೋಗೆ ಕ್ಯಾಪ್ಶನ್ ಬರೆಯಲು ನಮಗೆ ಎರಡು ದಿನ ಬೇಕಾಗಿತ್ತು. ನಾನು ಯೋಚಿಸಬಹುದಾದ ಬೆಸ್ಟ್ ಟೈಮ್ ಇದು. ದೇವರಿಗೆ ಧನ್ಯವಾದಗಳು,' ಎಂದು ನೇಹಾ ಬರೆದುಕೊಂಡಿದ್ದಾರೆ. ನೇಹಾ, ಪತಿ ಹಾಗೂ ಮೊದಲ ಪುತ್ರಿ ಮೂವರು ಬ್ಲಾಕ್ ಡಿಸೈನರ್ ವಸ್ತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸುಳಿವು ನೀಡುವ ಮುನ್ನವೇ 'ಮಿಡ್‌ನೈಟ್ ಮಂಚೀಸ್. ಸೋಮವಾರ ದೊಡ್ಡ ಪ್ರಾಜೆಕ್ಟ್ ಬಗ್ಗೆ ಅನೌನ್ಸ್ ಮಾಡಲು ಕಾಯುತ್ತಿರುವz. ನಿಮ್ಮ ಕಲ್ಪನೆಗೂ ಮೀರಿದ್ದು,' ಎಂದು ಹೇಳಿದ್ದರು. 

21 ಕೆಜಿ ತೂಕ ಕಡಿಮೆ ಮಾಡಿಕೊಂಡು ಬಾಡಿ ಶೇಮಿಂಗ್‌ ಟ್ರೋಲರ್ಸ್‌ ಬಾಯಿ ಮುಚ್ಚಿಸಿದ ನೇಹಾ ಧುಪಿಯಾ!

2018 ಮೇ ತಿಂಗಳಲ್ಲಿ ಅಂಗದ್ ಬೇಡಿ ಹಾಗೂ ನೇಹಾ ಧೂಪಿಯಾ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಅದೇ ವರ್ಷ ನವೆಂಬರ್ ತಿಂಗಳಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಮದುವೆಯಾದ 6 ತಿಂಗಳಿಗೆ ಮಗು ಹುಟ್ಟಿದ ಕಾರಣ ನೆಟ್ಟಿಗರಲ್ಲಿ ಅನುಮಾನಾಸ್ಪದ ಪ್ರಶ್ನೆಗಳು ಹುಟ್ಟಿಕೊಂಡಿದ್ದವು. ಆದರೂ ತಲೆ ಕೆಡಿಸಿಕೊಳ್ಳದೆ ಇಬ್ಬರೂ ಕೂಲ್ ಆಗಿದ್ದರು. 

ಎರಡನೇ ಪ್ರೆಗ್ನೆನ್ಸಿ ವಿಚಾರ ಅನೌನ್ಸ್ ಮಾಡುತ್ತಿದ್ದಂತೆ, ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಹಾಗೂ ಬಿ-ಟೌನ್ ಸ್ನೇಹಿತರು ಶುಭ ಹಾರೈಸುತ್ತಿದ್ದಾರೆ.

View post on Instagram