ನೇಹಾ ದುಪಿಯಾಗೆ ಪತಿಯಿಂದ ಸರ್ಪ್ರೈಸ್ ಬೇಬಿ ಶವರ್ ಪಾರ್ಟಿ!
ಬಾಲಿವುಡ್ ನಟಿ ನೇಹಾ ಧೂಪಿಯಾ ಎರಡನೇ ಬಾರಿಗೆ ಗರ್ಭಿಣಿಯಾಗಿದ್ದಾರೆ. ಆಕೆಯ ಪತಿ ಮತ್ತು ನಟ ಅಂಗದ್ ಬೇಡಿ ಅವರಿಗಾಗಿ ಸರ್‌ಪ್ರೈಸ್ ಬೇಬಿ ಶವರ್ ಅನ್ನು ಆಯೋಜಿಸಿದರು. ಈ ಸಂದರ್ಭದಲ್ಲಿ ಅವರು ನೇಹಾರ ಕ್ಲೋಸ್ ಫ್ರೆಂಡ್ಸ್, ಪೋಷಕರು ಮತ್ತು ಕಸಿನ್ಸ್ ಅನ್ನು ಆಹ್ವಾನಿಸಿದ್ದರು. ನೇಹಾ ತಮ್ಮ ಬೇಬಿ ಶವರ್‌ನ ಹಲವು ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾಳೆ. ಈ ಫೋಟೋಗಳಲ್ಲಿ ನೇಹಾ ತುಂಬಾ ಖುಷಿಯಾಗಿ ಕಾಣಿಸುತ್ತಿದ್ದಾರೆ.
40 ವರ್ಷದ ನೇಹಾ ಧೂಪಿಯಾ ಇತ್ತೀಚೆಗೆ ತಾವು ಮತ್ತೆ ತಾಯಿಯಾಗಲಿದ್ದೇನೆ ಎಂದು ಸಾಮಾಜಿಕ ಮಾಧ್ಯಮದ ಮೂಲಕ ಅಭಿಮಾನಿಗಳೊಂದಿಗೆ ಒಳ್ಳೆಯ ಸುದ್ದಿಯನ್ನು ಹಂಚಿಕೊಂಡಿದ್ದರು. ತನ್ನ ಎರಡನೇ ಪ್ರೆಗ್ನೆಂಸಿಯ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದರು.
ನೇಹಾ ತಮ್ಮ ಕುಟುಂಬದ ಫೋಟೋವನ್ನು ಹಂಚಿಕೊಂಡಿದ್ದರು.ಅದರಲ್ಲಿ ಅವಳ ಮಗಳು ಮೆಹರ್ ಮತ್ತು ಪತಿ ಅಂಗದ್ ಬೇಡಿ ಜೊತೆ ನಟಿ ಕಾಣಿಸಿಕೊಂಡರು. ಪತಿ ಅಂಗದ್ ನೀಡಿದ ಸರ್‌ಪ್ರೈಸ್ ಬೇಬಿ ಶವರ್ ಪಾರ್ಟಿ ನೇಹಾ ಧೂಪಿಯಾ ಅವರಿಗೆ ಬಹಳಷ್ಟು ಸಂತೋಷ ತಂದಿದೆ.
ನಟಿ ಪ್ರಸ್ತುತ 7ನೇ ತಿಂಗಳ ಪ್ರೆಗ್ನೆಂಸಿಯನ್ನು ಎಂಜಾಯ್ ಮಾಡುತ್ತಿದ್ದಾರೆ ಮತ್ತು ಕೆಲವು ತಿಂಗಳ ನಂತರ ತನ್ನ ಎರಡನೇ ಮಗುವಿಗೆ ಜನ್ಮ ನೀಡುತ್ತಾರೆ. ನೇಹಾ ಪೋಷಕರೊಂದಿಗೆ ಫೋಟೋ ಜೊತೆ ಎಮೋಷನಲ್ ಮೆಸೇಜ್ ಶೇರ್ ಮಾಡಿಕೊಂಡಿದ್ದಾರೆ.
'ಸ್ವೀಟೆಸ್ಟ್ ಸರ್ಪ್ರೈಸ್ .. ಅತ್ಯಂತ ಅದ್ಭುತ ಕ್ಷಣ, ಇದಕ್ಕಿಂತ ದೊಡ್ಡ ಅಚ್ಚರಿ ನನಗೆ ಸಿಕ್ಕಿಲ್ಲ ಎಂಬುದನ್ನು ನಾನು ಒಪ್ಪಿಕೊಳ್ಳಬೇಕು. ಮಗು ಕಾಯುತ್ತಿದೆ,' ಫೋಟೋ ಜೊತೆ ಬರೆದು ಕೊಂಡಿದ್ದಾರೆ.
ಪತ್ನಿ ನೇಹಾ ಧೂಪಿಯಾ ಅವರ ಬೇಬಿ ಶವರ್ ಅನ್ನು ವಿಶೇಷವಾಗಿ ಮಾಡಲು ಅಂಗದ್ ಬೇಡಿ ಭವ್ಯವಾದ ಪಾರ್ಟಿಯನ್ನು ಆಯೋಜಿಸಿದ್ದರು. ನಂಬರ್ 2 ಬರೆದ ಒಂದು ಮುದ್ದಾದ ಪುಟ್ಟ ಕೇಕ್ ಅನ್ನು ಸಹ ಆರ್ಡರ್ ಮಾಡಿದ್ದರು.
Neha Dhupia get surprise baby shower from husband Angad Bedi
ನೇಹಾ ಧೂಪಿಯಾ 2018ರಲ್ಲಿ ಅಂಗದ್ ಬೇಡಿಯನ್ನು ವಿವಾಹವಾಗಿ ಎಲ್ಲರಿಗೂ ಶಾಕ್ ನೀಡಿದ್ದರು. ಏಕೆಂದರೆ ಅವರು ಡೇಟಿಂಗ್ ಮಾಡುತ್ತಿರುವ ಅಥವಾ ಸಂಬಂಧದಲ್ಲಿರುವ ವಿಷಯ ಎಲ್ಲೂ ಬಹಿರಂಗಗೊಂಡಿರಲಿಲ್ಲ. ಇದಾದ ನಂತರ ಆಕೆ ಗರ್ಭಿಣಿ ಎಂಬ ವಿಷಯ ಹೊರಬಿತ್ತು
ಆದರೆ ದಂಪತಿ ಇದನ್ನು ಯಾವಾಗಲೂ ನಿರಾಕರಿಸುತ್ತಿದ್ದರು. ಆದರೆ ಬೇಬಿ ಬಂಪ್ ಕಾಣಿಸಿಕೊಳ್ಳಲು ಪ್ರಾರಂಭಿಸಿದಾಗ, ಅವಳು ಮದುವೆಗೆ ಮೊದಲೇ ಗರ್ಭಿಣಿಯಾಗಿದ್ದಾರೆಂಬುದನ್ನು ಒಪ್ಪಿಕೊಂಡರು.