- Home
- Entertainment
- Cine World
- ಯಾವುದೇ ಹಿನ್ನೆಲೆ ಇಲ್ಲದೆ ಸ್ಟಾರ್ ಆದ ನಟ.. ಮಗ ಹುಟ್ಟಿದಾಗ ಜಾತಕ ಹೇಳಿದ್ರು ಚಿರಂಜೀವಿ: ಅಷ್ಟಕ್ಕೂ ಯಾರು ಆ ಹೀರೋ?
ಯಾವುದೇ ಹಿನ್ನೆಲೆ ಇಲ್ಲದೆ ಸ್ಟಾರ್ ಆದ ನಟ.. ಮಗ ಹುಟ್ಟಿದಾಗ ಜಾತಕ ಹೇಳಿದ್ರು ಚಿರಂಜೀವಿ: ಅಷ್ಟಕ್ಕೂ ಯಾರು ಆ ಹೀರೋ?
ಯಾವುದೇ ಹಿನ್ನೆಲೆ ಇಲ್ಲದೆ ಬೆಳೆದ ಸ್ಟಾರ್ ನಟರೊಬ್ಬರು ಚಿರಂಜೀವಿ ಬಗ್ಗೆ ಆಸಕ್ತಿಕರ ಮಾತುಗಳನ್ನಾಡಿದ್ದಾರೆ. ತನಗೆ ಮಗ ಹುಟ್ಟಿದಾಗ ಚಿರಂಜೀವಿ ಜಾತಕ ಹೇಳಿದ್ದರಂತೆ. ಅಷ್ಟಕ್ಕೂ ಆ ನಟ ಯಾರು ಅನ್ನೋದನ್ನು ಈ ಸ್ಟೋರಿನಲ್ಲಿ ತಿಳಿಯಿರಿ.

ಹಿನ್ನೆಲೆ ಇಲ್ಲದೆ ಬೆಳೆದ ನಟ
ಮೆಗಾಸ್ಟಾರ್ ಚಿರಂಜೀವಿ ಚಿತ್ರರಂಗದಲ್ಲಿ ಹೊಸ ನಟ-ನಟಿಯರನ್ನು, ಯುವ ನಿರ್ದೇಶಕರನ್ನು ಪ್ರೋತ್ಸಾಹಿಸುವುದನ್ನು ನೋಡುತ್ತಲೇ ಇದ್ದೇವೆ. ಯಾವುದೇ ಹಿನ್ನೆಲೆ ಇಲ್ಲದೆ ಸ್ಟಾರ್ ಆದ ನಟನನ್ನು ಚಿರಂಜೀವಿ ತುಂಬಾ ಪ್ರೋತ್ಸಾಹಿಸುತ್ತಾರಂತೆ. ಈ ವಿಷಯವನ್ನು ಆ ನಟನೇ ಹೇಳಿದ್ದಾರೆ. ಆ ನಟ ಬೇರಾರೂ ಅಲ್ಲ, ನ್ಯಾಚುರಲ್ ಸ್ಟಾರ್ ನಾನಿ.
ಚಿರಂಜೀವಿ ಬಗ್ಗೆ ನಾನಿ ಮಾತು
ನಾನಿ ಸಂದರ್ಶನವೊಂದರಲ್ಲಿ, 'ನನ್ನ ಸಿನಿಮಾ ರಿಲೀಸ್ ಆದಾಗಲೆಲ್ಲಾ ಚಿರಂಜೀವಿ ಸರ್ ಅಭಿನಂದಿಸುತ್ತಾರೆ. ಅವರೇ ವಿಶೇಷವಾಗಿ ಲೆಟರ್ ರೀತಿ ಟೈಪ್ ಮಾಡಿ ಮೆಸೇಜ್ ಕಳಿಸ್ತಾರೆ. ಅವರೊಂದಿಗೆ ಮೊದಲು ಹೆಚ್ಚು ಮಾತನಾಡಿದ್ದು 'ಮೀಲೋ ಎವರು ಕೋಟೀಶ್ವರುಡು' ಶೋನಲ್ಲಿ. ಅಂದಿನಿಂದ ಅವರೊಂದಿಗೆ ಬಾಂಧವ್ಯ ಹೆಚ್ಚಾಯ್ತು. ಶ್ಯಾಮ್ ಸಿಂಗ ರಾಯ್, ದಸರಾ ಹೀಗೆ ನನ್ನ ಯಾವುದೇ ಸಿನಿಮಾ ರಿಲೀಸ್ ಆದರೂ ಅವರಿಂದ ಮೆಸೇಜ್ ಬರುತ್ತೆ' ಎಂದಿದ್ದಾರೆ.
ನಾನಿ ಮಗನ ಜಾತಕ ಹೇಳಿದ ಚಿರು
ಎಲ್ಲಕ್ಕಿಂತ ಮುಖ್ಯವಾಗಿ, ನನ್ನ ಮಗ ಜುನ್ನು ಹುಟ್ಟಿದಾಗ ಚಿರಂಜೀವಿ ಸರ್ ಫೋನ್ ಮಾಡಿದ್ರು. ನಾವಿನ್ನೂ ಆಸ್ಪತ್ರೆಯಲ್ಲೇ ಇದ್ವಿ. ಫೋನ್ ಮಾಡಿ ಅಭಿನಂದನೆ ತಿಳಿಸಿದ್ರು. ಮಗು ಹುಟ್ಟಿದ ಸಮಯ, ನಕ್ಷತ್ರ ಕೇಳಿ ತಿಳಿದುಕೊಂಡ್ರು. ಅದರ ಆಧಾರದ ಮೇಲೆ ಅವರಿಗೆ ತಿಳಿದ ಜಾತಕ ಹೇಳಿದರು. ಯಾವ ನಕ್ಷತ್ರದಲ್ಲಿ ಹುಟ್ಟಿದರೆ ಹೇಗಿರುತ್ತೆ ಅಂತ ವಿವರಿಸಿದ್ರು ಎಂದು ನಾನಿ ಹೇಳಿದ್ದಾರೆ.
ಶ್ಯಾಮ್ ಸಿಂಗ ರಾಯ್ ಸಿನಿಮಾ ನೋಡುತ್ತಾ..
ಶ್ಯಾಮ್ ಸಿಂಗ ರಾಯ್ ಸಿನಿಮಾವನ್ನು ಅವರು ಮನೆಯ ಹೋಮ್ ಥಿಯೇಟರ್‌ನಲ್ಲಿ ನೋಡಿದ್ರಂತೆ. ಸಿನಿಮಾ ನೋಡುವಾಗ ಕೆಲಸದವರು ಸ್ನ್ಯಾಕ್ಸ್ ತಂದಾಗ, ಚಿರಂಜೀವಿ ಇನ್ವಾಲ್ವ್ ಆಗಿ ನೋಡುತ್ತಿದ್ದರಂತೆ. ಡಿಸ್ಟರ್ಬ್ ಮಾಡಿದ್ದಕ್ಕೆ ಬೈದು ವಾಪಸ್ ಕಳುಹಿಸಿದ್ರಂತೆ. ಅಷ್ಟರಮಟ್ಟಿಗೆ ಅವರಿಗೆ ಶ್ಯಾಮ್ ಸಿಂಗ ರಾಯ್ ಸಿನಿಮಾ ಇಷ್ಟವಾಗಿತ್ತು.
ನಾನಿ ಪ್ಯಾರಡೈಸ್ ಸಿನಿಮಾ
ತಮ್ಮ ಪತ್ನಿ ಸುರೇಖಾ ಅವರೊಂದಿಗೆ ಚಿರಂಜೀವಿ ಶ್ಯಾಮ್ ಸಿಂಗ ರಾಯ್ ಸಿನಿಮಾ ನೋಡಿದ್ದಾರೆ. ಇನ್ನು, ನಾನಿ ಸದ್ಯ 'ಪ್ಯಾರಡೈಸ್' ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದನ್ನು ದಸರಾ ನಿರ್ದೇಶಕ ಶ್ರೀಕಾಂತ್ ಒಡೆಲಾ ದೊಡ್ಡ ಬಜೆಟ್‌ನಲ್ಲಿ ನಿರ್ದೇಶಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

