MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • 56ರ ವಯಸ್ಸಿನವರೆಗೂ ದಿನಕ್ಕೆ 60 ಸಿಗರೇಟ್ ಸೇದುತ್ತಿದ್ದ ನಾನಾ ಪಾಟೇಕರ್, ಬಳಿಕ ಫಿಟ್ ಆಗಿದ್ದು ಹೇಗೆ?

56ರ ವಯಸ್ಸಿನವರೆಗೂ ದಿನಕ್ಕೆ 60 ಸಿಗರೇಟ್ ಸೇದುತ್ತಿದ್ದ ನಾನಾ ಪಾಟೇಕರ್, ಬಳಿಕ ಫಿಟ್ ಆಗಿದ್ದು ಹೇಗೆ?

Nana Patekar: ಒಂದು ಕಾಲದಲ್ಲಿ ದಿನಕ್ಕೆ 60 ಸಿಗರೇಟ್‌ಗಳವರೆಗೆ ಸೇದುತ್ತಿದ್ದ ನಾನಾ ಪಾಟೇಕರ್ 56ರ ವಯಸ್ಸಿನಲ್ಲಿ ಆ ಚಟವನ್ನು ಸಂಪೂರ್ಣವಾಗಿ ತೊರೆದಿದ್ದರು. ವ್ಯಾಯಾಮ, ಶಿಸ್ತು, ಸರಳ ಜೀವನ ಮತ್ತು ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡುತ್ತಿದ್ದ ಅವರ ಫಿಟ್‌ನೆಸ್ ಜರ್ನಿ ಇದೀಗ ಮತ್ತೊಮ್ಮೆ ಚರ್ಚೆಯಲ್ಲಿದೆ.

2 Min read
Author : Pavna Das
Published : Oct 08 2026, 04:11 PM IST
Share this Photo Gallery
  • FB
  • TW
  • Linkdin
  • Whatsapp
16
ಫಿಟ್‌ ಆಗಿದ್ದ ನಾನಾ ಪಾಟೇಕರ್
Image Credit : Social media

ಫಿಟ್‌ ಆಗಿದ್ದ ನಾನಾ ಪಾಟೇಕರ್

ಹಿರಿಯ ನಟ ನಾನಾ ಪಾಟೇಕರ್ ನಿಧನರಾಗಿದ್ದಾರೆ ಎಂಬ ಸುದ್ದಿ ಅಭಿಮಾನಿಗಳಿಗೆ ದೊಡ್ಡ ಆಘಾತ ನೀಡಿದೆ. 75 ವರ್ಷದ ನಾನಾ ಪಾಟೇಕರ್ ತಮ್ಮ ಅದ್ಭುತ ಅಭಿನಯ ಮತ್ತು ವಿಭಿನ್ನ ಸ್ಕ್ರೀನ್ ಪ್ರೆಸೆನ್ಸ್ ಮೂಲಕ ದಶಕಗಳ ಕಾಲ ಸಿನಿಪ್ರಿಯರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದಿದ್ದರು. ಇತ್ತೀಚಿನ ದಿನಗಳಲ್ಲಿ ಅವರ ವರ್ಕೌಟ್ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವಯಸ್ಸಿನಲ್ಲೂ ಅವರ ಫಿಟ್‌ನೆಸ್ ಕಂಡು ಅಭಿಮಾನಿಗಳು ಅಚ್ಚರಿಗೊಂಡಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಇಂದು ಬೆಳಗ್ಗೆ ನಿಧನ
Image Credit : X

ಇಂದು ಬೆಳಗ್ಗೆ ನಿಧನ

ಮಾಹಿತಿಯ ಪ್ರಕಾರ, ನಾನಾ ಪಾಟೇಕರ್ ಅವರಿಗೆ ಇಂದು ಬೆಳಗ್ಗೆ 5:20ರ ಸುಮಾರಿಗೆ ಗಂಭೀರ ಕಾರ್ಡಿಯಾಕ್ ಅರೆಸ್ಟ್ ಸಂಭವಿಸಿತ್ತು. ಅವರನ್ನು ಉಳಿಸಲು ಸುಮಾರು 45 ನಿಮಿಷಗಳ ಕಾಲ ನಿರಂತರವಾಗಿ CPR ನೀಡಲಾಯಿತು. ಆದರೆ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮಣಿಪಾಲ್ ಆಸ್ಪತ್ರೆಯ ಚೀಫ್ ಆಫ್ ಆಂಕಾಲಜಿ ಡಿಪಾರ್ಟ್‌ಮೆಂಟ್ ಡಾ. ಶೇಖರ್ ಸಾಲ್ಕರ್ ಅವರ ಪ್ರಕಾರ, ಈ ಪ್ರಕರಣದಲ್ಲಿ ಮೆಡಿಕೋ-ಲೀಗಲ್ ಕೇಸ್ (MLC) ಕೂಡ ದಾಖಲಾಗಿತ್ತು.

Related Articles

Related image1
Nana Patekar: ರೈತನಾಯಕ‌ ಪ್ರೊ.ನಂಜುಂಡಸ್ವಾಮಿ ಬಯೋಪಿಕ್ನಲ್ಲಿ‌ನಟಿಸಬೇಕಿತ್ತು ನಾನಾ ಪಾಟೇಕರ್, ಅವರ ಆಯ್ಕೆಯ ಹಿಂದಿತ್ತು ಈ ಕಾರಣ!
Related image2
Nana Patekar: ಸಾವಿಗೂ ಮುಂಚೆ ನಾನಾ ಹೇಳಿದ್ದೇನು? ಪಾಟೇಕರ್ ಮನದಾಳದ ಮಾತು ವೈರಲ್!
36
ಫಿಟ್‌ನೆಸ್‌ಗೆ ಹೆಚ್ಚಿನ ಆದ್ಯತೆ
Image Credit : X

ಫಿಟ್‌ನೆಸ್‌ಗೆ ಹೆಚ್ಚಿನ ಆದ್ಯತೆ

ನಾನಾ ಪಾಟೇಕರ್ ಹಲವು ಸಂದರ್ಭಗಳಲ್ಲಿ ತಮ್ಮ ಫಿಟ್‌ನೆಸ್ ಮತ್ತು ದಿನನಿತ್ಯದ ಜೀವನಶೈಲಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದರು. ಪ್ರತಿದಿನ ಸುಮಾರು ಒಂದೂವರೆ ಗಂಟೆಯಿಂದ ಎರಡು ಗಂಟೆಗಳವರೆಗೆ ದೈಹಿಕ ಚಟುವಟಿಕೆಗೆ ಸಮಯ ಮೀಸಲಿಡುತ್ತಿದ್ದರು. ಅವರ ವರ್ಕೌಟ್ ಕೇವಲ ಜಿಮ್‌ ಎಕ್ಸರ್ಸೈಸ್‌ಗೆ ಸೀಮಿತವಾಗಿರಲಿಲ್ಲ. ಅದರಲ್ಲಿ ಸೂರ್ಯ ನಮಸ್ಕಾರದಂತಹ ಸಾಂಪ್ರದಾಯಿಕ ವ್ಯಾಯಾಮಗಳೂ ಸೇರಿದ್ದವು. ಜೀವನದ ಈ ಹಂತದಲ್ಲೂ ದೇಹವನ್ನು ಉತ್ತಮ ಸ್ಥಿತಿಯಲ್ಲಿ ಇಟ್ಟುಕೊಳ್ಳಲು ಅವರು ಪ್ರಯತ್ನಿಸುತ್ತಿದ್ದರು.

46
56ರ ವಯಸ್ಸಿನವರೆಗೂ ದಿನಕ್ಕೆ 60 ಸಿಗರೇಟ್!
Image Credit : ANI

56ರ ವಯಸ್ಸಿನವರೆಗೂ ದಿನಕ್ಕೆ 60 ಸಿಗರೇಟ್!

ಆದರೆ ನಾನಾ ಪಾಟೇಕರ್ ಅವರ ಜೀವನ ಯಾವಾಗಲೂ ಇಷ್ಟು ಶಿಸ್ತಿನಿಂದ ಕೂಡಿರಲಿಲ್ಲ. 2015ರಲ್ಲಿ ನೀಡಿದ್ದ ಸಂದರ್ಶನವೊಂದರಲ್ಲಿ ಅವರು ತಮ್ಮ ಹಳೆಯ ಸ್ಮೋಕಿಂಗ್ ಅಭ್ಯಾಸದ ಬಗ್ಗೆ ಮಾತನಾಡಿದ್ದರು. ಒಂದು ಕಾಲದಲ್ಲಿ ತಾವು ದಿನಕ್ಕೆ ಬರೋಬ್ಬರಿ 60 ಸಿಗರೇಟ್‌ಗಳವರೆಗೆ ಸೇದುತ್ತಿದ್ದೆ ಎಂದು ಹೇಳಿದ್ದರು. ಈ ಅಭ್ಯಾಸ 56ರ ವಯಸ್ಸಿನವರೆಗೂ ಮುಂದುವರಿದಿತ್ತು.

56
ಒಂದು ಭಾವನಾತ್ಮಕ ಘಟನೆ ಅವರ ಜೀವನವನ್ನೇ ಬದಲಿಸಿತು
Image Credit : Nana Patekar - नाना पाटेकर/ Facebook

ಒಂದು ಭಾವನಾತ್ಮಕ ಘಟನೆ ಅವರ ಜೀವನವನ್ನೇ ಬದಲಿಸಿತು

ನಾನಾ ಪಾಟೇಕರ್ ಹೇಳುವಂತೆ, ಅವರ ಆಪ್ತ ಕುಟುಂಬ ಸ್ನೇಹಿತರೊಬ್ಬರು ತಮ್ಮ ಮಗನನ್ನು ಕಳೆದುಕೊಂಡಿದ್ದರು. ಆ ಸಂದರ್ಭದಲ್ಲಿ ಆ ಮಹಿಳೆ ಅನುಭವಿಸುತ್ತಿದ್ದ ಅಪಾರ ನೋವನ್ನು ಕಂಡು ನಾನಾ ಪ್ರಭಾವಿತರಾಗಿದ್ದರು. ಒಂದು ಸಂದರ್ಭದಲ್ಲಿ ನಾನಾ ಕೆಮ್ಮುತ್ತಿದ್ದಾಗ, ಆ ಮಹಿಳೆ ಅವರ ಬಳಿ ‘ನಾನು ಇನ್ನೆಷ್ಟು ನೋವನ್ನು ಸಹಿಸಬೇಕು?’ ಎಂಬ ಅರ್ಥದಲ್ಲಿ ಪ್ರಶ್ನಿಸಿದ್ದರು. ಆ ಮಾತು ನಾನಾ ಅವರ ಮನಸ್ಸಿನ ಮೇಲೆ ಆಳವಾದ ಪರಿಣಾಮ ಬೀರಿತ್ತು. ಇದಾದ ಬಳಿಕ ಅವರು ಸಂಪೂರ್ಣವಾಗಿ ಧೂಮಪಾನ ತ್ಯಜಿಸಲು ನಿರ್ಧರಿಸಿದರು. ನಂತರ ಮತ್ತೆ ಆ ಚಟದತ್ತ ಅವರು ಮರಳಲಿಲ್ಲ.

66
ಫಿಟ್‌ನೆಸ್ ಮಾತ್ರವಲ್ಲ, ಮಾನಸಿಕ ಆರೋಗ್ಯಕ್ಕೂ ಆದ್ಯತೆ
Image Credit : X

ಫಿಟ್‌ನೆಸ್ ಮಾತ್ರವಲ್ಲ, ಮಾನಸಿಕ ಆರೋಗ್ಯಕ್ಕೂ ಆದ್ಯತೆ

ನಾನಾ ಪಾಟೇಕರ್ ಜೀವನಶೈಲಿಯಲ್ಲಿ ಫಿಟ್‌ನೆಸ್ ಜೊತೆಗೆ ಮಾನಸಿಕ ಆರೋಗ್ಯ, ಸರಳತೆ ಮತ್ತು ಶಿಸ್ತಿಗೂ ಮಹತ್ವವಿತ್ತು. ಧೂಮಪಾನದಂತಹ ಹಳೆಯ ಅಭ್ಯಾಸವನ್ನು ತೊರೆದು, ವ್ಯಾಯಾಮ ಮತ್ತು ಸರಳ ಜೀವನದತ್ತ ಅವರು ಹೆಚ್ಚು ಗಮನ ಹರಿಸಿದ್ದರು.ಅವರ ಜೀವನದ ಈ ಬದಲಾವಣೆ, ಯಾವುದೇ ವಯಸ್ಸಿನಲ್ಲೂ ಕೆಟ್ಟ ಅಭ್ಯಾಸಗಳನ್ನು ಬಿಟ್ಟು ಆರೋಗ್ಯಕರ ಜೀವನಶೈಲಿಯತ್ತ ಹೆಜ್ಜೆ ಇಡಬಹುದು ಎಂಬುದಕ್ಕೆ ಒಂದು ಉದಾಹರಣೆಯಾಗಿತ್ತು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಸಿಗರೇಟು
ಮನರಂಜನಾ ಸುದ್ದಿ
ಬಾಲಿವುಡ್
ಸಿನಿಮಾ
 

Latest Videos
Recommended Stories
Recommended image1
ವಿಜಯ್ ಸಿಎಂ ಆದ ಬೆನ್ನಲ್ಲೇ ತಮಿಳನಾಡು ರಾಜಕೀಯಕ್ಕೆ ನಟ ಧನುಷ್ ಎಂಟ್ರಿ ಫಿಕ್ಸ್! ರಜನಿಕಾಂತ್ ಸುಳಿವು
Recommended image2
ಸಿನಿಮಾದ ನಕಲಿ ದೇಶಭಕ್ತಿ ಬಿಟ್ಟು ಕಾರ್ಗಿಲ್​ ಯುದ್ಧಭೂಮಿಗಿಳಿದಿದ್ದ ನಾನಾ ಪಾಟೇಕರ್​: ಅಂದು ನಡೆದದ್ದೇ ರೋಚಕ ಸ್ಟೋರಿ
Recommended image3
Bigg Boss ಖ್ಯಾತಿಯ ನಟಿಯ ಮಳಿಗೆಯಲ್ಲಿ ದರೋಡೆ: ಲಕ್ಷಾಂತರ ಹಣ ಲೂಟಿ- ಸಹಾಯಕ್ಕಾಗಿ ಮನವಿ
Related Stories
Recommended image1
Nana Patekar: ರೈತನಾಯಕ‌ ಪ್ರೊ.ನಂಜುಂಡಸ್ವಾಮಿ ಬಯೋಪಿಕ್ನಲ್ಲಿ‌ನಟಿಸಬೇಕಿತ್ತು ನಾನಾ ಪಾಟೇಕರ್, ಅವರ ಆಯ್ಕೆಯ ಹಿಂದಿತ್ತು ಈ ಕಾರಣ!
Recommended image2
Nana Patekar: ಸಾವಿಗೂ ಮುಂಚೆ ನಾನಾ ಹೇಳಿದ್ದೇನು? ಪಾಟೇಕರ್ ಮನದಾಳದ ಮಾತು ವೈರಲ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved