ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಚಿತ್ರರಂಗದಲ್ಲಿ 15 ವರ್ಷ ಪೂರೈಸಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ತಮ್ಮ ಸಂಗೀತ ಪಯಣ, ಜಾಗತಿಕ ಕಾನ್ಸರ್ಟ್ಗಳು, ಅಭಿಮಾನಿಗಳ ಪ್ರೀತಿ ಹಾಗೂ ಮುಂಬರುವ ಸಿನಿಮಾಗಳ ಬಗ್ಗೆ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.
ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಚಿತ್ರರಂಗದಲ್ಲಿ 15 ವರ್ಷ ಪೂರೈಸಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಸುದೀರ್ಘ ಸಂಗೀತ ಪಯಣ, ವಿದೇಶಗಳಲ್ಲಿನ ಕಾರ್ಯಕ್ರಮಗಳು ಹಾಗೂ ಕಾವ್ಯಾ ಮಾರನ್ ಜೊತೆಗಿನ ವಿವಾಹದ ಬಗ್ಗೆ ಅವರು ಮನಬಿಚ್ಚಿ ಮಾತನಾಡಿದ್ದಾರೆ.
ಖ್ಯಾತ ಸಂಗೀತ ನಿರ್ದೇಶಕ ಹಾಗೂ ಗಾಯಕ ಅನಿರುದ್ಧ್ ರವಿಚಂದರ್ ಸಂಗೀತ ಲೋಕದಲ್ಲಿ 15 ವರ್ಷಗಳನ್ನು ಪೂರೈಸಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ಇನ್ಸ್ಟಾಗ್ರಾಮ್ನಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿರುವ ಅವರು, ತಮ್ಮ ಸಂಗೀತ ಪಯಣ, ಸಾಧನೆಗಳು ಹಾಗೂ ಅಭಿಮಾನಿಗಳಿಂದ ಸಿಕ್ಕಿರುವ ಪ್ರೀತಿಯನ್ನು ಸ್ಮರಿಸಿದ್ದಾರೆ. ಇದೊಂದು "ತಡೆಯಲಾಗದ ಪಯಣ" ಎಂದಿರುವ ಅನಿರುದ್ಧ್, ಸಂಗೀತ, ನೆನಪುಗಳು ಹಾಗೂ ಸ್ಮರಣೀಯ ಕ್ಷಣಗಳ ಬಗ್ಗೆ ಬರೆದುಕೊಂಡಿದ್ದಾರೆ.
ಸಂಗೀತ ನೀಡುವ ಅದೃಷ್ಟ
"15 ವರ್ಷಗಳ ಹಿಂದೆ ಇದೇ ದಿನ ನಮ್ಮ ಮೊದಲ ಹಾಡು ಬಿಡುಗಡೆಯಾಗಿತ್ತು. ಅಂದಿನಿಂದ ಈ ಪಯಣ ನಿರಂತರವಾಗಿ ಸಾಗುತ್ತಿದೆ. 15 ವರ್ಷಗಳ ಸಂಗೀತ, ನೆನಪುಗಳು ಮತ್ತು ಮ್ಯಾಜಿಕ್. ತಮಿಳು, ತೆಲುಗು, ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಕೋಟ್ಯಂತರ ಜನರ ಮನಸ್ಸಿಗೆ ನಮ್ಮ ಹಾಡುಗಳು ತಲುಪಿವೆ. ಸ್ವತಂತ್ರ ಆಲ್ಬಂಗಳು, ಅಂತರರಾಷ್ಟ್ರೀಯ ಕಲಾವಿದರ ಜೊತೆಗಿನ ಕೆಲಸ ಹಾಗೂ ದೇಶದ ಅತಿದೊಡ್ಡ ಬ್ಲಾಕ್ಬಸ್ಟರ್ ಸಿನಿಮಾಗಳಿಗೆ ಸಂಗೀತ ನೀಡುವ ಅದೃಷ್ಟ ಸಿಕ್ಕಿದೆ. ಖ್ಯಾತ ನಿರ್ದೇಶಕರು, ಸ್ಟಾರ್ ನಟರು ಹಾಗೂ ನಿರ್ಮಾಪಕರ ಜೊತೆ ಕೆಲಸ ಮಾಡಿದ್ದು ದೊಡ್ಡ ಗೌರವ" ಎಂದು ಅವರು ಬರೆದುಕೊಂಡಿದ್ದಾರೆ.
ಕನಸಿನಲ್ಲಿ ಮಾತ್ರ ಊಹಿಸಲು ಸಾಧ್ಯ
ತಮ್ಮ ಪೋಸ್ಟ್ನಲ್ಲಿ ವಿದೇಶಿ ಕಲಾವಿದರ ಜೊತೆಗಿನ ಕೆಲಸ ಹಾಗೂ ವಿಶ್ವದಾದ್ಯಂತ ನಡೆದಿರುವ ಲೈವ್ ಕಾನ್ಸರ್ಟ್ಗಳ ಬಗ್ಗೆಯೂ ಅನಿರುದ್ಧ್ ಉಲ್ಲೇಖಿಸಿದ್ದಾರೆ. ಲಕ್ಷಾಂತರ ಅಭಿಮಾನಿಗಳು ತಮ್ಮ ಹಾಡುಗಳಿಗೆ ಧ್ವನಿಯಾಗುವುದನ್ನು ನೋಡಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ. "ಸಾವಿರಾರು ಜನರು ನಮ್ಮ ಹಾಡುಗಳನ್ನು ಹಾಡುವಾಗ ಸಿಗುವ ಪ್ರೀತಿ ಅದ್ಭುತ. ಕಾನ್ಸರ್ಟ್ಗಳ ಹುಚ್ಚು ಮತ್ತು ಸಂಗೀತಕ್ಕೆ ಎಲ್ಲೆಗಳಿಲ್ಲ ಎನ್ನುವ ಭಾವನೆಯನ್ನು ನಾವು ಕನಸಿನಲ್ಲಿ ಮಾತ್ರ ಊಹಿಸಲು ಸಾಧ್ಯ" ಎಂದಿದ್ದಾರೆ.
ಮುಂಬರುವ ಸಿನಿಮಾಗಳ ಬಗ್ಗೆಯೂ ಅವರು ಮಾಹಿತಿ ನೀಡಿದ್ದಾರೆ. 2026ರ ವರ್ಷ ಅದ್ಭುತವಾಗಿರಲಿದೆ ಎಂದಿರುವ ಅವರು, "15 ವರ್ಷಗಳು. ಲೆಕ್ಕವಿಲ್ಲದಷ್ಟು ನೆನಪುಗಳು. ನೂರಾರು ಕನಸುಗಳು. ಈಗ ಮತ್ತೆ ಸ್ಟುಡಿಯೋಗೆ ಹೋಗುತ್ತಿದ್ದೇನೆ, ಇನ್ನಷ್ಟು ಒಳ್ಳೆಯದು ಬರಲಿದೆ. ಇದು ಕೇವಲ ಆರಂಭ" ಎಂದು ಬರೆದುಕೊಂಡಿದ್ದಾರೆ. ಈ ಮೈಲಿಗಲ್ಲು ಅನಿರುದ್ಧ್ ಅವರ ವೈಯಕ್ತಿಕ ಜೀವನದಲ್ಲೂ ವಿಶೇಷವಾಗಿದೆ. ಸನ್ರೈಸರ್ಸ್ ಹೈದರಾಬಾದ್ ಮಾಲೀಕಿ ಕಾವ್ಯಾ ಮಾರನ್ ಜೊತೆ ನವೆಂಬರ್ 11, 2026ರಂದು ಗ್ರೀಸ್ನಲ್ಲಿ ಅವರು ಹಸೆಮಣೆ ಏರಿದ್ದಾರೆ.
ತಮ್ಮ ಮದುವೆಯ ಮೊದಲ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಅನಿರುದ್ಧ್, ಕಾವ್ಯಾ ಅವರನ್ನು "ಒನ್ಸ್ ಇನ್ ಎ ಲೈಫ್ಟೈಮ್" ಎಂದು ಕರೆದಿದ್ದಾರೆ. ಇನ್ನು 2011ರಲ್ಲಿ 'ವೈ ದಿಸ್ ಕೊಲವೆರಿ ಡಿ' ಮೂಲಕ ಬ್ಲಾಕ್ಬಸ್ಟರ್ ಎಂಟ್ರಿ ಕೊಟ್ಟ ಅನಿರುದ್ಧ್, 'ಆಲುಮಾ ಡೋಲುಮಾ', 'ವಾತಿ ಕಮ್ಮಿಂಗ್', 'ಅರಬಿಕ್ ಕುತ್ತು', ಮೇಘಂ ಕರುಕಾತ', 'ನಾ ರೆಡಿ', 'ಹುಕುಮ್', 'ಚಲೇಯಾ', ಮತ್ತು 'ಚುಟ್ಟಮಲ್ಲೆ' ನಂತಹ ಹಿಟ್ ಹಾಡುಗಳನ್ನು ನೀಡಿದ್ದಾರೆ.










