- Home
- Entertainment
- Cine World
- Muzammil Ibrahim: ಕಲಾವಿದರು ನಾಯಿಗಳು, ಕೂತ್ಕೋ ಅಂದ್ರೆ ಕೂತ್ಕೋಬೇಕು ಎಂದಿದ್ದ ಪೂಜಾ ಭಟ್! ನರಕಯಾತನೆ ಬಿಚ್ಚಿಟ್ಟ ನಟ!
Muzammil Ibrahim: ಕಲಾವಿದರು ನಾಯಿಗಳು, ಕೂತ್ಕೋ ಅಂದ್ರೆ ಕೂತ್ಕೋಬೇಕು ಎಂದಿದ್ದ ಪೂಜಾ ಭಟ್! ನರಕಯಾತನೆ ಬಿಚ್ಚಿಟ್ಟ ನಟ!
2007ರ "ಧೋಕಾ" ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ನಿರ್ದೇಶಕಿ ಪೂಜಾ ಭಟ್ ಜೊತೆ ಮಾಡಿದ ಕೆಲಸದಿಂದ ತುಂಬ ಬೇಸರ ಆಗಿದೆ ಎಂದು ಮಾಡೆಲ್, ನಟ ಮುಜಮ್ಮಿಲ್ ಇಬ್ರಾಹಿಂ ಹೇಳಿಕೊಂಡಿದ್ದಾರೆ. ಸಿದ್ಧಾರ್ಥ್ ಕಣ್ಣನ್ ಅವರ ಪಾಡ್‌ಕಾಸ್ಟ್‌ನಲ್ಲಿ ಪೂಜಾ ಭಟ್ ನಡೆದುಕೊಂಡ ರೀತಿ ಸಾಕಷ್ಟು ಬೇಸರ ತಂದಿದೆ ಎಂದು ಹೇಳಿದೆ.

ಮುಜಮ್ಮಿಲ್ ಅವರು ಈ ಬಗ್ಗೆ ಮಾತನಾಡಿ "ಪೂಜಾ ಭಟ್ ಅವರಿಗೆ ನಟರಿಗೆ ಅಗೌರವವನ್ನು ತೋರಿಸುವ ಸ್ವಭಾವವಿತ್ತು. ಮಹೇಶ್ ಭಟ್‌ಗೆ ನನ್ನ ಕಂಡ್ರೆ ತುಂಬ ಇಷ್ಟ. ಆದರೆ ಪೂಜಾ ನನ್ನ ಬಗ್ಗೆ ಸಾಕಷ್ಟು ವಿಷಯ ಹೇಳಿದರು. ಅದರ ಬಗ್ಗೆ ವಿವರಿಸೋದಿಲ್ಲ. ಆದರೆ ಪೂಜಾ ಭಟ್ ಗೌರವದಿಂದ ನೋಡಿಕೊಳ್ಳಲಿಲ್ಲ" ಎಂದು ಹೇಳಿದರು.
“ಶೂಟಿಂಗ್ ಟೈಮ್‌ನಲ್ಲಿ ನಾನು ನರಕವನ್ನೇ ಅನುಭವಿಸಿದೆ. ನಾನು ತುಂಬಾ ಕಷ್ಟಪಟ್ಟೆ, ಆಗ ನಾನು ಯುವಕನಾಗಿದ್ದೆ. ಇದರಿಂದ ಡಿಪ್ರೆಶನ್‌ಗೆ ಹೋದೆ. ನಿತ್ಯವೂ ನನಗೆ ಕೆಟ್ಟ ಕನಸುಗಳು ಬೀಳುತ್ತಿದ್ದವು. ನನ್ನ ರಕ್ಷಣೆ ಮಾಡು ಎಂದು ಅಲ್ಲಾ ಬಳಿ ಬೇಡಿಕೊಳ್ತಿದ್ದೆ" ಎಂದರು.
ಮಹೇಶ್ ಭಟ್‌ಗೆ ಸೆಟ್‌ನಲ್ಲಿ ಏನು ನಡೆಯುತ್ತಿದೆ ಅಂತ ಗೊತ್ತಿದ್ರೂ ಕೂಡ, ಮಧ್ಯಸ್ತಿಕೆ ವಹಿಸಲು ಆಗುತ್ತಿರಲಿಲ್ಲ. ಆ ರೀತಿ ಬಿಹೇವ್ ಮಾಡಬೇಡ ಅಂತ ಪೂಜಾಗೆ ಹೇಳುತ್ತಿದ್ದರು. ಮಹೇಶ್ ಭಟ್ ಇಲ್ಲದಿದ್ದಾಗ ಪೂಜಾ ಮಿತಿ ಮೀರಿ ಬಿಹೇವ್ ಮಾಡ್ತಿದ್ದರು. ಅಲ್ಲಿದ್ದವರು, ಮುಕೇಶ್ ಭಟ್ ಕೂಡ ಪೂಜಾ ಸ್ವಭಾವದ ಬಗ್ಗೆ ಮಾತನಾಡುತ್ತಿದ್ದರು ಎಂದಿದ್ದಾರೆ.
ನಾನು ಮತ್ತೆ ಮಹೇಶ್ ಭಟ್ ಅವರ ಜೊತೆ ಕೆಲಸ ಮಾಡಲು ಹೆದರಿದೆ. ಮಹೇಶ್ ಭಟ್ ಅವರು 'ರಾಜ್ 2' ಸಿನಿಮಾಕ್ಕೆ ಆಯ್ಕೆ ಮಾಡಬೇಕು ಅಂತಿದ್ದರು. ಸೋನಿ ರಜದಾನ್ ಕೂಡ ಸಿನಿಮಾಗಳಲ್ಲಿ ನಟಿಸು ಅಂದರು. ಆದರೆ ನಾನು ಎಲ್ಲವನ್ನು ರಿಜೆಕ್ಟ್ ಮಾಡಿದೆ” ಎಂದಿದ್ದಾರೆ.
“ಈ ಸಿನಿಮಾ ರಿಲೀಸ್ ಆದ ಬಳಿಕ ಮಾಧ್ಯಮಗಳಲ್ಲಿ ಪೂಜಾ ಭಟ್ ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು. ನಾನು ಯಾವುದಕ್ಕೂ ಪ್ರತಿಕ್ರಿಯೆ ಕೊಡಲಿಲ್ಲ. ನನ್ನನ್ನು ಬಹಿಷ್ಕಾರ ಮಾಡ್ತಾರೆ ಎಂದು ನಾನು ಭಯಪಟ್ಟಿದ್ದೆ” ಎಂದು ಹೇಳಿದ್ದಾರೆ.
“ಕಲಾವಿದರು ನಾಯಿಗಳು. ನಾನು ಕೂತ್ಕೋ ಅಂದ್ರೆ ಕೂತ್ಕೋಬೇಕು, ನಿಂತ್ಕೋ ಅಂದ್ರೆ ನಿಂತ್ಕೋಬೇಕು ಅಂತ ಪೂಜಾ ಭಟ್ ಹೇಳಿದ್ದರು. ಜಾನ್ ಅಬ್ರಹಾಂ, ಡಿನೋಗೂ ಕೂಡ ಪೂಜಾ ಹೀಗೆ ಮಾಡಿದ್ದರು” ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

