ಸೀಟ್‌ ಬೆಲ್ಟ್‌ ವಿಚಾರವಾಗಿ ಸಚಿವ ಗಡ್ಕರಿಗೆ ಟಾಂಗ್ ಕೊಟ್ಟ ಪೂಜಾ ಭಟ್. ರಸ್ತೆ ಸರಿ ಇದ್ದರೆ ಅಪಘಾತ ಕಡಿಮೆ ಎಂದ ನೆಟ್ಟಿಗರು...

ಬಾಲಿವುಡ್ ಜನಪ್ರಿಯ ನಿರ್ದೇಶಕಿ ಪೂಜಾ ಭಟ್‌ ಕಾರಿ ಚಲಿಸುವಾಗ ಸೀಟ್‌ ಬೆಲ್ಟ್‌ ಧರಿಸುವುದು ಎಷ್ಟು ಮುಖ್ಯ, ಅದರ ಮಹತ್ವವೇನು ಎಂದು ತಿಳಿಸುವುದರ ಜೊತೆಗೆ ರಸ್ತೆ ಹೊಂಡಗಳ ಬಗ್ಗೆನೂ ಚರ್ಚೆ ಮಾಡಿದ್ದಾರೆ. ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ಸೈರಸ್‌ ಮಿಸ್ಟ್ರಿ ಅಪಘಾತಕ್ಕೆ ಬಲಿಯಾದ ನಂತರ ಸೀಟ್‌ಬೆಲ್ಟ್‌ ಪ್ರಾಮುಖ್ಯತೆ ಬಗ್ಗೆ ದೇಶದಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ. ಅದರಲ್ಲೂ ಹಿಂಬದಿ ಸೀಟುಗಳಲ್ಲಿ ಕುಳಿತರೂ ಸೀಟ್‌ಬೆಲ್ಟ್‌ ಎಷ್ಟು ಪ್ರಮುಖ ಅನ್ನೋದನ್ನು ಈ ಘಟನೆಯೇ ನಮಗೆ ತಿಳಿ ಹೇಳುತ್ತದೆ. 

ಪೂಜಾ ಭಟ್ ಟ್ವೀಟ್:

'ಎಲ್ಲರೂ ಸೀಟ್‌ಬೆಲ್ಟ್‌ ಮತ್ತು ಏರ್‌ಬ್ಯಾಗಳ ಬಗ್ಗೆ ದೊಡ್ಡ ಚರ್ಚೆ ಮಾಡುತ್ತಿದ್ದಾರೆ. ಇದು ಮುಖ್ಯವೇ? ಹೌದು ಮುಖ್ಯನೇ. ಆದರ ಅದಕ್ಕಿಂತ ಮುಖ್ಯವಾದದ್ದು ರಸ್ತೆ ಹೊಂಡಗಳನ್ನು ಸರಿ ಮಾಡುವುದು. ರಸ್ತೆ, ಹೈವೇ, ಫ್ರೀವೇ ಎಲ್ಲವೂ ಸುರಕ್ಷಿತವಾಗಿರಬೇಕು ಅಂದರೆ ಸರಿಯಾದ ಸ್ಟ್ಯಾಂಡರ್ಡ್‌ ಮೆಟೀರಿಯಲ್‌ಗಳನ್ನು ಬಳಸಿ ಮಾಡಬೇಕು. ಮಾಡಿ ಬಿಡುವುದಲ್ಲ ಅದನ್ನು ಸರಿಯಾಗಿ ನಿರ್ಮಿಸಿ ಕಾಪಾಡಿಕೊಳ್ಳಬೇಕು. ಅದ್ಧೂರಿಯಾಗಿ ಕೈಯಲ್ಲಿ ಕೀ ಹಿಡಿದು ಉದ್ಘಾಟನೆ ಮಾಡಿ ಸುಮ್ಮನಾಗುವುದಲ್ಲ' ಎಂದು ಪೂಜಾ ಭಟ್ ಟ್ವೀಟ್ ಮಾಡಿದ್ದಾರೆ.

ಪೂಜಾ ಭಟ್ ಮಾತಿಗೆ ನೆಟ್ಟಿಗರು ಸಾಥ್ ಕೊಟ್ಟಿದ್ದಾರೆ. 'ನಿರ್ದೇಶಕಿ ಪೂಜಾ ಭಟ್ ನೀವು ಸರಿಯಾಗಿ ಹೇಳುತ್ತಿದ್ದೀರಿ. ನಮ್ಮಲ್ಲಿ ಹೆಚ್ಚಿಗೆ ಆಕ್ಸಿಡೆಂಟ್ ಆಗಲು ಕಾರಣವೇ ಕಳಪೆ ರಸ್ತೆಗಳು ಇದರ ಬಗ್ಗೆ ಚಿಂತಿಸುವವರು ಯಾರೂ ಇಲ್ಲ. ಸೀಟ್‌ಬೆಲ್ಟ್‌ ತುಂಬಾನೇ ಮುಖ್ಯ ಆದರೆ ಅದಕ್ಕೂ ಮುಖ್ಯವಾಗಿರುವುದು ರಸ್ತೆ ಕಟ್ಟುವಾಗ ಮಾಡಬೇಕಿರುವ ಪ್ಲ್ಯಾನಿಂಗ್‌ಗಳು' ಎಂದು ಕಾಮೆಂಟ್ ಮಾಡಿದ್ದಾರೆ. 

Scroll to load tweet…

ಸೈರಸ್‌ ಮಿಸ್ಟ್ರಿ ಸಾವು ಮತ್ತು ಪೂಜಾ ಭಟ್ ಟ್ವೀಟ್ ನಂತರ ನಟಿ ದಿಯಾ ಮಿರ್ಜಾ ಕೂಡ ಟ್ವೀಟ್ ಮಾಡಿದ್ದಾರೆ. 'ಪ್ರಯಾಣ ಮಾಡುವಾಗ ನೀವೆಲ್ಲರೂ ಸೀಟ್‌ ಬೆಲ್ಟ್‌ ಧರಿಸಬೇಕು ಎಂದು ಮನವಿ ಮಾಡಿಕೊಳ್ಳುವೆ. ನಿಮ್ಮ ಮಕ್ಕಳಿಗೆ ಸೀಟ್‌ಬೆಲ್ಟ್‌ ಬಗ್ಗೆ ಈಗಲೇ ತಿಳಿಸಿ ಕೊಡಿ. ಜೀವ ಉಳಿಸೋಣ' ಎಂದು ಟ್ವೀಟ್ ಮಾಡಿದ್ದಾರೆ. 'ಸೆಲೆಬ್ರಿಟಿಗಳು ಸಣ್ಣ ಪುಟ್ಟ ವಿಚಾರಕ್ಕೆ ಅಥವಾ ಜಗಳ ಮಾಡುವುದಕ್ಕೆ ಸೋಷಿಯಲ್ ಮೀಡಿಯಾ ಬಳಸುವುದಲ್ಲ ಈ ರೀತಿ ಮುಖ್ಯವಾದ ವಿಚಾರಗಳನ್ನು ಹರಡುವುದಕ್ಕೂ ಬಳಸಬೇಕು ನೀವೇ ಸರಿ' ಎಂದು ಕಾಮೆಂಟ್ ಮಾಡಿದ್ದಾರೆ.

ಗಟ್ಕರಿ ಹೇಳಿಕೆ: 

'ಸೈರಸ್ ಮಿಸ್ತ್ರಿ ಅವರ ಅಪಘಾತವು ಅತ್ಯಂತ ದುರದೃಷ್ಟಕರ ಮತ್ತು ಅವರು ನನಗೆ ಉತ್ತಮ ಸ್ನೇಹಿತರಾಗಿದ್ದರು. ಇದು ದೇಶಕ್ಕೆ ದೊಡ್ಡ ಆಘಾತವಾಗಿದೆ. ಸಮಸ್ಯೆಯೆಂದರೆ ದೇಶದಲ್ಲಿ ಪ್ರತಿ ವರ್ಷ 5 ಲಕ್ಷ ಅಪಘಾತಗಳು ಮತ್ತು ಒಂದು ಲಕ್ಷ ಸಾವುಗಳು ಸಂಭವಿಸುತ್ತಿವೆ.ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಮಾನದಂಡಗಳು ಮತ್ತು ಯಶಸ್ವಿ ಅಭ್ಯಾಸಗಳ ಬಗ್ಗೆ ಯಾವುದೇ ರಾಜಿ ಇಲ್ಲ, ಈ ಅಹಮದಾಬಾದ್-ಮುಂಬೈ ಹೆದ್ದಾರಿ ತುಂಬಾ ಅಪಾಯಕಾರಿ. ನಾನು ಆ ಹೆದ್ದಾರಿಯ ಕೆಲಸವನ್ನು ಪೂರ್ಣಗೊಳಿಸಿದ್ದೇನೆ. ಪ್ರಸ್ತುತ ಪ್ಯಾಸೆಂಜರ್ ಕಾರ್ (ಪಿಸಿ) 1.25 ಲಕ್ಷಕ್ಕೂ ಹೆಚ್ಚು ಬಳಸುತ್ತದೆ.ಇಲ್ಲಿ ನಮಗೆ ಜನರಿಂದ ಸಹಕಾರ ಬೇಕು’ ಎಂದ ಅವರು, ‘ಹಿಂದೆ ಕುಳಿತುಕೊಳ್ಳುವವರೂ ಸೀಟ್‌ ಬೆಲ್ಟ್‌ ಧರಿಸಬೇಕು, ಮನಸ್ಥಿತಿ ಬದಲಾಗಬೇಕು’ ಎಂದರು. 20,000 ಪಿಸಿ ಬಳಕೆಯ ನಂತರ ಆರು ಲೇನ್ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸುವ ಅವಶ್ಯಕತೆಯಿದೆ. ಆದರೆ ಪ್ರಸ್ತುತ ಬಳಕೆಯು ತುಂಬಾ ಹೆಚ್ಚಾಗಿದೆ ಮತ್ತು ಕೇಂದ್ರವು ಮಲ್ಟಿ ಲೇನ್ ಫ್ಲೈಓವರ್‌ಗಳನ್ನು ಅಭಿವೃದ್ದೀಪಡಿಸುವ ಹೊಸ ಯೋಜನೆಯನ್ನು ಪ್ರಾರಂಭಿಸಿದೆ ಎಂದು ಗಡ್ಕರಿ ಹೇಳಿದರು.

ಸೀಟ್‌ಬೆಲ್ಟ್ ಅಲಾರಂ ನಿಷ್ಕ್ರಿಯಗೊಳಿಸುವ ಸಾಧನಗಳ ಮಾರಾಟ ನಿಲ್ಲಿಸಲು Amazonಗೆ ಕೇಂದ್ರ ಸರ್ಕಾರ ಸೂಚನೆ

 "ನಮ್ಮ ಬಹಳಷ್ಟು ಕಂಪನಿಗಳು ತಮ್ಮ ವಾಹನಗಳನ್ನು ಆರು ಏರ್ ಬ್ಯಾಗ್‌ಗಳೊಂದಿಗೆ ಭಾರತದಿಂದ ರಫ್ತು ಮಾಡುತ್ತಿವೆ. ಆದರೆ ಅದೇ ವಾಹನಗಳನ್ನು ಭಾರತದಲ್ಲಿ ಮಾರಾಟ ಮಾಡುವಾಗ ಕೇವಲ ನಾಲ್ಕು ಏರ್ ಬ್ಯಾಗ್‌ಗಳೊಂದಿಗೆ ಮಾರಾಟ ಮಾಡಲಾಗುತ್ತಿದೆ. ನಮ್ಮ ದೇಶದ ಜನರ ಜೀವಕ್ಕೆ ಮೌಲ್ಯವಿಲ್ಲವೇ" ಎಂದು ಗಡ್ಕರಿ ಪ್ರಶ್ನಿಸಿದರು. ದೋಷಪೂರಿತ ರಸ್ತೆ ಎಂಜಿನಿಯರಿಂಗ್‌ನ ಬಗ್ಗೆಯೂ ಗಮನಹರಿಸಬೇಕು ಎಂದ ಸಚಿವರು "ರಸ್ತೆಗಳ ಡಿಪಿಆರ್ ದೋಷಪೂರಿತವಾಗಿದ್ದು, ಇದೀಗ ಸಾಕಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಲೋಪದೋಷಗಳಿಗೆ ಸಂಬಂಧಿಸಿದಂತೆ ಹಲವು ನಿರ್ಧಾರಗಳನ್ನು ಕೈಗೊಂಡು ಬ್ಲಾಕ್ ಸ್ಪಾಟ್ ಗಳನ್ನು ಗುರುತಿಸುತ್ತಿದ್ದೇವೆ" ಎಂದರು