- Home
- Entertainment
- Cine World
- ನಟ ಧನುಷ್ ಜೊತೆಗೆ ಮದುವೆ ಗಾಸಿಪ್; ಮಾಜಿ ಬಾಯ್‌ಫ್ರೆಂಡ್ ಜೊತೆಗಿನ ಘಟನೆ ಬಿಚ್ಚಿಟ್ಟ ನಟಿ ಮೃಣಾಲ್ ಠಾಕೂರ್!
ನಟ ಧನುಷ್ ಜೊತೆಗೆ ಮದುವೆ ಗಾಸಿಪ್; ಮಾಜಿ ಬಾಯ್‌ಫ್ರೆಂಡ್ ಜೊತೆಗಿನ ಘಟನೆ ಬಿಚ್ಚಿಟ್ಟ ನಟಿ ಮೃಣಾಲ್ ಠಾಕೂರ್!
ನಟಿ ಮೃಣಾಲ್ ಠಾಕೂರ್, ತಾವು ಹೃತಿಕ್ ರೋಷನ್ ಜೊತೆ ನಟಿಸಿದ್ದಕ್ಕೆ ತನ್ನ ಮಾಜಿ ಪ್ರಿಯಕರ ಅಭದ್ರತೆಯಿಂದ 17 ಕೆಜಿ ತೂಕ ಇಳಿಸಿಕೊಂಡಿದ್ದ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಅದು ತನ್ನ ಬೇಡಿಕೆಯಾಗಿರಲಿಲ್ಲ, ಬದಲಿಗೆ ಆತನ ಅಭದ್ರತೆಯಾಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.

ನಾನು ಹೃತಿಕ್ ರೋಷನ್ ಜೊತೆ ನಟಿಸಿದ್ದಕ್ಕೆ ತನ್ನ ಮಾಜಿ ಪ್ರಿಯಕರನಿಗೆ ಸಹಿಸಲಾಗಲಿಲ್ಲ. ಹೀಗಾಗಿ, ಆತ 17 ಕೆಜಿ ತೂಕ ಇಳಿಸಿಕೊಂಡಿದ್ದ ಅಂತ ನಟಿ ಮೃಣಾಲ್ ಠಾಕೂರ್ ತನ್ನ ಮಾಜಿ ಬಾಯ್‌ಫ್ರೆಂಡ್ ಜೊತೆಗೆ ನಡೆದ ಸೀಕ್ರೆಟ್ ಒಂದನ್ನು ಬಿಚ್ಚಿಟ್ಟಿದ್ದಾರೆ. ತಾವು ಲಾಂಗ್ ಡಿಸ್ಟೆನ್ಸ್ ರಿಲೇಷನ್‌ಶಿಪ್‌ನಲ್ಲಿದ್ದ ಕಾರಣ, ತಾನು ಸುಂದರ ನಟರ ಜೊತೆ ಸಮಯ ಕಳೆಯುತ್ತಿದ್ದೇನೆ ಎಂದು ಆತ ತಪ್ಪಾಗಿ ಭಾವಿಸಿದ್ದ ಅಂತ ಮೃಣಾಲ್ ಹೇಳಿದ್ದಾರೆ.
'ನನ್ನ ಕೆರಿಯರ್ ಆರಂಭದಲ್ಲಿ ನಾನು ಹೃತಿಕ್ ರೋಷನ್ ಮತ್ತು ಶಾಹಿದ್ ಕಪೂರ್ ಜೊತೆ ನಟಿಸಿದ್ದೆ. ನಾನು ಲಾಂಗ್ ಡಿಸ್ಟೆನ್ಸ್ ಸಂಬಂಧಗಳನ್ನು ನಂಬುತ್ತೇನೆ, ಆಗ ನಮ್ಮ ಕೆಲಸದ ಮೇಲೂ ಗಮನ ಕೊಡಬಹುದು. ಸ್ಕ್ಯಾಂಡಿನೇವಿಯಾ ಮೂಲದ ನನ್ನ ಬಾಯ್‌ಫ್ರೆಂಡ್, ನಾನು ಹ್ಯಾಂಡ್ಸಮ್ ಹುಡುಗರ ಜೊತೆ ಸಮಯ ಕಳೆಯುತ್ತಿದ್ದೇನೆ, ಅವರ ಜೊತೆ ನಟಿಸುತ್ತಿದ್ದೇನೆ ಎಂದು ತಪ್ಪು ತಿಳಿದುಕೊಂಡಿದ್ದನು. ಹಾಗಾಗಿ, ಅವರ ಹಾಗೆ ಆಗಬೇಕು ಅಂತ ವರ್ಕೌಟ್ ಮಾಡಲು ಶುರು ಮಾಡಿದ' ಎಂದು ಮೃಣಾಲ್ ವಿವರಿಸಿದ್ದಾರೆ.
'ಏಕಾಏಕಿ ಭಾರೀ ವರ್ಕೌಟ್ ಮಾಡುವ ಮೂಲಕ ಆತ ಸುಮಾರು 17 ಕೆಜಿ ತೂಕ ಇಳಿಸಿಕೊಂಡ. ನಂತರ ಒಂದು ಹಂತದಲ್ಲಿ ವರ್ಕೌಟ್ ನಿಲ್ಲಿಸಿ, ತಿನ್ನಲು ಶುರು ಮಾಡಿದ. ಆಗ ಸುಮಾರು 20 ಕೆಜಿ ತೂಕ ಹೆಚ್ಚಿಸಿಕೊಂಡ. ನಾನು ನಟಿಸುವವರ ಹೀರೋಗಳ ಜೊತೆಗೆ ಸ್ಪರ್ಧಿಸಿ ಸಾಕಾಯಿತು ಅಂತ ಆತ ಹೇಳಿದ್ದನು. ಆದರೆ, ಆತ ನನಗೆ ಯಾವತ್ತೂ ನೀನು ತೂಕ ಇಳಿಸಿಕೊ ಅಂತ ಒಂದು ಮಾತನ್ನೂ ಕೇಳಿರಲಿಲ್ಲ. ಅದು ಅವನ ಅಭದ್ರತೆ ಆಗಿತ್ತು. ನನಗೆ ಮಸಲ್ಸ್ ಇರುವ ಹುಡುಗನೇ ಬೇಕು ಅನ್ನೋ ರೀತಿ ನಾನು ಯಾವತ್ತೂ ಅವನಿಗೆ ಫೀಲ್ ಮಾಡಿಸಿರಲಿಲ್ಲ' ಎಂದು ಮೃಣಾಲ್ ಠಾಕೂರ್ ಸ್ಪಷ್ಟಪಡಿಸಿದ್ದಾರೆ.
ತಮ್ಮ ಹೊಸ ಸಿನಿಮಾ 'ದೋ ದೀವಾನೇ ಶಹರ್ ಮೇಂ' ಪ್ರಚಾರದ ವೇಳೆ ಮೃಣಾಲ್ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ಸಿದ್ಧಾಂತ್ ಚತುರ್ವೇದಿ ನಾಯಕನಾಗಿ ನಟಿಸುತ್ತಿದ್ದಾರೆ. ಪ್ರೀತಿ ಅಂದರೆ 'ರೀ-ಪೇರೆಂಟಿಂಗ್' ಇದ್ದ ಹಾಗೆ ಅಂತ ಮೃಣಾಲ್ ಇತ್ತೀಚೆಗೆ ಹೇಳಿದ್ದರು. ಪ್ರೀತಿಯಲ್ಲಿರುವವರು ಪರಸ್ಪರ ಬೆಳೆಸುತ್ತಾರೆ. ಇಬ್ಬರ ನಡುವೆ ಈಡಾಗೋ ಇರಬಾರದು, ಬರೀ ಪ್ರೀತಿ ಮಾತ್ರ ಇರಬೇಕು ಎನ್ನುವ ಸ್ಥಿತಿಗೆ ಸಂಬಂಧಗಳು ಬೆಳೆಯಬೇಕು ಅಂತಾನೂ ಮೃಣಾಲ್ ಹೇಳಿದ್ದಾರೆ.
ಇನ್ನು ದಕ್ಷಿಣ ಭಾರತದಲ್ಲಿ ಕಮಲ್ ಹಾಸನ್ ಮಗಳೊಂದಿಗೆ ಮದುವೆಯಾಗಿ ಡಿವೋರ್ಸ್ ನೀಡಿದ್ದ ನಟ ಧನುಷ್ ಅವರೊಂದಿಗೆ ನಟಿ ಮೃಣಾಲ್ ಠಾಕೂರ್ ಡೇಟಿಂಗ್ ಮಾಡುತ್ತಿದ್ದಾರೆ. ಧನುಷ್ ಮತ್ತು ಮೃಣಾಲ್ ಠಾಕೂರ್ ಮದುವೆ ಮಾಡಿಕೊಂಡಿದ್ದಾರೆ ಎನ್ನುವ ಗಾಸಿಪ್ ಕೂಡ ಭಾರೀ ಹರಿದಾಡುತ್ತಿವೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಕೇವಲ ಗಾಸಿಪ್ ಆಗಿಯೇ ಸುದ್ದಿಗಳು ಹರಿದಾಡುತ್ತಿವೆ. ಇದೇ ಸಂದರ್ಭದಲ್ಲಿ ತನ್ನ ಮಾಜಿ ಗೆಳೆಯನ ಬಗ್ಗೆ ವಿಚಾರವೊಂದನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಆದರೆ, ಅವರಿಬ್ಬರೂ ಭೇಟಿಯೇ ಆಗಿಲ್ಲ ಎಂಬುದು ಕೂಡ ಇಲ್ಲಿ ಮೇಲ್ನೋಟಕ್ಕೆ ಕಂಡುಬರುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

