ಪತಿಯ ತುಟಿಗೆ ಚುಂಬಿಸಿದ ಮೌನಿ ರಾಯ್; ಕೆಜಿಎಫ್ ಸುಂದರಿಯ ರೊಮ್ಯಾಂಟಿಕ್ ಫೋಟೋ ವೈರಲ್
ನಾಗಿನ್ ಖ್ಯಾತಿಯ ಮೌನಿ ರಾಯ್ ಇತ್ತೀಚಿನ ದಿನಗಳಲ್ಲಿ ಸಿಕ್ಕಾಪಟ್ಟೆ ಹಾಟ್ ಅಂಡ್ ಬೋಲ್ಡ್ ಆಗಿದ್ದಾರೆ. ಬಿಕಿನಿಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ನಟಿ ಇದೀಗ ಪತಿ ಜೊತೆ ರೊಮ್ಯಾಂಟಿಕ್ ಫೋಟೋ ಶೇರ್ ಮಾಡಿದ್ದಾರೆ. ಅಂದಹಾಗೆ ನಟಿ ಮೌನಿ ರಾಯ್ ಪತಿಯ ಹುಟ್ಟುಹಬ್ಬ ಸಂಭ್ರಮದಲ್ಲಿದ್ದಾರೆ. ವಿದೇಶದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಸೂರಜ್ ನಂಬಿಯರ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ನಾಗಿನ್ ಖ್ಯಾತಿಯ ಮೌನಿ ರಾಯ್ ಇತ್ತೀಚಿನ ದಿನಗಳಲ್ಲಿ ಸಿಕ್ಕಾಪಟ್ಟೆ ಹಾಟ್ ಅಂಡ್ ಬೋಲ್ಡ್ ಆಗಿದ್ದಾರೆ. ಬಿಕಿನಿಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ನಟಿ ಇದೀಗ ಪತಿ ಜೊತೆ ರೊಮ್ಯಾಂಟಿಕ್ ಫೋಟೋ ಶೇರ್ ಮಾಡಿದ್ದಾರೆ. ಅಂದಹಾಗೆ ನಟಿ ಮೌನಿ ರಾಯ್ ಪತಿಯ ಹುಟ್ಟುಹಬ್ಬ ಸಂಭ್ರಮದಲ್ಲಿದ್ದಾರೆ. ವಿದೇಶದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಸೂರಜ್ ನಂಬಿಯರ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ವಿದೇಶದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿರುವ ನಟಿ ಮೌನಿ ರಾಯ್ ದಂಪತಿ ಒಂದಿಷ್ಟು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಇಬ್ಬರು ಬಿಳಿ ಬಣ್ಣದ ಉಡುಪಿನಲ್ಲಿ ಕಾಣಿಸಿಕೊಂಡಿರುವ ಈ ದಂಪತಿ ರೊಮ್ಯಾಂಟಿಕ್ ಫೋಟೋ ಶೇರ್ ಮಾಡಿದ್ದಾರೆ. ಪತಿಯ ತುಟಿಗೆ ಮುತ್ತಿಡುತ್ತಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಕ್ಯಾಮರಾ ಮುಂದೆ ತರಹೇವಾರಿ ಪೋಸ್ ನೀಡಿರುವ ಮೌನಿ ದಂಪತಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಮೌನಿ ರಾಯ್ ಮತ್ತು ಸೂರಜ್ ಇಬ್ಬರ ಫೋಟೋಗಳಿಗೆ ನೆಟ್ಟಿಗರಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಹರಿದುಬಂದಿದೆ. ಅನೇಕ ಸಿನಿ ಗಣ್ಯರು ವಿಶ್ ಮಾಡುತ್ತಿದ್ದಾರೆ. ಮೌನಿ ರಾಯ್ ಪತಿ ಜೊತೆಗಿರುವ ಚುಂಬನದ ಫೋಟೋ ಹಂಚಿಕೊಂಡು ಪ್ರೀತಿಯ ವಿಶ್ ಮಾಡಿದ್ದಾರೆ.
ಪತಿಗೆ ಪ್ರೀತಿಯ ವಿಶ್ ಮಾಡಿರುವ ಮೌನಿ ರಾಯ್, ನನ್ನ ಜೀವನದ ಬೆಳಕಿಗೆ ಹುಟ್ಟುಹಬ್ಬ ಶುಭಾಶಯಗಳು. ವಿಶ್ವದ ಅತ್ಯಂತ ಮುದ್ದು ಮತ್ತು ಚುಂಬನ ನೀಡುವನು ನೀನು. ನನ್ನ ಎಲ್ಲವೂ ನೀವು, ನನ್ನ ಜೀವನದ ಭಾಗ ನೀನು. ನಿನ್ನನ್ನು ಪಡೆಯಲು ನಾನು ತುಂಬಾ ಅದೃಷ್ಟಶಾಲಿ' ಎಂದು ವಿಶ್ ಮಾಡಿದ್ದರು.
ಅಂದಹಾಗೆ ಮೌನಿ ಹೆಚ್ಚಾಗಿ ಫೋಟೋಶೂಟ್ ಮೂಲವೇ ಸದ್ದು ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ಹಾಟ್ ಫೋಟೋಗಳನ್ನು ಶೇರ್ ಮಾಡಿ ಕೆಜಿಎಫ್ ಸುಂದರಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದರು. ಬೀಚ್ ನಲ್ಲಿ ಬೆತ್ತಲಾಗಿರುವ ಫೋಟೋವನ್ನು ಹಂಚಿಕೊಂಡಿದ್ದರು. ಮೌನಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಮೌನಿ ನಟಿಸಿದ್ದ ಸಿನಿಮಾಗಳ ಸಂಖ್ಯೆ ಕಡಿಮೆ. ಆದರೂ ಸಿಕ್ಕಾಪಟ್ಟೆ ಖ್ಯಾತಿಗಳಿಸಿದ್ದಾರೆ. ಕೆಜಿಎಫ್-1 ಸಿನಿಮಾದ ಗಲಿ ಗಲಿ..ಹಾಡಿಗೆ ರಾಕಿಂಗ್ ಸ್ಟಾರ್ ಯಶ್ ಜೊತೆ ಹೆಜ್ಜೆ ಹಾಕಿದ್ದರು. ಈ ಹಾಡು ಮೌನಿಗೆ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿತ್ತು. ಬಳಿಕ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಸದ್ಯ ಮೌನಿ ರಾಯ್ ಅಯಾನ್ ಮುಖರ್ಜಿ ನಿರ್ದೇಶನದ 'ಬ್ರಹ್ಮಾಸ್ತ್ರ'ದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದರಲ್ಲಿ ಅಮಿತಾಬ್ ಬಚ್ಚನ್ ಮತ್ತು ನಾಗಾರ್ಜುನ ಅಕ್ಕಿನೇನಿ ಮುಂತಾದ ನಟರು ಸಹ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಸೆಪ್ಟೆಂಬರ್ 9ರಂದು ರಿಲೀಸ್ ಆಗುತ್ತಿದೆ.
mouni roy
ಸಿನಿಮಾ ಹೆಚ್ಚಾಗಿ ಮೌನಿ ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು. ನಾಗಿನ್ ಸೀರಿಸ್ ಮೌನಿ ವೃತ್ತಿ ಜೀವನದ ದಿಕ್ಕನ್ನೇ ಬದಲಾಯಿಸಿತು. ನಾಗಿನ್ ಧಾರಾವಾಹಿಯ 3 ಸೀರಿಸ್ ನಲ್ಲಿ ಮೌನಿ ಮಿಂಚಿದ್ದಾರೆ. ಸದ್ಯ ಕಿರುತೆರೆಯಲ್ಲಿ ಡಾನ್ಸ್ ರಿಯಾಲಿಟಿ ಶೋನ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.