- Home
- Entertainment
- Cine World
- ಸೂಪರ್ ಹಿಟ್ ಸಿನಿಮಾಗಳಲ್ಲಿ ವೈರಲ್ ಆದ Iconic Destinations ನಮ್ಮ ದೇಶದಲ್ಲೇ ಇವೆ ಅಂದ್ರೆ ನಂಬ್ತೀರಾ?
ಸೂಪರ್ ಹಿಟ್ ಸಿನಿಮಾಗಳಲ್ಲಿ ವೈರಲ್ ಆದ Iconic Destinations ನಮ್ಮ ದೇಶದಲ್ಲೇ ಇವೆ ಅಂದ್ರೆ ನಂಬ್ತೀರಾ?
ಭಾರತದ ಸೂಪರ್ ಹಿಟ್ ಸಿನಿಮಾಗಳಲ್ಲಿ ತೋರಿಸಲಾಗಿರುವ ಕೆಲವು ತಾಣಗಳನ್ನು ನೋಡಿ ನೀವು ವಿದೇಶ ಅಂದುಕೊಂಡಿರಬಹುದು. ಆದರೆ ಈ ವೈರಲ್ ದೃಶ್ಯಗಳು ಶೂಟಿಂಗ್ ಆಗಿರುವ Iconic Destinations ನಮ್ಮ ಭಾರತದಲ್ಲೇ ಇವೆ. ಅವು ಎಲ್ಲಿವೆ? ಎಲ್ಲಾ ವಿವರ ಇಲ್ಲಿದೆ.
ಬಾಹುಬಲಿ
ದೇಶದ ಬ್ಲಾಕ್ ಬಸ್ಟರ್ ಸಿನಿಮಾ ಬಾಹುಬಲಿ ಸಿನಿಮಾದಲ್ಲಿ ಪ್ರಭಾಸ್ ಶಿವಲಿಂಗವನ್ನು ಎತ್ತಿ ತರುವ ದೃಶ್ಯ ನೆನಪಿದೆಯೇ? ಆ ಜಲಪಾತ ಇರೋದು ಕೇರಳದಲ್ಲಿ. ಅದು ಅತಿರಾಪಳ್ಳಿ ಜಲಪಾತ. ಇದನ್ನು ಭಾರತದ ನಯಾಗರ ಫಾಲ್ಸ್ ಎಂದು ಕರೆಯಲಾಗುತ್ತದೆ.
ಕಾಂತಾರ
ಕಾಂತಾರ ಚಿತ್ರದಲ್ಲಿ ಕಂಡು ಬಂದಂತಹ ಆ ಕಾಡುಗಳು ಮತ್ತು ಜಲಪಾತಗಳು ಯಾವುದೂ ಸಹ ವಿಎಫೆಕ್ಸ್ ಅಲ್ಲ. ಅವೆಲ್ಲವೂ ಕುಂದಾಪುರದ ಕಾಡುಗಳಲ್ಲಿ ಇರುವಂತಹ ಸುಂದರ ಜಲಪಾತಗಳಲ್ಲಿ ಶೂಟಿಂಗ್ ಮಾಡಲಾಗಿದೆ.
ಸಂಜಯ್ ಲೀಲಾ ಬನ್ಸಾಲಿ
ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ಮಾಡಿರುವ ಅದೆಷ್ಟೋ ಐತಿಹಾಸಿಕ ಕಥೆಗಳನ್ನು ಒಳಗೊಂಡ ಸಿನಿಮಾಗಳಲ್ಲಿ ತೋರಿಸಲಾಗುವ ಆ ರಾಜಮಹಲ್ ಇರುವುದು ಗುಜರಾತಿನಲ್ಲಿ. ಇದು ಐತಿಹಾಸಿಕ ವಿಜಯ ವಿಲಾಸ ಅರಮನೆ, ಇದು ಮಾಂಡವಿಯಲ್ಲಿದೆ.
ಚೆನ್ನೈ ಎಕ್ಸ್ ಪ್ರೆಸ್
ಚೆನ್ನೈ ಎಕ್ಸ್ ಪ್ರೆಸ್ ಸಿನಿಮಾದಲ್ಲಿ ಕಾಣಿಸಿಕೊಂಡ ರೈಲ್ವೆ ಟ್ರಾಕ್ಸ್ ಜಲಪಾತ ಎಲ್ಲವೂ ನಿಜ. ಇದು ಧೂದ್ ಸಾಗರ್ ಫಾಲ್ಸ್ ದೃಶ್ಯ. ಇದು ದೇಶದ ಒಂದು ಸುಂದರವಾದ ರೈಲ್ವೇ ಮಾರ್ಗವಾಗಿದೆ.
ತುಂಬದ್
ಜನಮೆಚ್ಚಿದ ಹಾರರ್ ಸಿನಿಮಾದಲ್ಲಿ ಕಾಣಿಸಿಕೊಂಡ ಕೋಟೆ ಯಾವುದೇ ಸೆಟ್ ಅಲ್ಲ, ಇದು ಮಹಾರಾಷ್ಟ್ರದ ಬಳಿ ಇರುವಂತಹ ಒಂದು ಹಳೆಯದಾದ ಒಂದು ಕೋಟೆಯಾಗಿದೆ. ಈ ದೃಶ್ಯವು ಸಿನಿಮಾದಲ್ಲಿ ವಿಚಿತ್ರ ಭಯವನ್ನು ನೀಡಿತ್ತು.
ಹೈದರ್
ಹೈದರ್ ಸಿನಿಮಾದಲ್ಲಿ ಕ್ಲೈಮಾಕ್ಸ್ ದೃಶ್ಯ ಶೂಟಿಂಗ್ ಆಗಿರುವಂತಹ ತಾಣ ಕಾಶ್ಮಿರದಲ್ಲಿರುವ ಮಾರ್ತಾಂಡ ಸೂರ್ಯ ದೇವಸ್ಥಾನದಲ್ಲಿ. ಈಗ ಅಳಿದುಳಿದ ಸ್ಥಿತಿಯಲ್ಲಿರುವ ಈ ತಾಣ 8ನೇ ಶತಮಾನದ್ದು ಎನ್ನಲಾಗಿದೆ.
ಭೂಲ್ ಭುಲಯ್ಯ
ಅಕ್ಷಯ್ ಕುಮಾರ್ ಅಭಿನಯದ ಭೂಲ್ ಭುಲಯ್ಯ ಸಿನಿಮಾದಲ್ಲಿ ಸುಂದರವಾದ ಬಾವಿಯೊಂದರ ದೃಶ್ಯ ಬರುತ್ತದೆ. ಆ ದೃಶ್ಯ ಶೂಟ್ ಆಗಿರೋದು 1200 ವರ್ಷಗಳ ಇತಿಹಾಸ ಹೊಂದಿರುವ ಚಾಂದ್ ಬರೋಲಿ ಸ್ಟೆಪ್ ವೆಲ್ ನಲ್ಲಿ.
ರಾಮ್ ಲೀಲಾ
ರಾಮ್ ಲೀಲಾ ಸಿನಿಮಾದಲ್ಲಿ ತೋರಿಸಲಾಗಿರುವ ಪ್ಲೋಟಿಂಗ್ ಪ್ಯಾಲೆಸ್ ಇರುವುದು ರಾಜಸ್ಥಾನದಲ್ಲಿ. ರಾಮ್ ಲೀಲಾ ಜನಪ್ರಿಯ ದೃಶ್ಯ ಇಲ್ಲಿ ಶೂಟಿಂಗ್ ಮಾಡಲಾಗಿದೆ. ಇದು ಜಗ್ ಮಂದಿರ್ ಲೇಕ್ ಪಿಚೋಲ. ಇದು ಉದಯಪುರದಲ್ಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

