- Home
- Entertainment
- Cine World
- Manchu Manoj: 'ಡೇವಿಡ್ ರೆಡ್ಡಿ'ಗಾಗಿ ಹೊಸ ಅವತಾರ.. ನಿರ್ಮಾಪಕರಿಗೆ ಸವಾಲೆಸೆದ ಮಂಚು ಮನೋಜ್!
Manchu Manoj: 'ಡೇವಿಡ್ ರೆಡ್ಡಿ'ಗಾಗಿ ಹೊಸ ಅವತಾರ.. ನಿರ್ಮಾಪಕರಿಗೆ ಸವಾಲೆಸೆದ ಮಂಚು ಮನೋಜ್!
ನಟ ಮಂಚು ಮನೋಜ್ 'ಮಿರಾಯ್' ಚಿತ್ರದಲ್ಲಿ ವಿಲನ್ ಆಗಿ ಅಬ್ಬರಿಸಿದ್ದರು. ಇದೀಗ 'ಡೇವಿಡ್ ರೆಡ್ಡಿ' ಚಿತ್ರಕ್ಕಾಗಿ ಸಂಪೂರ್ಣ ಹೊಸ ಲುಕ್‌ಗೆ ಬದಲಾಗುತ್ತಿದ್ದಾರೆ. ಮೈ ಜುಮ್ಮೆನಿಸುವಂತಿರುವ ಅವರ ಹೊಸ ಲುಕ್‌ನ ಫೋಟೋಗಳು ಎಲ್ಲರ ಗಮನ ಸೆಳೆಯುತ್ತಿವೆ.

ಮತ್ತೆ ಕಮ್‌ಬ್ಯಾಕ್
ಒಂದು ಕಾಲದಲ್ಲಿ ಮಂಚು ಮನೋಜ್ ಹೀರೋ ಆಗಿ ಮಿಂಚಿದ್ದರು. ಆರಂಭದಲ್ಲಿ ಉತ್ತಮ ಯಶಸ್ಸನ್ನೂ ಕಂಡರು. ಆದರೆ ನಂತರ ಸಕ್ಸಸ್ ಸಿಗಲಿಲ್ಲ. ಹೀಗಾಗಿ ಸ್ವಲ್ಪ ಸಮಯ ಗ್ಯಾಪ್ ತೆಗೆದುಕೊಂಡರು. ಇದೇ ಸಮಯದಲ್ಲಿ ವೈಯಕ್ತಿಕ ಜೀವನದಲ್ಲೂ ಕೆಲವು ಸಮಸ್ಯೆಗಳನ್ನು ಎದುರಿಸಿದರು. ಹೀಗೆ ಎಲ್ಲಾ ರೀತಿಯಲ್ಲೂ ಗ್ಯಾಪ್ ತೆಗೆದುಕೊಂಡು ಇತ್ತೀಚೆಗೆ ಮತ್ತೆ ಕಮ್‌ಬ್ಯಾಕ್ ಮಾಡಿದ್ದಾರೆ. ಹೀರೋ ಆಗಿ ರೀ-ಎಂಟ್ರಿಗೆ ಪ್ಲಾನ್ ಮಾಡಿದರೂ ಅದು ವರ್ಕೌಟ್ ಆಗಲಿಲ್ಲ. ಹೀಗಾಗಿ 'ಭೈರವಂ' ಚಿತ್ರದಲ್ಲಿ ವಿಲನ್ ಆಗಿ ಬಲವಾದ ಪಾತ್ರದಲ್ಲಿ ಮಿಂಚಿದರು. ಇತ್ತೀಚೆಗೆ 'ಮಿರಾಯ್' ಚಿತ್ರದಲ್ಲಿ ಪವರ್‌ಫುಲ್ ವಿಲನ್ ಆಗಿ ನಟಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಡೇವಿಡ್ ರೆಡ್ಡಿ ಚಿತ್ರದಲ್ಲಿ ನಟಿಸುತ್ತಿರುವ ಮಂಚು ಮನೋಜ್
'ಮಿರಾಯ್' ಚಿತ್ರದ ಯಶಸ್ಸು ಹೀರೋ ತೇಜ ಸಜ್ಜಾಗಿಂತ ವಿಲನ್ ಆಗಿ ನಟಿಸಿದ ಮನೋಜ್‌ಗೆ ಹೆಚ್ಚು ಲಾಭ ತಂದುಕೊಟ್ಟಿತು. ಈ ಯಶಸ್ಸನ್ನು ಮನೋಜ್ ಸರಿಯಾಗಿ ಬಳಸಿಕೊಂಡಿದ್ದಾರೆ. ಈಗ ಮತ್ತೆ ಹೀರೋ ಆಗಿ ರಂಜಿಸಲು ಬರುತ್ತಿದ್ದಾರೆ. ಆದರೆ ಈ ಬಾರಿ ಸಿಂಪಲ್ ಆಗಿ ಬರುತ್ತಿಲ್ಲ, ಬದಲಿಗೆ 'ಮಂಚು ಮನೋಜ್ 2.0' ಎಂಬಂತೆ ಬರಲಿದ್ದಾರೆ. ಸದ್ಯ ಮನೋಜ್ 'ಡೇವಿಡ್ ರೆಡ್ಡಿ' ಎಂಬ ಚಿತ್ರದಲ್ಲಿ ನಟಿಸುತ್ತಿದ್ದು, ಚಿತ್ರೀಕರಣ ನಡೆಯುತ್ತಿದೆ. ಇತ್ತೀಚೆಗೆ ಬಿಡುಗಡೆಯಾದ ಟೀಸರ್ ಅದ್ಭುತವಾಗಿತ್ತು. ಈ ಗ್ಲಿಂಪ್ಸ್ ಚಿತ್ರದ ಮೇಲಿನ ನಿರೀಕ್ಷೆಗಳನ್ನು ಹೆಚ್ಚಿಸಿದೆ.
ಕೇವಲ ಕಠಿಣ ಪರಿಶ್ರಮ ಮಾತ್ರ
ಈ ಚಿತ್ರಕ್ಕಾಗಿ ಮಂಚು ಮನೋಜ್ ಹೊಸ ಲುಕ್‌ಗೆ ಬದಲಾಗುತ್ತಿದ್ದಾರೆ. ಕಳೆದ ಮೂರು ವಾರಗಳಿಂದ ಜಿಮ್‌ನಲ್ಲಿ ಬೆವರಿಳಿಸುತ್ತಿದ್ದಾರೆ. ತಮ್ಮ ದೇಹವನ್ನು ಇನ್ನಷ್ಟು ಫಿಟ್ ಆಗಿ ಇಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಈ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋ ಹಂಚಿಕೊಂಡಿರುವ ಅವರು, 'ಮೂರು ವಾರಗಳ ಹಿಂದೆ ನಾನೊಂದು ನಿರ್ಧಾರ ಮಾಡಿದೆ. ಇನ್ನು ಮುಂದೆ ಕಂಫರ್ಟ್‌ಗೆ ರಾಜಿ ಇಲ್ಲ, ಸಬೂಬು ಹೇಳುವುದಿಲ್ಲ. ಕೇವಲ ಕಠಿಣ ಪರಿಶ್ರಮ ಮಾತ್ರ. ನಿಜವಾದ ಆ್ಯಕ್ಷನ್‌ಗೆ ಇಳಿದಿದ್ದೇನೆ, ಅದಕ್ಕಾಗಿ ಕೆಲಸ ಮಾಡುತ್ತಿದ್ದೇನೆ' ಎಂದು ಬರೆದುಕೊಂಡಿದ್ದಾರೆ.
ಕ್ಯಾಮೆರಾ ಎಂದಿಗೂ ಸುಳ್ಳು ಹೇಳುವುದಿಲ್ಲ
ಇನ್ನೂ ಮುಂದುವರಿಸಿ, 'ಆ್ಯಕ್ಷನ್ ಸಿನಿಮಾದಲ್ಲಿ ನಿಮಗಾಗಿ ಬೇರೆ ಯಾರೂ ನಟಿಸಲು ಸಾಧ್ಯವಿಲ್ಲ. ಪ್ರತಿ ಪಂಚ್, ಪ್ರತಿ ಹೊಡೆತಕ್ಕೂ ನಿಮ್ಮ ದೇಹ ಸಿದ್ಧವಾಗಿರಬೇಕು. ಇಲ್ಲದಿದ್ದರೆ ಅದು ತಕ್ಷಣವೇ ಗೊತ್ತಾಗುತ್ತದೆ. ಕ್ಯಾಮೆರಾ ಎಂದಿಗೂ ಸುಳ್ಳು ಹೇಳುವುದಿಲ್ಲ' ಎಂದು ಮನೋಜ್ ಹೇಳಿದ್ದಾರೆ. ಇನ್ನು ಮುಂದೆ ಕೇವಲ ಲುಕ್‌ಗಾಗಿ ಅಲ್ಲ, ಬದಲಿಗೆ ಶಕ್ತಿ ಮತ್ತು ಸಹಿಷ್ಣುತೆಯನ್ನು ಹೆಚ್ಚಿಸಿಕೊಳ್ಳುವುದರ ಮೇಲೆ ಗಮನ ಹರಿಸುವುದಾಗಿ ಅವರು ತಿಳಿಸಿದ್ದಾರೆ. 'ದೃಢವಾದ ವ್ಯಕ್ತಿ'ಯಾಗಿ ರೂಪುಗೊಳ್ಳುವುದೇ ತಮ್ಮ ಗುರಿ ಎಂದು ಅವರು ಹೇಳಿಕೊಂಡಿದ್ದಾರೆ. 'ವಾರ 3' ಎಂದು ಈ ಅಪ್‌ಡೇಟ್ ನೀಡಿದ್ದು, ಕೇವಲ 21 ದಿನಗಳಲ್ಲಿ ತಾನು ಸಂಪೂರ್ಣವಾಗಿ ಬೇರೆ ವ್ಯಕ್ತಿಯಂತೆ ಭಾಸವಾಗುತ್ತಿದೆ ಎಂದು ಮನೋಜ್ ಹೇಳಿದ್ದಾರೆ.
ಧೈರ್ಯಶಾಲಿ ಯೋಧನ ಜರ್ನಿ
ಮಂಚು ಮನೋಜ್ ನಟಿಸುತ್ತಿರುವ 'ಡೇವಿಡ್ ರೆಡ್ಡಿ' ಅವರ ವೃತ್ತಿಜೀವನದ ಅತಿದೊಡ್ಡ ಚಿತ್ರಗಳಲ್ಲಿ ಒಂದಾಗಿದೆ. ಈ ಪ್ಯಾನ್ ಇಂಡಿಯಾ ಪೀರಿಯಡ್ ಆ್ಯಕ್ಷನ್ ಡ್ರಾಮಾವನ್ನು ಹನುಮ ರೆಡ್ಡಿ ಯೆಕ್ಕಂಟಿ ನಿರ್ದೇಶಿಸುತ್ತಿದ್ದಾರೆ. ನಲ್ಲಗಂಗುಲ ವೆಂಕಟ್ ರೆಡ್ಡಿ ಮತ್ತು ಭರತ್ ಮೊತುಕೂರಿ ನಿರ್ಮಿಸುತ್ತಿದ್ದಾರೆ. 1897-1920ರ ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ನಡೆಯುವ ಕಥೆ ಇದಾಗಿದ್ದು, ದಬ್ಬಾಳಿಕೆಯ ವಿರುದ್ಧ ಹೋರಾಡುವ ಧೈರ್ಯಶಾಲಿ ಯೋಧನ ಜರ್ನಿಯನ್ನು ಚಿತ್ರ ತೋರಿಸಲಿದೆ. ಅಂತಾರಾಷ್ಟ್ರೀಯ ನಟಿ ಮರಿಯಾ ರ್ಯಾಬೋಶಾಪ್ಕಾ ಪ್ರಮುಖ ಪಾತ್ರದಲ್ಲಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಗ್ಲಿಂಪ್ಸ್ 10 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದು ಭಾರಿ ನಿರೀಕ್ಷೆ ಮೂಡಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

