ಮೇಕಪ್ ಮಾಡಿಕೊಳ್ಳದೇ ಹೊರಬಂದಾಗ ಗುರುತೇ ಸಿಗದ ಬಾಲಿವುಡ್ ನಟಿ! ಇದೀಗ ಭಾರೀ ಟ್ರೋಲ್
ಬಾಲಿವುಡ್ ನಟಿಯರು ಮೇಕಪ್ ಮಾಡಿಕೊಳ್ಳದೇ ಮನೆಯಿಂದ ಹೊರಗೆ ಬರುವುದೇ ಇಲ್ಲ. ಕಾರಣ ಅವರು ಸಿನಿಮಾದಲ್ಲಿ ಕಾಣಿಸಿಕೊಳ್ಳುವಂತೆ ನಿಜ ಜೀವನದಲ್ಲಿ ಕಾಣಿಸದಿದ್ದರೆ ಟ್ರೋಲ್ ಮಾಡುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಇದೀಗ ಬಾಲಿವುಡ್ ನಟಿಯೊಬ್ಬರು ಮೇಕಪ್ ಇಲ್ಲದೆ ಹೊರಗೆ ಬಂದಿದ್ದು, ಜನರು ಭಾರೀ ಟ್ರೋಲ್ ಮಾಡುತ್ತಿದ್ದಾರೆ.

ಸಾಮಾನ್ಯವಾಗಿ ಸಿನಿಮಾ ನಟಿಯರು ತೆರೆ ಮೇಲೆ ಕಾಣುವುದಕ್ಕಿಂತ ಭಾರೀ ಭಿನ್ನವಾಗಿ ಕಾಣುತ್ತಾರೆ. ಇದಕ್ಕೆ ಕಾರಣ ಅವರು ಮುಖದ ತುಂಬಾ ಮಾಡಿಕೊಳ್ಳುವ ಮೇಕಪ್ ಆಗಿದೆ. ಕೆಲವೊಬ್ಬರು ಮೇಕಪ್ ಮಾಡಿಕೊಳ್ಳದೆ ಜನರ ಮುಂದೆ ಬಂದರೆ ಅವರು ಹೀರೋಯಿನ್ ಅಲ್ಲವೇನೋ ಎಂಬಂತೆ ಕಾಣುತ್ತಾರೆ.
ಕೆಲವೊಬ್ಬ ನಟಿಯರು ಮೇಕಪ್ ಹೊರತಾಗಿಯೂ ಸುಂದರವಾಗಿ ಕಾಣಿಸಿಕೊಳ್ಳುತ್ತಾರೆ. ಅಂತಹ ಕೆಲ ನಟಿಯರು ಮೇಕಪ್ ರಹಿತವಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆ, ಇದೀಗ ಬಾಲಿವುಡ್ ನಟಿ ಮಲೈಕಾ ಅರೋರಾ ಮುಂಬೈನಲ್ಲಿ ಕಾಣಿಸಿಕೊಂಡರು. ಈ ಸಂದರ್ಭದಲ್ಲಿ ಅವರು ಮೇಕಪ್ ರಹಿತವಾಗಿ, ಜಿಮ್ ಬಟ್ಟೆಗಳಲ್ಲಿ ಕಾಣಿಸಿಕೊಂಡರು.
ಅಲ್ಲಿಯ ಪಾಪರಾಜಿಗಳು ಮಲೈಕಾ ಅವರನ್ನು ಸೆರೆಹಿಡಿದರು. ಈಗ ಮಲೈಕಾ ಅವರ ಈ ಫೋಟೋಗಳು ವೇಗವಾಗಿ ವೈರಲ್ ಆಗುತ್ತಿವೆ. ಎಲ್ಲರೂ ಮಲೈಕಾ, ಮಲೈಕಾ.., ಎಂದು ಕೂಗುತ್ತಿದ್ದರೂ ಕ್ಯಾಮೆರಾಗಳನ್ನು ನೋಡಿ ಜಿಮ್‌ನೊಳಗೆ ಓಡಿ ಹೋದರು.
ಇನ್ನು ಬಾಲಿವುಡ್ ನಟಿ ಮಲೈಕಾ ಅರೋರಾ ಅವರಿಗೆ 51 ವರ್ಷ ವಯಸ್ಸಾಗಿದೆ. ಆದರೆ, ಸಿನಿಮಾದಲ್ಲಿ ಕಾಣಿಸಿಕೊಳ್ಳುವಾಗ ಮೈತುಂಬಾ ಮೇಕಪ್ ಮಾಡಿಕೊಂಡು ವಯಸ್ಸೇ ಆಗದ ಹದಿಹರೆಯದ ನಟಿಯಂತೆ ಕಾಣುತ್ತಾರೆ. ಇದೀಗ ಮೇಕಪ್ ಇಲ್ಲದೆ ಹೊರಗೆ ಬಂದಿದ್ದು, ಮಲೈಕಾ ವಯಸ್ಸಾದವರಂತೆ ಕಾಣುತ್ತಿದ್ದಾರೆ ಎಂದು ಜನರು ಟ್ರೋಲ್ ಮಾಡುತ್ತಿದ್ದಾರೆ.
ಸಿನಿಮಾದಲ್ಲಿ ದಂತದ ಬೊಂಬೆಯಂತೆ ಕಾಣುವ ಮಲೈಕಾ ಅರೋರಾ ಅವರನ್ನು ಮೇಕಪ್ ರಹಿತವಾಗಿ ಬಂದರೆ ಗುರುತಿಸಲೂ ಕಷ್ಟವಾಗುತ್ತದೆ ಎಂದು ಕೆಲವರು ಹೇಳುತ್ತಿದ್ದಾರೆ.