ಇಂಟರ್‌ನೆಟ್‌ಗೆ ಬೆಂಕಿ ಹಚ್ಚಿದ Malaika Arora ಡೀಪ್ ಕಟ್ ಬ್ಯಾಕ್‌ಲೆಸ್ ಗೌನ್ ಲುಕ್
ಮಲೈಕಾ ಅರೋರಾ (Malaika Arora) ಬಾಲಿವುಡ್ ಸುಂದರಿಯರಲ್ಲಿ ಒಬ್ಬರು, ಅವರ ಸ್ಟೈಲಿಂಗ್ ಸೆನ್ಸ್ ಅದ್ಭುತವಾಗಿದೆ. ಆಗಾಗ ಇವರ ಬೋಲ್ಡ್ ಹಾಟ್ ಫೋಟೋಶೂಟ್ ವೈರಲ್ ಆಗಿದ್ದು, ಅದರಲ್ಲಿ ಅವರ ಡ್ರೆಸ್ಸಿಂಗ್ ಸ್ಟೈಲ್ ಎಲ್ಲರ ಗಮನ ಸೆಳೆಯುತ್ತಿದೆ. ಕಳೆದ ರಾತ್ರಿಯ ಈವೆಂಟ್ ಒಂದರ ಫೋಟೋ ವೈರಲ್ ಆಗುತ್ತಿವೆ. ಇದರಲ್ಲಿ ಮಲೈಕಾ ಅರೋರಾ ಅವರು ಡೀಪ್ ಕಟ್ ಬ್ಯಾಕ್‌ಲೆಸ್ ಡ್ರೆಸ್ ಧರಿಸಿ ಕಾಣಿಕೊಂಡು ಯುವಕರ ಹೃದಯ ಬಡಿತ ಹೆಚ್ಚಿಸಿದ್ದಾರೆ.
ತಮ್ಮ ಫಿಟ್ನೆಸ್ ಬಗ್ಗೆ ವಿಶೇಷ ಗಮನ ನೀಡುವ ಬಾಲಿವುಡ್ ಬೆಡಗಿಯರಲ್ಲಿ ಮಲೈಕಾ ಅರೋರಾ ಕೂಡ ಒಬ್ಬರು. ಅದೇ ಸಮಯದಲ್ಲಿ, ಈ ಫಿಟ್ ಬಾಡಿಗೆ ಸೂಟ್ ಆಗುವಂತಹ ಔಟ್‌ಫಿಟ್ ಆಯ್ಕೆ ಮಾಡುವಲ್ಲಿ ಸಹ ಅವರುಹಿಂದುಳಿಯುವುದಿಲ್ಲ.
ಪಾರ್ಟಿ ಅಥವಾ ಸಮಾರಂಭಗಳಿಗೆ ಅವರ ಫರ್ಫೇಕ್ಟ್ ಔಟ್‌ಫಿಟ್ ಆಯ್ಕೆಯು ಎಲ್ಲರೂ ಅವರ ಹಾಟ್‌ನೆಸ್ ಅನ್ನು ಹೊಗಳುವಂತೆ ಇರುತ್ತದೆ. ಬೋಲ್ಡ್‌ನೆಸ್‌ಗೆ ಗ್ಲಾಮರ್ ಅನ್ನು ಹೇಗೆ ಸೇರಿಸಬೇಕೆಂದು ಈ ನಟಿಗೆ ಚೆನ್ನಾಗಿ ತಿಳಿದಿದೆ
ಇತ್ತೀಚೆಗೆ ಮುಂಬೈನಲ್ಲಿ ನಡೆದ ಈವೆಂಟ್‌ವೊಂದಕ್ಕೆ ಮಲೈಕಾ ಅರೋರಾ ಕಪ್ಪು ಬಣ್ಣದ ಬ್ಯಾಕ್‌ಲೆಸ್ ಡ್ರೆಸ್ ಧರಿಸಿ ಆಗಮಿಸಿದಾಗ ಅವರ ಸೌಂದರ್ಯವನ್ನು ನೋಡಿ ಜನರು ಬೆರಗಾದರು.
ಮಲೈಕಾ ಆಯ್ಕೆ ಮಾಡಿಕೊಂಡಿದ್ದ ಕಪ್ಪು ಬಣ್ಣದ ಡ್ರೆಸ್ ತುಂಬಾ ಸಿಂಪಲ್ ಆಗಿ ಕಂಡರೂ ಬೋಲ್ಡ್ ಆಗಿತ್ತು. 48 ವರ್ಷದ ಹಾಟ್ ದಿವಾ ಮಲೈಕಾ ಪ್ಲಂಗಿಂಗ್ ನೆಕ್ ಹಾಗೂ ಬ್ಯಾಕ್‌ಲೆಸ್ ಗೌನ್ ಧರಿಸಿದ್ದರು
ಮಲೈಕಾ ಅರೋರಾ ಡೀಪ್ ಕಟ್ ಬ್ಯಾಕ್‌ಲೆಸ್ ಗೌನ್‌ನಲ್ಲಿ ತನ್ನ ಲುಕ್ ಅನ್ನು ಪೂರ್ಣಗೊಳಿಸಲು ಭಾರವಾದ ಆಭರಣಗಳನ್ನು ಧರಿಸಿದ್ದರು ಮತ್ತು ಶೈನಿಂಗ್ ಮೇಕಪ್‌ನೊಂದಿಗೆ ಆಕರ್ಷಕವಾಗಿ ಕಾಣಿಸಿಕೊಂಡರು.