Matrubhumi trailer: ಭಾರತೀಯ ಯೋಧನಾಗಿ ಸಲ್ಮಾನ್ ಬೆಂಕಿ ನಟನೆ! ಬಿಡುಗಡೆ ಯಾವಾಗ?
ಸಲ್ಮಾನ್ ಖಾನ್(Salman khan) ಅವರ ಮಾತೃಭೂಮಿ ಟ್ರೇಲರ್(Matrubhumi trailer) ಬಿಡುಗಡೆಯಾಗಿದೆ. ಗಲ್ವಾನ್ ಕಣಿವೆಯ ಭಾರತ-ಚೀನಾ ಸೈನಿಕರೊಡನೆ ನಡೆದ ನೈಜ ಘಟನಾಧರಿತ ಚಿತ್ರವಾಗಿದ್ದು, ಭಾರತೀಯ ಸೈನಿಕನ ವಿರೋಚಿತ ಹೋರಾಟದ ಚಿತ್ರವಾಗಿದೆ. ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ.

Matrubhumi Trailer Review: ಮಾತೃಭೂಮಿ ಟೀಸರ್ ಬಿಡುಗಡೆ
ಸಲ್ಮಾನ್ ಖಾನ್(Salman khan) ಅವರ ಮಾತೃಭೂಮಿ ಟ್ರೇಲರ್(Matrubhumi trailer) ಬಿಡುಗಡೆಯಾಗಿದೆ. ಗಲ್ವಾನ್ ಕಣಿವೆಯ ಭಾರತ-ಚೀನಾ ಸೈನಿಕರೊಡನೆ ನಡೆದ ನೈಜ ಘಟನಾಧರಿತ ಚಿತ್ರವಾಗಿದ್ದು, ಭಾರತೀಯ ಸೈನಿಕನ ವಿರೋಚಿತ ಹೋರಾಟದ ಚಿತ್ರವಾಗಿದೆ. ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ವಿಭಿನ್ನ ಪ್ರತಿಕ್ರಿಯೆಗಳು ಬಂದಿವೆ.
ಸಲ್ಮಾನ್ ಖಾನ್ ನಟನೆಯ ಮಾತೃಭೂಮಿ ಸಿನಿಮಾ ಬಿಡುಗಡೆ ಯಾವಾಗ?
ಹೆಸರೇ ಹೇಳುವಂತೆ ಇದೊಂದು ದೇಶಭಕ್ತಿ ಚಿತ್ರವಾಗಿದೆ. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಭಾರತೀಯ ಸೈನ್ಯದ ವೀರ ಯೋಧನಾಗಿ ಕಾಣಿಸಿಕೊಂಡಿದ್ದಾರೆ. ಟೀಸರ್ನಲ್ಲಿ ವೀರ ಯೋಧನಾಗಿ ಸಲ್ಮಾನ್ ಖಾನ್ ಅಭಿನಯ ಬೆಂಕಿಯಾಗಿದೆ. ಇತ್ತೀಚೆಗೆ ಸಲ್ಮಾನ್ ಖಾನ್ ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದೆ ದೂರವೇ ಉಳಿದಿದ್ದರು. ರಿಯಾಲಿಟಿ ಶೋಗಳಲ್ಲಿ ಬ್ಯುಸಿಯಾಗಿದ್ದರು. ಹಿಂದೆಲ್ಲ ವರ್ಷಕ್ಕೆ ಎರಡು ಮೂರು ಬಿಡುಗಡೆಯಾಗುತ್ತಲೇ ಇದ್ದವು. ಅದರಲ್ಲೂ ದೀಪಾವಳಿ ಸಮಯಕ್ಕೆ ಸಿನಿಮಾಗಳು ಬಿಡುಗಡೆಗೊಳ್ಳುತ್ತಿದ್ದವು.
ಬಹಳ ದಿನಗಳಿಂದ ಈ ಚಿತ್ರದಿಂದ ಯಾವುದೇ ಅಪ್ಡೇಟ್ ಕೂಡ ಬಂದಿರಲಿಲ್ಲ. ಆದರೆ ಇದೀಗ ತಯಾರಕರು ಇತ್ತೀಚೆಗೆ ಅಧಿಕೃತ ಬಿಡುಗಡೆ ದಿನಾಂಕವನ್ನು ದೃಢಪಡಿಸಿದ್ದಾರೆ, ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ.
ಮಾತೃಭೂಮಿ ಟ್ರೇಲರ್ ಹೇಗಿದೆ?
ದೇಶದ ರಕ್ಷಣೆಗಾಗಿ ಭಾರತ-ಚೀನಾ ಗಡಿಗಳಲ್ಲಿನ ಹಿಮದ ಪರ್ವತಗಳ ಕೆಟ್ಟ ಹವಾಮಾನ ಪರಿಸ್ಥಿತಿಗಳಲ್ಲೂ ಶತ್ರುಗಳ ವಿರುದ್ಧ ಹೋರಾಡುವ ಭಾರತೀಯ ಸೈನಿಕರ ಶೌರ್ಯ, ಸಾಹಸವನ್ನು ಈ ಚಿತ್ರ ಹೇಳುತ್ತದೆ. ಈ ಹಿಂದೆ ಘೋಷಿಸಿದಂತೆ ಈ ಚಿತ್ರದ ಕಥೆಯು 2020 ರಲ್ಲಿ ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಮತ್ತು ಚೀನಾದ ಸೈನಿಕರ ನಡುವಿನ ಘರ್ಷಣೆಯ ಕಥೆಯನ್ನು ಹೊಂದಿದೆ.
ಈ ಸಿನಿಮಾದಲ್ಲಿ ನಟ ಸಲ್ಮಾನ್ ಖಾನ್ 16 ಬಿಹಾರ ರೆಜಿಮೆಂಟ್(16 Bihar Regiment)ನ ಸೈನಿಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಸಲ್ಮಾನ್ ತನ್ನ ಹೆಂಡತಿ, ಮಕ್ಕಳೊಂದಿಗೆ ಸಂತೋಷವಾಗಿ ಕಾಲ ಕಳೆಯುವ ಜವಾಬ್ದಾರಿಯುತ ಪತಿಯಾಗಿ, ತಂದೆಯಾಗಿ ಕಾಣಿಸಿಕೊಂಡರೆ ಇನ್ನೊಂದೆಡೆ ಭಾರತೀಯ ಸೈನಿಕನಾಗಿ ಶತ್ರುಗಳ ವಿರುದ್ಧ ಪ್ರಾಣ ಲೆಕ್ಕಿಸದೆ ಹೋರಾಡುವ ವೀರಯೋಧನವಾಗಿಯೂ ಕಾಣಿಸಿಕೊಂಡಿದ್ದಾರೆ. ಟ್ರೇಲರ್ನಲ್ಲಿ ಅವರ ನಟನೆ ಭರ್ಜರಿ ಮತ್ತು ನೋಡುವ ಪ್ರತಿ ಪ್ರೇಕ್ಷರಿಗೂ ಹೆಮ್ಮೆ ಎನಿಸುವಂತೆ ಮಾಡುತ್ತದೆ. ಭಾರತೀಯ ಸೈನಿಕರ ಅತ್ಯಾದ್ಭುತ ಆಕ್ಷನ್, ತ್ಯಾಗಗಳು ಟ್ರೇಲರ್ನಲ್ಲಿ ತೋರಿಸಲಾಗಿದೆ.
ಮಾತೃಭೂಮಿ ಸಿನಿಮಾ ಬಿಡುಗಡೆ ಯಾವಾಗ?
ಮಾತೃಭೂಮಿ ಸಿನಿಮಾವನ್ನು ಅಪೂರ್ವ ಲಖಿಯಾ ನಿರ್ದೇಶಿಸಿದ್ದಾರೆ. ಇನ್ನು ಈ ಚಿತ್ರದ ನಾಯಕಿಯಾಗಿ ಚಿತ್ರಾಂಗದಾ ಸಿಂಗ್ ಅಭಿನಯಿಸಿದ್ದಾರೆ. ಟ್ರೇಲರ್ನಲ್ಲಿ ಈ ಚಿತ್ರದ ಟೈಟಲ್ ಆರಂಭದಲ್ಲಿ 'ಬ್ಯಾಟಲ್ ಆಫ್ ಗಾಲ್ವಾನ್' ಎಂದಿತ್ತು. ಆದರೆ ನಂತರ ಅದನ್ನು ಬದಲಾಯಿಸಿ 'ಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್' ಎಂದು ಬದಲಾಯಿಸಲಾಯಿತು. ಈ ಚಿತ್ರವು ಮುಂದಿನ ತಿಂಗಳು ಡಿಸೆಂಬರ್ 4 ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ವಿಶೇಷ ಎಂದರೆ ಈ ಚಿತ್ರದ ತಂಡವು ಹಿರಿಯ ನಾಗರಿಕರಿಗೆ ಬಂಪರ್ ಆಫರ್ ಘೋಷಿಸಿದೆ. 75 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಈ ಚಿತ್ರವನ್ನು ಕೇವಲ 11 ರೂ.ಗೆ ವೀಕ್ಷಿಸಬಹುದು ಎಂದು ಹೇಳಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.













