MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಮಲೇರಿಯಾ ಇದ್ದರೂ ಶೂಟಿಂಗ್ ನಿಲ್ಲಿಸದೆ ವೃತ್ತಿಪರತೆ ಮೆರೆದ Deepika Padukone… ಸಿನಿಮಾ ಸೂಪರ್ ಹಿಟ್

ಮಲೇರಿಯಾ ಇದ್ದರೂ ಶೂಟಿಂಗ್ ನಿಲ್ಲಿಸದೆ ವೃತ್ತಿಪರತೆ ಮೆರೆದ Deepika Padukone… ಸಿನಿಮಾ ಸೂಪರ್ ಹಿಟ್

Deepika Padukone: ನಟಿ ದೀಪಿಕಾ ಪಡುಕೋಣೆಗೆ 8 ಗಂಟೆಯ ಕೆಲಸದ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ಅವರನ್ನು ವೃತ್ತಿಪರತೆ ಇಲ್ಲದ ನಟಿ ಎಂದು ಹಲವರು ಕರೆದಿದ್ದರು. ಆದರೆ ಇದೀಗ ನಟಿ ಲಾರಾ ದತ್ತಾ, ಹೇಗೆ ಮಲೇರಿಯಾ ಜ್ವರದ ನಡುವೆ ದೀಪಿಕಾ ಶೂಟಿಂಗ್ ಮಾಡುವ ಮೂಲಕ ವೃತ್ತಿಪರತೆ ಮೆರೆದಿದ್ದರು ಎಂದು ತಿಳಿಸಿದ್ದಾರೆ. 

2 Min read
Author : Pavna Das
Published : Apr 30 2026, 08:19 PM IST
Share this Photo Gallery
  • FB
  • TW
  • Linkdin
  • Whatsapp
16
ದೀಪಿಕಾ ಪಡುಕೋಣೆ
Image Credit : Asianet News

ದೀಪಿಕಾ ಪಡುಕೋಣೆ

ದೀಪಿಕಾ ಪಡುಕೋಣೆ ಇಂದು ಬಾಲಿವುಡ್‌ನ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು. ಅವರು ಶೀಘ್ರದಲ್ಲೇ ರಾಕಾ ಮತ್ತು ಕಿಂಗ್ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಳೆದ ವರ್ಷ, ದೀಪಿಕಾ ಪಡುಕೋಣೆ ಸಂದೀಪ್ ರೆಡ್ಡಿ ವಂಗಾ ಅವರಿಂದ ಎಂಟು ಗಂಟೆಗಳ ಕೆಲಸಕ್ಕಾಗಿ ಬೇಡಿಕೆ ಇಟ್ಟು ಸುದ್ದಿಯಲ್ಲಿದ್ದರು. ಇದರಿಂದಾಗಿ ದೀಪಿಕಾ ಅನ್ ಪ್ರೊಫೆಶನ್ ಎಂದು ಜನ ಹೇಳಿದ್ದರು. ಆದರೆ ಇದೀಗ ನಟಿ ತಮ್ಮ ಕೆಲಸವನ್ನು ನಟನೆಯನ್ನು ಎಷ್ಟು ಪ್ರೀತಿಸುತ್ತಾರೆ, ಅವರೆಷ್ಟು ವೃತ್ತಿಪರರು ಎನ್ನುವ ಬಗ್ಗೆ ಲಾರಾ ದತ್ತಾ ಹೇಳಿದ ಮಾತು ವೈರಲ್ ಆಗುತ್ತಿದೆ.

26
ದೀಪಿಕಾ ವೃತ್ತಿಪರತೆ ಬಗ್ಗೆ ಲಾರಾ ದತ್ತಾ ಮಾತು
Image Credit : Instagram

ದೀಪಿಕಾ ವೃತ್ತಿಪರತೆ ಬಗ್ಗೆ ಲಾರಾ ದತ್ತಾ ಮಾತು

ನಟಿ ಹಾಗೂ ಮಾಜಿ ಮಿಸ್ ಯೂನಿವರ್ಸ್ ಲಾರಾ ದತ್ತಾ 16 ವರ್ಷಗಳ ಹಿಂದೆ ದೀಪಿಕಾ ಪಡುಕೋಣೆ ಅವರೊಂದಿಗೆ ಹೌಸ್‌ಫುಲ್ ಚಿತ್ರದಲ್ಲಿ ಕೆಲಸ ಮಾಡಿದ್ದರು. ಇಬ್ಬರೂ ಚಿತ್ರದಲ್ಲಿ ಪ್ರಮುಖ ನಟಿಯರಾಗಿ ನಟಿಸಿದ್ದರು. ಇತ್ತೀಚೆಗೆ, ಎನ್‌ಡಿಟಿವಿ ಜೊತೆಗಿನ ಸಂಭಾಷಣೆಯಲ್ಲಿ, ಲಾರಾ ದತ್ತಾ ಹೌಸ್‌ಫುಲ್ ಸೆಟ್‌ನಲ್ಲಿ ತಮ್ಮ ಸಮಯವನ್ನು ನೆನಪಿಸಿಕೊಂಡು, ದೀಪಿಕಾ ಪಡುಕೋಣೆ ಬಾಲಿವುಡ್‌ನ ಅತ್ಯಂತ ವೃತ್ತಿಪರ ನಟಿಯರಲ್ಲಿ ಒಬ್ಬರು ಎಂದು ಹೇಳಿದ್ದಾರೆ.

Related Articles

Related image1
Deepika Padukone: ಸ್ಟಾರ್ ನಟಿಯಾಗೋ ಮುನ್ನ ಡ್ಯಾನ್ಸರ್ ಆಗಿದ್ದ ಡಿಪ್ಪಿ ಲೈಫ್ ಜರ್ನಿಯೇ ರೋಚಕ
Related image2
Deepika Padukone Birthday: ಹುಟ್ಟುಹಬ್ಬದಂದೇ ದೀಪಿಕಾ ಪಡುಕೋಣೆ ಸಂಪಾದಿಸಿರೋ ಒಟ್ಟೂ ಆಸ್ತಿ ಸೀಕ್ರೆಟ್ ವೈರಲ್ ಆಯ್ತು!
36
ಈ ಬಗ್ಗೆ ಲಾರಾ ದತ್ತಾ ಹೇಳಿದ್ದೇನು?
Image Credit : Getty

ಈ ಬಗ್ಗೆ ಲಾರಾ ದತ್ತಾ ಹೇಳಿದ್ದೇನು?

"ಹೌಸ್‌ಫುಲ್ ಚಿತ್ರೀಕರಣಕ್ಕಾಗಿ ನಾವು ಇಟಲಿಗೆ ಹೋಗಿದ್ದೆವು. ನಾವೆಲ್ಲರೂ ಒಂದೇ ದೊಡ್ಡ ಕುಟುಂಬದಂತಿದ್ದೆವು. ಅಂದರೆ, ಸಾಜಿದ್ ನಾಡಿಯಾದ್ವಾಲಾ ನಮಗೆಲ್ಲ ಒಟ್ಟಿಗೆ ವಾಸಿಸುವ ವಾತಾವರಣವನ್ನು ಸೃಷ್ಟಿಸಿದರು. ಚಿತ್ರೀಕರಣದ ಸಮಯದಲ್ಲಿ ದೀಪಿಕಾಗೆ ಮಲೇರಿಯಾ ಸೋಂಕು ತಗುಲಿತ್ತು. ಆ ಸಮಯದಲ್ಲಿ ದೀಪಿಕ ತೀವ್ರವಾಗಿ ಅಸ್ವಸ್ಥರಾದರು. ಅವರ ಸ್ಥಿತಿ ಕೂಡ ಗಂಭೀರವಾಗಿತ್ತು.

46
ತೀವ್ರ ಜ್ವರ ಮತ್ತು ವೀಕ್ನೆಸ್ ನಿಂದ ಬಳಲಿದ ದೀಪಿಕಾ
Image Credit : instagram

ತೀವ್ರ ಜ್ವರ ಮತ್ತು ವೀಕ್ನೆಸ್ ನಿಂದ ಬಳಲಿದ ದೀಪಿಕಾ

ದೀಪಿಕಾ ತೀವ್ರ ಜ್ವರ ಮತ್ತು ನಿರಂತರ ದೌರ್ಬಲ್ಯದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ, ವೈದ್ಯರನ್ನು ಕರೆಯಲಾಯಿತು. ರಾತ್ರಿಯಿಡೀ ಜ್ವರದಿಂದ ನರಳುತ್ತಿದ್ದರೂ ಸಹ, ದೀಪಿಕಾ ತನ್ನ ಕೆಲಸಕ್ಕೆ ತೋರಿಸಿದ ಡೆಡಿಕೇಶನ್ ಮಾತ್ರ ಅದ್ಭುತವಾಗಿತ್ತು. ಔಟ್ ಡೋರ್ ಶೂಟಿಂಗ್ ಜೊತೆಗೆ ದೊಡ್ಡ ತಾರಾಗಣ ಇದ್ದುದರಿಂದ ಶೂಟಿಂಗ್ ನಿಲ್ಲಿಸುವುದು ಕಷ್ಟವಾಗಿತ್ತು. ಹಾಗಾಗಿ ದೀಪಿಕಾ ತನ್ನಿಂದಾಗಿ ಶೂಟಿಂಗ್ ನಿಲ್ಲಬಾರದು ಎಂದು ಜ್ವರದಲ್ಲೇ ಶೂಟಿಂಗ್ ಮುಗಿಸಿದ್ದರು.

56
ದೀಪಿಕಾ ವೃತ್ತಿಪರತೆಗೆ ಭೇಷ್ ಎಂದ ಲಾರಾ ದತ್ತಾ
Image Credit : instagram

ದೀಪಿಕಾ ವೃತ್ತಿಪರತೆಗೆ ಭೇಷ್ ಎಂದ ಲಾರಾ ದತ್ತಾ

ದೀಪಿಕಾ ಪಡುಕೋಣೆ ತಮ್ಮ ವೃತ್ತಿಪರತೆಗೆ ಎಂದಿಗೂ ರಾಜಿಮಾಡಿಕೊಳ್ಳುತ್ತಿರಲಿಲ್ಲ. ಅನಾರೋಗ್ಯ ಮತ್ತು ದೈಹಿಕ ಅಸ್ವಸ್ಥತೆಯ ಹೊರತಾಗಿಯೂ, ದೀಪಿಕಾ ಪ್ರತಿಯೊಂದು ದೃಶ್ಯವನ್ನು ಸಂಪೂರ್ಣ ಪ್ರಾಮಾಣಿಕತೆ ಮತ್ತು ಜವಾಬ್ದಾರಿಯಿಂದ ನಿರ್ವಹಿಸಿದರು. ಅದು ಅವರ ಅಭಿನಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಿದಂತೆ ಕಾಣಲಿಲ್ಲ ಎಂದು ಲಾರಾ ದತ್ತಾ ಹೇಳಿದ್ದಾರೆ.

66
ಹೌಸ್ ಫುಲ್ ಸೂಪರ್ ಹಿಟ್
Image Credit : instagram

ಹೌಸ್ ಫುಲ್ ಸೂಪರ್ ಹಿಟ್

ದೀಪಿಕಾ ಪಡುಕೋಣೆ ಬಗ್ಗೆ ಮಾತನಾಡುತ್ತಾ, ಲಾರಾ ದತ್ತಾ ದೀಪಿಕಾ ತಮ್ಮ ಗುರಿಗಳ ಬಗ್ಗೆ ತುಂಬಾ ಸ್ಪಷ್ಟರಾಗಿದ್ದಾರೆ. ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದರ ಬಗ್ಗೆ ಅವರ ಮನಸ್ಸಿನಲ್ಲಿ ಸ್ಪಷ್ಟತೆ ಇದೆ ಎಂದಿದ್ದಾರೆ ಲಾರಾ ದತ್ತಾ. ಅಂದ ಹಾಗೇ ಅಕ್ಷಯ್ ಕುಮಾರ್, ರಿತೇಶ್ ದೇಶಮುಖ್, ದೀಪಿಕಾ ಮತ್ತು ಲಾರಾ ನಟಿಸಿದ ‘ಹೌಸ್‌ಫುಲ್’ ಚಿತ್ರವು ಭಾರಿ ಯಶಸ್ಸನ್ನು ಕಂಡಿತು. ಇದು ಸೂಪರ್‌ಹಿಟ್ ಕಾಮಿಡಿ ಫ್ರಾಂಚೈಸ್‌ಗೆ ಅಡಿಪಾಯ ಹಾಕಿತು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ದೀಪಿಕಾ ಪಡುಕೋಣೆ
ಬಾಲಿವುಡ್
ಮನರಂಜನಾ ಸುದ್ದಿ
ಸಿನಿಮಾ

Latest Videos
Recommended Stories
Recommended image1
ಅವಕಾಶ ಇದ್ರೆ ಹೇಳಿ ಪ್ಲೀಸ್​: ಬಾಡಿಗೆ ಹಣ ನಂಬಿ ಬದುಕುತ್ತಿರುವೆ- ನೋವು ತೋಡಿಕೊಂಡ ನಟ ದಿಗಂತ್​
Recommended image2
ಆ ಒಂದು ವಿಷಯಕ್ಕೆ ಸ್ವಲ್ಪ ಭಯವಿದೆ: 'ಪೇಟ್ರಿಯಟ್' ಬಗ್ಗೆ ಮನದ ಮಾತು ಹಂಚಿಕೊಂಡ ಮಮ್ಮುಟ್ಟಿ
Recommended image3
ಪೂಜಾ ಹೆಗ್ಡೆ ಟಾಪ್ 5 ಸಿನಿಮಾಗಳಿವು.. ಮೊದಲ ಹಿಟ್, ಕೊನೆಯ ಹಿಟ್ ಕೊಟ್ಟಿದ್ದು ಅದೇ ಹೀರೋ!
Related Stories
Recommended image1
Deepika Padukone: ಸ್ಟಾರ್ ನಟಿಯಾಗೋ ಮುನ್ನ ಡ್ಯಾನ್ಸರ್ ಆಗಿದ್ದ ಡಿಪ್ಪಿ ಲೈಫ್ ಜರ್ನಿಯೇ ರೋಚಕ
Recommended image2
Deepika Padukone Birthday: ಹುಟ್ಟುಹಬ್ಬದಂದೇ ದೀಪಿಕಾ ಪಡುಕೋಣೆ ಸಂಪಾದಿಸಿರೋ ಒಟ್ಟೂ ಆಸ್ತಿ ಸೀಕ್ರೆಟ್ ವೈರಲ್ ಆಯ್ತು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved