Lakme Fashion Week: ಶೋಸ್ಟಾಪರ್ ಆಗಿ ರ‍್ಯಾಂಪ್ ವಾಕ್ ಮಾಡಿದ ರಶ್ಮಿಕಾ ಮಂದಣ್ಣ
ಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಆಯೋಜಿಸಲಾಗಿರುವ ಲ್ಯಾಕ್ಮೆ ಫ್ಯಾಶನ್ ವೀಕ್‌ನಲ್ಲಿ (Lakme Fashion Week 2023) ಫ್ಯಾಷನ್ ಮಾಡೆಲ್‌ಗಳ ಜೊತೆಗೆ ಬಾಲಿವುಡ್ ನಟಿಯರೂ ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದ್ದರು. ಫ್ಯಾಶನ್ ವೀಕ್‌ನ ಮೂರನೇ ಹಾಗೂ ಕೊನೆ ದಿನ ನಿನ್ನೆ ರಶ್ಮಿಕಾ ಮಂದಣ್ಣ (Rashmika Mandanna), ಅಥಿಯಾ ಶೆಟ್ಟಿ (Athiya Shetty), ತಾಪ್ಸಿ ಪನ್ನು (Taapsee Pannu), ಶನಯಾ ಕಪೂರ್ (Shanaya Kapoor), ಅಂಶುಲಾ ಕಪೂರ್ (Anshula Kapoor) ವಿಭಿನ್ನ ಉಡುಗೆಗಳಲ್ಲಿ ಫ್ಯಾಷನ್ ವೀಕ್‌ನ ರ‍್ಯಾಂಪ್ ಅನ್ನುಅಲಂಕರಿಸಿದ್ದಾರೆ.
ರಶ್ಮಿಕಾ ಮಂದಣ್ಣ ಲ್ಯಾಕ್ಮೆ ಫ್ಯಾಶನ್ ವೀಕ್‌ನಲ್ಲಿ ಜೆಜೆ ವಲಯಯಾ ಅವರಿಗೆ ಶೋಸ್ಟಾಪರ್ ಆಗಿ ಕಾಣಿಸಿಕೊಂಡರು. ಸುಂದರ ಸೀರೆಯಲ್ಲಿ ರ‍್ಯಾಂಪ್ ವಾಕ್ ಮಾಡಿದ ರಶ್ಮಿಕಾ ತಮ್ಮ ಸ್ಮೈಲ್‌ನಿಂದ ಎಲ್ಲರ ಮನಗೆದ್ದರು.
ಇತ್ತೀಚಿಗಷ್ಟೇ ಕೆಎಲ್ ರಾಹುಲ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನವ ವಧು ಅಥಿಯಾ ಶೆಟ್ಟಿ ಕೂಡ ರ‍್ಯಾಂಪ್ ವಾಕ್ ಮಾಡಿದ್ದಾರೆ. ಡಿಸೈನರ್ ನಮ್ರತಾ ಜೋಶಿಪುರ ಅವರಿಗೆ ಅಥಿಯಾ ಮಾಡೆಲ್ ಆಗಿದ್ದರು.
ಎಫ್‌ಡಿಸಿಐ ಸಹಭಾಗಿತ್ವದಲ್ಲಿ ಡೈಸನ್ x ಅರ್ಪಿತಾ ಮೆಹ್ತಾ ಅವರ ಬೇಸಿಗೆ ಸಂಗ್ರಹಕ್ಕಾಗಿ ಶೋಸ್ಟಾಪರ್ ಆಗಿ ಶನಯಾ ಕಪೂರ್ ಹೊಳೆಯುವ ಹಳದಿ ಸೀರೆಯಲ್ಲಿ ಸ್ಟನ್ನಿಂಗ್ ಆಗಿ ಕಾಣಿಸಿಕೊಂಡರು.
ಮುಂಬೈನ ಜಿಯೋ ವರ್ಲ್ಡ್ ಗಾರ್ಡನ್‌ನಲ್ಲಿ ನಡೆದ ಲಾಕ್ಮೆ ಫ್ಯಾಶನ್ ವೀಕ್ 2023 ರಲ್ಲಿ ಖುಷಿ ಕಪೂರ್ ತನ್ನ ಸಹೋದರಿಯರಾದ ಶನಯಾ ಕಪೂರ್ ಮತ್ತು ಅಂಶುಲಾ ಕಪೂರ್ ಅವರೊಂದಿಗೆ ರ‍್ಯಾಂಪ್ ವಾಕ್ ಮಾಡಿದ್ದಾರೆ.
ಬಾಲಿವುಡ್‌ನ ಟ್ಯಾಲೆಂಟೆಡ್ ನಟಿಯರಲ್ಲಿ ಒಬ್ಬರಾದ ತಾಪ್ಸಿ ಪನ್ನು ಕೆಂಪು ಔಟ್‌ಫಿಟ್‌ನಲ್ಲಿ ಕಿಲ್ಲರ್ ಲುಕ್‌ನಲ್ಲಿ ಕಾಣಿಸಿಕೊಂಡರು ಡಿಸೈನರ್ ಮೋನಿಶಾ ಜೈಸಿಂಗ್‌ಗಾಗಿ ತಾಪ್ಸಿ ಪನ್ನು ರ‍್ಯಾಂಪ್ ವಾಕ್ ಮಾಡಿದ್ದಾರೆ
ಲ್ಯಾಕ್ಮೆ ಫ್ಯಾಶನ್ ವೀಕ್ 2023 ರ ಮೊದಲ ದಿನವೇ ಕ್ಯಾಟ್ ವಾಕ್ ಮಾಡಿ ಸಖತ್ ಸುದ್ದಿಯಾಗಿದ್ದ ಅರ್ಜುನ್ ಕಪೂರ್ ಅವರ ಸಹೋದರಿ ಅಂಶುಲಾ ಕಪೂರ್ ಮತ್ತೆ ಕೊನೆಯ ದಿನವೂ ಮಿಂಚಿದ್ದಾರೆ.