ತಡ ರಾತ್ರಿ ಪಾರ್ಟಿ ಬಳಿಕ ಕಾಣಿಸಿಕೊಂಡ ಕೃತಿ ಸನೋನ್ ಹಿಗ್ಗಾ ಮುಗ್ಗಾ ಟ್ರೋಲ್
ಬಾಲಿವುಡ್ ನಟಿ ಕೃತಿ ಸನೋನ್ ತಡ ರಾತ್ರಿ ಪಾರ್ಟಿ ಮುಗಿಸಿ ಕಾಣಿಸಿಕೊಂಡಿದ್ದಾರೆ. ಆದರೆ ಈ ವಿಡಿಯೋ ಬಹಿರಂಗವಾಗುತ್ತಿದ್ದಂತೆ ಕೃತಿ ಸನೋನ್ ಭಾರಿ ಟ್ರೋಲ್ ಆಗಿದ್ದಾರೆ.

ಬಾಲಿವುಡ್ ನಟಿ ಕೃತಿ ಸನನ್ ಶುಕ್ರವಾರ ರಾತ್ರಿ ಮುಂಬೈನ ರೆಸ್ಟೋರೆಂಟ್‌ನಲ್ಲಿ ಕಾಣಿಸಿಕೊಂಡರು. ಅವರು ತಮ್ಮ ಗೆಳೆಯ ಕಬೀರ್ ಬಹಿಯಾ ಜೊತೆ ರೆಸ್ಟೋರೆಂಟ್‌ಗೆ ಆಗಮಿಸಿದ್ದರು ಖಾಸಗಿ ಪಾರ್ಟಿ ನಿಮಿತ್ತ ಇಬ್ಬರು ಜೊತೆಯಾಗಿ ರೆಸ್ಟೋರೆಂಟ್‌ಗೆ ಆಗಮಿಸಿದ್ದರು. . ಈ ಸಂದರ್ಭದ ಫೋಟೋಗಳು ವೈರಲ್ ಆಗಿವೆ.
ಪಾರ್ಟಿ ಮುಗಿಸಿ ತಡ ರಾತ್ರಿ ಕೃತಿ ಸನನ್ ಪಾಪರಾಜಿಗಳ ಮುಂದೆ ಪ್ರತ್ಯಕ್ಷರಾಗಿದ್ದಾರೆ. ಆದರೆ ಈ ವೇಳೆಯ ವಿಡಿಯೋ ಹಾಗೂ ಫೋಟೋಗಳು ಇದೀಗ ಟ್ರೋಲ್ ಆಗುತ್ತಿದೆ. ಕೆಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ, ಪಾರ್ಟಿ ಮುಗಿಸಿದ ಬಳಿಕ ಕೃತಿ ಸನೋನ್ ನಡೆಯುವಾಗ ಎಡವುತ್ತಿರುವುದನ್ನು ನೆಟ್ಟಿಗರು ಗಮನಿಸಿದ್ದರಾರೆ.
ಕೃತಿ ಸನನ್‌ಗೆ ನಡೆಯಲು ಕಷ್ಟವಾಗುತ್ತಿದ್ದು, ಮುಂದೆ ನಡೆಯುತ್ತಿದ್ದ ಹುಡುಗಿಯ ಬೆಂಬಲ ಪಡೆಯಬೇಕಾಯಿತು ಎಂದು ಹಲವರು ಕಮೆಂಟ್ ಮಾಡಿದ್ದಾರೆ. ತಡ ರಾತ್ರಿ ಪಾರ್ಟಿ ಬಳಿಕ ಇವೆಲ್ಲಾ ಸಾಮಾನ್ಯ. ಇದರಲ್ಲಿ ವಿಶೇಷ ಏನಿದೆ ಎಂದು ಹಲವರು ಪ್ರಶ್ನಿಸಿದ್ದಾರೆ.
ಕೃತಿಯ ವಿಡಿಯೋ ನೋಡಿ ಜನ ಅವರು ಕುಡಿದಿದ್ದಾರೆಂದು ಕಮೆಂಟ್ ಮಾಡಿದ್ದಾರೆ. ಕೃತಿ ಮೇಡಂ ಕುಡಿದಿದ್ದಾರೆ ಆದರೆ ಯಾರಿಗೂ ಗೊತ್ತಾಗಿಲ್ಲ ಎಂದು ಕಮೆಂಟ್ ಮಾಡಿದ್ದಾರೆ. ಕೃತಿ ಸನನ್ ಡೆನಿಮ್ ಉಡುಪು ಧರಿಸಿದ್ದರು ಮತ್ತು ಅವರು ತುಂಬಾ ಸುಂದರವಾಗಿ ಕಾಣುತ್ತಿದ್ದರು.
ಕೃತಿ ಜೊತೆ ಅವರ ಸಹೋದರಿ ನೂಪುರ್ ಸನನ್ ಕೂಡ ಪಾರ್ಟಿಯಲ್ಲಿದ್ದರು. ಅವರು ಹಸಿರು ಬಣ್ಣದ ಉಡುಪಿನಲ್ಲಿ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಕೃತಿಯಂತೆ ಅವರ ಸಹೋದರಿ ನೂಪುರ್ ಕೂಡ ನಟಿ. 'ಫಿಲ್ಹಾಲ್' ಮತ್ತು 'ಫಿಲ್ಹಾಲ್ 2: ಮೊಹಬ್ಬತ್' ಮ್ಯೂಸಿಕ್ ವೀಡಿಯೊಗಳ ಜೊತೆಗೆ ತೆಲುಗಿನ 'ಟೈಗರ್ ನಾಗೇಶ್ವರ ರಾವ್' ಚಿತ್ರದಲ್ಲಿಯೂ ನಟಿಸಿದ್ದಾರೆ.