- Home
- Entertainment
- Cine World
- ಸುಶ್ಮಿತಾ ಸೇನ್ ಮಿಸ್ ಯುನಿವರ್ಸ್ ಆಗಲು, ತನ್ನ ಕೆಲಸವನ್ನೇ ಬಿಟ್ಟಿದ್ದ ಬಾಯ್'ಫ್ರೆಂಡ್… ನಂತ್ರ ಆತನಿಗೆ ಕೈಕೊಟ್ಟಿದ್ಯಾಕೆ?
ಸುಶ್ಮಿತಾ ಸೇನ್ ಮಿಸ್ ಯುನಿವರ್ಸ್ ಆಗಲು, ತನ್ನ ಕೆಲಸವನ್ನೇ ಬಿಟ್ಟಿದ್ದ ಬಾಯ್'ಫ್ರೆಂಡ್… ನಂತ್ರ ಆತನಿಗೆ ಕೈಕೊಟ್ಟಿದ್ಯಾಕೆ?
ಬಾಲಿವುಡ್ ನಟಿ ಸುಶ್ಮಿತಾ ಸೇನ್ 1994 ರಲ್ಲಿ ಮಿಸ್ ಯೂನಿವರ್ಸ್ ಪ್ರಶಸ್ತಿಯನ್ನು ಗೆದ್ದರು. ನಟಿ ಮಿಸ್ ಯುನಿವರ್ಸ್ ಆಗೋದಕ್ಕೆ ಮುಖ್ಯ ಕಾರಣ ಅವರ ಬಾಯ್ ಫ್ರೆಂಡ್ ರಜತ್. ಆದ್ರೆ ನಂತ್ರ ಅವರ ಜೊತೆಗೆ ಬ್ರೇಕ್ ಅಪ್ ಮಾಡಿಕೊಂಡಿದ್ದು ಯಾಕೆ ಸುಷ್ಮಿತಾ ಸೇನ್.

1994 ರಲ್ಲಿ ಮಿಸ್ ಯೂನಿವರ್ಸ್ ಗೆದ್ದ ನಂತರ ಸುಶ್ಮಿತಾ ಸೇನ್ (Sushmita Sen) ಬಹಳ ಜನಪ್ರಿಯರಾದರು. ಅವರು ತಮ್ಮ ಸೌಂದರ್ಯದಿಂದ ಮಾತ್ರವಲ್ಲದೆ ಮಾತನಾಡುವ ಶೈಲಿಯಿಂದಲೂ ಜನರಿಗೆ ಕ್ರೇಜ್ ಹುಟ್ಟಿಸಿದ್ದರು. ಈ ಸ್ಪರ್ಧೆಯಲ್ಲಿ ಗೆದ್ದ ಎರಡು ವರ್ಷಗಳ ನಂತರ ಅವರು ಬಾಲಿವುಡ್ ಪ್ರವೇಶಿಸಿದರು. ಮತ್ತು ಒಂದರ ನಂತರ ಒಂದರಂತೆ ಹಿಟ್ ಚಿತ್ರಗಳನ್ನು ನೀಡಿದರು. ನಟಿ ಯಾವಾಗಲೂ ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಬಗ್ಗೆ ಮುಕ್ತವಾಗಿ ಮಾತನಾಡುತ್ತಾರೆ. ಸುಷ್ಮಿತಾ ಸೇನ್ ಒಮ್ಮೆ ತಮ್ಮ ಫಸ್ಟ್ ಬಾಯ್ ಫ್ರೆಂಡ್ ಕುರಿತು ಸಹ ಬಿಂದಾಸ್ ಆಗಿ, ಧೈರ್ಯದಿಂದ ಮಾತನಾಡಿದ್ರು. ಸುಷ್ಮಿತಾ ಸೇನ್ ಮಿಸ್ ಯೂನಿವರ್ಸ್ ಗೆಲ್ಲೋದಕ್ಕೆ ಸಹಾಯ ಮಾಡಲು ಅಂದು ಬಾಯ್ ಫ್ರೆಂಡ್ ಆಗಿದ್ದ ರಜತ್ (Rajat Tara) ತಮ್ಮ ಕೆಲಸವನ್ನು ಹೇಗೆ ತೊರೆದರು ಎಂದು ಸ್ವತಃ ಸುಷ್ಮಿತಾ ಹೇಳಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಸುಶ್ಮಿತಾ ಸೇನ್ ಅವರ ಹಳೆಯ ವೀಡಿಯೊವೊಂದು ಓಡಾಡುತ್ತಿದೆ, ಇದು ಫಾರೂಕ್ ಶೇಖ್ ಅವರ ಟಾಕ್ ಶೋ 'ಜೀನಾ ಇಸಿ ಕಾ ನಾಮ್ ಹೈ' ನ ಒಂದು ಎಪಿಸೋಡ್ ಆಗಿದೆ. ಇದರಲ್ಲಿ ಮಾಜಿ ಮಿಸ್ ಯೂನಿವರ್ಸ್ ತನ್ನ ಮೊದಲ ಬಾಯ್ ಫ್ರೆಂಡ್ ರಜತ್ ತಾರಾ (First boyfriend Rajat Tara) ಬಗ್ಗೆ ಬಿಂದಾಸ್ ಆಗಿ ಮಾತನಾಡಿದ್ದಾರೆ. ನಟಿ ಸುಷ್ಮಿತಾ ಮಿಸ್ ಯೂನಿವರ್ಸ್ ಸ್ಪರ್ಧೆಯನ್ನು ಗೆಲ್ಲಲು ರಜತ್ ಸಹಾಯ ಮಾಡಿದ ಸಮಯವನ್ನು ನೆನಪಿಸಿಕೊಂಡರು. ಸುಶ್ಮಿತಾ ಅವರ ಮಾಡೆಲಿಂಗ್ ದಿನಗಳ ಬಗ್ಗೆ ನಿರೂಪಕರು ಕೇಳಿದಾಗ, ಸುಷ್ಮಿತಾ, ತಾನು ರಜತ್ ಅವರನ್ನು ಮೊದಲು ಭೇಟಿಯಾದದ್ದು ಮಾಡೆಲಿಂಗ್ ಕಾರ್ಯಕ್ರಮವೊಂದಕ್ಕೆ ಆಡಿಷನ್ ಮಾಡುವಾಗ ಎಂದು ಹೇಳಿದರು.
ಮಿಸ್ ಯೂನಿವರ್ಸ್‌ಗೆ ಸಂಬಂಧಿಸಿದ ಸುಶ್ಮಿತಾ ಸೇನ್ ಹೇಳಿದ್ದೇನು?
ಸುಷ್ಮಿತಾ ಸೇನ್ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ರಜತ್ ತಾರಾ ತನ್ನ ಮೊದಲ ಬಾಯ್ ಫ್ರೆಂಡ್ ಎಂದು ಹೇಳಿದರು, ಜೊತೆಗೆ ರಜತ್ ತಮ್ಮ ಜೀವನದ ಅತ್ಯಂತ ವಿಶೇಷ ಮತ್ತು ಪ್ರಮುಖ ವ್ಯಕ್ತಿ ಎಂದು ಬಣ್ಣಿಸಿದರು. ಮಿಸ್ ಯೂನಿವರ್ಸ್ (Miss Universe) ತರಬೇತಿಗಾಗಿ ಮುಂಬೈಗೆ ಶಿಫ್ಟ್ ಆಗಬೇಕಾಗಿ ಬಂದ ಸಮಯವನ್ನು ನೆನೆಪಿಸಿಕೊಂಡ ಸುಶ್ಮಿತಾ, ಸ್ಪರ್ಧಾತ್ಮಕ ತರಬೇತಿಗಾಗಿ ಮುಂಬೈಗೆ ಹೋಗಬೇಕಾಗಿ ಬಂದಾಗ, ಆ ಆಲೋಚನೆಯಿಂದ ನಾನು ಹಿಂದೆ ಉಳಿದಾಗ, ತಮಗೆ ನೆರವಾಗಿದ್ದು, ರಜತ್ ತಾರ ಎಂದಿದ್ದಾರೆ ಸುಶ್ಮಿತಾ ಸೇನ್.
ಸುಶ್ಮಿತಾ ಸೇನ್ ಅವರ ಮೊದಲ ಬಾಯ್ ಫ್ರೆಂಡ್ ರಜತ್ ತಾರಾ
ವೈರಲ್ ವಿಡೀಯೋ (Viral Video) ಹೀಗಿದೆ ಸುಶ್ಮಿತಾ ಸೇನ್, 'ನಾನು ನಿಮಗೆ ಬಹಳ ಮುಖ್ಯವಾದ ವಿಷಯವನ್ನು ಹೇಳಲು ಬಯಸುತ್ತೇನೆ.' ಇವನು ನನ್ನ ಮೊದಲ ಬಾಯ್ ಫ್ರೆಂಡ್ ರಜತ್. ಅತ್ಯಂತ ವಿಶೇಷ ವ್ಯಕ್ತಿ ಏಕೆಂದರೆ ನಾನು ಮಿಸ್ ಇಂಡಿಯಾ ಗೆದ್ದಾಗ ಮತ್ತು ಮಿಸ್ ಯೂನಿವರ್ಸ್‌ಗಾಗಿ ತರಬೇತಿ ಪಡೆಯಲು ಬಾಂಬೆಗೆ ಬರಬೇಕಾಗಿತ್ತು, ನಾನು ದೆಹಲಿಯಲ್ಲಿ ಬೆಳೆದಿದ್ದರಿಂದ ಬಾಂಬೆ ನನಗೆ ವಿದೇಶದ್ದಂತೆ ಇತ್ತು. ದೆಹಲಿಯಿಂದ ಬಾಂಬೆಗೆ ಹೋಗಲು ನನಗೆ ಇಷ್ಟ ಇಲ್ಲ, ನನಗೆ ಮಿಸ್ ಯೂನಿವರ್ಸ್ ಸ್ಪರ್ಧೆಗೆ ಹೋಗಲು ಇಷ್ಟವಿಲ್ಲ. ನನ್ನನ್ನು ಒಬ್ಬಂಟಿಯಾಗಿ ಮಾಡಬೇಡಿ ಎಂದು ಸುಶ್ಮಿತಾ ಅತ್ತಿದ್ದರಂತೆ.
ಸುಷ್ಮಿತಾ ಸೇನ್ ಗಾಗಿ ಕೆಲಸವನ್ನೇ ಕಳೆದುಕೊಂಡ ರಜತ್ ತಾರ
ಸುಶ್ಮಿತಾ ಸೇನ್ ಮಿಸ್ ಯುನಿವರ್ಸ್ ಗೆ ಆಯ್ಕೆಯಾದ ಸಂದರ್ಭದಲ್ಲಿ ರಜತ್ ಬೆನೆಟನ್‌ನಲ್ಲಿ ಕೆಲಸ ಮಾಡುತ್ತಿದ್ದರು. ನನ್ನ ಜೊತೆ ಮುಂಬೈಗೆ ಬರಲು ಅವರು ಒಂದು ತಿಂಗಳ ರಜೆ ಕೇಳಿದ್ದರು. ದುರದೃಷ್ಟವಶಾತ್, ಅವರನ್ನು ಕೆಲಸದಿಂದ ವಜಾ ಮಾಡಲಾಯಿತು. ಆದರೂ ಬೇಜಾರು ಮಾಡಿಕೊಳ್ಳದೇ, ನಂತರ ರಜತ್ ಸುಶ್ಮಿತಾ ಜೊತೆ ಮುಂಬೈಗೆ ಬಂದು, ಸುಶ್ಮಿತಾ ಟ್ರೈನಿಂಗ್ ಸಮಯದಲ್ಲಿ ಪೂರ್ತಿಯಾಗಿ ಅವರ ಜೊತೆಗೆ ಇದ್ದರಂತೆ ಎಂದು ಸುಶ್ಮಿತಾ ಹೇಳಿದ್ದಾರೆ. ಅಷ್ಟೇ ಅಲ್ಲ ರಜತ್ ತುಂಬಾ ಜವಾಬ್ದಾರಿಯುತ. ರಜತ್ ಇಲ್ಲದೇ ಇರುತ್ತಿದ್ದರೆ, ಯಾರ ಬೆಂಬಲವಿಲ್ಲದೆ ನಾನು ಬಾಂಬೆಯಲ್ಲಿ ಒಂದು ತಿಂಗಳು ಕಳೆಯಲು ಸಾಧ್ಯವಾಗುತ್ತಿರಲಿಲ್ಲ ಎಂದಿದ್ದಾರೆ ಮಾಜಿ ಮಿಸ್ ಯುನಿವರ್ಸ್.
ಹಾಗಾದ್ರೆ ರಜತ್ ತಾರಾರನ್ನು ಬಿಟ್ಟಿದ್ಯಾಕೆ ಸುಶ್ಮಿತಾ?
ಸುಶ್ಮಿತಾ ಮಿಸ್ ಯುನಿವರ್ಸ್ ಆಗಿ ಗುರುತಿಸಿಕೊಳ್ಳೋದಕ್ಕೆ ಕಾರಣರಾದ ಬಾಯ್ ಫ್ರೆಂಡ್ ರಜತ್ ತಾರಾರನ್ನು ಬಿಟ್ಟು ತಪ್ಪು ಮಾಡಿದ್ದಾರೆ ಎನ್ನುವ ಗಾಸಿಪ್ ಕೇಳಿ ಬಂದಿತ್ತು. ಅದಕ್ಕೂ ಉತ್ತರಿಸಿದ್ದ ಸುಶ್ಮಿತಾ, ಅಂತಹ ಒಳ್ಳೆಯ ವ್ಯಕ್ತಿಯನ್ನು ನಾನು ಕಡೆಗಣಿಸಿಲ್ಲ, ಆದರೆ ನಾನು ಬೆಳೆಯುತ್ತಾ ಬಂದಂತೆ, ಇಬ್ಬರು ಅರ್ಥಮಾಡಿಕೊಂಡು ದೂರವಾದೆವು (Broke up). ರಜತ್ ತಾರಾ ಮದುವೆಗೂ ನಾನು ಹೋಗಿದ್ದೆ ಎಂದಿದ್ದಾರೆ ಸುಶ್ಮಿತಾ.