ಪೆಪ್ಸಿ ಕಂಪೆನಿ ಸುಷ್ಮಿತಾರನ್ನು ರಿಜೆಕ್ಟ್ ಮಾಡಿದಾಗ ನಡೆಯಿತು ಪವಾಡ: ನಟಿಯ ಇಂಟರೆಸ್ಟಿಂಗ್ ಸ್ಟೋರಿ ಕೇಳಿ!
ಪೆಪ್ಸಿ ಕಂಪೆನಿ ಸುಷ್ಮಿತಾರನ್ನು ರಿಜೆಕ್ಟ್ ಮಾಡಿದಾಗ ನಡೆಯಿತು ಪವಾಡ: ಕಂಪೆನಿ ವಿರುದ್ಧ ನಟಿ ಸೇಡು ತೀರಿಸಿಕೊಂಡ ಪರಿಯೇ ಕುತೂಹಲ.
ಇಂದು ನೂರಾರು ಕೋಟಿ ರೂಪಾಯಿಗಳ ಒಡತಿ, ಮಾಜಿ ವಿಶ್ವ ಸುಂದರಿ, ಬಾಲಿವುಡ್ ತಾರೆ ಸುಷ್ಮಿತಾ ಸೇನ್ ಅವರು ಹಿಂದೊಮ್ಮೆ ನೂರಾರು ರೂಪಾಯಿ ಕೊಟ್ಟು ಬಟ್ಟೆ ಖರೀದಿ ಮಾಡದ ಬಡತನದಲ್ಲಿದ್ದರು. ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಹೋಗಬೇಕಾದರೂ ಒಳ್ಳೊಳ್ಳೆ ಬಟ್ಟೆ ಖರೀದಿಗೆ ಕೈಯಲ್ಲಿ ದುಡ್ಡು ಇರಲಿಲ್ಲ. ರೋಡ್ ಸೈಡ್ನಲ್ಲಿ ಸಿಗುವ ಅತ್ಯಂತ ಕಡಿಮೆ ಬೆಲೆಯ ಬಟ್ಟೆ ಖರೀದಿ ಮಾಡಿ ಮನೆಯ ಬಳಿ ಗ್ಯಾರೇಜಿನಲ್ಲಿ, ಪೆಟ್ಟಿಕೋಟ್ ಮಾಡುವ ಸ್ಥಳೀಯ ಟೈಲರ್ಗೆ ಆ ಬಟ್ಟೆಯನ್ನು ಕೊಟ್ಟು ಈ ಬಟ್ಟೆ ಟಿವಿಯಲ್ಲಿ ಬರುತ್ತದೆ, ಒಳ್ಳೆ ಡ್ರೆಸ್ ಮಾಡು ಎಂದು ಹೇಳಿ ಗೌನ್ ಮಾಡಿಸಿಕೊಂಡು ವಿಶ್ವ ಸುಂದರಿ ಪಟ್ಟ ಪಡೆದವರು. ಬದುಕಿನುದ್ದಕ್ಕೂ ಸಿಕ್ಕಾಪಟ್ಟೆ ಚಾಲೆಂಜ್ಗಳನ್ನು ಎದುರಿಸುತ್ತಲೇ ಬಂದಿರುವ ಸುಷ್ಮಿತಾ ಈಗ ಕುತೂಹಲದ ಘಟನೆಯೊಂದನ್ನು ನೆನಪಿಸಿಕೊಂಡಿದ್ದಾರೆ.
ಅದೇನೆಂದರೆ, ವಿಶ್ವ ಸುಂದರಿಯ ಕಿರೀಟವನ್ನೂ ಪಡೆಯುವ ಮುನ್ನ ನಡೆದ ಘಟನೆ ಇದು. ಪೆಪ್ಸಿ ಕಂಪೆನಿ ರೂಪದರ್ಶಿಗಳನ್ನು ಹುಡುಕುತ್ತಿತ್ತು. ಅದಾಲೇ ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ನಟಿ ಐಶ್ವರ್ಯ ರೈ, ಆಮೀರ್ ಖಾನ್, ಮಹಿಮಾ ಚೌಧರಿಯಂಥ ಆಗಿನ ಫೇಮಸ್ ತಾರೆಗಳನ್ನು ಈ ಕಂಪೆನಿ ತನ್ನ ಬ್ರಾಂಡ್ ಅಂಬಾಸಿಡರ್ ಮಾಡಿತ್ತು. ಆಗ ಸುಷ್ಮಿತಾ ಅವರಿಗೂ ಇದರಲ್ಲಿ ಕಾಣಿಸಿಕೊಳ್ಳುವ ಆಸೆಯಾಗಿತ್ತು. ಅದಕ್ಕಾಗಿ ಅವರು ಪೆಪ್ಸಿ ಕಂಪೆನಿಗೆ ಫೋಟೋ ಕಳಿಸಿದ್ದರು. ಆದರೆ ಸಹಜವಾಗಿ ಯಾವುದೇ ಹೊಸ ಮುಖವನ್ನು ಇಂಥ ಬ್ರಾಂಡ್ಗಳು ಬಳಸಿಕೊಳ್ಳುವುದೇ ಇಲ್ಲ. ಯಾವುದೇ ಕಂಪೆನಿಗಳಾದರೂ, ಅದರಲ್ಲಿಯೂ ವಿದೇಶಿ ಕಂಪೆನಿಯಂಥ ದೊಡ್ಡ ಮಟ್ಟದ ಕಂಪೆನಿಗಳು ಚಾಲ್ತಿಯಲ್ಲಿ ಇರುವ ಸೆಲೆಬ್ರಿಟಿಗಳನ್ನೇ ಜಾಹೀರಾತಿಗೆ ಬಳಸಿಕೊಳ್ಳುವುದು ಸರ್ವೇ ಸಾಮಾನ್ಯ. ಆದ್ದರಿಂದ ಸುಷ್ಮಿತಾ ಸೇನ್ ಅವರನ್ನು ಒಂದೇ ಕ್ಷಣದಲ್ಲಿ ರಿಜೆಕ್ಟ್ ಮಾಡಲಾಗಿತ್ತು. ಇವರ ಫೋಟೋ ನೋಡಿ ಆಡಿಷನ್ಗೆ ಕರೆದಿದ್ದ ಕಂಪೆನಿ ಅಲ್ಲಿಯೇ ರಿಜೆಕ್ಟ್ ಮಾಡಿ ಕಳುಹಿಸಿಬಿಟ್ಟಿತ್ತು.
ಕೈಯಲ್ಲಿ ದುಡ್ಡಿರದೇ ರಸ್ತೆ ಬದಿಯ ಬಟ್ಟೆ ತೊಟ್ಟು ಮಿಸ್ ಇಂಡಿಯಾ ಗೆದ್ದ ಸುಷ್ಮಿತಾ ಸೇನ್: ರೋಚಕ ಸ್ಟೋರಿ ಇಲ್ಲಿದೆ
ಅಂದು ನನಗಾದ ಅವಮಾನ ಅಷ್ಟಿಷ್ಟಲ್ಲ. ಆಡಿಷನ್ಗೆ ಕರೆದು ಈ ರೀತಿಯ ಅವಮಾನ ಮಾಡಲಾಗಿತ್ತು. ಅಂದೇ ನಿರ್ಧಾರ ಮಾಡಿದ್ದೆ, ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದು. ಕೊನೆಗೆ ಆದದ್ದೇ ಬೇರೆ. ಮಿಸ್ ಯೂನಿವರ್ಸ್ ಗೆದ್ದುಬಿಟ್ಟೆ. ಪೆಪ್ಸಿ ಜಾಹೀರಾತು ಕಂಪೆನಿಯವರು ನನ್ನನ್ನು ಕಾಡಿಬೇಡಿ ತಮ್ಮ ಜಾಹೀರಾತಿಗೆ ಬರುವಂತೆ ಕೋರಿಕೊಂಡರು. ಕೆಲವೇ ತಿಂಗಳ ಹಿಂದೆ ಏಕಾಏಕಿ ಕಾರಣ ನೀಡದೇ ರಿಜೆಕ್ಟ್ ಮಾಡಿದವರೇ ನನ್ನ ಮನೆ ಬಾಗಿಲಿಗೆ ಎಡೆತಾಕಿದರು. ಆದರೆ ನಾನು ಅಷ್ಟು ಒಳ್ಳೆಯವಳಾಗಿರಲಿಲ್ಲ ತಿಳಿಯಿತಾ ಎನ್ನುತ್ತಲೇ ತಮಾಷೆ ಮಾಡಿದ ನಟಿ, ನಾನು ಏನು ಮಾಡಿದೆ ಎಂದರೆ, ಪೆಪ್ಸಿಯ ವೈರಿಯಾಗಿದ್ದ ಕೋಕಾಕೋಲಾದ ಬ್ರಾಂಡಿಂಗ್ಗೆ ಒಪ್ಪಿಕೊಂಡು, ಅಲ್ಲಿ ಜಾಹೀರಾತು ಮಾಡಿದೆ. ಇದರಿಂದ ಪೆಪ್ಸಿ ಕಂಪೆನಿಗೂ ಏಟು ಬಿದ್ದಿತ್ತು ಎಂದಿದ್ದಾರೆ.
ಇದೇ ವೇಳೆ ಜೀವನದ ಪಾಠವನ್ನೂ ಹೇಳಿರುವ ಸುಷ್ಮಿತಾ, ನಾನು ಇದನ್ನು ಹೇಳುತ್ತಿರುವುದಕ್ಕೆ ಕಾರಣವೂ ಇದೆ. ಅದೇನೆಂದರೆ, ನೀವು ಎಲ್ಲಿಯೋ ನಿಮ್ಮ ಬೆಸ್ಟ್ ನೀಡಿರುತ್ತೀರಿ. ಆದರೆ ಯಾವುದೋ ಕಾರಣಕ್ಕೆ ರಿಜೆಕ್ಟ್ ಆಗಿಬಿಟ್ಟಾಗ, ನಾನು ಸರಿಯಿಲ್ಲ, ನನ್ನಲ್ಲಿ ಅರ್ಹತೆ ಇಲ್ಲ, ನನ್ನ ಹಣೆಬರಹ ಇಷ್ಟೇ ಎಂದುಕೊಂಡುಬಿಡುತ್ತೀರಿ. ಆದರೆ ಹಾಗೆ ಮಾಡುವುದು ಸರಿಯಲ್ಲ. ಅಲ್ಲಿಯೇ ಇದ್ದು ತೋರಿಸಬೇಕು. ನಾನು ಸರಿಯಾಗಿಯೇ ಇದ್ದೇನೆ, ನೀವು ಸರಿ ಇಲ್ಲ ಎಂದು ತೋರಿಸುವ ಛಾತಿ ಬೇಕು. ಅದನ್ನೇ ನಾನು ಮಾಡಿದ್ದು ಎನ್ನುವ ಮೂಲಕ ಈ ಉದಾಹರಣೆಯನ್ನು ಕೊಟ್ಟಿದ್ದಾರೆ ಸುಷ್ಮಿತಾ. ಅವರ ಮಾತಿಗೆ ಚಪ್ಪಾಳೆಗಳ ಸುರಿಮಳೆಯೇ ಆಗಿದೆ. ಅಷ್ಟಕ್ಕೂ ಈ ಸ್ಪರ್ಧೆಗೆ ಮೊದಲೇ ಹೇಳಿದಂತೆ ಕಡಿಮೆ ಬೆಲೆಯ ಗೌನ್ ಧರಿಸಿ ಹೋಗಿದ್ದರು ಸುಷ್ಮಿತಾ. ಆದರೆ ಅವರ ಜಾಣ್ಮೆಯ ಮುಂದೆ ಅವರು ತೊಟ್ಟ ಬಟ್ಟೆಯ ರೇಟ್ ಎಲ್ಲ ಸುಂದರಿಯರು ತೊಟ್ಟ ಸಹಸ್ರ, ಕೋಟಿ ರೂಪಾಯಿ ಬೆಲೆ ಬಾಳುವ ಬಟ್ಟೆ ಎದುರು ಗೌಣವಾಯಿತು. ಸುಷ್ಮಿತಾ ಸೇನ್ ಜಯಗಳಿಸಿದ್ದರು. ಮಿಸ್ ಇಂಡಿಯಾ ಕಿರೀಟ ಅವರ ಮುಡಿಲಿಗೇರಿತ್ತು!
ಹುಟ್ಟಿದ ವರ್ಷವನ್ನು 2023 ಎಂದು ಬದಲಿಸಿದ ನಟಿ ಸುಷ್ಮಿತಾ ಸೇನ್! ಇದರ ಹಿಂದಿದೆ ಕುತೂಹಲದ ಕಥೆ...
ಸಾಧಿಸುವ ಛಲ, ಮನೋಸ್ಥೈರ್ಯ, ಸ್ಪಷ್ಟ ಗುರಿಯೊಂದಿದ್ದರೆ ಏನು ಬೇಕಾದರೂ ಸಾಧಿಸಬಹುದು. ಎಲ್ಲವೂ ಇದ್ದರೂ ಛಲ ಇಲ್ಲದಿದ್ದರೆ ಏನೂ ಸಾಧನೆ ಮಾಡಲಾಗುವುದಿಲ್ಲ ಎನ್ನುವ ಮೂಲಕ ಅಂದಿನ ದಿನಗಳನ್ನು ಮೆಲುಕು ಹಾಕಿದ್ದಾರೆ ನಟಿ. ಅಂದಹಾಗೆ ನಟಿಗೆ ಈಗ 48 ವರ್ಷ ವಯಸ್ಸು. ಅವರು ಮಿಸ್ ಇಂಡಿಯಾ ಗೆದ್ದಾಗ 18 ವರ್ಷ ವಯಸ್ಸಾಗಿತ್ತು. ನಂತರ 1994ರಲ್ಲಿ ಮಿಸ್ ಯೂನಿವರ್ಸ್ ಕಿರೀಟ ಪಡೆದುಕೊಂಡರು.