Khloe Kardashian ಮುಖದಲ್ಲಿದ್ದ ಟ್ಯೂಮರ್ ತೆಗೆಸಿಕೊಂಡ ಖ್ಯಾತ ನಟಿ!
ರಿಯಾಲಿಟಿ ಶೋ ಸ್ಟಾರ್ ಖ್ಲೋಯ್ ಕಾರ್ಡಶಿಯಾನ್ ಟ್ಯೂಮರ್ ಆಪರೇಷನ್ ಮಾಡಿಸಿಕೊಂಡಿರುವುದರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.

ಅಮೆರಿಕಾ ಮೀಡಿಯಾ ಪರ್ಸನಾಲಿಟಿ ಕಮ್ ಸೋಷಿಯಲ್ ಮೀಡಿಯಾ ಸ್ಟಾರ್ ಖ್ಲೋಯ್ ಕಾರ್ಡಶಿಯಾನ್ ಫೇಸ್ ಟ್ಯೂಮರ್ ಆಪರೇಷನ್ ಮಾಡಿಸಿಕೊಂಡಿದ್ದಾರೆ. ಏನಾಯ್ತು? ಹೇಗೆ ಸಮಸ್ಯೆ ಎದುರಿಸಿದ್ದರು ಎಂದು ಫಾಲೋವರ್ಸ್ ಜೊತೆ ಹಂಚಿಕೊಂಡಿದ್ದಾರೆ.
38 ವರ್ಷ ಖ್ಲೋಯ್ ಕಾರ್ಡಶಿಯಾನ್ ಕೆನ್ನೆ ಮತ್ತು ಕುತ್ತಿಗೆ ಭಾಗದಲ್ಲಿ ಸಣ್ಣ ಪುಟ್ಟ ಬಂಪ್‌ಗಳಿತ್ತು ಎಂದು ಡಾಕ್ಟರ್‌ನ ಸಂಪರ್ಕ ಮಾಡಿ ತಕ್ಷಣವೇ ತೆಗೆಸಿಕೊಂಡಿದ್ದಾರೆ.
'ನನ್ನ ಮುಖದಲ್ಲಿ ಪ್ಲಾಸ್ಟರ್ ಇರುವುದು ನೋಡಿ ಅನೇಕರು ಸುಳ್ಳು ಸುದ್ದಿಗಳನ್ನು ಹರಡಿಸುತ್ತಿದ್ದಾರೆ. ಅದರಲ್ಲಿ ಕೆಲವರು ನೇರವಾಗಿ ಏನಿದು ಎಂದು ನನಗೆ ಪ್ರಶ್ನೆ ಮಾಡಿದ್ದಾರೆ ಅದಿಕ್ಕೆ ಉತ್ತರ ಕೊಡುವ ಸಮಯ ಬಂದಿದೆ' ಎಂದು ಖ್ಲೋಯ್ ಕಾರ್ಡಶಿಯಾನ್ ಹೇಳಿದ್ದಾರೆ.
'ನನ್ನ ಮುಖದಲ್ಲಿ ಸಣ್ಣ ಪುಟ್ಟ ಬಂಪ್‌ಗಳು ಗಮನಕ್ಕೆ ಬಂತು ತುಂಬಾನೇ ಸಣ್ಣ ಇದ್ದ ಕಾರಣ ಏನೂ ತಲೆ ಕೆಡಿಸಿಕೊಳ್ಳಲಿಲ್ಲ ಆದರೆ 7 ತಿಂಗಳ ನಂತರ ಬಯಾಪ್ಸಿ ಮಾಡಲಾಯಿತು ಮಾಡಿಸಿದೆ'
'ನನ್ನ ಫ್ಯಾಮಿಲಿ ಡಾಕ್ಟರ್ ಪ್ರಥಮ ಚಿಕಿತ್ಸೆ ಕೊಟ್ಟರು ಆನಂತರ ಮತ್ತೊಬ್ಬ ಡಾಕ್ಟರ್‌ನ ಸಂಪರ್ಕ ಮಾಡಲು ಹೇಳಿದ್ದರು ಏಕೆಂದರೆ ನನ್ನ ವಯಸ್ಸಿಗೆ ಮುಖದ ಮೇಲೆ ಈ ರೀತಿ ಬಂಪ್ ಬರುವುದು ಅಸಮಾನ್ಯಾ'
'ಕೆಲವು ದಿನಗಳ ನಂತರ ತಕ್ಷಣ ಆಪರೇಷನ್ ಮಾಡಿಸಿಕೊಳ್ಳಲು ಹೇಳಿದ್ದರು ಆಗ ತಿಳಿಯಿತ್ತು ಮುಖದಲ್ಲಿ ಟ್ಯೂಮರ್ ಇತ್ತು ಎಂದು. ಬೆವರ್ಲಿ ಹಿಲ್ಸ್‌ನ ಬೆಸ್ಟ್ ಸರ್ಜನ್‌ನ ಸಂಪರ್ಕಿಸಿ ಆಪರೇಷನ್ ಮಾಡಿಸಿಕೊಂಡೆ'
'ಈಗ ನನ್ನ ತ್ವಚೆ ಚೇತರಿಸಿಕೊಳ್ಳುತ್ತಿದೆ ಮಾರ್ಕ್‌ಗಳು ಮಾಯವಾಗುತ್ತಿದೆ. ಸದ್ಯಕ್ಕೆ ಬ್ಯಾಂಡೇಜ್ ಹಾಕಿಕೊಳ್ಳಲು ಹೇಳಿದ್ದಾರೆ ಸ್ವಲ್ಪ ತಿಂಗಳುಗಳ ಕಾಲ ಮಾರ್ಕ್ ಕಾಣಿಸುತ್ತದೆ. ಕೆನ್ನೆ ಭಾಗದಲ್ಲಿದ್ದ ಟ್ಯೂಮರ್ ಹೋಗಿದಕ್ಕೆ ಸುಧಾರಿಸಿಕೊಂಡಿರುವೆ. ನಾನು ಗುಣಮುಖಳಾಗುವವರೆಗೂ ನನ್ನ ಈ ಲುಕ್‌ನ ಎಂಜಾಯ್ ಮಾಡಿ' ಎಂದು ಖ್ಲೋಯ್ ಕಾರ್ಡಶಿಯಾನ್ ಬರೆದುಕೊಂಡಿದ್ದಾರೆ.